ಐಪಿಎಲ್ 2024 | ಗಮನ ಸೆಳೆದ ದೇಶೀಯ ಆಟಗಾರರು; ಭರವಸೆ ಮೂಡಿಸದ ವಿದೇಶಿಗರು

Date:

ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್‌ ರೈಡರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮುವುದರೊಂದಿಗೆ 17ನೇ ಐಪಿಎಲ್ ಆವೃತ್ತಿ ಮುಕ್ತಾಯಗೊಂಡಿದೆ.

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಿದ್ದು, ಈವರೆಗೆ 3 ಬಾರಿ ಟ್ರೋಫಿ ಗೆದ್ದು ಅತಿ ಹೆಚ್ಚು ಐಪಿಎಲ್‌ ಟ್ರೋಫಿ ಗೆದ್ದ 3ನೇ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಗೆಲುವಿನೊಂದಿಗೆ ಬಹುಮಾನ ಮೊತ್ತವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಕೋಟಿ ರೂ. ಪಡೆದುಕೊಂಡಿದೆ. ಹಾಗೆಯೇ ರನ್ನರ್ ಅಪ್ ತಂಡ ಸನ್‌ ರೈಸರ್ಸ್‌ ಹೈದರಾಬಾದ್ ತಂಡಕ್ಕೆ 12.5 ಕೋಟಿ ರೂ. ಲಭಿಸಿದೆ.

ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಎಸ್‌ಆರ್‌ಹೆಚ್‌ ತಂಡದ ಯಾವ ಬ್ಯಾಟರ್‌ಗಳು ಕೂಡ 25 ರನ್‌ಗಳ ಗಡಿ ದಾಟಲಿಲ್ಲ. ನಾಯಕ ಪ್ಯಾಟ್‌ ಕಮಿನ್ಸ್‌ 24 ರನ್‌ ಗಳಿಸಿ ತಂಡದ ಪರ ಗರಿಷ್ಠ ರನ್‌ ಗಳಿಕೆಯ ಆಟಗಾರ ಎನಿಸಿದರು. ಕೆಕೆಆರ್‌ನ ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್‌ ಮತ್ತು ಹರ್ಷಿತ್‌ ರಾಣಾ ತಲಾ 2 ವಿಕೆಟ್‌ ಪಡೆದರೆ, ಆಲ್‌ರೌಂಡರ್‌ ಆಂಡ್ರೆ ರಸೆಲ್‌ 3 ವಿಕೆಟ್‌ ಪಡೆದು ಮಿಂಚಿದರು. ಅಂತಿಮವಾಗಿ ಸನ್‌ರೈಸರ್ಸ್‌ ಹೈದರಾಬಾದ್‌ 113 ರನ್‌ಗಳಿಗೆ ಅಲ್‌ಔಟ್‌ ಆಯಿತು. ಇದು ಐಪಿಎಲ್‌ ಫೈನಲ್‌ ಪಂದ್ಯದಲ್ಲಿಯೇ ತಂಡವೊಂದು ಗಳಿಸಿದ ಅತೀ ಕಡಿಮೆ ಸ್ಕೋರ್‌ ಆಗಿ ದಾಖಲಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಳಿಕ ರನ್‌ ಬೆನ್ನಟ್ಟಿದ ಕೆಕೆಆರ್‌ ಆರಂಭದಲ್ಲೇ ಸುನೀಲ್‌ ನರೇನ್‌ (6) ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿದರೂ, 2ನೇ ವಿಕೆಟ್‌ಗೆ ರೆಹಮಾನುಲ್ಲಾ ಗುರ್ಬಝ್‌ (39) ಮತ್ತು ವೆಂಕಟೇಶ್‌ ಅಯ್ಯರ್‌ (ಅಜೇಯ 52) ಎರಡನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ 10.3 ಓವರ್‌ಗಳಲ್ಲೇ ಜಯ ತಂದುಕೊಟ್ಟರು. ಇದರೊಂದಿಗೆ 2012 ಮತ್ತು 2014ರ ಬಳಿಕ ಕೆಕೆಆರ್‌ 2024ರಲ್ಲಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತು.

ಮಿಂಚಿದ ದೇಶೀಯ ಆಟಗಾರರು

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವಿದೇಶಿ ಆಟಗಾರರಿಗಿಂದ ಹಲವು ದೇಶೀಯ ಆಟಗಾರರೆ ಉತ್ತಮ ಆಟವಾಡಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಟೂರ್ನಿಯಲ್ಲಿ ಮಿಂಚಿದವರಲ್ಲಿ ಉದಯೋನ್ಮುಖ ಆಟಗಾರರ ಪಾಲು ಕೂಡ ಹೆಚ್ಚಿದೆ.

ವಿರಾಟ್ ಕೊಹ್ಲಿ: ಆರ್‌ಸಿಬಿಯ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಈ ಬಾರಿಯೂ ತಮ್ಮ ಅದ್ಭುತ ಸಾಮರ್ಥ್ಯ ತೋರಿದ್ದಾರೆ. ಟೂರ್ನಿಯಲ್ಲಿ ಅತೀ ಹೆಚ್ಚು ರನ್‌ ಗಳಿಸುವುದರೊಂದಿಗೆ ಆರೆಂಜ್‌ ಕ್ಯಾಪ್‌ಅನ್ನು ತನ್ನದಾಗಿಸಿಕೊಂಡಿದ್ದಾರೆ. 15 ಪಂದ್ಯವಾಡಿರುವ ಅವರು 5 ಅರ್ಧ ಶತಕ ಹಾಗೂ 1 ಶತಕದೊಂದಿಗೆ 741 ರನ್‌ ಪೇರಿಸಿದ್ದಾರೆ. ಆರ್‌ಸಿಬಿ ಪ್ಲೇಆಪ್‌ ಹಂತಕ್ಕೇರಲು ವಿರಾಟ್‌ ಆಟ ಕೂಡ ಗಮನಾರ್ಹ. ಇವರ ಆಟದಲ್ಲಿ 62 ಮನಮೋಹಕ ಬೌಂಡರಿ ಹಾಗೂ 38 ಭರ್ಜರಿ ಸಿಕ್ಸರ್‌ಗಳು ಮೂಡಿಬಂದಿವೆ.

ಹರ್ಷಲ್‌ ಪಟೇಲ್: ಪಂಜಾಬ್‌ ಕಿಂಗ್ಸ್‌ ಪರ ಆಟವಾಡುತ್ತಿರುವ ಗುಜರಾತ್‌ನ ಬಲಗೈ ವೇಗದ ಬೌಲರ್‌ ಹರ್ಷಲ್‌ ಪಟೇಲ್ ಈ ಬಾರಿಯ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಪಂಜಾಬ್‌ ಈ ಬಾರಿ ಕಳಪೆ ಸಾಧನೆ ತೋರಿದರೂ ಹರ್ಷಲ್‌ ತಂಡದ ಪರವಾಗಿ ಗಮನ ಸೆಳೆದರು. 14 ಪಂದ್ಯವಾಡಿದ ಇವರು 24 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಹರ್ಷಲ್‌ ಅವರನ್ನು ಈ ಬಾರಿ ದೇಶೀಯ ಆಟಗಾರರಲ್ಲೇ ಹೆಚ್ಚು ಹಣ (11.5 ಕೋಟಿ ರೂ.) ನೀಡಿ ಖರೀದಿಸಲಾಗಿತ್ತು.

ಹರ್ಷಿತ್‌ ರಾಣಾ ಹಾಗೂ ವರುಣ್ ಚಕ್ರವರ್ತಿ: ಚಾಂಪಿಯನ್ಸ್ ತಂಡ ಕೆಕೆಆರ್‌ನ ವೇಗದ ಬೌಲರ್‌ ಆಗಿ ಆಡುತ್ತಿರುವ 22 ವರ್ಷದ ಉದಯೋನ್ಮುಖ ಆಟಗಾರ ಹರ್ಷಿತ್‌ ರಾಣಾ 17ನೇ ಆವೃತ್ತಿಯ ಟೂರ್ನಿಯಲ್ಲಿ ಉತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ. 13 ಪಂದ್ಯಗಳ 11 ಇನಿಂಗ್ಸ್‌ ಆಡಿರುವ ಇವರು 19 ವಿಕೆಟ್ ಕಬಳಿಸಿದ್ದಾರೆ.

ಅದೇ ರೀತಿ ಕೆಕೆಆರ್‌ನ ಮತ್ತೊಬ್ಬ ಲೆಗ್‌ ಸ್ಪಿನ್‌ ಬೌಲರ್‌ ಆದ ವರುಣ್‌ ಚಕ್ರವರ್ತಿ ಕೂಡ ಈ ಬಾರಿಯ ಟೂರ್ನಿಯಲ್ಲಿ ಗಮನಾರ್ಹ ಸಾಧನೆ ತೋರಿದ್ದಾರೆ. 15 ಪಂದ್ಯಗಳಲ್ಲಿ 14 ಇನಿಂಗ್ಸ್‌ ಆಡಿರುವ ವರುಣ್‌ ಚಕ್ರವರ್ತಿ 21 ವಿಕೆಟ್ ಕಬಳಿಸುವುದರೊಂದಿಗೆ ಹಲವು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

ಜಸ್‌ಪ್ರೀತ್‌ ಬುಮ್ರಾ: ಎದುರಾಳಿ ಬ್ಯಾಟರ್‌ಗಳಿಗೆ ಭಯ ಹುಟ್ಟಿರುವ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ 17ನೇ ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದರು. ತಂಡ ಕಳಪೆ ಸಾಧನೆಯೊಂದಿಗೆ ಕೊನೆಯ ಸ್ಥಾನದಲ್ಲಿದ್ದರೂ 13 ಪಂದ್ಯಗಳೊಂದಿಗೆ 20 ವಿಕೆಟ್‌ಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದ್ದಾರೆ. ಇದರಲ್ಲಿ 21 ರನ್‌ಗಳಿಗೆ 5 ವಿಕೆಟ್ ಪಡೆದಿದ್ದು ಗಮನಾರ್ಹ.

Jaspreet bumrah 1

ಟಿ. ನಟರಾಜನ್‌ ಹಾಗೂ ಅಭಿಷೇಕ್ ವರ್ಮಾ: ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರರಾದ ಈ ಇಬ್ಬರು ಆಟಗಾರರು ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ ಮಧ್ಯಮ ವೇಗದ ಎಡಗೈ ಬೌಲರ್‌ ಟಿ ನಟರಾಜನ್‌ 14 ಪಂದ್ಯಗಳೊಂದಿಗೆ 19 ವಿಕೆಟ್‌ ಕಬಳಿಸಿ ಗಮನಸೆಳೆದರು. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 19 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದು, ಅತ್ಯುತ್ತಮ ಪ್ರದರ್ಶನವಾಗಿದೆ.

ಎಸ್ಆರ್‌ಹೆಚ್‌ ತಂಡದ 23 ವರ್ಷದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಕೂಡ ಈ ಬಾರಿಯ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. 16 ಪಂದ್ಯಗಳನ್ನು ಆಡಿರುವ ಈ ಯುವ ಆಟಗಾರ 3 ಅರ್ಧ ಶತಕಗಳೊಂದಿಗೆ 484 ರನ್‌ ಬಾರಿಸಿದ್ದಾರೆ. ಅದಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್‌(42) ಸಿಡಿಸಿದ ಖ್ಯಾತಿಯು ಅಭಿಷೇಕ್‌ ಶರ್ಮಾ ಅವರ ಪಾಲಾಗಿದೆ.

ರಿಯಾನ್ ಪರಾಗ್‌ ಹಾಗೂ ಆವೇಶ್ ಖಾನ್: ರಾಜಸ್ಥಾನ್‌ ರಾಯಲ್ಸ್‌ ತಂಡದ ಪರವಾಡುವ ಅಸ್ಸಾಂ ಮೂಲದ ರಿಯಾನ್‌ ಪರಾಗ್‌ ಟೂರ್ನಿಯಲ್ಲಿ ಗಮನ ಸೆಳೆದ ಪ್ರಮುಖ ಆಟಗಾರರಲ್ಲಿ ಒಬ್ಬರು. 16 ಪಂದ್ಯಗಳ 14 ಇನಿಂಗ್ಸ್‌ಗಳಲ್ಲಿ 4 ಭರ್ಜರಿ ಅರ್ಧ ಶತಕಗಳೊಂದಿಗೆ 573 ರನ್‌ ಸಿಡಿಸಿದ್ದಾರೆ.

ಅದೇ ರೀತಿ ಆರ್‌ಆರ್‌ ತಂಡದ ಮತ್ತೊಬ್ಬ ಆಟಗಾರನಾದ ಮಧ್ಯ ಪ್ರದೇಶದ 27 ವರ್ಷದ ಆವೇಶ್ ಖಾನ್‌ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಗಮನ ಸೆಳೆದಿದ್ದಾರೆ. 15 ಇನಿಂಗ್ಸ್‌ ಆಡಿರುವ ಇವರು 19 ವಿಕೆಟ್‌ಗಳನ್ನು ಕಬಳಿಸಿ ತಂಡ ಪ್ಲೇಆಫ್‌ ಹಂತಕ್ಕೇರಲು ಪ್ರಮುಖ ಕಾರಣಕರ್ತರಾಗಿದ್ದಾರೆ.

ರುತುರಾಜ್‌ ಗಾಯಕ್‌ವಾಡ್: ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಮೂರನೇ ಕ್ರಮಾಂಕದ ಆಟಗಾರ ರುತುರಾಜ್‌ ಗಾಯಕ್‌ವಾಡ್‌ 17ನೇ ಆವೃತ್ತಿಯ ಹೆಚ್ಚು ರನ್‌ ಕಲೆ ಹಾಕಿದ ಆಟಗಾರರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 14 ಪಂದ್ಯವಾಡಿರುವ ಇವರು ಒಂದು ಶತಕ ಹಾಗೂ 4 ಅರ್ಧ ಶತಕದೊಂದಿಗೆ 583 ರನ್‌ ಪೇರಿಸಿ ಟೂರ್ನಿಯಲ್ಲಿ ಗಮನ ಸೆಳೆದಿದ್ದಾರೆ.

ಸಂಜು ಸ್ಯಾಮ್ಸನ್‌: ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಐಪಿಎಲ್‌ 17ನೇ ಆವೃತ್ತಿಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. 15 ಇನಿಂಗ್ಸ್‌ಗಳಲ್ಲಿ 5 ಅರ್ಧ ಶತಕಗಳನ್ನು ಸಿಡಿಸಿರುವ ಇವರು 5 ಅರ್ಧ ಶತಕದೊಂದಿಗೆ 531 ರನ್‌ ಕಲೆ ಹಾಕಿದ್ದಾರೆ. ಇದಲ್ಲದೆ ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕಾದಲ್ಲಿ ಜೂನ್‌ 2 ರಿಂದ ಆರಂಭವಾಗುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸ್ಯಾಮ್ಸನ್‌ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಭರವಸೆ ಮೂಡಿಸದ ವಿದೇಶಿ ಆಟಗಾರರು

ಈ ಬಾರಿ ಐಪಿಎಲ್‌ನಲ್ಲಿ ಭಾರಿ ಮೊತ್ತ ಕೊಟ್ಟು ಖರೀದಿಸಿದ ಬಹುತೇಕ ಆಟಗಾರರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲ. ಅದರಲ್ಲಿ ಎಸ್‌ಆರ್‌ಹೆಚ್‌ನ ನಾಯಕ ಪ್ಯಾಟ್‌ ಕಮ್ಮಿನ್ಸ್, ಸಿಎಸ್‌ಕೆಯ ಡೇರಿಲ್‌ ಮಿಚೆಲ್, ಕೆಕೆಆರ್‌ನ ಮಿಷಲ್‌ ಸ್ಟಾರ್ಕ್‌, ಆರ್‌ಸಿಬಿಯ ಕ್ಯಾಮೊರೊನ್ ಗ್ರೀನ್‌, ಗುಜರಾತ್ ಟೈಟಾನ್ಸ್‌ನ ಸ್ಪೆನ್ಸರ್‌ ಜಾನ್ಸನ್‌, ಪಂಜಾಬ್‌ನ ರಿಲೇ ರೋಸೌವ್‌, ಆರ್‌ಆರ್‌ನ ರೋವ್‌ಮನ್‌ ಪೊವೆಲ್‌ ಪ್ರಮುಖರು.

ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಬರೋಬ್ಬರಿ 24.75 ಕೋಟಿ ರೂ.ಗೆ ಖರೀದಿಸಿತ್ತು. ತಂಡದ ಬಹುಮಾನ 20 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಅದಾಗಿತ್ತು. ಆದರೆ ಮಿಚೆಲ್ ಸ್ಟಾರ್ಕ್ ಫೈನಲ್‌, ಪ್ಲೇಆಪ್‌ ಹಾಗೂ ಕೆಲವು ಪಂದ್ಯಗಳನ್ನು ಬಿಟ್ಟರೆ ಅವರ ಪ್ರದರ್ಶನ ನೀರಸವಾಗಿತ್ತು.

ಇನ್ನು ಸನ್‌ ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ಪ್ಯಾಟ್ ಕಮಿನ್ಸ್ ಖರೀದಿಗಾಗಿ ಬರೋಬ್ಬರಿ 20.50 ಕೋಟಿ ರೂ. ವ್ಯಯಿಸಿತ್ತು. ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ ಎತ್ತಿಹಿಡಿದ ಕಾರಣಕ್ಕಾಗಿ ದೊಡ್ಡ ಮೊತ್ತವನ್ನು ನೀಡಲಾಗಿತ್ತು. ಆದರೆ ಆಲ್‌ರೌಂಡರ್‌ ಆಗಿರುವ ಕಮಿನ್ಸ್ 16 ಪಂದ್ಯಗಳಿಂದ 18 ವಿಕೆಟ್ ಹಾಗೂ ಹತ್ತು ಇನಿಂಗ್ಸ್‌ಗಳಿಂದ 136 ರನ್‌ ಮಾತ್ರ ಗಳಿಸಿ ನೀರಸ ಪ್ರದರ್ಶನ ಮೂಡಿಸಿದರು.

ಅದೇ ರೀತಿ 14 ಕೋಟಿಗೆ ಸಿಎಸ್‌ಕೆಗೆ ಹರಾಜಾಗಿದ್ದ ನ್ಯೂಜಿಲೆಂಡ್‌ ಆಟಗಾರ ಡೇರಿಲ್‌ ಮಿಚೆಲ್ 13 ಇನಿಂಗ್ಸ್‌ಗಳಿಂದ 318 ರನ್‌ ಮಾತ್ರ ಗಳಿಸಿದರು. 17.50 ಕೋಟಿಗೆ ಆರ್‌ಸಿಬಿ ಪರ ಮಾರಾಟವಾಗಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರೋನ್‌ ಗ್ರೀನ್‌ 13 ಪಂದ್ಯವಾಡಿ ಗಳಿಸಿದ್ದು 270 ರನ್‌ ಮಾತ್ರ. ವಿಕೆಟ್‌ ಕೂಡ ಕೇವಲ 10 ಕಬಳಿಸಿದ್ದಾರೆ. ಪಂಜಾಬ್‌ ತಂಡಕ್ಕೆ 8 ಕೋಟಿಗೆ ಹರಾಜಾಗಿದ್ದ ಆರ್‌ ರೋಸೋವ್‌ ಹಾಗೂ ಆರ್‌ಆರ್‌ಗೆ 7.40 ಕೋಟಿಗೆ ಖರೀದಿಯಾಗಿದ್ದ ಆರ್‌ ಪೊವಲ್‌ ಕೂಡ ನಿರೀಕ್ಷಿತ ಯಶಸ್ಸು ತೋರಲಿಲ್ಲ.

ಕೆಕೆಆರ್‌ನ ಸುನಿಲ್ ನಾರಾಯಣ್‌, ಆಂಡ್ರೋ ರಸೆಲ್, ಎಸ್‌ಆರ್‌ಹೆಚ್‌ನ ಟ್ರಾವಿಸ್‌ ಹೆಡ್‌, ಹೇನ್ರಿ ಕ್ಲಾಸೆನ್, ಲಖನೌದ ನಿಖಲಸ್‌ ಪೂರನ್‌, ಆರ್‌ಸಿಬಿಯ ಫಾಪ್‌ ಡು ಪ್ಲೆಸಿಸ್, ಆರ್‌ಆರ್‌ನ ಜಾಸ್‌ ಬಟ್ಲರ್ ವಿದೇಶಿ ಆಟಗಾರರಲ್ಲಿ ಉತ್ತಮ ಆಟ ಪ್ರದರ್ಶಿಸಿ ಟೂರ್ನಿಯಲ್ಲಿ ಗಮನ ಸೆಳೆದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ | ಆತಿಥೇಯ ಅಮೆರಿಕ ಸೋಲಿಸಿ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದ ಟೀಮ್ ಇಂಡಿಯಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಐಸಿಸಿ...

ಟಿ20 ವಿಶ್ವಕಪ್‌ | ಭಾರತಕ್ಕೆ ಗೆಲ್ಲಲು 111 ರನ್‌ಗಳ ಗುರಿ ನೀಡಿದ ಆತಿಥೇಯ ಅಮೆರಿಕ: ಮಿಂಚಿದ ಅರ್ಷ್‌ದೀಪ್ ಸಿಂಗ್

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಐಸಿಸಿ...

ಟಿ20 ವಿಶ್ವಕಪ್ | ಟೀಮ್ ಇಂಡಿಯಾ-ಅಮೆರಿಕ ಮೊದಲ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ...

2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿ | ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ‘ಔಟ್’; ವ್ಯಾಪಕ ಆಕ್ರೋಶ

ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ...