ಬಿಹಾರ ‘ಡಬಲ್ ಇಂಜಿನ್’ ಸರ್ಕಾರದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆ: ಸುಶಾಸನವೋ, ಜಂಗಲ್ ರಾಜ್ಯವೋ?

Date:

ಡಬಲ್ ಇಂಜಿನ್ ಸರ್ಕಾರದಲ್ಲಿ ನೀವು ಹೇಳಿದ 'ಸುಶಾಸನ' ಎಲ್ಲಿದೆ? ಈ 'ಡಬಲ್ ಇಂಜಿನ್' ಸರ್ಕಾರದ ಲಾಭ ಯಾರಿಗೆ? ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಮೈತ್ರಿಕೂಟದ ಸರ್ಕಾರವಿದ್ದರೂ ಮಹಿಳೆಯರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ವಿಳಂಬ ಮಾಡುತ್ತಿರುವುದೇಕೆ?

“ಜಂಗಲ್‌ ರಾಜ್ಯ” – ಬಿಹಾರದಲ್ಲಿ ವಿಪಕ್ಷಗಳನ್ನು ಹಲಿಯಲು ಬಿಜೆಪಿ ನಿರಂತರವಾಗಿ ಬಳಸಿಕೊಂಡು ಬಂದಿರುವ ಪದ. “ನಾವು ಅಧಿಕಾರಕ್ಕೆ ಬಂದರೆ ಬಿಹಾರವನ್ನು ಅಪರಾಧ ಮುಕ್ತ ಮಾಡುತ್ತೇವೆ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುತ್ತೇವೆ” ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರುಗಳು ಹೇಳಿಕೊಂಡೇ ಇಂದಿನ ‘ಡಬಲ್ ಇಂಜಿನ್’ ಸರ್ಕಾರ ರಚನೆಯಾಗಿರುವುದು. ಆದರೆ ಈ ಡಬಲ್ ಇಂಜಿನ್ ಸರ್ಕಾರ ಬಂದ ಬಳಿಕ ನಡೆಯುತ್ತಿರುವುದೇನು? ಮನೆಯಿಂದಲೇ ಮಹಿಳೆಯರನ್ನು ಎಳೆದೊಯ್ದು ಅತ್ಯಾಚಾರ ನಡೆಸುವುದು ಬಿಜೆಪಿಯ ಜಂಗಲ್ ರಾಜ್ಯವೇ?

- Advertisement -

ಬಿಹಾರದ ಡಬಲ್ ಇಂಜಿನ್ ಸರ್ಕಾರದಲ್ಲಿ ‘ಜಂಗಲ್ ರಾಜ್ಯ’ ಹೊಸ ರೂಪ ಪಡೆಯುತ್ತಿದೆ. ಈ ಹಿಂದೆ ರಸ್ತೆಯಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಇರಲಿಲ್ಲ, ಈಗ ಮನೆಯಲ್ಲೂ ಇಲ್ಲ. ಮನೆಗೆ ನುಗ್ಗಿ ಹೆಣ್ಣುಮಕ್ಕಳನ್ನು ಎಳೆದೊಯ್ದು ಅತ್ಯಾಚಾರ ಎಸಗುವಂತಹ ಕ್ರೂರ ಕೃತ್ಯಗಳು ಬಿಹಾರದಲ್ಲಿ ವರದಿಯಾಗುತ್ತಿದೆ. ಆದರೆ ಸರ್ಕಾರ ಮಾತ್ರ ಗಪ್‌ಚುಪ್. ಕಾರಣ ಈ ಪ್ರಕರಣಗಳಲ್ಲಿ ತೊಡಗಿರುವುದು ಪ್ರಭಾವಿ ವ್ಯಕ್ತಿಗಳು! ಅದಕ್ಕೂ ಹೆಚ್ಚಾಗಿ ಸ್ಥಳೀಯ ಪಕ್ಷವನ್ನು ಒಡೆದು ತಮ್ಮ ಪಕ್ಷ ಕಟ್ಟುವ ತಮ್ಮ ಅಧಮ ರಾಜಕೀಯದ ಕೆಲಸದ ತುರ್ತಲ್ಲವೇ!?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಮುಖ್ಯವಾಗಿ ಬಿಹಾರದ ಗ್ರಾಮೀಣ ಭಾಗಗಳಲ್ಲಿ ಮನೆಗೆ ನುಗ್ಗಿ ಅಥವಾ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗುವ ಮತ್ತು ಸಂತ್ರಸ್ತೆಯರ ಕುಟುಂಬಗಳಿಗೆ ಬೆದರಿಕೆ ಹಾಕುವ ಗಂಭೀರ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಇತ್ತೀಚೆಗೆ ನಡೆದ ಇಂತಹ ಸಾಮೂಹಿಕ ಅತ್ಯಾಚಾರ ಘಟನೆಯೊಂದು ನಮ್ಮನ್ನು ಬೆಚ್ಚಿಬೀಳಿಸುವಂತಿದೆ.

ಇದನ್ನೂ ಓದಿ: ವಿಚಿತ್ರ ಯೋಗ; ನಿತೀಶ್ ಕುಮಾರ್ ಪುತ್ರ, ಬಿಹಾರ ಆರೋಗ್ಯ ಸಚಿವ ನಿಶಾಂತ್ ಟ್ರೋಲ್!

ಬಿಹಾರದಲ್ಲಿ ಇತ್ತೀಚೆಗೆ ದಾಖಲಾದ ಭೀಕರ ಘಟನೆಗಳು

ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಜೂನ್ 11ರಂದು ತಡರಾತ್ರಿ ಮಹಿಳೆಯೊಬ್ಬರನ್ನು ಮನೆಯಿಂದ ಎಳೆದೊಯ್ದ ಐವರು ದುಷ್ಕರ್ಮಿಗಳು ಆಕೆಯನ್ನು ಬಲವಂತವಾಗಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಮಹಿಳೆಯ ಪತಿಯನ್ನು ಕೋಣೆಯೊಂದರಲ್ಲಿ ಕೂಡು ಹಾಕಿ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆಕೆಯ ಗುಪ್ತಾಂಗದಲ್ಲಿ ಕಲ್ಲು, ಗುಂಡು, ಕಟ್ಟಿಗೆ ತುಂಡನ್ನು ತುರುಕಿ ವಿಕೃತಿ ಮೆರೆದಿದ್ದಾರೆ.

ಮೂರು ತಿಂಗಳ ಹಿಂದೆಯೂ ಇದೇ ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು. ಆಗ ದೂರು ನೀಡಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರೇ ಸಂತ್ರಸ್ತರ ಸಹಾಯಕ್ಕೆ ನಿಲ್ಲದಿದ್ದಾಗ ಅಪರಾಧಿಗಳಿಗೆ ಬಲ ಬಂದಂತೆ ಅಲ್ಲವೆ? ಕಾನೂನಿನ ಭಯವೇ ಇಲ್ಲದೆ ಮನೆಗೆ ನುಗ್ಗಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಜಂಗಲ್ ರಾಜ್ಯದಲ್ಲಿ ಇನ್ನೇನೂ ನಿರೀಕ್ಷಿಸಲು ಸಾಧ್ಯ?

ಘಟನೆ ನಡೆದ ಮರುದಿನ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಕೆಲವು ದಿನಗಳ ನಂತರ ಮಹಿಳೆಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಜೂನ್ 17ರಂದು ಆಕೆಯನ್ನು ಮತ್ತೆ ಬೇಗುಸರಾಯ್‌ನ ಸದರ್ ಆಸ್ಪತ್ರೆಗೆ ದಾಖಲಿಸಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿದಾಗ ವೈದ್ಯರೇ ಬೆಚ್ಚಿಬೀಳುವ ವಿಷಯ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಅತ್ಯಾಚಾರದ ವೇಳೆ ಮಹಿಳೆಯ ಗುಪ್ತಾಂಗದೊಳಗೆ ಒಂದು ಜೀವಂತ ಬುಲೆಟ್, ಕಲ್ಲು ಮತ್ತು ಮರದ ತುಂಡನ್ನು ತುರುಕಿ ವಿಕೃತಿ ಮೆರೆದಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಇವುಗಳನ್ನು ಹೊರತೆಗೆದಿದ್ದಾರೆ.

ನಿರ್ಭಯಾ ಪ್ರಕರಣವನ್ನು ನೆನಪಿಸುವ ಈ ಅತ್ಯಾಚಾರ ನಡೆದ ಕೂಡಲೇ ದೂರು ನೀಡಿದ್ದರೂ ಸ್ಥಳೀಯ ಚಾಕಿಯಾ ಪೊಲೀಸ್ ಠಾಣೆಯ ಪ್ರಭಾರಿ (SHO) ಯಾವುದೇ ಕ್ರಮಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಡಿಐಜಿ ಶೈಲೇಶ್ ಕುಮಾರ್ ಅವರು ಚಾಕಿಯಾ ಎಸ್‌ಎಚ್‌ಒ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಸದ್ಯ ಒತ್ತಡದ ಮೇರೆಗೆ ಎಸ್‌ಐಟಿ ರಚನೆಯಾಗಿದೆ. ಜೂನ್ 21ರಂದು ಪೊಲೀಸರು ಹರಿಯಾಣದ ಫರಿದಾಬಾದ್‌ನಲ್ಲಿ ಅಡಗಿದ್ದ ಪ್ರಮುಖ ಆರೋಪಿ ನಿತೀಶ್ ಕುಮಾರ್ ಹಾಗೂ ತನಿಖೆಯ ವೇಳೆ ಪತ್ತೆಯಾದ ಮತ್ತೊಬ್ಬ ಆರೋಪಿ ಅಮರ್ ನಿಶಾದ್ ಎಂಬಾತನನ್ನು ಬಂಧಿಸಿದ್ದಾರೆ. ಉಳಿದವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಸರಣ್ ಜಿಲ್ಲೆಯ ಅತ್ಯಾಚಾರ ಪ್ರಕರಣ

ಇದೇ ಬಿಹಾರದ ಸರಣ್ ಜಿಲ್ಲೆಯಲ್ಲಿಯೂ ಇದೇ ರೀತಿಯ ಅತ್ಯಾಚಾರ ಪ್ರಕರಣ ನಡೆದಿದೆ. ಮಾರ್ಚ್ 11ರಂದು ಜಿಲ್ಲೆಯ ಪತ್ತಿಸಿಟಲ್ ಗ್ರಾಮದಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿ ಮನೆಯಲ್ಲಿದ್ದಾಗ ಬಂದ ಐವರು ದುಷ್ಕರ್ಮಿಗಳು ಆಕೆಯನ್ನು ಬಲವಂತವಾಗಿ ಮನೆಯಿಂದ ಹೊರಗಿದ್ಧ ಶೌಚಾಲಯಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಕ್ರೌರ್ಯದ ಪರಾಕಾಷ್ಠೆ ಎಂಬಂತೆ, ಅತ್ಯಾಚಾರದ ನಂತರ ಆರೋಪಿಗಳು ಬಾಲಕಿಯನ್ನು ಜೀವಂತವಾಗಿಯೇ ಹತ್ತಿರದ ಒಂದು ಬಾವಿಗೆ ಎಸೆದಿದ್ದರು. ಬಾವಿಯಲ್ಲಿ ಬಾಲಕಿ ಕನಿಷ್ಠ 15 ನಿಮಿಷಗಳ ಕಾಲ ತನ್ನ ಜೀವ ಉಳಿಸುವಂತೆ ಅತ್ತು ಕರೆದು ಮನವಿ ಮಾಡಿ ಕೊನೆಯುಸಿರೆಳದಿದ್ದಳು.

ಇದನ್ನೂ ಓದಿ: ಅತ್ಯಾಚಾರಿ ‘ದೇವಮಾನವ’ನಿಗೆ ಈ ಪರಿ ‘ಪೆರೋಲ್‌’ ಸಿಗುವುದಾದರೂ ಹೇಗೆ? ಸಂತ್ರಸ್ತೆಯರಿಗೆ ಶಿಕ್ಷೆಯೇ?

ಈ ಘಟನೆಯು ಸಾರ್ವಜನಿಕವಾಗಿ ತಿಳಿಯುತ್ತಿದ್ದಂತೆ ಬಿಹಾರದಾದ್ಯಂತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯಾದ ಯುವರಾಜ್ ಕುಮಾರ್ ಎಂಬಾತನನ್ನು ಬಂಧಿಸಿದ್ದರು. ಆದರೆ ಈವರೆಗೂ ಉಳಿದ ಆರೋಪಿಗಳ ಬಂಧನವೇ ನಡೆದಿಲ್ಲ. ಇನ್ನೂ ಹುಡುಕಾಟ ನಡೆಯುತ್ತಿದೆ ಎನ್ನುತ್ತಿದ್ದಾರೆ ಈ ಡಬಲ್ ಇಂಜಿನ್ ಸರ್ಕಾರದ ಪೊಲೀಸರು!

ತನಿಖೆಯಲ್ಲಿ ಇಷ್ಟೊಂದು ವಿಳಂಬ ಧೋರಣೆ, ಬಿಹಾರ ಪೊಲೀಸರ ನಡೆ ಹಾಗೂ ಅಲ್ಲಿನ ಕಾನೂನು ಸುವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಮತ್ತು ಮಾಧ್ಯಮಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ದಿನಕಳೆದಂತೆ ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನವೂ ನಡೆಯುತ್ತಿದೆ!

ಇವೆರಡು ಮಾಧ್ಯಮಗಳಲ್ಲಿ ಸದ್ದು ಮಾಡಿದ ಪ್ರಕರಣಗಳಾದರೆ ಇನ್ನೂ ಹಲವು ಅತ್ಯಾಚಾರ ಪ್ರಕರಣಗಳ ಫೈಲ್‌ಗಳು ಅಲ್ಲಲ್ಲೇ ಸದ್ದಿಲ್ಲದೆ ಮೂಲೆ ಸೇರುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB – National Crime Records Bureau) ವರದಿಗಳ ಪ್ರಕಾರ, ಬಿಹಾರದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ವಿಶೇಷವಾಗಿ ಮಹಿಳೆಯರ ಅಪಹರಣ, ಅತ್ಯಾಚಾರ ಮತ್ತು ವರದಕ್ಷಿಣೆ ಕಿರುಕುಳದ ಪ್ರಕರಣಗಳಲ್ಲಿ ಬಿಹಾರವು ದೇಶದ ಮುಂಚೂಣಿ ರಾಜ್ಯಗಳ ಪಟ್ಟಿಯಲ್ಲಿದೆ.

ಬಿಹಾರದಲ್ಲಿ ವಾರ್ಷಿಕವಾಗಿ ಸರಾಸರಿ 700 ರಿಂದ 800ಕ್ಕೂ ಹೆಚ್ಚು ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಅಧಿಕೃತವಾಗಿ ಪೊಲೀಸ್ ದಾಖಲೆ ಸೇರುತ್ತಿವೆ. ಸಮಾಜದಲ್ಲಿ ‘ಮರ್ಯಾದೆ’ ಹೋಗುತ್ತದೆ ಎಂಬ ಆತಂಕ ಹಾಗೂ ಪ್ರಬಲರ ಭಯದಿಂದ ದೂರು ನೀಡದ ಪ್ರಕರಣಗಳ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರಬಹುದು. ಆದರೆ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳ ವಿಚಾರಣೆ ಮತ್ತು ಶಿಕ್ಷೆಯ ಪ್ರಮಾಣ ತೀರಾ ನಿಧಾನಗತಿಯಲ್ಲಿದೆ.

ಬಿಹಾರದ ಡಬಲ್ ಇಂಜಿನ್ ಸರ್ಕಾರಕ್ಕೆ ನಮ್ಮ ಪ್ರಶ್ನೆ

ಹೀಗಿರುವಾಗ ಬಿಹಾರದ ಬಿಜೆಪಿ ಸರ್ಕಾರದ ಮುಂದೆ ನಾವು ಹಲವು ಪ್ರಶ್ನೆಗಳನ್ನು ಇಡಬೇಕಾಗುತ್ತದೆ. ಅದರಲ್ಲಿ ಮೊದಲನೆಯದ್ದು ಡಬಲ್ ಇಂಜಿನ್ ಸರ್ಕಾರದಲ್ಲಿ ನೀವು ಹೇಳಿದ ‘ಸುಶಾಸನ’ ಎಲ್ಲಿದೆ? ಎಂಬುದು. ಚುನಾವಣಾ ಪ್ರಚಾರಗಳಲ್ಲಿ ಮತ್ತು ಭಾಷಣಗಳಲ್ಲಿ ಅಪರಾಧ ಮುಕ್ತ ಬಿಹಾರದ ಭರವಸೆ ನೀಡುವ ಬಿಜೆಪಿಗೆ, ಬಿಹಾರದಲ್ಲಿ ತಮ್ಮ ಸ್ವಂತ ಮನೆಯಲ್ಲೂ ಸುರಕ್ಷಿತವಾಗಿಲ್ಲದಿರುವುದು ಕಾಣಿಸುತ್ತಿಲ್ಲವೇ?

ಇಂತಹ ಭೀಕರ ಅಪರಾಧಗಳು ನಡೆಯುವಾಗ ಪೊಲೀಸ್ ಇಲಾಖೆಯೇ ಅಪರಾಧಿಗಳ ಪರವಾಗಿ ನಿಲ್ಲುವುದು ನಿಜವಾದ ಜಂಗಲ್ ರಾಜ್ಯವೇ? ಅಷ್ಟಕ್ಕೂ ಈ ‘ಡಬಲ್ ಇಂಜಿನ್’ ಸರ್ಕಾರದ ಲಾಭ ಯಾರಿಗೆ? ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಮೈತ್ರಿಕೂಟದ ಸರ್ಕಾರವಿದ್ದರೂ ಮಹಿಳೆಯರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ವಿಳಂಬ ಮಾಡುತ್ತಿರುವುದೇಕೆ?

ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಸಂತ್ರಸ್ತೆಯರಿಗೆ ತಕ್ಷಣವೇ ವೈದ್ಯಕೀಯ, ಕಾನೂನು ಮತ್ತು ಆರ್ಥಿಕ ನೆರವು ಯಾಕೆ ಸಿಗುತ್ತಿಲ್ಲ? ಅಪರಾಧಿಗಳಿಗೆ ರಾಜಕೀಯ ಮತ್ತು ಪ್ರಭಾವಿ ವ್ಯಕ್ತಿಗಳ ರಕ್ಷಣೆ ಸಿಗುತ್ತಿರುವುದರಿಂದಲೇ ಬಿಹಾರ ಪೊಲೀಸರು ಇಂತಹ ಘಟನೆಗಳನ್ನು ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದು ನಿಜವಲ್ಲವೇ?

ಕಾನೂನು ಸುವ್ಯವಸ್ಥೆ ಹದಗೆಟ್ಟಾಗಲೆಲ್ಲಾ ಹಳೆಯ ಸರ್ಕಾರದ ಆಡಳಿತವನ್ನು ದೂಷಿಸುವ ಬಿಜೆಪಿ ತಮ್ಮ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ಈ ದೃಷ್ಕೃತ್ಯಗಳ ಹೊಣೆ ಹೊರುತ್ತದೆಯೇ? ಅಷ್ಟಕ್ಕೂ ಮಹಿಳಾ ಸುರಕ್ಷತೆಗಾಗಿ ಬಿಡುಗಡೆಯಾಗುವ ‘ನಿರ್ಭಯಾ ನಿಧಿ’ ಸೇರಿದಂತೆ ವಿವಿಧ ಯೋಜನೆಗಳ ಹಣ ಬಿಹಾರದಲ್ಲಿ ಸರಿಯಾಗಿ ಬಳಕೆಯಾಗುತ್ತಿದೆಯೇ? ಡಬಲ್ ಇಂಜಿನ್ ಸರ್ಕಾರ ಎಂದರೆ ಮಹಿಳೆಯರಿಗೆ ಸ್ವಂತ ಮನೆಯಲ್ಲೇ ಸುರಕ್ಷತೆ ಇಲ್ಲದಿರುವುದೇ?

ವಾಸ್ತವದಲ್ಲಿ ಬಿಹಾರದ ಸದ್ಯದ ಪರಿಸ್ಥಿತಿಯು ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪಗಳ ವಿಷಯವಾಗಿ ಉಳಿದಿಲ್ಲ. ಬಿಹಾರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಕ್ರೂರ ಕೃತ್ಯಗಳು ಸಮಾಜದ ಪ್ರತಿಯೊಬ್ಬ ನಾಗರಿಕರನ್ನೂ ಯೋಚನೆಗೆ ದೂಡುವಂತದ್ದು.

ಬಿಹಾರದಲ್ಲಿ ಅಧಿಕಾರ ಪಡೆಯಲು ಸ್ಥಳೀಯ ರಾಜಕೀಯ ಪಕ್ಷಗಳನ್ನು ಬಳಸುವ ಬಿಜೆಪಿ ರಾಜ್ಯದ ಸಾಮಾನ್ಯ ಮಹಿಳೆಗೆ ಮುಕ್ತವಾಗಿ ಮತ್ತು ಭಯವಿಲ್ಲದೆ ಬದುಕುವ ವಾತಾವರಣ ನಿರ್ಮಾಣಿಸುವತ್ತ ಗಮನವೇ ನೀಡಿಲ್ಲ. ಹೀಗಿದ್ದಾಗ ಬಿಜೆಪಿ ಸರ್ಕಾರವನ್ನು “ಸುಶಾಸನ ಸರ್ಕಾರ” ಎಂದು ಕರೆಯಲು ಸಾಧ್ಯವಿಲ್ಲ. ಬಿಹಾರ ಡಬಲ್ ಇಂಜಿನ್ ಸರ್ಕಾರ ಭರವಸೆ ನೀಡುವ ಬದಲು ಕಠಿಣ ಕಾನೂನು ಕ್ರಮಕೈಗೊಳ್ಳುವುದು ಅತ್ಯಗತ್ಯ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ ಸಾಕೇ, ಇನ್ನಷ್ಟು ಬೇಕೇ?

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು....

ಕೇರಳದಲ್ಲಿ ಮತ್ತೆ ಭೂಕುಸಿತ; 9 ಮಂದಿ ಸಾವು, ಹಲವರು ನಾಪತ್ತೆ

ಕೇರಳ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ...

ವಿಧಾನ ಮಂಡಲದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಗಂಭೀರ ಚರ್ಚೆ; ಕಾಡಂಚಿನ ಜನರ ಹಿತ ಕಾಯಲು ಶಾಸಕರ ಒಕ್ಕೊರಲ ಆಗ್ರಹ

ಸದನದಲ್ಲಿ ಮಾತನಾಡಿದ ಈ ಎಲ್ಲಾ ನಾಯಕರು, ಕಸ್ತೂರಿರಂಗನ್ ವರದಿಯನ್ನು ಅರಣ್ಯದ ಸಮೀಪ...

ಜಾರ್ಖಂಡ್ ಸಿಎಂ ಸೊರೇನ್ ವಿರುದ್ಧ ಹೇಳಿಕೆ: ಮಾಜಿ ಸಚಿವ ಯೋಗೇಂದ್ರ ಸಾವ್‌ಗೆ ಕಾಂಗ್ರೆಸ್‌ ಶೋಕಾಸ್ ನೋಟಿಸ್

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಮಾಜಿ ಸಚಿವ ಹಾಗೂ ಹಿರಿಯ...