ಐಪಿಎಲ್ 2025 | ಓಡಿದ್ದ 2 ರನ್‌ ಹಾಗೂ ಆ ಒಂದು ನಿರ್ಧಾರ ಚೆನ್ನೈ ಸೋಲಿಗೆ ಕಾರಣವಾಯಿತೆ?

Date:

ಈ ಬಾರಿಯ ಐಪಿಎಲ್‌ನಲ್ಲಿ ಅಂಪೈರ್‌ಗಳ ನಿರ್ಣಯಗಳು ಮತ್ತೊಮ್ಮೆ ವಿವಾದಕ್ಕೆ ಎಡೆಮಾಡಿಕೊಡುತ್ತಿವೆ. ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವಣ ಪಂದ್ಯವೂ ಇದಕ್ಕೆ ಸಾಕ್ಷಿಯಾಗಿದೆ.

- Advertisement -

ಆರ್‌ಸಿಬಿ ನೀಡಿದ್ದ 214 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದಾಗ ಚೆನ್ನೈ ಸೂಪರ್‌ ಕಿಂಗ್ಸ್‌ ಪರ 16.2 ಓವರ್‌ನಲ್ಲಿ ಆಯುಷ್‌ ಮಾತ್ರೆ (94) ಔಟ್ ಆಗುತ್ತಿದ್ದಂತೆ, ಕ್ರೀಸ್‌ಗೆ ಡೆವಾಲ್ಡ್ ಬ್ರೆವಿಸ್ ಮೈದಾನಕ್ಕೆ ಬಂದರು. ಇವರು ಲುಂಗಿ ಎನ್‌ಗಿಡಿ ಅವರ ಎಸೆತದಲ್ಲಿ ಔಟ್ ಆದರು. ಆದರೆ ಇವರಿಗೆ ಡಿಆರ್‌ಎಸ್‌ ತೆಗೆದುಕೊಳ್ಳಲು ಆಗಲಿಲ್ಲ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಡೆವಾಲ್ಡ್‌ ಬ್ರಾವಿಸ್‌ ಎಲ್‌ಬಿ ಔಟ್‌ ಆದಾಗ ದೊಡ್ಡ ಪರದೆಯ ಮೇಲೆ ಟೈಮರ್ ಕಾಣಿಸಿಕೊಳ್ಳದೇ ಸಮಸ್ಯೆಯನ್ನು ಸೃಷ್ಟಿಸಿತು. ಡೆವಾಲ್ಡ್‌ ಬ್ರಾವಿಸ್‌ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಅದಕ್ಕೂ ತಲೆ ಕಡಿಸಿಕೊಳ್ಳದೆ ರನ್ ಓಡಲು ಮುಂದಾದರು. ಬಳಿಕ ರವೀಂದ್ರ ಜಡೇಜಾ ಅವರನ್ನು ಸಂಪರ್ಕಿಸಿ ಡಿಆರ್‌ಎಸ್‌ ಮೇಲ್ಮನವಿ ಸಲ್ಲಿಸಿದರು. ಆಗಲೇ ವಿವಾದ ಹುಟ್ಟಿಕೊಂಡಿತು. ಏಕೆಂದರೆ ಮನವಿ ಸಲ್ಲಿಸುವ ನಿಗದಿತ ಅವಧಿ ಮೀರಿತ್ತು.

ಐಪಿಎಲ್​ ನಿಯಮದ ಪ್ರಕಾರ, ಎಲ್​ಬಿಡಬ್ಲ್ಯೂ ಆದರೆ 15 ಸೆಕೆಂಡ್​ಗಳ ಒಳಗೆ ಡಿಆರ್​ಎಸ್​ಗೆ ಮನವಿ ಸಲ್ಲಿಸಬೇಕು. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ, ಮನವಿಯನ್ನು ತಿರಸ್ಕರಿಸಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೆ ಸ್ಥಾನ; ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಒಪ್ಪಿಗೆ

ಆದರೆ ಈ ನಿಯಮದ ಬಗ್ಗೆ ಅರಿವಿಲ್ಲದೆ, ಡೆವಾಲ್ಡ್ ಬ್ರೆವಿಸ್ ಹಾಗೂ ರವೀಂದ್ರ ಜಡೇಜಾ 2 ರನ್ ಓಡಿದ್ದಾರೆ. ಅದರಲ್ಲೂ ಒಂದು ರನ್ ಕಲೆಹಾಕಿದ ಬಳಿಕ ಡಿಆರ್​ಎಸ್​ಗೆ ಮನವಿ ಸಲ್ಲಿಸಿದ್ದರೂ ಬ್ರೆವಿಸ್​ ಅವರಿಗೆ ರಿವ್ಯೂ ಲಭಿಸುತ್ತಿತ್ತು.

ಇದರ ಪರಿಕಲ್ಪನೆಯೇ ಇಲ್ಲದೆ, ರವೀಂದ್ರ ಜಡೇಜಾ ಡೆವಾಲ್ಡ್ ಬ್ರೆವಿಸ್ ಅವರನ್ನು 2ನೇ ರನ್​ಗಾಗಿ ಕರೆದಿದ್ದಾರೆ. ಇತ್ತ ಕಡೆಯಿಂದ ಸ್ಟ್ರೈಕ್​ನತ್ತ ಓಡಿದ ಬ್ರೆವಿಸ್ ಆ ಬಳಿಕ ಜಡೇಜಾ ಜೊತೆ ಚರ್ಚಿಸಿ ಡಿಆರ್​ಎಸ್​ಗೆ ಮನವಿ ಸಲ್ಲಿಸಿದ್ದಾರೆ.

ಅಷ್ಟರಲ್ಲಾಗಲೇ ಟೈಮರ್ 25 ಸೆಕೆಂಡ್​ಗಳನ್ನು ದಾಟಿತ್ತು. ಅಂದರೆ 15 ಸೆಕೆಂಡ್​ಗಳಲ್ಲಿ ತೆಗೆದುಕೊಳ್ಳಬೇಕಾದ ರಿವ್ಯೂ ಅನ್ನು ಬ್ರೆವಿಸ್ 25 ಸೆಕೆಂಡ್​ಗಳ ಬಳಿಕ ತೆಗೆದುಕೊಂಡಿದ್ದಾರೆ. ಹೀಗಾಗಿ ಅಂಪೈರ್ ಮನವಿಯನ್ನು ತಿರಸ್ಕರಿಸಿದರು.

ಇದರಿಂದಾಗಿ ಡೆವಾಲ್ಡ್ ಬ್ರೆವಿಸ್ ಮೇಲ್ಮನವಿ ಇಲ್ಲದೆ ಪೆವಿಲಿಯನ್​ಗೆ ಹಿಂತಿರುಗಬೇಕಾಯಿತು. ಕುತೂಹಲಕಾರಿ ವಿಷಯ ಎಂದರೆ ಅದು ನಾಟೌಟ್ ಆಗಿತ್ತು. ಅಂದರೆ ರಿಪ್ಲೇ ವಿಡಿಯೋದಲ್ಲಿ ಡೆವಾಲ್ಡ್ ಬ್ರೆವಿಸ್ ಕಾಲಿಗೆ ತಾಗಿದ ಚೆಂಡು ವಿಕೆಟ್​ನಿಂದ ದೂರ ಸಾಗುತ್ತಿರುವುದು ಕಂಡು ಬಂದಿದೆ.

ಈ ಒಂದೇ ಓವರ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಎರಡು ವಿಕೆಟ್‌ಗಳನ್ನು ಪಡೆದ ಲುಂಗಿ ಎನ್‌ಗಿಡಿ ಅಬ್ಬರಿಸಿದರು. ಅಲ್ಲದೆ ಆರ್‌ಸಿಬಿ ಪಂದ್ಯದಲ್ಲಿ ಭರ್ಜರಿ ವಾಪಸಾತಿ ಮಾಡುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದರು. ರೆವ್ಯೂ ತೆಗೆದುಕೊಂಡು ಓಡಿದ 2 ರನ್‌ ಲೆಕ್ಕಕ್ಕಿದ್ದರೆ ಸಿಎಸ್​ಕೆ ತಂಡಕ್ಕೆ ಗೆಲ್ಲುವ ಅವಕಾಶವಿರುತ್ತಿತ್ತು. ಕೊನೆಗೆ 2 ರನ್‌ನಿಂದಲೇ ಸೋಲು ಅನುಬೇಕಾಯಿತು.

ಪಂದ್ಯ ಫಲಿತಾಂಶ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 211 ರನ್‌ ಸೇರಿಸಿ ಸೋಲು ಕಂಡಿತು. ಈ ಪಂದ್ಯದಲ್ಲಿ ಮಹತ್ವದ 2 ಅಂಕ ಕಲೆ ಹಾಕುತ್ತಿದ್ದಂತೆ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...