ಭಾರತ – ಬಾಂಗ್ಲಾ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ ಆರಂಭ: ಸಮಯದಲ್ಲಿ ವಿನೂತನ ಬದಲಾವಣೆ

Date:

ಭಾರತ-ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತದೆ. ಮೊದಲ ಟೆಸ್ಟ್ ಪಂದ್ಯವು ಚೆನ್ನೈನಲ್ಲಿ ನಡೆದರೆ, ಎರಡನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 27 ರಿಂದ ಕಾನ್ಪುರದಲ್ಲಿ ಆರಂಭವಾಗಲಿದೆ.

- Advertisement -

ಮೊದಲ ಪಂದ್ಯವು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಜರುಗಲಿದೆ. ಬೆಳಿಗ್ಗೆ 9.30 ರಿಂದ ಶುರುವಾಗಲಿರುವ ಈ ಪಂದ್ಯದ ಮೊದಲ ಸೆಷನ್ ಮುಗಿಯುವುದು 11.30 ಕ್ಕೆ. ಭೋಜನಾ ವಿರಾಮದ ಬಳಿಕ 12.10 ರಿಂದ ಎರಡನೇ ಸೆಷನ್ ಆರಂಭವಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಈ ಸುದ್ದಿ ಓದಿದ್ದೀರಾ? ಕ್ರಿಸ್ಟಿಯಾನೊ ರೊನಾಲ್ಡೊ ಎಂಬ ದಾಖಲೆಗಳ ದಿಗ್ಗಜ; 900 ಗೋಲುಗಳ ಸರದಾರ

ಮಧ್ಯಾಹ್ನ 12.10 ರಿಂದ 2.10ರವರೆಗೆ ದ್ವಿತೀಯ ಸೆಷನ್ ನಡೆಯಲಿದ್ದು, ಆ ಬಳಿಕ 20 ನಿಮಿಷಗಳ ಟೀ ಬ್ರೇಕ್ ನೀಡಲಾಗುತ್ತದೆ. 2.30 ರಿಂದ ಆರಂಭವಾಗಲಿರುವ ಮೂರನೇ ಸೆಷನ್ 4.30ರವರೆಗೆ ಮುಂದುವರೆಯಲಿದೆ. ಇನ್ನು ಈ ಮೂರು ಸೆಷನ್​ಗಳಲ್ಲಿ ಒಟ್ಟು 90 ಓವರ್​ಗಳನ್ನು ಆಡಲಾಗುತ್ತದೆ. ಅಂದರೆ 7 ಗಂಟೆಗಳ ಮೊದಲ ದಿನದಾಟದಲ್ಲಿ 60 ನಿಮಿಷಗಳ ವಿರಾಮ ಇರಲಿದೆ.

ಸೆಷನ್ ಸಮಯ​:

ಮೊದಲ ಸೆಷನ್ : ಬೆಳಿಗ್ಗೆ 9.30 ರಿಂದ 11.30.

ದ್ವಿತೀಯ ಸೆಷನ್  : ಮಧ್ಯಾಹ್ನ 12.10 ರಿಂದ 2.10.

ತೃತೀಯ ಸೆಷನ್ : ಮಧ್ಯಾಹ್ನ 2.30 ರಿಂದ ಸಂಜೆ 4.30

ಭಾರತವೇ ಬಲಿಷ್ಠ

ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಟೆಸ್ಟ್​​ನಲ್ಲಿ ಕೇವಲ 13 ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ. ಟೀಮ್ ಇಂಡಿಯಾ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಬಾಂಗ್ಲಾದೇಶ ತಂಡ ಒಮ್ಮೆಯೂ ಭಾರತದ ವಿರುದ್ಧ ಟೆಸ್ಟ್ ಪಂದ್ಯ ಗೆದ್ದಿಲ್ಲ. ಇದಾಗ್ಯೂ 2 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಭಾರತ ತಂಡವೇ ಮೇಲುಗೈ ಹೊಂದಿದೆ. ಅದರಲ್ಲೂ ತವರಿನಲ್ಲಿ ಸತತ 17 ಟೆಸ್ಟ್ ಸರಣಿಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಈ ಬಾರಿ ಸಹ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಉಭಯ ತಂಡಗಳು:

ಭಾರತ:

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆ ಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.

ಬಾಂಗ್ಲಾದೇಶ:

ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಸ್ಕಿನ್ ಅಹ್ಮದ್, ಸೈಯದ್ ಖಾಲಿದ್ ಅಹ್ಮದ್, ಜಾಕರ್ ಅಲಿ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತಕ್ಕೆ ಚಿನ್ನ ತಂದ ಮಹಿಳೆಯರು: ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಕಲಿಗಳ ಸಾಧನೆ

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ...

ಏಷ್ಯನ್ ಗೇಮ್ಸ್: ಸ್ಕೀಟ್ ಶೂಟಿಂಗ್, ಸಾಫ್ಟ್ ಟೆನಿಸ್‌ನಲ್ಲಿ ಭಾರತಕ್ಕೆ ಕಂಚು; ಪದಕದತ್ತ ಮೀರಾಬಾಯಿ ದಾಪುಗಾಲು

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ನಾಲ್ಕನೇ ದಿನವಾದ ಬುಧವಾರ...

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...

ಸೋತರೂ ಎಲ್ಲರ ಹೃದಯ ಗೆದ್ದ ಸುಚಿಕಾ: 700 ಗ್ರಾಂ ಹಿನ್ನಡೆಯಿಂದ ತಪ್ಪಿದ ಚಿನ್ನ

ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ ವಿಭಾಗದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)...