ಪಂಚಮಸಾಲಿ ಪೀಠಗಳ ಗೊಂದಲ- ಭಾಗ 5 |ಪಂಚಮಸಾಲಿಗಳನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ವೈದಿಕರ ಹುನ್ನಾರ

Date:

ಪಂಚಮಸಾಲಿಗಳನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ವೈದಿಕರ ಹುನ್ನಾರದ ಭಾಗವಾಗಿ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ನಡೆದಿವೆ. ಇತ್ತೀಚಿಗೆ ಬಿಡುಗಡೆಯಾದ “ಬಸವ ಶೈವದಲ್ಲಿ ಹಿಂದುತ್ವ” ಎನ್ನುವ ಗ್ರಂಥ ವಿಕೃತಿಯ ಕರ್ತೃವಾದ ಉಪಾಧ್ಯ ಎನ್ನುವ ಗದಗ ಜಿಲ್ಲೆಯ ರೋಣ್ ತಾಲೂಕಿನ ಅಬ್ಬಿಗೆರೆ ಊರಿನ ಉಪದ್ವ್ಯಾಪಿ ವ್ಯಕ್ತಿಯ ಸಾಹಸ ಸಂಘಿ ವೈದಿಕ ಶಕ್ತಿಗಳ ಟೂಲ್ ಕಿಟ್ ಕರಸೇವೆಯ ಭಾಗವಾಗಿದೆ.

- Advertisement -

ಪಂಚಮಸಾಲಿ ಪೀಠಗಳ ಸ್ಥಾಪನೆಯ ಜೊತೆಜೊತೆಗೆ ಉದ್ಭವಿಸಿದ ಜಗಳ, ಭಿನ್ನಮತ, ತಗಾದೆಗಳು ಇಂದಿಗೂ ನಿಂತಿಲ್ಲ. ಪೀಠಗಳಲ್ಲಿ ಕೂರುವ ಮಠಾಧೀಶರಿಗೆ ಸಮಾಜದ ಬಗೆಗಿನ ಕಾಳಜಿಗಿಂತ ವೈಯಕ್ತಿಕ ಪ್ರಚಾರದ ಗೀಳು ಇದ್ದರೆ ಸಮಸ್ಯೆಗಳು ಹೆಚ್ಚು ಉದ್ಭವವಾಗುತ್ತವೆ. ಇಲ್ಲಿ ಒಂದು ಎಚ್ಚರಿಕೆಯನ್ನು ಪಂಚಮಸಾಲಿ ಸಮುದಾಯ ಮತ್ತು ನಾವೆಲ್ಲರೂ ವಹಿಸಬೇಕು. ಇತ್ತೀಚಿಗೆ ಇಡೀ ಪಂಚಮಸಾಲಿ ಉಪವರ್ಗವನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ವೈದಿಕರ ಹುನ್ನಾರಗಳು ತೀವ್ರತೆ ಪಡೆದಿವೆ. ಒಂದು ವೇಳೆ ವೈದಿಕ ಶಕ್ತಿಗಳು ಇದರಲ್ಲಿ ಯಶಸ್ಸು ಕಂಡರೆ ಪಂಚಮಸಾಲಿಗಳು ನಾಶವಾಗುತ್ತಾರೆಯೇ ಹೊರತು ಲಿಂಗಾಯತ ಧರ್ಮ ನಾಶವಾಗುವುದಿಲ್ಲ. ಈಗಾಗಲೇ ಇದೇ ಕಾರಣದಿಂದ ಜಾತಿ ಜಂಗಮರ ಅಸ್ತಿತ್ವ ಅಪಾಯಕ್ಕೆ ಸಿಲುಕಿದೆ. ಕಾರಣ, ಈಗಾಗಲೇ ತಾವೇ ಶ್ರೇಷ್ಠ ಎಂದು ಹೇಳಿಕೊಳ್ಳುವ ವೀರಶೈವ ಜಾತಿ ಜಂಗಮರು ಒಂದು ಕಡೆ ತಾವು ಆರಾಧ್ಯ ಬ್ರಾಹ್ಮಣರು, ಹಾಗಾಗಿ ನಾವೂ ಕೂಡ ಸನಾತನಿಗಳು ಎಂದು ಹೇಳಿಕೊಳ್ಳುತ್ತಾ ಇನ್ನೊಂದು ಕಡೆ ತಾವು ಪರಿಶಿಷ್ಟ ಬೇಡ ಜಂಗಮರು ಎಂದು ವಾದಿಸುತ್ತಾ ಲಿಂಗಾಯತ ಧರ್ಮದಿಂದ ಬಹು ದೂರ ಸರಿದಿದ್ದಾರೆ. ಅವರ ಬೇಡ ಜಂಗಮ ಬೇಡಿಕೆ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಮುಖಭಂಗಕ್ಕೀಡಾಗಿದೆ. ಈ ವಿಷಯದಲ್ಲಿ ವೀರಶೈವ ಜಾತಿ ಜಂಗಮರಿಗೆ ಸನಾತನಿ ಬ್ರಾಹ್ಮಣರು ಯಾವುದೇ ಸಹಾಯ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. EWS ಕೋಟಾದಡಿಯಲ್ಲಿ 10% ಮೀಸಲಾತಿ ಪಡೆಯಲು ಎದುರಾದ ಸವಾಲುಗಳನ್ನು ವೈದಿಕರು ನ್ಯಾಯಾಲಯದಲ್ಲಿ ನೀರು ಕುಡಿದಷ್ಟು ಸುಲಭವಾಗಿ ನೀಗಿಕೊಂಡಿದ್ದಾರೆ, ಆದರೆ ತಮ್ಮ ಪಕ್ಷವನ್ನು ಅನವರತ ಬೆಂಬಲಿಸುವ ಜಾತಿ ಜಂಗಮರಿಗೆ ವೈದಿಕರು ಬೇಡ ಜಂಗಮ ವಿಷಯದಲ್ಲಿ ಯಾವ ಸಹಾಯವನ್ನೂ ಮಾಡಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ವೀರಶೈವ ಜಾತಿ ಜಂಗಮರಿಗೆ ವೈದಿಕರು ಸಹಾಯ ಮಾಡದಿರುವುದರ ಹಿಂದೆ ಒಂದು ಬಲವಾದ ಐತಿಹಾಸಿಕ ಕಾರಣವಿದೆ. ಅದೇನೆಂದರೆ, ಇಪ್ಪತ್ತನೇ ಶತಮಾನದ ಆರಂಭದಲ್ಲಿ ಇದೇ ವೀರಶೈವ ಜಾತಿ ಜಂಗಮರು ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿ ಕೂಡಲಸಂಗಮ, ಯಡೂರು, ಗೊಡಚಿ, ಪರಳಿ, ಶ್ರೀಶೈಲ ಮುಂತಾದ ಮಂದಿರಗಳ ಬ್ರಾಹ್ಮಣ ಅರ್ಚಕರನ್ನು ಹೊರಹಾಕಿ ತಾವು ಅರ್ಚಕರಾಗಿರುವುದನ್ನು ಸನಾತನಿ ಬ್ರಾಹ್ಮಣರು ಮರೆತಿಲ್ಲ. ಹಾವಿನ ಸೇಡಿಗಿಂತ ವೈದಿಕನ ಸೇಡು ಬಹಳ ತೀವ್ರವಾಗಿರುತ್ತದೆ. ಲಿಂಗಾಯತರ ಸಹಾಯದಿಂದ ವೀರಶೈವ ಜಾತಿ ಜಂಗಮರು ಅಂದು ಬ್ರಾಹ್ಮಣರ ಹೊಟ್ಟೆಯ ಮೇಲೆ ಹೊಡೆದ ಘಟನೆ ಬ್ರಾಹ್ಮಣರು ಎಂದಿಗೂ ಮರೆಯಲಾರರು. ಹಾಗಾಗಿ ಲಿಂಗಾಯತ ಧರ್ಮದಿಂದ ವೀರಶೈವ ಜಾತಿ ಜಂಗಮರನ್ನು ವೈದಿಕರು ಈಗ ಹೊರಹೋಗುವಂತ ವಾತಾವರಣವನ್ನು ಉಪಾಯವಾಗಿ ಸೃಷ್ಟಿಸಿದ್ದಾರೆ. ಸ್ವತಃ ವೀರಶೈವ ಜಾತಿ ಜಂಗಮರನ್ನು ಈ ದಿಶೆಯಲ್ಲಿ ಉತ್ತೇಜಿಸಿ ಅವರು ಗುಪ್ತ ಸೇಡನ್ನು ತೀರಿಸಿಕೊಳ್ಳುತ್ತಿದ್ದಾರೆ. ಇದು ಜಾತಿ ಜಂಗಮರಿಗೆ ಅರ್ಥವಾಗುತ್ತಿಲ್ಲ. ನಾಲ್ಕಾರು ಶತಮಾನಗಳಿಂದ ಹಿಟ್ಟು, ಬಟ್ಟೆ, ಎಲ್ಲವನ್ನು ಕೊಟ್ಟು ತಲೆಯ ಮೇಲೆ ಹೊತ್ತುಕೊಂಡು ತಿರುಗಿದ, ಈಗಲೂ ಅದನ್ನೇ ಮಾಡುತ್ತಿರುವ ಮುಗ್ಧ, ಅಮಾಯಕ ಲಿಂಗಾಯತರನ್ನು ಈಗ ಈ ವೀರಶೈವ ಜಾತಿ ಜಂಗಮರು ಅಲ್ಪಸಂಖ್ಯಾತರ ಸೌಲಭ್ಯದಿಂದ ವಂಚಿಸುತ್ತಿದ್ದಾರೆ. ಇದರ ಹಿಂದೆ ವೈದಿಕರ ಚಿತಾವಣಿ ಇದೆ ಎನ್ನುವುದು ಗೌಪ್ಯವಾಗಿ ಉಳಿದಿಲ್ಲ.

basava shaiva

ಇದೇ ಮಾದರಿಯಲ್ಲಿ ಪಂಚಮಸಾಲಿಗಳನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ವೈದಿಕರ ಹುನ್ನಾರದ ಭಾಗವಾಗಿ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ನಡೆದಿವೆ. ಇತ್ತೀಚೆಗೆ ಬಿಡುಗಡೆಯಾದ “ಬಸವ ಶೈವದಲ್ಲಿ ಹಿಂದುತ್ವ” ಎನ್ನುವ ಗ್ರಂಥ ವಿಕೃತಿಯ ಕರ್ತೃವಾದ ಉಪಾಧ್ಯ ಎನ್ನುವ ಗದಗ ಜಿಲ್ಲೆಯ ರೋಣ್ ತಾಲೂಕಿನ ಅಬ್ಬಿಗೆರೆ ಊರಿನ ಉಪದ್ವ್ಯಾಪಿ ವ್ಯಕ್ತಿಯ ಸಾಹಸ ಸಂಘಿ ವೈದಿಕ ಶಕ್ತಿಗಳ ಟೂಲ್ ಕಿಟ್ ಕರಸೇವೆಯ ಭಾಗವಾಗಿದೆ. ಈ ವ್ಯಕ್ತಿ ಕಳೆದ ಒಂದೆರಡು ವರ್ಷಗಳಿಂದ ಪಂಚಮಸಾಲಿ ಉಪವರ್ಗವನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ಸುಪಾರಿ ಪಡೆದು ಕಾರ್ಯ ಮಾಡುತ್ತಾ, ವೈದಿಕರ ಕಾಲಾಳಿನಂತೆ ಪಂಚಮಸಾಲಿಗರು ಕೋಟ್ಯಂತರ ವರ್ಷಗಳ ಹಿಂದಿನಿಂದ ಇದ್ದರು ಎನ್ನುವ ಅರ್ಥ ಬರುವಂತೆ ಅಸಂಬದ್ಧ ಲೇಖನಗಳನ್ನು ಸಂಘಿಗಳ ವಾಟ್ಸ್ಯಾಪ್‌ ವಿಶ್ವವಿದ್ಯಾಲಯದ ಮುಖೇನ ಹರಡುತ್ತಿದ್ದಾನೆ. ಸನಾತನ ಆರ್ಯ ಬ್ರಾಹ್ಮಣ ಧರ್ಮವನ್ನು ವೈದಿಕರು ಕೇವಲ ಲಕ್ಷಾಂತರ ವರ್ಷಗಳ ಹಿಂದಕ್ಕೆ ಅಂದರೆ, ಜಗತ್ತಿನ ನಾಗರಿಕತೆಯ ಕಾಲಘಟ್ಟಕ್ಕಿಂತ ಮೊದಲು ಕೊಂಡೊಯ್ದರೆ ಈ ಉಪಾಧ್ಯ ಲಿಂಗಾಯತ ಪೂರ್ವದ ಪಂಚಮಸಾಲಿಗಳನ್ನು ಕೋಟ್ಯಾಂತರ ವರ್ಷಗಳ ಹಿಂದಕ್ಕೆ ಒಯ್ದಿದ್ದಾನೆ. ಭಾರತದ ನಿಜವಾದ ಇತಿಹಾಸವನ್ನು ಯಾರಾದರು ಹೇಳಿದರೆ, ಈ ವೈದಿಕರು ಮತ್ತು ವೀರಶೈವ ಜಾತಿ ಜಂಗಮರು ಅದು ಬ್ರಿಟಿಷರ ಖೊಟ್ಟಿ ಇತಿಹಾಸ ಎಂದು ಹೇಳುತ್ತಾರೆ. ಬ್ರಿಟಿಷರು ದಯಪಾಲಿಸಿದ ಶಿಕ್ಷಣ, ಅಧುನಿಕ ಸಂಸ್ಕೃತಿ, ಸೌಲಭ್ಯ ಇತ್ಯಾದಿಗಳನ್ನು ಯಾವ ನಾಚಿಕೆ ಇಲ್ಲದೆ ತಮ್ಮದಾಗಿಸಿ ಅನುಭವಿಸುತ್ತಿರುವ ವೈದಿಕ ಸನಾತನಿಗಳು ಬ್ರಿಟಿಷರು ಸಂಶೋಧಿಸಿದ ಭಾರತದ ಇತಿಹಾಸವನ್ನು ಅಷ್ಟೇ ನಾಚಿಕೆ ಬಿಟ್ಟು ನಿರಾಕರಿಸುವುದು ವಿಪರ್ಯಾಸ.

ಭಾರತದ ಇತಿಹಾಸ ಆರ್ಯ ವೈದಿಕರ ವೇದ ಸಂಸ್ಕೃತಿಗೆ ತಳಕು ಹಾಕುವುದು ವೈದಿಕರ ಮತಿಹೀನ, ಲಜ್ಜೆಗೇಡಿ ನಡೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆರ್ಯ ಸನಾತನಿಗಳು ಭಾರತಕ್ಕೆ ಬಂದದ್ದು ಗರಿಷ್ಠ 3,500-4000 ವರ್ಷಗಳ ಹಿಂದೆ. ಅದಕ್ಕಿಂತ ಬಹು ಪೂರ್ವದಲ್ಲಿ ಇಲ್ಲಿದ್ದದ್ದು ಶಿವ-ದ್ರಾವಿಡ ಸಂಸ್ಕೃತಿಯ ನಾಗರಿಕತೆ. ಈ ನೆಲದ ಕಣಕಣಗಳಲ್ಲಿ ಹಾಸು ಹೊಕ್ಕಾಗಿ ಹರಡಿರುವುದು ಶಿವ ಮತ್ತು ಶಿವನಿಗೆ ಸಂಬಂಧಿಸಿದ ಸಂಸ್ಕೃತಿ. ಆನಂತರ ಹುಟ್ಟಿಕೊಂಡು ವ್ಯಾಪಕವಾಗಿ ಹರಡಿದ್ದು ಗೌತಮ ಬುದ್ಧನ ಸಂಸ್ಕೃತಿ. ಈ ಮೂಲ ಸಂಸ್ಕೃತಿಗಳನ್ನು ಮರೆಮಾಚಿ, ನಾಶಪಡಿಸಿ, ಶಿವ ಮತ್ತು ಬುದ್ಧನನ್ನು ಕಾಲ್ಪನಿಕ ವೈದಿಕ ಪುರಾಣಗಳಲ್ಲಿ ಸೇರಿಸಿ ಬೆರಳೆಣಿಕೆಯ ಜನರು ಅನುಸರಿಸುವ ವೇದಪ್ರಣೀತ ವೈದಿಕ ಸಂಸ್ಕೃತಿಯೇ ಭಾರತದ ಅತ್ಯಂತ ಪ್ರಾಚೀನ ಹಾಗು ಮೂಲ ಸಂಸ್ಕೃತಿ ಎಂದು ಬಿಂಬಿಸುತ್ತಿರುವುದು ವೈದಿಕರ ಅಭದ್ರತೆಯ ಮನಸ್ಸನ್ನು ತೋರುತ್ತದೆ. ಹಾಗಾಗಿ ಭಾರತದ ವೇದಕಾಲ ಪೂರ್ವದ ಹಾಗು ವೇದೋತ್ತರ ಕಾಲದ ಎಲ್ಲಾ ಮೂಲ ಸಂಸ್ಕೃತಿಗಳು, ದರ್ಶನಗಳು ಆರ್ಯ ಸನಾತನ ವೈದಿಕತೆಯ ಕವಲುಗಳು ಎಂದು ಹೇಳುತ್ತಾ ವೈದಿಕರು ಲಜ್ಜೆ ಬಿಟ್ಟು ಹೆಜ್ಜೆ ಹಾಕುತ್ತಿದ್ದಾರೆ. ಸಿಖ್ ಧಾರ್ಮಿಕತೆ ಮತ್ತು ದರ್ಶನದ ಕುರಿತು ವೈದಿಕರಿಗೆ ಹೆಚ್ಚಿನ ಆಶಕ್ತಿ ಇಲ್ಲ ಹಾಗು ಅವರ ಕುರಿತು ಹೆದರಿಕೆಯೂ ಇದೆ. ಸಿಖ್ ಧರ್ಮವು ಮಹಾರಾಷ್ಟ್ರದ ಪ್ರಗತಿಪರ, ಅವೈದಿಕ ವಾರಕರಿ ಚಳವಳಿಯಿಂದ ಪ್ರಭಾವಿತಗೊಂಡಿದೆ. ಗುರುಗ್ರಂಥಸಾಹೇಬ್‌ನಲ್ಲಿ ವಾರಕರಿ ಸಂತ ನಾಮದೇವನ ವಿಶೇಷ ಸ್ಮರಣೆ ಇರುವುದನ್ನು ನಾವು ಗಮನಿಸಬೇಕು.

ಈ ವಾರಕರಿ ಚಳವಳಿಯ ಮೇಲೆ ಗಾಢ ಪ್ರಭಾವ ಬೀರಿದ್ದು ಕರ್ನಾಟಕದ ಕಲ್ಯಾಣದಲ್ಲಿ ನಡೆದ ವಚನ ಚಳವಳಿ. ವಾರಕರಿ ಚಳುವಳಿಯ ಮುಖಂಡ ಹಾಗು ಸ್ಥಾಪಕ ಸಂತ ನಾಮದೇವನ ತಾಯಿಯ ತವರು ಮನೆ ಬಸವಕಲ್ಯಾಣ ಆಗಿರುವುದರಿಂದ ಕಲ್ಯಾಣ ಕ್ರಾಂತಿ ಆಗಿಹೋದ 50-60 ವರ್ಷಗಳ ನಂತರ ಹುಟ್ಟಿದ ಸಂತ ನಾಮದೇವ ಕಲ್ಯಾಣದ ಒಡನಾಟದ ಮೂಲಕ ವಚನ ಚಳುವಳಿಯ ಪ್ರಭಾವಕ್ಕೆ ಒಳಗಾಗಿ ಸ್ಥಾಪಿಸಿದ್ದೇ ವಾರಕರಿ ಚಳವಳಿ. ಅದು ಮುಂದೆ ಹದಿನೇಳನೆಯ ಶತಮಾನದ ಕ್ರಾಂತಿಕಾರಿ ಸಂತ ತುಕಾರಾಮನವರೆಗೆ ಮುಂದುವರೆಯಿತು. ಶರಣರ ವಚನಗಳ ಪ್ರಭಾವದಿಂದ ವಾರಕರಿ ಸಂತರು ಅದೇ ಮಾದರಿಯಲ್ಲಿ ಅಭಂಗಗಳನ್ನು ಸಾಹಿತ್ಯ ಮಾಧ್ಯಮವಾಗಿಸಿಕೊಂಡು ವೈದಿಕ ಧರ್ಮದ ಟೊಳ್ಳು ಸಿದ್ಧಾಂತಗಳ ಮೇಲೆ ತೀವ್ರವಾದ ಪ್ರಹಾರವನ್ನು ಮಾಡಿದರು. ವೈದಿಕರ ವಿಷ್ಣುವನ್ನು ವಿಠ್ಠಲ ಎಂದು ಕರೆದು ತಮ್ಮ ಆರಾಧ್ಯ ದೈವವಾಗಿಸಿಕೊಂಡರು. ಆ ವಿಠ್ಠಲನೇ ಗೌತಮ ಬುದ್ದ ಎನ್ನುವುದು ಅವರ ಅಚಲ ನಂಬಿಕೆಯಾಗಿದೆ. ವಾರಕರಿ ಸಂತರ ಭಕ್ತಿ ಮುಖವಾಡದ ಕ್ರಾಂತಿಕಾರಿ ಚಳವಳಿಯ ಪ್ರಭಾವದಿಂದ ಉತ್ತರದಲ್ಲಿ ರೇವಿದಾಸ, ಕಬೀರ ದಾಸರ ಚಳವಳಿ ಹುಟ್ಟು ಪಡೆಯಿತು. ಇವರು ವಚನಗಳು ಹಾಗು ಅಭಂಗಗಳ ಪ್ರಭಾವದಿಂದ ದೋಹೆಗಳನ್ನು ರಚಿಸಿ ವೈದಿಕ ಸಿದ್ಧಾಂತಗಳ ವಿಕೃತಿಗಳನ್ನು ವಿರೋಧಿಸಿದರು. ಈ ಚಳುವಳಿ ಹಾಗು ಸಂಘರ್ಷದ ಪರಂಪರೆ ಕೊನೆಗೆ ಪಂಜಾಬಿನವರೆಗೆ ತಲುಪಿ ಅಲ್ಲಿ ಸಿಖ್ ದರ್ಶನದ ಸ್ಥಾಪನೆಗೆ ನಾಂದಿ ಹಾಡಿತು.

ಮುಂದುವರೆಯುವುದು…

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನ್ ವಿರುದ್ಧ ಸಿಎಂಆರ್‌ಎಲ್ ಪ್ರಕರಣ: ಇಡಿ ಹೇಳಿದ ತಕ್ಷಣ ಎಫ್‌ಐಆರ್ ದಾಖಲಿಸಲಾಗದು ಎಂದು ಕೇರಳ ಗೃಹ ಸಚಿವ

ಜಾರಿ ನಿರ್ದೇಶನಾಲಯ (ಇಡಿ) ಕೋರಿದೆ ಎಂದಮಾತ್ರಕ್ಕೆ ತಕ್ಷಣವೇ ಎಫ್‌ಐಆರ್ ನೋಂದಾಯಿಸಲು ಸಾಧ್ಯವಿಲ್ಲ....

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...