ಅಯೋಧ್ಯೆಗೆ ಅವಮಾನ ಯಾವುದು? ಪ್ರಶ್ನೆ ಕೇಳುವುದೋ, ರಾಮಮಂದಿರ ನಿಧಿ ಲೂಟಿ ಹೊಡೆಯುವುದೋ?

Date:

ಅಯೋಧ್ಯೆಯ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌’ನ ದೇಣಿಗೆ ನಿಧಿಯಲ್ಲಿ ಆರ್ಥಿಕ ಅಕ್ರಮ ಮತ್ತು ಲೂಟಿಯ ಆರೋಪಗಳು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಈ ಪ್ರಕರಣವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಇದು ಕೇವಲ ವಿರೋಧ ಪಕ್ಷಗಳ ರಾಜಕೀಯ ಟೀಕೆಗೆ ಮಾತ್ರವೇ ಸೀಮಿತವಾಗಿಲ್ಲ; ಬದಲಿಗೆ ಆಡಳಿತಾರೂಢ ಬಿಜೆಪಿ ಮತ್ತು ಸಂಘ ಪರಿವಾರದ ಅತ್ಯುನ್ನತ ಮಟ್ಟದಲ್ಲೇ ತೀವ್ರ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಿರುಕನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ. ಮಂದಿರದ ನಿರ್ಮಾಣ ಸಮಿತಿಯ ಮುಖ್ಯಸ್ಥರಾದ ನೃಪೇಂದ್ರ ಮಿಶ್ರಾ ಅವರೇ ಭ್ರಷ್ಟಾಚಾರ ನಡೆದಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

- Advertisement -

ಈ ನಡುವೆ, ಜೂನ್ 19ರಂದು ಅಯೋಧ್ಯೆಗೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, “ಯಾವಾಗಲೆಲ್ಲ ಭಾರತವು ಸಕಾರಾತ್ಮಕ ದಿಕ್ಕಿನಲ್ಲಿ ಮುನ್ನಡೆಯುತ್ತದೆಯೋ, ಆಗೆಲ್ಲ ಸಂಚುಗಾರರು ನಿದ್ದೆಗೆಟ್ಟು ಪಿತೂರಿಗಳನ್ನು ಹೆಣೆಯಲು ಮುಂದಾಗುತ್ತಾರೆ. ಅಯೋಧ್ಯೆ ಧಾಮವನ್ನು ಮಲಿನಗೊಳಿಸಲು, ಶ್ರೀರಾಮ ಜನ್ಮಭೂಮಿಯನ್ನು ಸಂಶಯದಿಂದ ನೋಡುವಂತೆ ಮಾಡಲು ಮತ್ತು ನಮ್ಮ ಇಡೀ ಪರಂಪರೆಯನ್ನು ವಿರೋಧಿಸಲು ಈಗ ಮತ್ತದೇ ವ್ಯವಸ್ಥಿತ ಸಂಚು ನಡೆಯುತ್ತಿದೆ. ರಾಮಮಂದಿರದ ನಿಧಿ ಕುರಿತು ಪ್ರಶ್ನಿಸುವುದು ಮತ್ತು ಆರೋಪ ಮಾಡುವುದು ಅಯೋಧ್ಯೆ ಧಾಮವನ್ನು ಮತ್ತು ಇಡೀ ಪರಂಪರೆಯನ್ನು ಅವಮಾನಿಸುವ ವ್ಯವಸ್ಥಿತ ಸಂಚು” ಎಂದು ಕರೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ...

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97 ಮತದಾರರು ಎಂಬ ಸಂಖ್ಯೆ ಅತಿ ಚಿಕ್ಕದಾಗಿ ಕಾಣಬಹುದು. ಆದರೆ, ಗೋವಾದ ಈ 97 ಮತದಾರರ ಪ್ರಕರಣವು ಚುನಾವಣಾ ಆಯೋಗದ ಕಾರ್ಯವಿಧಾನ,...

ಮುಂದುವರೆದು, “ಜೂನ್ 13 ರಂದು ರಚಿಸಲಾದ ವಿಶೇಷ ತನಿಖಾ ತಂಡವು (SIT) ಇನ್ನು 15 ದಿನಗಳಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ. ಸತ್ಯ ಮತ್ತು ಸುಳ್ಳನ್ನು ಸಂಪೂರ್ಣವಾಗಿ ಬೇರ್ಪಡಿಸಲಿದೆ” ಎಂದು ಅವರು ಹೇಳಿದ್ದಾರೆ.

“ನಾವು 500 ವರ್ಷಗಳ ಕಾಲ ತಾಳ್ಮೆಯಿಂದ ಕಾಯ್ದು ರಾಮ ಜನ್ಮಭೂಮಿಯನ್ನು ಮರಳಿ ಪಡೆದಿದ್ದೇವೆ. ಆದ್ದರಿಂದ ಇನ್ನು ಕೇವಲ 15 ದಿನಗಳ ಕಾಲ ಭಕ್ತರು ತಾಳ್ಮೆ ವಹಿಸಬೇಕು. ರಾಮಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಜವಾಬ್ದಾರಿರಹಿತ ಹೇಳಿಕೆಗಳನ್ನು ನೀಡಬಾರದು” ಎಂದಿದ್ದಾರೆ.

ಯೋಗಿ ಅವರ ಮಾತುಗಳನ್ನು ಗಮನಿಸಿದರೆ, ತನಿಖೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲವೆಂಬ ವರದಿ ಬರಲಿದೆ ಎಂಬುದನ್ನು ಸೂಚಿಸುತ್ತಿವೆ. ಅಂದರೆ, ‘ತಮ್ಮದೇ ಸರ್ಕಾರ, ತಮ್ಮದೇ ಪೊಲೀಸರು ತಮ್ಮವರೇ ಇರುವ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮವನ್ನು ಸಬೀತು ಮಾಡುವರೇ? ಸಾಧ್ಯವೇ ಇಲ್ಲ!’ ಎಂಬುದು ಅವರ ಮಾತಿನ ತಾತ್ಪರ್ಯವಿದ್ದಂತಿದೆ.

ಅದೇನೇ ಇರಲಿ, ಸದ್ಯ ಗಂಭೀರ ಆರೋಪಗಳಿವೆ. ಮುಖ್ಯವಾಗಿ, ಪ್ರಧಾನಿ ಮೋದಿಯವರ ಮೊದಲ ಅವಧಿಯ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ನಿವೃತ್ತ ಅಧಿಕಾರಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಹಗರಣ ನಡೆದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

“ಮಂದಿರದ ದೇಣಿಗೆ ಎಣಿಕೆ ಕೊಠಡಿಯೊಳಗೆ ಕೆಲವು ಸಂಶಯಾಸ್ಪದ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೊಠಡಿಯ ಹೊರಗಿನ ಶೌಚಾಲಯದಲ್ಲಿ ನಗದು ಹಣ ಪತ್ತೆಯಾಗಿದೆ” ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಘಟನೆಯನ್ನು ಮುಲಾಜಿಲ್ಲದೆ ‘ಹಗಲು ದರೋಡೆ’ ಎಂದು ಕರೆದಿದ್ದಾರೆ.

“ಮಂದಿರಕ್ಕೆ ವಾರ್ಷಿಕವಾಗಿ ಸರಾಸರಿ 75 ರಿಂದ 80 ಕೋಟಿ ರೂಪಾಯಿ ದೇಣಿಗೆ ಬರುತ್ತಿದ್ದು, ಮಾಸಿಕವಾಗಿ ಗರಿಷ್ಠ 10 ರಿಂದ 12 ಕೋಟಿ ರೂ. ಸಂಗ್ರಹವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಅಕ್ರಮ ಎಷ್ಟು ದಿನಗಳಿಂದ ನಡೆಯುತ್ತಿತ್ತು ಎಂಬುದರ ಕುರಿತು ಗಂಭೀರ ತನಿಖೆಯ ಅಗತ್ಯವಿದೆ” ಎಂದು ಮಿಶ್ರಾ ಪ್ರತಿಪಾದಿಸಿದ್ದಾರೆ.

ಅಲ್ಲದೆ, ನೃಪೇಂದ್ರ ಮಿಶ್ರಾ ಅವರು ಎತ್ತಿ ತೋರಿಸಿರುವ ಆಡಳಿತಾತ್ಮಕ ಮತ್ತು ಭದ್ರತಾ ಲೋಪಗಳು ಅತ್ಯಂತ ಆಘಾತಕಾರಿಯಾಗಿವೆ. “ಮಂದಿರದ ಒಟ್ಟಾರೆ ನಿಗಾ ವ್ಯವಸ್ಥೆಯು ಸಂಪೂರ್ಣವಾಗಿ ಶೂನ್ಯವಾಗಿತ್ತು. ಭದ್ರತಾ ಪ್ರೋಟೋಕಾಲ್‌ಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ” ಎಂದಿದ್ದಾರೆ.

“ನಿಯಮಗಳ ಪ್ರಕಾರ ಹಣ ಎಣಿಕೆ ಮಾಡುವ ಸಿಬ್ಬಂದಿ ಜೇಬುಗಳಿಲ್ಲದ ವಿಶೇಷ ಉಡುಪುಗಳನ್ನು ಧರಿಸಬೇಕಿತ್ತಾದರೂ, ಅದನ್ನು ಪಾಲಿಸಿರಲಿಲ್ಲ. ಇದಕ್ಕಿಂತಲೂ ಗಂಭೀರವಾದ ವಿಷಯವೆಂದರೆ, ಮಂದಿರದ ಸಿಸಿಟಿವಿ ದೃಶ್ಯಾವಳಿಗಳು ಪ್ರತಿ 45 ದಿನಗಳಿಗೊಮ್ಮೆ ಸ್ವಯಂಚಾಲಿತವಾಗಿ ಅಳಿಸಿಹೋಗುತ್ತವೆ. ಇದಕ್ಕೆ ಯಾವುದೇ ಡಿಜಿಟಲ್ ಆರ್ಕೈವಿಂಗ್ ಅಥವಾ ಬ್ಯಾಕಪ್ ವ್ಯವಸ್ಥೆಯನ್ನು ಮಾಡಿರಲಿಲ್ಲ. ಯಾವುದೇ ಪ್ರಜ್ಞಾಪೂರ್ವಕ ಸಾಕ್ಷ್ಯ ನಾಶದ ಪ್ರಯತ್ನ ನಡೆಯದೇ ಇದ್ದರೂ, ಭದ್ರತಾ ಬ್ಯಾಕಪ್ ಇಲ್ಲದ ಕಾರಣ ಎಸ್‌ಐಟಿ ತಂಡಕ್ಕೆ 45 ದಿನಗಳಿಗಿಂತ ಹಳೆಯದಾದ ಚಟುವಟಿಕೆಗಳನ್ನು ಪರಿಶೀಲಿಸುವುದು ಮತ್ತು ಸತ್ಯಾಸತ್ಯತೆಯನ್ನು ಪತ್ತೆಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ” ಎಂದು ಅವರು ಹೇಳಿದ್ದಾರೆ.

ಇದರ ಜೊತೆಗೆ, “ಒಪ್ಪಂದದ ಪ್ರಕಾರ ಹಣ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಮಿಶ್ರಾ ಆರೋಪಿಸಿದ್ದಾರೆ.

“ಬ್ಯಾಂಕ್ ತನ್ನ ಖಾಯಂ ಉದ್ಯೋಗಿಗಳನ್ನು ನಿಗಾ ವ್ಯವಸ್ಥೆಗೆ ನಿಯೋಜಿಸಬೇಕಿತ್ತು. ಆದರೆ, ಹಾಗೆ ಮಾಡಿರಲಿಲ್ಲ. ಕೇವಲ ಆರ್‌ಎಸ್ಎಸ್ ಸ್ವಯಂಸೇವಕರು ಅಥವಾ ಸಂಘಟನೆಯ ಸಂಪರ್ಕಗಳನ್ನು ಹೊಂದಿದ್ದಾರೆ ಎಂಬ ಏಕೈಕ ಕಾರಣಕ್ಕೆ ಯಾವುದೇ ಹಿನ್ನೆಲೆ ಅಥವಾ ಪಾತ್ರ ಪರಿಶೀಲನೆ ಇಲ್ಲದೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅನೌಪಚಾರಿಕ ವ್ಯವಸ್ಥೆಯನ್ನು ಎಸ್‌ಐಬಿ ಅನುಸರಿಸಿತು. ಇದೇ ಇಷ್ಟೆಲ್ಲ ದುರಂತಗಳಿಗೆ ಕಾರಣವಾಗಿದೆ. ಈ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಈ ಇಡೀ ವಿವಾದವು ಟ್ರಸ್ಟ್‌ನೊಳಗಿನ ಆಂತರಿಕ ಬಿರುಕನ್ನು ಸ್ಪಷ್ಟವಾಗಿ ಮುಂಚೂಣಿಗೆ ತಂದಿದೆ. ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ತಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ, ಹಿರಿಯ ವಿಹೆಚ್‌ಪಿ ನಾಯಕ ಚಂಪತ್ ರೈ ಅವರು ಕೇವಲ ಒಂದು ಸಣ್ಣ ವಿಡಿಯೋ ಸಂದೇಶದ ಮೂಲಕ ವಾಡಿಕೆಯ ಆಡಿಟ್ ನಡೆಯುತ್ತಿದೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ.

ಆದರೆ, ಚಂಪತ್ ರೈ ಅವರ ಪರಮ ಆಪ್ತ, ಹಿರಿಯ ಆರ್‌ಎಸ್ಎಸ್ ಕಾರ್ಯಕರ್ತ ರಾಮ್ ಪ್ರಸಾದ್ ಯಾದವ್ ಅಲಿಯಾಸ್ ಟಿನ್ನು ಅವರ ಮೇಲಿರುವ ಆರೋಪಗಳು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿವೆ. ಟಿನ್ನು ಅವರು ಅಯೋಧ್ಯೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಮತ್ತು ಹಣ ಎಣಿಕೆ ಕೊಠಡಿಯ ಸಿಬ್ಬಂದಿ ನೇಮಕಾತಿಯಲ್ಲಿ ಅವರದ್ದೇ ಪ್ರಮುಖ ಪಾತ್ರವಿತ್ತು ಎಂಬ ಆರೋಪಗಳಿವೆ.

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಟಿನ್ನು, ತಮ್ಮ ಆಸ್ತಿಯು 2019ರ ತೀರ್ಪಿಗೂ ಮುನ್ನವೇ ಕಾನೂನುಬದ್ಧವಾಗಿ ಸಂಪಾದಿಸಿದ್ದಾಗಿದೆ. ಮಂದಿರದ ಎಂಜಿನಿಯರಿಂಗ್ ಸಂಸ್ಥೆಗಳಿಗೆ ಬಾಡಿಗೆಗೆ ನೀಡಿದ ಸ್ವತ್ತಿನಿಂದ ಬಂದ ಆದಾಯ ಎಂದು ವಾದಿಸಿದ್ದಾರೆ. ಆದರೆ ನೃಪೇಂದ್ರ ಮಿಶ್ರಾ ಹೇಳುವಂತೆ; ಟಿನ್ನು ಅವರು ಟ್ರಸ್ಟ್‌ನ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬುದನ್ನು ಎಸ್‌ಐಟಿ ತೀವ್ರವಾಗಿ ವಿಚಾರಣೆ ನಡೆಸಬೇಕಿದೆ.

ಇದೆಲ್ಲದರ ನಡುವೆ, ಇದೀಗ, ಯೋಗಿ ಆದಿತ್ಯನಾಥ್ ಅವರು, ರಾಮಮಂದಿರದಲ್ಲಿ ನಡೆದಿರುವ ಅಕ್ರಮವನ್ನು ಪ್ರಶ್ನಿಸುವುದು ‘ಅವಮಾನ’ ಎಂದಿದ್ದಾರೆ. ಅವರ ಹೇಳಿಕೆಯು ಸತ್ಯವನ್ನು ಹುಡುಕುವ ಭರವಸೆಗಿಂತ ಹೆಚ್ಚಾಗಿ ಬೆದರಿಕೆಗಳೇ ತುಂಬಿರುವಂತೆ ಕಾಣುತ್ತದೆ. ಸಾರ್ವಜನಿಕರು ಕೇವಲ ಹಾಲು ಮತ್ತು ನೀರಿನ ಲೆಕ್ಕವನ್ನು ಮಾತ್ರ ಕೇಳುತ್ತಿಲ್ಲ, ಬದಲಿಗೆ ಮಂದಿರಕ್ಕೆ ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ, ಬೆಲೆಬಾಳುವ ಕಲ್ಲುಗಳು, ಶಿಲಾಫಲಕಗಳು ಮತ್ತು ಒಟ್ಟಾರೆ ನಗದು ಕಾಣಿಕೆಗಳ ಸಂಪೂರ್ಣ ಪಾರದರ್ಶಕ ಲೆಕ್ಕವನ್ನು ಕೇಳುತ್ತಿದ್ದಾರೆ. ಸಿಸಿಟಿವಿ ಫುಟೇಜ್ ಅಳಿಸಿಹೋಗಿರುವುದು, ಬ್ಯಾಂಕುಗಳ ಬೇಜವಾಬ್ದಾರಿತನ ಮತ್ತು ನಿಯಮಗಳ ಉಲ್ಲಂಘನೆಗಳು ಕೇವಲ ಒಂದು ಆಕಸ್ಮಿಕ ಅಪಘಾತವಲ್ಲ, ಇದರ ಹಿಂದೆ ದೊಡ್ಡ ಲೋಪವಿದೆ.

ಭಾರತದ ಮೂಲೆ ಮೂಲೆಗಳಿಂದ ಬಡವರು, ಕಾರ್ಮಿಕರು, ವೃದ್ಧರು ತಮ್ಮ ಹಸಿವನ್ನು ನೀಗಿಸಿಕೊಂಡು ತಲಾ 10, 50, 100 ರೂಪಾಯಿಗಳಂತೆ ರಾಮಮಂದಿರಕ್ಕೆ ನಿಧಿ ಸಮರ್ಪಿಸಿದ್ದಾರೆ. ಈ ಭಕ್ತಿಯ ಹಣವನ್ನು ಮಂದಿರದ ಒಳಗಿರುವವರೇ ಲೂಟಿ ಹೊಡೆಯುತ್ತಿದ್ದಾರೆ ಎಂಬ ಸತ್ಯ ಹೊರಬಂದಾಗ, ಅದರ ವಿರುದ್ಧ ಧ್ವನಿ ಎತ್ತುವುದು ಭಕ್ತಿಯ ಲಕ್ಷಣವೇ ಹೊರತು ಪಿತೂರಿಯಲ್ಲ.

ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲೇ ಕಳ್ಳತನ ನಡೆಯುವಾಗ ಕಣ್ಣುಮುಚ್ಚಿ ಕುಳಿತುಕೊಳ್ಳುವುದು ಶ್ರೀರಾಮನಿಗೆ ಹಾಗೂ ಆತನ ಕೋಟ್ಯಂತರ ಭಕ್ತರಿಗೆ ಮಾಡುವ ದ್ರೋಹ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ನಿಧಿಯ ಲೆಕ್ಕ ಕೇಳುವುದನ್ನು ಅವಮಾನ ಎಂದು ಕರೆಯುವುದು ಲೂಟಿ ಮಾಡುವವರು, ಆಡಳಿತಾತ್ಮಕ ಲೋಪ ಎಸಗುವವರು ಹಾಗೂ ಸತ್ಯವನ್ನು ಮುಚ್ಚಿಡಲು ಯತ್ನಿಸುವ ಹುನ್ನಾರ.

ಕಳ್ಳತನವನ್ನು ಪ್ರಶ್ನಿಸುವವರನ್ನು ‘ಅಯೋಧ್ಯೆಯ ವಿರೋಧಿಗಳು’ ಎಂದು ಬಿಂಬಿಸುವುದು, ವ್ಯವಸ್ಥೆಯ ತಪ್ಪುಗಳನ್ನು ಮರೆಮಾಚುವ ರಕ್ಷಣಾತ್ಮಕ ತಂತ್ರದಂತೆ ಕಾಣುತ್ತದೆ. ಕಳ್ಳತನವನ್ನು ಮುಚ್ಚಿಡುವುದು ಅಯೋಧ್ಯೆಗೆ ಗೌರವ ತರುವುದಿಲ್ಲ; ಬದಲಿಗೆ ತಪ್ಪಿತಸ್ಥರನ್ನು ಜೈಲಿಗಟ್ಟಿದಾಗ ಮಾತ್ರ ಅಯೋಧ್ಯೆಯ ಘನತೆ ಜಗತ್ತಿನೆದುರು ಎತ್ತಿಹಿಡಿಯುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ...

ಲಗ್ಗೆರೆ | ಜೆಡಿಎಸ್ ನಾಯಕ ಅಂದಾನಪ್ಪ ನಿವಾಸದಲ್ಲಿ ವಾಚ್‌ಮ್ಯಾನ್ ಆತ್ಮಹತ್ಯೆ

ಜೆಡಿಎಸ್ ಮುಖಂಡ ಅಂದಾನಪ್ಪ ಅವರ ಬೆಂಗಳೂರಿನ ಲಗ್ಗೆರೆ ನಿವಾಸದಲ್ಲಿ ವಾಚ್‌ಮ್ಯಾನ್ ಆಗಿ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ ಗೋವಾದ 97 ಅರ್ಹರ ಹೆಸರು!

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97...

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ...