ಯುದ್ಧಭೂಮಿಯಂತಾದ ಪಾಟ್ನಾ ರೈಲು ನಿಲ್ದಾಣ: ಪರೀಕ್ಷೆಗೆ ತೆರಳುತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ

Date:

ಬಿಹಾರ ಪೊಲೀಸ್ ನಿಷೇಧ ಇಲಾಖೆಯ ಕಾನ್‌ಸ್ಟೆಬಲ್(Prohibition Constable), ವಾರ್ಡರ್ ಮತ್ತು ಮೊಬೈಲ್ ಸ್ಕ್ವಾಡ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಸಾವಿರಾರು ವಿದ್ಯಾರ್ಥಿಗಳು ಪಾಟ್ನಾ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ರೈಲುಗಳ ಸಂಚಾರ ವಿಳಂಬ ಮತ್ತು ಸಾಕಷ್ಟು ಸಂಖ್ಯೆಯ ರೈಲು ವ್ಯವಸ್ಥೆ ಇಲ್ಲದ ಕಾರಣ ಅಭ್ಯರ್ಥಿಗಳು ರೈಲುಗಳನ್ನು ತಡೆದು, ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಬಿಹಾರದ ಪಾಟ್ನಾ ನಗರದ ರೈಲು ನಿಲ್ದಾಣವು ಇಂದು ಮುಂಜಾನೆ ಯುದ್ಧಭೂಮಿಯಂತಾಗಿತ್ತು. ಈ ಘಟನೆಯಲ್ಲಿ ರೈಲ್ವೆ ಇನ್‌ಸ್ಪೆಕ್ಟರ್ ಜನರಲ್ ಜಿತೇಂದ್ರ ರಾಣಾ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

- Advertisement -

ಘಟನೆಯ ಹಿನ್ನೆಲೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಜೂನ್ 14ರಿಂದ 17ರವರೆಗೆ ಪರೀಕ್ಷೆ ನಡೆಯಬೇಕಿತ್ತು. ಒಟ್ಟು ಸುಮಾರು 4,128 ಹುದ್ದೆಗಳಿಗೆ(2,417 ವಾರ್ಡರ್, 1,603 ಪ್ರೊಹಿಬಿಷನ್ ಕಾನ್‌ಸ್ಟೆಬಲ್ ಮತ್ತು 108 ಮೊಬೈಲ್ ಸ್ಕ್ವಾಡ್) ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪುವ ಆತುರದಲ್ಲಿದ್ದರು. ರೈಲುಗಳು ತಡವಾಗಿ ಬರುತ್ತಿದ್ದುದರಿಂದ ಮತ್ತು ಓವರ್‌ಕ್ರೌಡಿಂಗ್ ಕಾರಣ ಬಹುತೇಕರು ತಮ್ಮ ಪರೀಕ್ಷೆಗೆ ತಲುಪಲಾರೆವು ಎಂಬ ಭಯದಿಂದ ಪ್ರತಿಭಟಿಸಿದರು. ಅಭ್ಯರ್ಥಿಗಳು ರೈಲ್ವೆ ಹಳಿಗಳ ಮೇಲೆ ಕುಳಿತು ರೈಲು ಸಂಚಾರವನ್ನು ನಿಲ್ಲಿಸಿದರು. ಪರಿಸ್ಥಿತಿ ತೀವ್ರಗೊಂಡಾಗ ಕೆಲವರು ರೈಲುಗಳು, ಸ್ಟಾಲ್‌ಗಳು ಮತ್ತು ರೈಲ್ವೆ ಆಸ್ತಿಗೆ ಹಾನಿ ಮಾಡಿದರು.

ಪೊಲೀಸರು ಮತ್ತು ರೈಲ್ವೆ ಭದ್ರತಾ ಸಿಬ್ಬಂದಿ ಪ್ರದೇಶವನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಗುಂಪನ್ನು ಚದುರಿಸಲು ಪೊಲೀಸರು ಎಚ್ಚರಿಕೆ ಗುಂಡು ಹಾರಿಸಿದರು ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿ, ಲಾಠಿ ಚಾರ್ಜ್‌ ನಡೆಸಿದರು. ಘರ್ಷಣೆಯ ಸಮಯದಲ್ಲಿ ಹಲವಾರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸ್(ಜಿಆರ್‌ಪಿ) ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಪ್ರತಿಭಟನಾಕಾರರನ್ನು ಹಳಿಗಳಿಂದ‌ ತೆರವುಗೊಳಿಸಿ, ವಿಶೇಷ ರೈಲುಗಳನ್ನು ಏರ್ಪಡಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಪ್ರಯತ್ನಿಸಿದರು ಎನ್ನಲಾಗಿದೆ.

ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಚಂದ್ರಶೇಖರ್ ಸಿಂಗ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, “ಇದು ಕೇವಲ ವಿದ್ಯಾರ್ಥಿಗಳ ಸ್ವಾಭಾವಿಕ ಆಕ್ರೋಶವಲ್ಲ. ಶನಿವಾರ ರಾತ್ರಿಯಿಂದಲೇ ಅನುಮಾನಾಸ್ಪದ ವ್ಯಕ್ತಿಗಳು ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ತುರ್ತು ಸರಪಳಿ ಎಳೆಯುವುದು, ವದಂತಿಗಳನ್ನು ಹರಡುವುದು ಮತ್ತು ಪೂರ್ವಸಿದ್ಧತೆಯಾಗಿ ಕಲ್ಲುಗಳನ್ನು ಜೋಡಿಸಿಟ್ಟುಕೊಂಡು ದಾಳಿ ಮಾಡುವುದು ಪಿತೂರಿಯ ಸೂಚನೆಗಳಾಗಿವೆ” ಎಂದು ಆರೋಪಿಸಿದ್ದಾರೆ. ಜತೆಗೆ 2022ರ ಅಗ್ನಿವೀರ್ ಚಳವಳಿಯಂತೆ ರಾಷ್ಟ್ರೀಯ ಆಸ್ತಿಗೆ ಹಾನಿ ಮಾಡುವ ಪ್ರಯತ್ನವಾಗಿರಬಹುದೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆಯಲ್ಲಿ 6 ಮಂದಿ ಹೆಸರು ನಮೂದಿಸಿ ಮತ್ತು 500 ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೆಲವು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡ (SIT) ರಚಿಸಿ ಸಿಸಿಟಿವಿ ದೃಶ್ಯಗಳು ಮತ್ತು ವೀಡಿಯೊಗಳನ್ನು ಪರಿಶೀಲಿಸಲಾಗುತ್ತಿರುವುದಾಗಿ ವರದಿಯಾಗಿದೆ.

ವಿದ್ಯಾರ್ಥಿಗಳ ದೃಷ್ಟಿಕೋನ

ಬಿಹಾರದಲ್ಲಿ ಸರ್ಕಾರಿ ಉದ್ಯೋಗಗಳಿಗೆ ತೀವ್ರ ಸ್ಪರ್ಧೆ ಇದೆ. ಆದ್ದರಿಂದ ಬಹುತೇಕ ಸಾಮಾನ್ಯ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದರು. ವಯಸ್ಸಿನ ಮಿತಿಯ ಕಾರಣ ಇದು ಕೊನೆಯ ಅವಕಾಶವಾಗಿರುವವರೂ ಇದ್ದರು. ರೈಲು ವ್ಯವಸ್ಥೆಯ ಕೊರತೆಯಿಂದಾಗಿ ಪರೀಕ್ಷೆಗೆ ತಪ್ಪಿಸಿಕೊಳ್ಳುವ ಭಯ ಅವರನ್ನು ಉದ್ವಿಗ್ನರನ್ನಾಗಿ ಮಾಡಿತು.

“ಪಾಟ್ನಾ, ಬಿಹಾರ, ಪರೀಕ್ಷಾ ಕೇಂದ್ರಗಳನ್ನು ತಲುಪಲು ರೈಲು ಹತ್ತಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳು ಪರಿಸ್ಥಿತಿಯನ್ನು ನೋಡಿದರೆ ಭಯಾನಕವಾಗಿದೆ, ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೈಲು ಹತ್ತಲು ಪ್ರಯತ್ನಿಸುತ್ತಿದ್ದಾರೆ. ಮೂಲಸೌಕರ್ಯ ಮತ್ತು ಉದ್ಯೋಗದ ಬದಲಿಗೆ 10,000 ರೂಪಾಯಿ ಮತ್ತು ಧರ್ಮಕ್ಕೆ ಮತ ಹಾಕಿದಾಗ ಇಂತಹ ಘಟನೆಗಳು ಸಂಭವಿಸುತ್ತವೆ” ಎಂದು ಸಾಮಾಜಿಕ ಜಾಲತಾಣ ʼnehr who?ʼ ಎಂಬ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ.

ಇದನ್ನೂ ಓದಿದ್ದೀರಾ? ಅಮೆರಿಕ ಅಟ್ಟಹಾಸಕ್ಕೆ ನಮ್ಮ ನಾವಿಕರು ಬಲಿ; ಮೋದಿ ಸರ್ಕಾರದ ಪ್ರತಿಕ್ರಿಯೆ ಪರಿಣಾಮ ಬೀರುವುದೇ?

ಈ ಘಟನೆಯು ರೈಲು ಸಂಚಾರವನ್ನು ಗಂಭೀರವಾಗಿ ತಡೆಯಿತು. ರೈಲ್ವೆ ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡಿದ್ದರೂ, ದೊಡ್ಡ ಪ್ರಮಾಣದ ಅಭ್ಯರ್ಥಿಗಳ ಸಂಖ್ಯೆಯನ್ನು ನಿಭಾಯಿಸುವಲ್ಲಿ ಕೊರತೆ ಕಂಡುಬಂದಿದೆ. ಬಿಹಾರದಲ್ಲಿ ಪದೇ ಪದೆ ನಡೆಯುವ ಪರೀಕ್ಷಾ ಸಂಬಂಧಿ ಆಂದೋಲನಗಳು(ಪೇಪರ್ ಲೀಕ್‌ಗಳು, ವ್ಯವಸ್ಥೆಯ ಕೊರತೆ) ಯುವಜನರ ನಿರಾಸೆಗೆ ಕಾರಣವಾಗಿವೆ. ಹಾಗಾಗಿ ರೈಲ್ವೆ ಮತ್ತು ಪರೀಕ್ಷಾ ವ್ಯವಸ್ಥೆಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಉತ್ತಮ ಯೋಜನೆ ಕಲ್ಪಿಸುವ ಅಗತ್ಯವಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಿಜಿಟಲ್ ವಂಚನೆಗೆ ಒಳಗಾದ ಸಂತ್ರಸ್ತರಿಗೆ ಬ್ಯಾಂಕುಗಳೇ ಪರಿಹಾರ ನೀಡಬೇಕು: ಸುಪ್ರೀಂ ಕೋರ್ಟ್‌!

"ಡಿಜಿಟಲ್ ವಂಚನೆ ಮತ್ತು "ಡಿಜಿಟಲ್ ಅರೆಸ್ಟ್" ನಂತಹ ಸೈಬರ್ ಅಪರಾಧಗಳಿಗೆ ಒಳಗಾಗುವ...

ಸಿಇಸಿ ಗ್ಯಾನೇಶ್ ವಿರುದ್ಧ ‘ಮಹಾಭಿಯೋಗ’ಕ್ಕೆ ‘ಇಂಡಿಯಾ’ ಒಕ್ಕೂಟದಿಂದ ಅಣಕು ಸಂಸತ್ ಅಧಿವೇಶನ

ಸಿಇಸಿ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಸಾಂಕೇತಿಕವಾಗಿ 'ಮಹಾಭಿಯೋಗ' (ವಜಾ) ನಿರ್ಣಯ...

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...