ಒಂದೇ ದಿನ ಗ್ರೀನ್, ಗಿಲ್, ಕೊಹ್ಲಿಯಿಂದ ಶತಕ; ಮೂವರೂ ನಾಟ್ ಔಟ್!

Date:

ಮುಂಬೈ ಇಂಡಿಯನ್ಸ್ ತಂಡದ ಕ್ಯಾಮರಾನ್ ಗ್ರೀನ್, ಬೆಂಗಳೂರು ಚಾಲೆಂಜರ್‍ಸ್ ನ ವಿರಾಟ್ ಕೊಹ್ಲಿ ಮತ್ತು ಗುಜರಾತ್ ಟೈಟನ್ಸ್ ನ ಶುಭಮನ್ ಗಿಲ್- ಒಂದೇ ದಿನ ಅತಿವೇಗವಾಗಿ ಶತಕ ಗಳಿಸಿ, ಔಟಾಗದೆ ಉಳಿದರು 

ಐಪಿಎಲ್ ಕ್ರಿಕೆಟ್ ನಲ್ಲಿ ಒಂದೇ ದಿನ ಮೂವರು ಬ್ಯಾಟ್ಸ್‌ಮನ್‌ಗಳಿಂದ ಮೂರು ಶತಕ ಸಿಡಿಸಿದ ಅಪರೂಪದ ಗಳಿಗೆಗೆ ಭಾನುವಾರ ಸಾಕ್ಷಿಯಾಗಿದೆ.

ಮುಂಬೈನಲ್ಲಿ ನಡೆದ ಮಧ್ಯಾಹ್ನದ ಮುಂಬೈ ಮತ್ತು ಸನ್ ರೈಸರ್‍ಸ್ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಕ್ಯಾಮರಾನ್ ಗ್ರೀನ್, 47 ಬಾಲ್‌ಗಳಲ್ಲಿ(ಎಂಟು ಸಿಕ್ಸ್, ಎಂಟು ಫೋರ್) ಶತಕ ಗಳಿಸಿ, ದಾಖಲೆ ಬರೆದರು. ಜೊತೆಗೆ ನಾಟ್ ಔಟ್ ಆಗಿ ಉಳಿದರು.

ಸಂಜೆ ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್‍ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್‍ಸ್ ತಂಡದ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ 61 ಬಾಲ್‌ಗಳಲ್ಲಿ(ಹದಿಮೂರು ಫೋರ್, ಒಂದು ಸಿಕ್ಸ್) 101 ರನ್‌ಗಳನ್ನು ಗಳಿಸಿ, ನಾಟ್ ಔಟ್ ಆಗಿ ಉಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಂಗಳೂರಿನಲ್ಲಿ ನಡೆದ ಪಂದ್ಯವಾದ್ದರಿಂದ, ಕೊಹ್ಲಿ ಸೆಂಚುರಿ ಬಾರಿಸಿದ್ದರಿಂದ ಕ್ರಿಕೆಟ್ ಅಭಿಮಾನಿಗಳು ಬಹಳ ಖುಷಿಯಲ್ಲಿದ್ದರು. ರಾಯಲ್ ಚಾಲೆಂಜರ್‍ಸ್ ಗೆದ್ದು, ಪ್ಲೇ ಆಫ್‌ಗೆ ಎಂಟ್ರಿ ಪಡೆಯುತ್ತದೆಂದು ಭಾವಿಸಿದ್ದರು. ಭಾರೀ ಸಂಭ್ರಮದಲ್ಲಿದ್ದರು.

ಆದರೆ ಬೆಂಗಳೂರು ರಾಯಲ್ ಚಾಲೆಂಜರ್‍ಸ್‌ಗೆ ಉತ್ತರವಾಗಿ ಬ್ಯಾಟ್ ಮಾಡಲು ಮೈದಾನಕ್ಕಿಳಿದ ಗುಜರಾತ್ ಟೈಟನ್ಸ್ ತಂಡದ ಆಟಗಾರರಲ್ಲಿ, ಆರಂಭಿಕ ಆಟಗಾರ ಶುಭಮನ್ ಗಿಲ್, ಬೆಂಗಳೂರಿಗರ ಸಂಭ್ರಮಕ್ಕೆ ತಣ್ಣೀರು ಎರಚಿಬಿಟ್ಟರು. ಕೊಹ್ಲಿ ಗಳಿಸಿದ್ದ ಶತಕಕ್ಕೆ ಉತ್ತರವಾಗಿ, ಕೇವಲ 52 ಬಾಲ್‌ಗಳಲ್ಲಿ(ಐದು ಫೋರ್, ಎಂಟು ಸಿಕ್ಸ್) 104 ರನ್ ಗಳಿಸಿ, ಔಟಾಗದೆ ಉಳಿದರು. ಆ ಮೂಲಕ ರಾಯಲ್ ಚಾಲೆಂಜರ್‍ಸ್ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿಬಿಟ್ಟರು.

ಒಂದೇ ದಿನ ಎರಡು ಪಂದ್ಯಗಳಲ್ಲಿ, ಮೂವರು ಆಟಗಾರರು ಶತಕ ಗಳಿಸಿದ್ದು, ಔಟಾಗದೆ ಉಳಿದದ್ದು- ಸದ್ಯದ ಐಪಿಎಲ್‌ನಲ್ಲಿ ದಾಖಲೆಯಾಗಿದೆ.

ಈ ಚುಟುಕು ಕ್ರಿಕೆಟ್‌ನ ವಿಶೇಷತೆ ಇರುವುದೇ ಇಂತಹ ಆಟದಲ್ಲಿ. ಗಿಲ್-ಗ್ರೀನ್‌ಗೆ ಹೋಲಿಸಿದರೆ, ವಿರಾಟ್ ಕೊಹ್ಲಿ ಕೊಂಚ ಕಳೆಗುಂದಿದ ವಯಸ್ಸಾದ ಆಟಗಾರ. ತನ್ನ ಆಟದ ಮೊನಚನ್ನು ಕಳೆದುಕೊಂಡು ಮಂಕಾಗುವ ಕಡೆ ಹೆಜ್ಜೆ ಹಾಕುತ್ತಿರುವ ಆಟಗಾರ. ಆದರೆ ಐಪಿಎಲ್ ನಲ್ಲಿ ಹರೆಯದ ಹುಡುಗರ ನಡುವೆ ಈಗಲೂ ಪುಟಿದೇಳುವ, ಅವರಂತೆಯೇ ಆಡುವ, ಶತಕ ಬಾರಿಸುವ ಕೊಹ್ಲಿ- ಸಮರೋಪಾದಿಯಲ್ಲಿ ಕ್ರಿಕೆಟ್‌ನತ್ತ ಕಾಲಿಡುತ್ತಿರುವ ಹೊಸ ಹುಡುಗರಿಗೆ ಮಾದರಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...

ಐಪಿಎಲ್ | ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಮುಟ್ಟಲು ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌: 67 ರನ್‌ಗಳ ಸೋಲು

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ...

ಮಹಿಳೆಯರ ಕುಸ್ತಿ | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರೀತಿಕಾ ಹೂಡಾ, ಅಂಶು ಮಲಿಕ್

ಕಝಕಿಸ್ತಾನದ ಬಿಸ್ಕೆಕ್‌ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ಸ್‌ನ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ...