200ನೇ ಪಂದ್ಯ, 123 ಗೋಲು; ಗಿನ್ನಿಸ್‌ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

Date:

ದಿಗ್ಗಜ ಫುಟ್‌ಬಾಲ್‌ ಆಟಗಾರ, ಪೋರ್ಚುಗಲ್‌ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಗಿನ್ನಿಸ್‌ ದಾಖಲೆ ನಿರ್ಮಿಸಿದ್ದಾರೆ.

- Advertisement -

ಮಂಗಳವಾರ ರಾತ್ರಿ ಲೌಗರ್ಡಲ್ಸ್ವೊಲ್ಲೂರ್‌ನಲ್ಲಿ ನಡೆದ  ಯೂರೋ-2024ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್‌ ತಂಡ,  ಆತಿಥೇಯ ಐಸ್‌ಲ್ಯಾಂಡ್‌  ವಿರುದ್ಧ 1-0 ಗೋಲುಗಳ ರೋಚಕ ಗೆಲುವು ಸಾಧಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಖ್ಯಾತ ಆಟಗಾರ ರೊನಾಲ್ಡೊ, ಪಂದ್ಯದ 89ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮಹತ್ವದ ಜಯ ತಂದುಕೊಟ್ಟರು.  ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ರೊನಾಲ್ಡೊ ದಾಖಲಿಸಿದ 123ನೇ ಗೋಲು ಇದಾಗಿತ್ತು.  ಆ ಮೂಲಕ ಅರ್ಜೆಂಟಿನಾದ ನಾಯಕ ಲಿಯೋನೆಲ್‌ ಮೆಸ್ಸಿ (103), ಜೊತೆಗಿನ ಗೋಲುಗಳ ಅಂತರವನ್ನು (20) ಮತ್ತಷ್ಟು ಹೆಚ್ಚಿಸಿದ್ದಾರೆ.

ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಕಾಣಿಸಿಕೊಂಡ ಆಟಗಾರ ಎಂಬ ದಾಖಲೆ ನಿರ್ಮಿಸಿದ ರೊನಾಲ್ಡೊ, ಪಂದ್ಯ ಪ್ರಾರಂಭವಾಗುವುದಕ್ಕೂ ಮುನ್ನ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರ ಸ್ವೀಕರಿಸಿದರು.

2016ರಲ್ಲಿ ಪೋರ್ಚುಗಲ್‌ ತಂಡ ಚೊಚ್ಚಲ ಯೂರೊ ಕಪ್‌ ಪ್ರಶಸ್ತಿ ಗೆಲ್ಲುವಲ್ಲಿಯೂ ರೊನಾಲ್ಡೊ ಪ್ರಮುಖ ಪಾತ್ರ ವಹಿಸಿದ್ದರು.

ಅಂತಿಮ ನಿಮಿಷದಲ್ಲಿ ಗೋಲು!

ಐಸ್‌ಲ್ಯಾಂಡ್‌ ಮತ್ತು ಪೋರ್ಚುಗಲ್‌ ತಂಡಗಳ ನಡುವಿನ ಪಂದ್ಯ ಸಮಬಲದ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಪಂದ್ಯದ ಪೂರ್ಣಾವಧಿಯ ಅಂತಿಮ ನಿಮಿಷದಲ್ಲಿ (89) ರೊನಾಲ್ಡೊ ಗೋಲು ದಾಖಲಿಸಿದ್ದರು. ಆದರೆ ಎದುರಾಳಿ ತಂಡದ ಆಟಗಾರರು ಆಫ್‌ಸೈಡ್‌ ಮನವಿ ಮಾಡಿದ್ದ ಕಾರಣ ವಿಡಿಯೋ ರಿಪ್ಲೆ (ವಿಎಆರ್‌) ಮೂಲಕ ರೆಫ್ರಿ ಗೋಲು ಪರಿಶೀಲಿಸಿದ ಬಳಿಕವಷ್ಟೇ ಪೋರ್ಚುಗಲ್‌ ತಂಡಕ್ಕೆ ಗೋಲು ಅನುಮತಿಸಿದರು.

ಐಸ್‌ಲ್ಯಾಂಡ್‌ ಆಟಗಾರನಿಗೆ ರೆಡ್‌ಕಾರ್ಡ್‌

 ಅರ್ಹತಾ ಸುತ್ತಿನ ಪಂದ್ಯದ 80ನೇ ನಿಮಿಷದಲ್ಲಿ ಐಸ್‌ಲ್ಯಾಂಡ್‌ ತಂಡದ ಆಟಗಾರ ವಿಲ್ಲಮ್ ವಿಲ್ಲಮ್ಸನ್ ಕೆಂಪು ಕಾರ್ಡ್‌ ಪಡೆದ ಪರಿಣಾಮ ಮೈದಾನದಿಂದ ಹೊರನಡೆಯಬೇಕಾಯಿತು. ಹೀಗಾಗಿ ಅಂತಿಮ 10 ನಿಮಿಷಗಳ ಕಾಲ ಆತಿಥೇಯ ತಂಡವು 10 ಮಂದಿ ಆಟಗಾರರೊಂದಿಗೆ ಆಡಬೇಕಾಯಿತು.  ಅದಾಗಿಯೂ ಪಂದ್ಯದುದ್ದಕ್ಕೂ ಪೋರ್ಚುಗಲ್‌ ತಂಡಕ್ಕೆ ಐಸ್‌ಲ್ಯಾಂಡ್‌ ಕಠಿಣ ಪೈಪೋಟಿ ಒಡ್ಡಿತ್ತು. ಹೀಗಾಗಿ ರೊನಾಲ್ಡೊ ಸಾರಥ್ಯದ ತಂಡಕ್ಕೆ ಕೇವಲ ಮೂರು ಶಾಟ್‌ ಆನ್‌ ಟಾರ್ಗೆಟ್‌ ಮಾತ್ರ ದಾಖಲಿಸಲು ಸಾಧ್ಯವಾಯಿತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್ : ಕ್ರೀಡಾಭಿಮಾನಿಗಳಿಗೆ ರೋಮಾಂಚನ, ಭಾರತದ ಮುಡಿಗೇರಿದ 13 ಚಿನ್ನದ ಪದಕಗಳು!

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ 13ನೇ ದಿನ ಭಾರತಕ್ಕೆ...

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...