90 ನಿಮಿಷಗಳಲ್ಲಿ 12 ಗೋಲು: ಫಿಫಾದಲ್ಲಿ ಗೋಲುಗಳ ಮಳೆ ಸುರಿದ ರೋಚಕ ಪಂದ್ಯಗಳಿವು

Date:

1930ರಲ್ಲಿ ಆರಂಭವಾದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ 2,700ಕ್ಕೂ ಹೆಚ್ಚು ಗೋಲುಗಳು ದಾಖಲಾಗಿವೆ. ಆದರೆ, ಕೆಲವು ಪಂದ್ಯಗಳು ಮಾತ್ರ ಮಿತಿಮೀರಿದ ಗೋಲುಗಳ ಸುರಿಮಳೆಯಿಂದಾಗಿ ಫುಟ್‌ಬಾಲ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ. 2026ರ ವಿಶ್ವಕಪ್‌ಗೆ ಮುನ್ನ, ಫುಟ್‌ಬಾಲ್ ಲೋಕದ ಅತಿ ದೊಡ್ಡ ವೇದಿಕೆಯಲ್ಲಿ ಅತಿ ಹೆಚ್ಚು ಗೋಲುಗಳು ದಾಖಲಾದ ರೋಚಕ ಪಂದ್ಯಗಳ ಮೆಲುಕು ಇಲ್ಲಿದೆ.

- Advertisement -

ಆಸ್ಟ್ರಿಯಾ 7-5 ಸ್ವಿಟ್ಜರ್ಲೆಂಡ್ (1954)
1954ರ ಜೂನ್ 26ರಂದು ಲೌಸೇನ್‌ನಲ್ಲಿ ನಡೆದ ವಿಶ್ವಕಪ್ ಕ್ವಾರ್ಟರ್-ಫೈನಲ್ ಪಂದ್ಯವು, ವಿಶ್ವಕಪ್ ಇತಿಹಾಸದಲ್ಲಿಯೇ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಗೋಲುಗಳು ದಾಖಲಾದ ಪಂದ್ಯವಾಗಿ ಇಂದಿಗೂ ಉಳಿದಿದೆ. ಪಂದ್ಯ ಆರಂಭವಾದ ಕೇವಲ 23 ನಿಮಿಷಗಳಲ್ಲಿ ಸ್ವಿಟ್ಜರ್ಲೆಂಡ್ 3-0 ಮುನ್ನಡೆ ಸಾಧಿಸಿತ್ತು. ಆದರೆ, ಆಸ್ಟ್ರಿಯಾ ಅದ್ಭುತ ಕಮ್‌ಬ್ಯಾಕ್ ಮಾಡಿ ಮುಂದಿನ 25 ನಿಮಿಷಗಳಲ್ಲಿ ಬರೋಬ್ಬರಿ 5 ಗೋಲುಗಳನ್ನು ಸಿಡಿಸಿತು. ಮೊದಲಾರ್ಧದ ಅಂತ್ಯಕ್ಕಾಗಲೇ ಸ್ಕೋರ್ 5-4 ಆಗಿತ್ತು. ಪಂದ್ಯದ ಅಂತ್ಯಕ್ಕೆ ಎರಡೂ ತಂಡಗಳು ಸೇರಿ ಒಟ್ಟು 12 ಗೋಲುಗಳನ್ನು (ಆಸ್ಟ್ರಿಯಾ 7, ಸ್ವಿಟ್ಜರ್ಲೆಂಡ್ 5) ಗಳಿಸಿದವು. 7 ದಶಕಗಳು ಕಳೆದರೂ ಈ ದಾಖಲೆ ಅಜೇಯವಾಗಿ ಉಳಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಹಂಗೇರಿ 10-1 ಎಲ್ ಸಾಲ್ವಡಾರ್ (1982)
ಒಂದೇ ಪಂದ್ಯದಲ್ಲಿ ಅತಿ ದೊಡ್ಡ ಅಂತರದ ಗೆಲುವು (9 ಗೋಲುಗಳ ಅಂತರ) ಸಾಧಿಸಿದ ದಾಖಲೆ ಹಂಗೇರಿ ಹೆಸರಿನಲ್ಲಿದೆ. 1982ರ ಸ್ಪೇನ್ ವಿಶ್ವಕಪ್‌ನಲ್ಲಿ ಎಲ್ ಸಾಲ್ವಡಾರ್ ವಿರುದ್ಧ ಹಂಗೇರಿ 10-1 ಅಂತರದ ಭರ್ಜರಿ ಜಯ ಸಾಧಿಸಿತ್ತು. ಒಂದೇ ಪಂದ್ಯದಲ್ಲಿ 10 ಗೋಲು ಬಾರಿಸಿದ ವಿಶ್ವಕಪ್‌ನ ಏಕೈಕ ತಂಡ ಹಂಗೇರಿ. ಜೊತೆಗೆ, ಬದಲಿ ಆಟಗಾರನಾಗಿ ಮೈದಾನಕ್ಕಿಳಿದು ಹ್ಯಾಟ್ರಿಕ್ ಗೋಲು ಬಾರಿಸಿದ (ಲಾಸ್ಲೊ ಕಿಸ್) ವಿಶ್ವಕಪ್ ಇತಿಹಾಸದ ಏಕೈಕ ದಾಖಲೆಯೂ ಈ ಪಂದ್ಯದಲ್ಲಿ ನಿರ್ಮಾಣವಾಯಿತು. ಇಲ್ಲಿ ಒಟ್ಟು 11 ಗೋಲುಗಳು ದಾಖಲಾಗಿದ್ದವು.

ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ

ಬ್ರೆಜಿಲ್ 6-5 ಪೋಲೆಂಡ್ (1938)
ರೊನಾಲ್ಡೊ ಅಥವಾ ಪೀಲೆ ಅವರಿಗಿಂತ ಮುಂಚೆಯೇ ಬ್ರೆಜಿಲ್ ತಂಡ ತನ್ನ ಆಕ್ರಮಣಕಾರಿ ಆಟಕ್ಕೆ ಹೆಸರಾಗಿತ್ತು. 1938ರಲ್ಲಿ ಪೋಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಒಟ್ಟು 11 ಗೋಲುಗಳು ದಾಖಲಾಗಿದ್ದವು. ಇದರಲ್ಲಿ ಬ್ರೆಜಿಲ್ 6 ಗೋಲು ಬಾರಿಸಿದರೆ, ಪೋಲೆಂಡ್ 5 ಗೋಲು ಗಳಿಸಿತ್ತು (ಪೋಲೆಂಡ್‌ನ ಅರ್ನೆಸ್ಟ್ ವಿಲಿಮೋವ್ಸ್ಕಿ ಒಬ್ಬರೇ 4 ಗೋಲು ಗಳಿಸಿದ್ದರು).

ಇತರೆ ಗಮನಾರ್ಹ ಪಂದ್ಯಗಳು:
1954ರ ಟೂರ್ನಿಯ ಗ್ರೂಪ್ ಹಂತದ ಪಂದ್ಯವೊಂದರಲ್ಲಿ ಹಂಗೇರಿಯು ಪಶ್ಚಿಮ ಜರ್ಮನಿ ವಿರುದ್ಧ 8-3 (ಒಟ್ಟು 11 ಗೋಲು) ಅಂತರದ ಜಯ ಸಾಧಿಸಿತ್ತು. ವಿಶೇಷವೆಂದರೆ, ಕೆಲವೇ ವಾರಗಳ ಬಳಿಕ ನಡೆದ ಫೈನಲ್‌ನಲ್ಲಿ ಅದೇ ಪಶ್ಚಿಮ ಜರ್ಮನಿ ಹಂಗೇರಿಯನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇನ್ನು, 1958ರಲ್ಲಿ ನಡೆದ ಗ್ರೂಪ್ ಹಂತದ ಪಂದ್ಯವೊಂದರಲ್ಲಿ ಫ್ರಾನ್ಸ್ ತಂಡವು ಪರಾಗ್ವೆ ವಿರುದ್ಧ 7-3 (ಒಟ್ಟು 10 ಗೋಲು) ಅಂತರದ ಗೆಲುವು ಸಾಧಿಸಿತ್ತು.

ಅತಿ ಹೆಚ್ಚು ಗೋಲು ದಾಖಲಾದ ಟೂರ್ನಿ (1954):
1954ರ ವಿಶ್ವಕಪ್ ಟೂರ್ನಿಯ ಕೇವಲ 26 ಪಂದ್ಯಗಳಲ್ಲಿ 140 ಗೋಲುಗಳು ದಾಖಲಾಗಿದ್ದವು! ಅಂದರೆ ಪ್ರತಿ ಪಂದ್ಯಕ್ಕೆ ಸರಾಸರಿ 5.38 ಗೋಲುಗಳು. ಈ ಪ್ರಮಾಣ ಎಷ್ಟೊಂದು ದೊಡ್ಡದೆಂದರೆ, 2018 ಮತ್ತು 2022ರ ವಿಶ್ವಕಪ್‌ಗಳಲ್ಲಿ ಪ್ರತಿ ಪಂದ್ಯಕ್ಕೆ ಸರಾಸರಿ ಕೇವಲ 2.64 ಹಾಗೂ 2.69 ಗೋಲುಗಳು ಮಾತ್ರ ದಾಖಲಾಗಿವೆ.
ಆಧುನಿಕ ಫುಟ್‌ಬಾಲ್ ಹೆಚ್ಚು ವೇಗ ಹಾಗೂ ತಂತ್ರಗಾರಿಕೆಯಿಂದ ಕೂಡಿರಬಹುದು; ಆದರೆ 1954ರಲ್ಲಿ ಕಂಡುಬಂದ ಗೋಲುಗಳ ಸುರಿಮಳೆಯನ್ನು ಸರಿಗಟ್ಟಲು ಯಾವ ಟೂರ್ನಿಗೂ ಸಾಧ್ಯವಾಗಿಲ್ಲ. 1938ರಿಂದ 1982ರ ಅವಧಿಯಲ್ಲಿ 10 ಅಥವಾ ಅದಕ್ಕೂ ಹೆಚ್ಚು ಗೋಲುಗಳು ದಾಖಲಾದ ಒಟ್ಟು 5 ಪಂದ್ಯಗಳನ್ನು ವಿಶ್ವಕಪ್ ಕಂಡಿದೆ. ಆದರೆ, ನಾಲ್ಕು ದಶಕಗಳ ನಂತರವೂ ಫುಟ್‌ಬಾಲ್ ಜಗತ್ತು ಅಂತಹ 6ನೇ ಪಂದ್ಯಕ್ಕಾಗಿ ಇನ್ನೂ ಕಾಯುತ್ತಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ಶಿವಮೊಗ್ಗ | ಸಾಮೂಹಿಕ ನಕಲಿಗೆ ಅವಕಾಶ! KSOU ಪ್ರಾದೇಶಿಕ ನಿರ್ದೇಶಕ ಬಿ.ಎಂ ಸ್ವಾಮಿ ವಿರುದ್ಧ ದೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದ...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...

ಹೊಸನಗರ | ರೂ. 4 ಲಕ್ಷ ಮೌಲ್ಯದ ಸಾಗುವಾನಿ ನಾಟ ವಶ!

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ...