ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಕಾನೂನುಬಾಹಿರ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಕ್ರಮ ಲೇವಾದೇವಿ ವ್ಯವಹಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ ಎನ್ ಅವರ ಸೂಚನೆಯ ಮೇರೆಗೆ, ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ನೇತೃತ್ವದ ವಿಶೇಷ ತಂಡವು ಇಂದು ರೌಡಿ ಶೀಟರ್‌ಗಳು ಸೇರಿದಂತೆ ಒಟ್ಟು 14 ಶಂಕಿತರ ನಿವಾಸಗಳ ಮೇಲೆ ಏಕಕಾಲದಲ್ಲಿ ಅನಿರೀಕ್ಷಿತ ದಾಳಿ ನಡೆಸಿದೆ.
ಕಿರಣ್ ಪ್ರಕಾಶ್ ಸೋಳಂಕಿ (29, ಆನಂದ ನಗರ) ಮಂಜು ಅರ್ಜುನ್ ನವಲೆ (28, ಗಾಂಧಿನಗರ) ಮಲ್ಲಿಕಜಾನ @ ಜಹೀರ ಶಬ್ಬೀರ ಶೇಖ (28, ಕೋಟೆ ಓಣಿ) ಮಹಮ್ಮದ ಸಾಧಿಕ್ ಮೋದಿನಸಾಬ ಗಾಜೀಪೂರ (26, ಇಂದಿರಾನಗರ ಪ್ಲಾಟ್) ವಾಸೀಂಖಾನ್ ಗೂಡುಖಾನ್ ಬೆಂಡಿಗೇರಿ (30, ಆನಂದನಗರ) ಮಕ್ಬುಲಅಹಮದ ರಜಾಕಶಾ ಯಳ್ಳೂರ (39, ವಾಯ್ ಬಿ ರೋಡ್) ಮದುಸಿಂಗ್ ಗಂಗಾರಾಮಸಿಂಗ್ ರಜಪೂತ (32, ಬಸಾಪುರ) ಮಂಜುನಾಥ ಕಾಂತೇಶ ಹೋಟಕರ್ @ ಶೇರಖಾನೆ (26, ಕಂಬಾರಗಟ್ಟಿ ಪ್ಲಾಟ್) ಮಹಮ್ಮದ ಇಬ್ರಾಹಿಂ @ ರಫಿಕ್ ಮಕ್ಬುಲಸಾಬ ಜಮಖಂಡಿ (30, ಚೌಡಳ್ಳಿ) ಹರುಣ ಹಮ್ಮದ್ ಶೇಖ (21, ಕಿಲ್ಲೆ ಓಣಿ) ಮಹಮ್ಮದ ಯೂಸುಫ್ ರಿಯಾಜ್ ಅಹ್ಮದ್ ಗಡವಾಲೆ (22, ಕಿಲ್ಲೆ ಓಣಿ) ಮಹಮ್ಮದ ಇಸ್ಮಾಯಿಲ್ ಸೈಪುದ್ದಿನ್ ಫಾನವಾಲೆ (26, ದೇಶಪಾಂಡೆ ನಗರ) ಇವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ಮಾನ್ಯ ನ್ಯಾಯಾಲಯದ ಆದೇಶ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಇಂದು ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಶೋಧ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತೀಚೆಗೆ ನಡೆದ ಮೀಟರ್ ಬಡ್ಡಿ ದಂಧೆಯ ಕಿಂಗ್ ಪಿನ್ ಜಮೀರ್ ಅಹ್ಮದ್ ಕೊಲೆ ಪ್ರಕರಣದ ಬಳಿಕ ಪೊಲೀಸ್ ಇಲಾಖೆ ತಾಲೂಕಿನಲ್ಲಿ ಈ ಮಾಫಿಯಾವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದು ಎರಡನೇ ಬಾರಿಗೆ ನಡೆದ ದೊಡ್ಡ ಮಟ್ಟದ ದಾಳಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಅಡಿಕೆ ಬೆಳೆಗಾರರ ಬದುಕಿನೊಂದಿಗೆ ಚೆಲ್ಲಾಟ ಬೇಡ: ಶಾಸಕ ಶಿವರಾಮ ಹೆಬ್ಬಾರ್
ಕೆಲವು ದಿನಗಳ ಹಿಂದೆಯಷ್ಟೇ ದಂಧೆಯಲ್ಲಿ ತೊಡಗಿದ್ದ ಕೆಲವು ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲಾಗಿತ್ತು. ಇಂದಿನ ಕಾರ್ಯಾಚರಣೆಯ ವೇಳೆ ರೌಡಿ ಶೀಟರ್‌ಗಳ ಮನೆಗಳಿಂದ ಹಲವು ಖಾಲಿ ಚೆಕ್‌ಗಳು ಹಾಗೂ ಪ್ರಮುಖ ದಸ್ತಾವೇಜುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.




