ಈ ಬಾರಿಯ ಐಪಿಎಲ್‌ನಲ್ಲಿ ಸದ್ದೇ ಮಾಡದ ಮ್ಯಾಕ್ಸ್‌ವೆಲ್ ಬ್ಯಾಟ್‌: ಗಳಿಸಿದ್ದು ಕೇವಲ 52 ರನ್!

Date:

ಬುಧವಾರ ಗುಜರಾತ್‌ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ ಸೋಲುವುದರೊಂದಿಗೆ ಆರ್‌ಸಿಬಿ ತಂಡ ಟೂರ್ನಿಯಿಂದ ಹೊರಬಿದ್ದಿದ್ದಲ್ಲದೇ, ಕಪ್ ಗೆಲ್ಲುವ ಕನಸು ಮತ್ತೆ ಕನಸಾಗಿಯೇ ಉಳಿದಿದೆ.

ಮಹತ್ವದ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿದರೂ ಕೂಡ ಅದನ್ನು ಬಳಸಿಕೊಳ್ಳದ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರು ಪಡೆದಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ನಿನ್ನೆಯ ಪಂದ್ಯದಲ್ಲೂ ಕೂಡ ಶೂನ್ಯ ಸುತ್ತಿದ್ದರು.

ಹಾಲಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಆಡಿದ್ದ 15 ಪಂದ್ಯಗಳ ಪೈಕಿ, ಮ್ಯಾಕ್ಸ್‌ವೆಲ್ ಆಡಿದ್ದ 9 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 52 ರನ್ ಎಂದರೆ ನೀವು ನಂಬಲೇ ಬೇಕು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

0,3,28,0,1,0,4,16,0. ಇದು ಯಾವುದೋ ಮೊಬೈಲ್ ಫೋನ್‌ ನಂಬರಲ್ಲ. ಬದಲಾಗಿ ಕಳೆದ 9 ಪಂದ್ಯಗಳಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬ್ಯಾಟ್‌ನಿಂದ ಬಂದ ರನ್‌. ಅಂದರೆ ಕೇವಲ 52 ರನ್.

ಟೂರ್ನಿಯ ನಡುವೆ ನಿರಂತರ ವೈಫಲ್ಯಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ತನ್ನ ಬದಲಿಗೆ ಬೇರೆಯವರನ್ನು ತಂಡಕ್ಕೆ ಸೇರಿಸಿಕೊಳ್ಳಿ ಎಂದು ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಯವರಲ್ಲಿ ವಿನಂತಿಸಿದ್ದರಿಂದ ಅವರ ಸ್ಥಾನವನ್ನು ಇಂಗ್ಲೆಂಡ್‌ನ ವಿಲ್ ಜಾಕ್ಸ್‌ ಅವರಿಗೆ ನೀಡಲಾಗಿತ್ತು. ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದ ವಿಲ್ ಜಾಕ್ಸ್‌, ಗುಜರಾತ್ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದಲ್ಲದೇ, ಆರ್‌ಸಿಬಿಯ ಗೆಲುವಿಗೂ ಕಾರಣರಾಗಿದ್ದರು.

ಈ ನಡುವೆ ಮೇ 18ರಂದು ಬೆಂಗಳೂರಿನಲ್ಲಿ ನಡೆದಿದ್ದ ಚೆನ್ನೈ ವಿರುದ್ಧದ ಪಂದ್ಯಕ್ಕಿಂತಲೂ ಮೊದಲೇ ಟಿ20 ವಿಶ್ವಕಪ್‌ನ ತಯಾರಿಗಾಗಿ ವಿಲ್ ಜಾಕ್ಸ್‌ ತವರಿಗೆ ಮರಳಿದ್ದರಿಂದ ಮತ್ತೆ ಮ್ಯಾಕ್ಸ್‌ವೆಲ್‌ಗೆ ಅವಕಾಶ ನೀಡಲಾಗಿತ್ತು. ಆ ಪಂದ್ಯದಲ್ಲಿ 5 ಎಸೆತಗಳನ್ನು ಎದುರಿಸಿದ್ದ ಮ್ಯಾಕ್ಸ್‌ವೆಲ್, 2 ಬೌಂಡರಿ ಹಾಗೂ 1 ಸಿಕ್ಸ್‌ನ ನೆರವಿನಿಂದ 16 ರನ್ ಗಳಿಸಿ, ಶಾರ್ದೂಲ್ ಠಾಕೂರ್ ಎಸೆತದಲ್ಲಿ ಎಂ ಎಸ್ ಧೋನಿಗೆ ಕ್ಯಾಚಿತ್ತು ಔಟಾಗಿದ್ದರು.

ಎಲಿಮಿನೇಟರ್ ಪಂದ್ಯದಲ್ಲಿ ಆರ್ ಅಶ್ವಿನ್ ಅವರು ಕ್ಯಾಮರೂನ್ ಗ್ರೀನ್ ಅವರ ವಿಕೆಟ್ ಪಡೆದ ಬಳಿಕ ಕ್ರೀಸ್‌ಗೆ ಬಂದಿದ್ದ ಮ್ಯಾಕ್ಸ್‌ವೆಲ್, ಪರಿಸ್ಥಿರಿ ನೋಡಿ ಚೆನ್ನಾಗಿ ಆಡ್ತಾರೆ ಅಂತ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದಾಗಲಿಲ್ಲ.

ಮ್ಯಾಕ್ಸ್‌ವೆಲ್, ತಾನೆದುರಿಸಿದ ಮೊದಲ ಎಸೆತವನ್ನೇ ಸರಿಯಾಗಿ ಅಂದಾಜಿಸದೆ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲಗೊಂಡಿದ್ದಲ್ಲದೇ, ಅಶ್ವಿನ್ ಎಸೆತದಲ್ಲಿ ಧ್ರುವ್ ಜುರೆಲ್‌ಗೆ ಕ್ಯಾಚಿತ್ತು ಶೂನ್ಯಕ್ಕೆ ನಿರ್ಗಮಿಸಿದ್ದರು. ಆ ಮೂಲಕ ಆರ್‌ಸಿಬಿ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೀನಾಯ ದಾಖಲೆಯೊಂದನ್ನು ಬರೆದಿದ್ದಾರೆ.

ಮ್ಯಾಕ್ಸ್‌ವೆಲ್, ನಿನ್ನೆ ಶೂನ್ಯಕ್ಕೆ ಔಟಾಗುವ ಮೂಲಕ ಈ ಹೀನಾಯ ದಾಖಲೆ ಬರೆದಿದ್ದು, ಆ ಮೂಲಕ ಮತ್ತೋರ್ವ ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ರ ಬೇಡದ ದಾಖಲೆಯನ್ನು ಸರಿಗಟ್ಟಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಡಕೌಟ್ ಆಗುವ ಮೂಲಕ ಗ್ಲೆನ್ ಮ್ಯಾಕ್ಸ್ ವೆಲ್ ಐಪಿಎಲ್ ನಲ್ಲಿ 18ನೇ ಬಾರಿಗೆ ಡಕೌಟ್ ಆದರು. ಆ ಮೂಲಕ ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಆಟಗಾರರ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್‌ರೊಂದಿಗೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ ದಿನೇಶ್ ಕಾರ್ತಿಕ್ ಕೂಡ ಡಕೌಟ್ ಆಗಿ ಈ ಹೀನಾಯ ದಾಖಲೆಗೆ ಪಾತ್ರರಾಗಿದ್ದರು.

 

ಈ ಪಟ್ಟಿಯಲ್ಲಿ 17 ಬಾರಿ ಶೂನ್ಯಕ್ಕೆ ಔಟಾಗಿರುವ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದು, 16 ಬಾರಿ ಡಕೌಟ್ ಆಗಿರುವ ಪಿಯೂಶ್ ಚಾವ್ಲಾ ಮತ್ತು ಸುನಿಲ್ ನರೇನ್ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನು ನಿನ್ನೆಯ ಪಂದ್ಯದ ಡಕೌಟ್ ಸೇರಿದಂತೆ ಟಿ20 ಕ್ರಿಕೆಟ್ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲಿ ಮ್ಯಾಕ್ಸ್‌ವೆಲ್ ಇದೀಗ ಜಂಟಿ 4ನೇ ಸ್ಥಾನಕ್ಕೇರಿದ್ದಾರೆ.

ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಸುನಿಲ್ ನರೇನ್ ಅಗ್ರಸ್ಥಾನದಲ್ಲಿದ್ದು, ಅವರು ಒಟ್ಟು 44 ಬಾರಿ ಶೂನ್ಯ ಸುತ್ತಿದ್ದಾರೆ. 2ನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಅಲೆಕ್ಸ್ ಹೇಲ್ಸ್ ಇದ್ದು ಅವರು 43 ಬಾರಿ ಡಕೌಟ್ ಆಗಿದ್ದಾರೆ. ಅಫ್ಘಾನಿಸ್ತಾನದ ರಷೀದ್ ಖಾನ್ 42 ಬಾರಿ ಡಕೌಟ್ ಆಗುವ ಮೂಲಕ 3ನೇ ಸ್ಥಾನದಲ್ಲಿದ್ದು, ತಲಾ 32 ಬಾರಿ ಶೂನ್ಯ ಸುತ್ತಿರುವ ಮ್ಯಾಕ್ಸ್ ವೆಲ್ ಮತ್ತು ಪಾಲ್ ಸ್ಟರ್ಲಿಂಗ್ ಜಂಟಿ 4ನೇ ಸ್ಥಾನದಲ್ಲಿದ್ದಾರೆ.

ಇದನ್ನು ಓದಿದ್ದೀರಾ? ಸೋಲಿನೊಂದಿಗೆ ಐಪಿಎಲ್‌ಗೆ ವಿದಾಯ ಹೇಳಿದ ‘ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್’

ಇನ್ನು ಐಪಿಎಲ್‌ನ ಒಂದೇ ಸೀಸನ್ ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಆಟಗಾರರ ಪಟ್ಟಿಯಲ್ಲೂ ಮ್ಯಾಕ್ಸ್‌ವೆಲ್ ಜಂಟಿ 2ನೇ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ರಾಜಸ್ಥಾನ ತಂಡದ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದಾರೆ. ಜಾಸ್ 2023ರ ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ 5 ಬಾರಿ ಡಕೌಟ್ ಆಗಿದ್ದರು. ಅದೇ ಟೂರ್ನಿಯಲ್ಲಿ ಆರ್‌ಸಿಬಿಯ ದಿನೇಶ್ ಕಾರ್ತಿಕ್ 4 ಬಾರಿ ಶೂನ್ಯ ಸುತ್ತಿದ್ದರು.

ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಟ್ರೋಲ್

11 ಕೋಟಿಗೆ ಆರ್‌ಸಿಬಿ ಪಾಲಾಗಿದ್ದ ಆಸೀಸ್‌ನ ಆಟಗಾರ ಮ್ಯಾಕ್ಸ್‌ವೆಲ್ ಈ ಬಾರಿಯ ಐಪಿಎಲ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದರಿಂದ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಟ್ರೋಲ್‌ಗೂ ಗುರಿಯಾಗಿದ್ದಾರೆ.

ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಕೆವಿನ್ ಪೀಟರ್‌ಸನ್ ಸೇರಿದಂತೆ ಹಲವು ಮಂದಿ ಆರ್‌ಸಿಬಿ ಅಭಿಮಾನಿಗಳು ಕೂಡ ಮ್ಯಾಕ್ಸ್‌ವೆಲ್ ಮೇಲೆ ಮುಗಿಬಿದ್ದಿದ್ದಾರೆ. ಮುಂದಿನ ಸೀಸನ್‌ನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ತಂಡದಲ್ಲಿ ಉಳಿಸಿಕೊಳ್ಳದೇ, ಅವರನ್ನು ಕೈಬಿಡಿ ಎಂದು ಆರ್‌ಸಿಬಿ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ | ಆತಿಥೇಯ ಅಮೆರಿಕ ಸೋಲಿಸಿ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದ ಟೀಮ್ ಇಂಡಿಯಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಐಸಿಸಿ...

ಟಿ20 ವಿಶ್ವಕಪ್‌ | ಭಾರತಕ್ಕೆ ಗೆಲ್ಲಲು 111 ರನ್‌ಗಳ ಗುರಿ ನೀಡಿದ ಆತಿಥೇಯ ಅಮೆರಿಕ: ಮಿಂಚಿದ ಅರ್ಷ್‌ದೀಪ್ ಸಿಂಗ್

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಐಸಿಸಿ...

ಟಿ20 ವಿಶ್ವಕಪ್ | ಟೀಮ್ ಇಂಡಿಯಾ-ಅಮೆರಿಕ ಮೊದಲ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ...

2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿ | ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ‘ಔಟ್’; ವ್ಯಾಪಕ ಆಕ್ರೋಶ

ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ...