ಏಕದಿನ ವಿಶ್ವಕಪ್ 2023 | ಕನ್ನಡಿಗ ರಚಿನ್ ರವೀಂದ್ರ ಶತಕ ವೈಭವ; ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು

Date:

ಬೆಂಗಳೂರು ಮೂಲದ ಹುಡುಗ ರಚಿನ್‌ ರವೀಂದ್ರ ಹಾಗೂ ಸ್ಪೋಟಕ ಆಟಗಾರ ಡೆವೊನ್ ಕಾನ್ವೇ ಅವರ ಶತಕಗಳ ನೆರವಿನಿಂದ 14ನೇ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ್ದ 283 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ ತಂಡ 36.2 ಓವರ್‌ಗಳಲ್ಲಿ ಜಯ ತನ್ನದಾಗಿಸಿಕೊಂಡಿತು.

ನ್ಯೂಜಿಲೆಂಡ್‌ ತಂಡದಲ್ಲಿನ ಕನ್ನಡಿಗ ರಚಿನ್‌ ರವೀಂದ್ರ 96 ಚೆಂಡುಗಳಲ್ಲಿ 5 ಭರ್ಜರಿ ಸಿಕ್ಸರ್‌ಗಳು ಹಾಗೂ 11 ಬೌಂಡರಿಗಳೊಂದಿಗೆ 123ರನ್‌ ಬಾರಿಸಿ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿಯೇ ಶತಕ ದಾಖಲಿಸಿ ಅಜೇಯರಾಗಿ ಉಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಚಿನ್‌ಗೆ ಉತ್ತಮ ಜೊತೆಯಾಟ ನೀಡಿದ ಡೆವೊನ್ ಕಾನ್ವೇ 121 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 19 ಬೌಂಡರಿಗಳೊಂದಿಗೆ 152 ರನ್‌ ಪೇರಿಸಿ ಅಜೇಯರಾದರು. ಇವರಿಬ್ಬರು ಮುರಿಯದ ಎರಡನೇ ವಿಕೆಟ್ ಜೊತೆಯಾಟಕ್ಕೆ 272 ರನ್‌ ಕಲೆ ಹಾಕಿದರು.

ಕಳೆದ ಬಾರಿಯ ವಿಶ್ವಕಪ್‌ ಚಾಂಪಿಯನ್‌ ಇಂಗ್ಲೆಂಡ್ ಇವರಿಬ್ಬರನ್ನು ಔಟ್‌ ಮಾಡಲು 6 ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಟಾಸ್‌ ಗೆದ್ದ ನ್ಯೂಜಿಲೆಂಡ್, ಇಂಗ್ಲೆಂಡ್‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಕೇನ್‌ ವಿಲಿಯಮ್ಸ್‌ನ್‌ ಅನುಪಸ್ಥಿತಿಯಲ್ಲಿ ಟಾಮ್‌ ಲ್ಯಾಥಮ್ ನಾಯಕತ್ವ ವಹಿಸಿಕೊಂಡಿದ್ದರು.

ಇಂಗ್ಲೆಂಡ್‌ನಿಂದ ಸ್ಪರ್ಧಾತ್ಮಕ ಮೊತ್ತ

ಇಂಗ್ಲೆಂಡ್ ನಿಗದಿತ 50 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ ಕ್ರಿಕೆಟ್ ಹಬ್ಬ ಶುರು: ದಿಗ್ಗಜರ ಆಟದ ರಸದೌತಣಕ್ಕೆ ಸಿದ್ಧರಾಗಿ…

ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ಮಲಾನ್ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. 24 ಎಸೆತಗಳಲ್ಲಿ 2 ಬೌಂಡರಿ ಸಹಿತ 14 ರನ್ ಗಳಿಸಿ ಮ್ಯಾಟ್ ಹೆನ್ರಿ ಬೌಲಿಂಗ್​​ನಲ್ಲಿ ಔಟಾದರು. ಮಲಾನ್ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ಜಾನಿ ಬೈರ್​ಸ್ಟೋ 35 ಎಸೆತಗಳಲ್ಲಿ 33 ರನ್ ಕಲೆ ಹಾಕಿ ಪೆವಿಲಿಯನ್‌ಗೆ ತೆರಳಿದರು. ಈ ಜೋಡಿ ಮೊದಲ ವಿಕೆಟ್​​ಗೆ ಕಲೆ ಹಾಕಿದ್ದು 40 ರನ್​ ಮಾತ್ರ.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದ  ಜೋ ರೂಟ್​​, ಅದ್ಭುತ ಪ್ರದರ್ಶನ ನೀಡಿದರು. ಇದರ ನಡುವೆ ಬೆನ್ ​ಸ್ಟೋಕ್ಸ್​ ಜಾಗದಲ್ಲಿ ಅವಕಾಶ ಪಡೆದುಕೊಂಡಿದ್ದ ಹ್ಯಾರಿ ಬ್ರೂಕ್ (25), ಸ್ಫೋಟಕ ಆಟಕ್ಕೆ ಕೈಹಾಕಿ ಕೈಸುಟ್ಟುಕೊಂಡರು. ಫೋರ್, ಫೋರ್​, ಸಿಕ್ಸರ್​ ಬಾರಿಸಿ 16.6 ಓವರ್​​ನಲ್ಲಿ ರಚಿನ್ ರವೀಂದ್ರ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿದರು. ಮೊಯಿನ್ ಅಲಿ ಕೂಡ 11 ರನ್​ಗಳಿಗೆ ಆಟ ಮುಗಿಸಿದರು. ಸತತ ವಿಕೆಟ್ ಕಳೆದುಕೊಂಡರೂ ರೂಟ್​ ಕ್ರೀಸ್​​ನಲ್ಲಿ ಗಟ್ಟಿಯಾಗಿ ನೆಲೆ ನಿಂತರು.

ಜವಾಬ್ದಾರಿಯುತ ಮತ್ತು ರಕ್ಷಣಾತ್ಮಕ ಆಟವಾಡುತ್ತಿದ್ದ ಜೋ ರೂಟ್​ಗೆ, ನಾಯಕ ಜೋಸ್​ ಬಟ್ಲರ್ ಅಮೋಘ ಜೊತೆಯಾಟ ನೀಡಿದರು. ಈ ಜೋಡಿ 5ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿತು. ಈ ನಡುವೆ ಜೋ ರೂಟ್​ ಸೊಗಸಾದ ಅರ್ಧಶತಕ ಸಿಡಿಸಿ ಮಿಂಚಿದರು. ನಾಯಕನ ಆಟವಾಡುತ್ತಿದ್ದ ಬಟ್ಲರ್, 42 ಎಸೆತಗಳಲ್ಲಿ 43 ರನ್ ಕಲೆ ಹಾಕಿ ನಿರ್ಗಮಿಸಿದರು.

ನ್ಯೂಜಿಲೆಂಡ್ ತಂಡದ ಪರ ಮಾರಕ ದಾಳಿ ನಡೆಸಿದ ಮ್ಯಾಟ್ ಹೆನ್ರಿ 48 ರನ್ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಫ್ಸ್ ತಲಾ 2 ವಿಕೆಟ್ ಪಡೆದರು. ಇನ್ನು ಟ್ರೆಂಟ್ ಬೌಲ್ಟ್, ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

 

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ

ವಿಶ್ವ ಟೆನಿಸ್ ಯುಗದಲ್ಲಿ ಮತ್ತೊಂದು ಹೊಸದೊಂದು ಪ್ರತಿಭೆ ಪ್ರಜ್ವಲಿಸುತ್ತಿದೆ. 21 ವರ್ಷದ...

ಸ್ಪೇನ್‌ಗೆ ನಾಲ್ಕನೇ ಬಾರಿ ಯೂರೋ ಕಪ್; ಸತತ 2ನೇ ಬಾರಿ ಸೋತ ಇಂಗ್ಲೆಂಡ್

ಯುರೋಪ್‌ನ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿ ಯೂರೋ ಕಪ್‌ ಪ್ರಶಸ್ತಿಯನ್ನು ಸ್ಪೇನ್‌...

ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ(ಜು.14) ನಡೆದ ವಿಂಬಲ್ಡನ್‌ ಫೈನಲ್‌ನಲ್ಲಿ ನೇರ...

ಸಾಂಘಿಕ ಹೋರಾಟದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ಟೀಂ ಇಂಡಿಯಾಗೆ 4-1 ಟಿ20 ಸರಣಿ

ಭಾರತ ತಂಡ ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿ 42 ರನ್‌ಗಳ ಅಂತರದಲ್ಲಿ...