ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

Date:

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ ಬದುಕಿನ ಮೀಸಲಾತಿ ಖಾಯಂ ಆಗಿದೆ; ನಮ್ಮೊಳಗಿನ ನಿನಗೆ ಬಣ್ಣದ ಚಾಳೀಸು ತೊಡಿಸಲಾಗಿದೆ.

- Advertisement -

ಹುಸಿ ಸುದ್ದಿಗಳ ಸದ್ದಡಗಿದಾಗ, ಹಾರ ತುರಾಯಿ, ವಂದಿ-ಮಾಗಧರ ಮೆರವಣಿಗೆಗಳು ಇಲ್ಲವಾಗಿ, ದ್ವೇಷ ಭಾಷಣಗಳು ನಿಂತು, ಡಿಜೆಗಳ ಸದ್ದಿಲ್ಲದ ಸಮಯದಲ್ಲಿ ಆತ್ಮವು ಅಂತರ್ಮುಖಿಯಾಗಿ ತನ್ನೊಳಗಳನ್ನು ಆಲಿಸಿಕೊಂಡಾಗ ನಿನ್ನಿರುವು ಅರಿವಾಗುತ್ತದೆ.

ನೀ ಕಟ್ಟಿದ ರಾಜಕೀಯ ವೇದಿಕೆಯು ಕ್ರಮೇಣ ತನ್ನ ಮೂಲ ಮೌಲ್ಯಗಳನ್ನೇ ಕಳೆದುಕೊಂಡಿದ್ದು ಇತಿಹಾಸವಾಗಿದೆ. ಅಧಿಕಾರದ ರಾಜಕಾರಣದಲ್ಲಿ ಸಿಲುಕಿ ಇಂಡಿಯಾವೇ ಒಂದು ಮನೆತನದ ಸೊತ್ತಾಗುವ ಸಂದರ್ಭದಲ್ಲಿ ನಮ್ಮೊಳಗಿನ ನೀನು ಎಚ್ಚರಾದೆ.

ದುರಂತವೆಂದರೆ, ನಮ್ಮೊಳಗಿನ ನೀನು ಮತ್ತೆ ಮಸುಕಾಗಿದ್ದು, ಸತ್ಯಾಗ್ರಹವೆಂಬ ನಿನ್ನ ತತ್ವದ ಅಂಕಣದಲ್ಲಿ “ಭ್ರಷ್ಟಾಚಾರದ ವಿರುದ್ಧ ಇಂಡಿಯಾ” ಎಂಬ ನಾಟಕವನ್ನು ತೆರೆಗೊಳಿಸಿದ ಸೂತ್ರದಾರರು ಗದ್ದುಗೆಯೇರಿ ಸರ್ವಾಧಿಕಾರದ ಗರಿಯನ್ನೀಗ ತಲೆಗೇರಿಸಿಕೊಂಡಿದ್ದಾರೆ. “ಇವ ನನ್ನವ, ಇವ ನನ್ನವ”ನೆಂದು ಹೇಳಿಕೊಂಡೇ ನಿನ್ನನ್ನೂ, ನಿನ್ನ ರಾಮನನ್ನು ತಮ್ಮ ತೆಕ್ಕೆಗೆ ಎಳೆದುಕೊಂಡ ಚೌಕೀದಾರರು ಇಂದು ದೇವರಾಗಿ, ನಾಗರಿಕರು ಭಕ್ತರಾಗಿದ್ದಾರೆ. ನಿನಗೆ ಗುಂಡಿಕ್ಕಿದವರು ದೇಶಭಕ್ತರಾಗಿದ್ದಾನೆ. ದಿನವಿಡಿಯ ಈ ಸುದ್ದಿಗಳು ಆವರಿಸಿದಂತೆಲ್ಲಾ ನಮ್ಮೊಳಗಿನ ನೀನು ಮೌನವಾದೆ.

ನಿನ್ನ ಭಾರತವು ಬಹು ಧರ್ಮಗಳು, ಹಲವು ಸಂಸ್ಕೃತಿಗಳು, ಲಕ್ಷಾಂತರ ದೇವರು-ದೈವಗಳು, ರೀತಿ ರಿವಾಜುಗಳು, ಬಗೆಬಗೆಯ ಊಟ, ಉಡುಪು, ಅನೇಕಾನೇಕ ವಿಚಾರ, ಅಭಿರುಚಿ ಮತ್ತು ಭಾಷೆಯ ವೈವಿಧ್ಯತೆಗಳ ಮಿಳಿತದಲ್ಲಿ ಗಟ್ಟಿಯಾಗಿದ್ದ ಈ ದೇಶವು ಭಿನ್ನಮತದ ನಡುವೆಯೂ ಒಂದಾಗಿತ್ತು. ‘ಒಂದು ರಾಷ್ಟ್ರ, ಒಂದು ಸಂಸೃತಿ, ಒಂದು ಭಾಷೆ, ಒಂದು ಚುನಾವಣೆ’ ಯೆಂಬ (ಕು)ತಂತ್ರಗಳ ಅಂಕುಶದಲ್ಲಿ ಅಧಿಕಾರವು ಕೇಂದ್ರೀಕರಣವಾಗಿ ರಾಜ್ಯಗಳು ಅಧಿಕಾರ ಹೀನವಾಗುತ್ತಿವೆ. ಮತದಾರರನ್ನು ಸೇರಿಸುವ-ತೆಗೆಯುವ ಸ್ಥಳೀಯ ಅಧಿಕಾರವೂ ಸಹ ದಿಲ್ಲೀಕರಣವಾಗಿರುವ ಸತ್ಯವನ್ನು ತನ್ನೊಳಗನ್ನು ಆಲಿಸಿಕೊಂಡವರು ಇದೀಗ ಬಯಲಾಗಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...
Mahatma Gandhi 1

ಸತ್ಯಗಳು ಕಹಿಯೆನಿಸಿ, ಹುಸಿ ಕಥನಗಳು ರುಚಿಸುತ್ತಿವೆ. ಸತ್ಯ ಶೋಧನೆ, ಅದನ್ನು ಹೇಳುವ, ಕೇಳುವ ವಿಚಾರಗಳು ಕೇವಲ ಆಧ್ಯಾತ್ಮಿಕ ಬೋನೆಗಳಾಗಿವೆ. ಗುರು ಬಿರುದಾಂಕಿತರು ಮೌಢ್ಯದ ಹೂರಣಕ್ಕೆ ಧರ್ಮದ ಲೇಪನದಲ್ಲಿ ಮಾಡಿ, ಮತ್ತಷ್ಟು ಮಠಗಳನ್ನು ಕಟ್ಟುತ್ತಿದ್ದರೆ, ಜನರು ಧರ್ಮ ರಕ್ಷಣೆಯ ಭ್ರಮೆಯಲ್ಲಿದ್ದಾರೆ. ರಾಜಕೀಯದಲ್ಲಿ ಧರ್ಮವಿರದೆ, ಧರ್ಮವೇ ರಾಜಕೀಯವಾಗಿ ಮನೆಮಾರುಗಳನ್ನು ಒಡೆಯುತ್ತಿದೆ. ಧರ್ಮಗಳ ಹೆಸರಿನಲ್ಲಾದ ರಕ್ತಪಾತಗಳು ಮಾನ್ಯಗೊಂಡು, ಸಂವಿಧಾನಕ್ಕೆ ಗೆದ್ದಲು ಹಿಡಿಯುತ್ತಿರುವ ಕಹಿ ಸತ್ಯಗಳು ನೀನಿರುವ ಮನೆಗಳಿಗೆ ತಿಳಿಯುತ್ತಿದ್ದರೂ, ಧ್ವನಿಯಡಗಿದೆ.

ಶಿಕ್ಷಣ ಮತ್ತು ಸೌಖ್ಯವು ವ್ಯಾಪಾರವಾಗಿ, ಉಳ್ಳವರ ಆದಾಯ ಗಗನದೆತ್ತರ ಬೆಳೆದರೆ, ಬಡವರು ಬವಣೆಯೊಳಗೆ ಕುಸಿದಿದ್ದಾರೆ. ಸರ್ಕಾರಿ ಸೇವೆಗಳು ಸವೆದು, ಮೌಢ್ಯದ ಶಿಕ್ಷಣ ಮತ್ತು ಮನೆಮದ್ದಿನ ವಾಟ್ಸ್ಆಪ್ ಜ್ಞಾನವು ರಿಯಾಯಿತಿ ದರದಲ್ಲಿ ಯಥೇಚ್ಚವಾಗಿ ದೊರಕುತ್ತಿದೆ. ಅಂಕಲ್- ಆಂಟಿಗಳು ಅದರ ಮರು ಬಿತ್ತರಿಕೆಯಲ್ಲಿ ಪಾವನರಾಗುತ್ತಿದ್ದಾರೆ. ಆರು ದಶಕಗಳಿಗಳಿಂದ ಬೇಗೆಯಲ್ಲಿದ್ದವರು ಒಳ್ಳೆಯ ದಿನಗಳ ಹಂಬಲದಲ್ಲಿ ಬೆರಳೊತ್ತಿದಾಗಲೂ ನೀನಿದ್ದೆ ನಮ್ಮೊಳಗೆ. ಆ ದಿನಗಳ ನಿರೀಕ್ಷೆಯಲ್ಲಿಯೇ ಬೆನ್ನು ಬಾಗಿ ಬಾಣಲೆಯಿಂದ ಬೆಂಕಿಗೆ ಜಾರಿದ್ದೇವೆ.

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ ಬದುಕಿನ ಮೀಸಲಾತಿ ಖಾಯಂ ಆಗಿದೆ; ನಮ್ಮಳೊಗಿನ ನಿನಗೆ ಬಣ್ಣದ ಚಾಳೀಸು ತೊಡಿಸಲಾಗಿದೆ.

ಕೆಲಸ ಕೇಮೆಗಳಿಲ್ಲದ ಯುವಕರಿಗೆ ಕೈತುಂಬ ಸಿಗುತ್ತಿವೆ ದೊಂಬಿ-ಗಲಭೆಗಳು ಮತ್ತು ಬಿಟ್ಟಿ ಎಫ್‌ಐಆರ್‌ಗಳು. ಮನೆಮಾರು ಮಾರಿ ಶಿಕ್ಷಣ ಗಳಿಸಿರುವ ಯುವಜನತೆ ಖಾಲಿಯೇನು ಕುಳಿತಿಲ್ಲ; ಗುಳೆ ಹೊರಟ ಇವರು (ವ)ಮಂದೆ ಭಾರತದ ರೈಲಿನ ಶೌಚಾಲಯದ ಘಮಲನ್ನು ಅಸ್ವಾದಿಸುತ್ತಾ ಬದುಕು ಕಟ್ಟಿಕೊಳ್ಳುವ ಕನಸಿನಿಂದ ಸಿಟಿ ಸೇರುತ್ತಿದ್ದಾರೆ. ಜಿಡಿಪಿ ಮೇಲೆರಿದ ಅಥವಾ ಕೆಳಗಿಳಿದ ಚರ್ಚೆ ಮತ್ತು ಲೆಕ್ಕಗಳು ಆಕಾಶದಷ್ಟು ಆದಾಯ ಗಳಿಸಿರುವ ಒಂದು ಪರ್ಸೆಂಟ್ ಮಹಾ ಜನರಿಗಷ್ಟೇ ಅರ್ಥವಾಗುತ್ತಿದೆ. ದೇಶದ ಸಂಪತ್ತಿನ ಗುತ್ತಿಗೆ ಪಡೆದಿರುವ ಈ ಮಹಾಜನರು ತರತರದ ಬಿಡಿಗಾಸಿನ ದಿನಗೂಲಿ ಕೊಟ್ಟು ನಮ್ಮ ಯುವ ಜನಾಂಗವನ್ನು ಉದ್ಧರಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಬಿಡಿಗಾಸು ಪಡೆಯುವ ಬಡವರಿಗೆ ಜಿಡಿಪಿ ಲೆಕ್ಕವನ್ನು ಜೀರ್ಣಿಸಿಕೊಳ್ಳಲು ಅವರ ಖಾಲಿ ಹೊಟ್ಟೆಗಳು ಒಪ್ಪುತ್ತಿಲ್ಲ. ಕೈಗೆಟುಕದ ಬೆಲೆಗಳನ್ನು ತಡಕಲೂ ಆಗದ ಈ ದೇಶದ ಕೋಟ್ಯಂತರ ಜನರ ಬೇಗುದಿಯ ನಿಟ್ಟುಸಿರು ಬಣ್ಣದ ಚಾಳೀಸಿನ ಕಣ್ಣುಗಳಿಗೆ ಕಾಣುವುದಿಲ್ಲವಾದರೂ, ನೀನಿರುವ ಹೃದಯಗಳಿಗೆ ತಾಕುತ್ತಿದೆ.

ನಮ್ಮೊಳಗಿನ ನಿನ್ನ ಮೌಲ್ಯಗಳು ಕೆಣಕುತ್ತವಾದರೂ, ನಿನ್ನಂತೆ ಬೀದಿಗಿಳಿದು ಕೋಲು ಕುಟ್ಟಿ ಧ್ವನಿ ಎತ್ತಲು ಅದೇಕೋ ಭಯ; ರಸ್ತೆಗಿಳಿದವರನ್ನು ದೇಶದ್ರೋಹಿಗಳೆಂದು ಜೈಲಿಗಟ್ಟುವ ಕಾಲವಿದು. ಆದರೆ, ಈ ಜೆನ್‌ ಝಿಗಳಿಗೆ ಆ ಭಯವಿಲ್ಲ!? ಕ್ಷಣಗಳಲ್ಲಿ ವಿಶ್ವರೂಪವನ್ನು ಧೂಳೀಪಟ ಮಾಡಿದರಲ್ಲವೇ? ನಿನ್ನದೇ ಮಂತ್ರವಾದ ಅಹಿಂಸೆ, ಶಾಂತಿ, ಉಪವಾಸಗಳ ಜಪದೊಂದಿಗೆ ಬೀದಿಗಿಳಿದು ಹಾಡಿ ನಲಿದು ಲಾಠಿಯೇಟು ತಿಂದ ಈ ಭಂಡರಿಗೆ, ತುಂಡು ಬಟ್ಟೆಯ ನಿಜ ಫಕೀರನಾದ ನೀನು ಆಪ್ತನಾಗಿದ್ದಾದರೂ ಹೇಗೆ?

ಅದಿರಲಿ, ನಿನ್ನನ್ನು ಸದಾ ಕೊಲ್ಲಲೆತ್ನಿಸುತ್ತಿರುವ ಜನರಲ್ಲೂ ಬಹುಶಃ ನೀನಿರಬಹುದು. ಅದಕ್ಕೇ ಅವರು ಇನ್ನೂ ನಿನ್ನನ್ನು ಅಳಿಸಲಾಗಿಲ್ಲ; ಎಲ್ಲರೊಳಗೂ ಜೀವಂತವಿರುವ ನಿನಗೆ ಈ ಹುಟ್ಟುಹಬ್ಬದ ಸಂಭ್ರಮವೇಕೆ?

WhatsApp Image 2025 11 17 at 5.18.52 PM
ಲತಾಮಾಲ
+ posts

ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಮನಾಬಾದ್ | ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಕೊರತೆ : ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಹುಮನಾಬಾದ್ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳು, ಹೆರಿಗೆಗೆ ಬರುವ ಮಹಿಳೆಯರು...

ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಲ್ಯಾಬ್‌‌ಗಳಲ್ಲಿ ಹೊಸ ಬಗೆಯ ಪ್ರೋಟೀನ್‌ಗಳನ್ನು...

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...