IND – SA 2nd Test | ಭಾರತ 201ಕ್ಕೆ ಆಲೌಟ್; ಫಾಲೋಆನ್‌ ನೀಡದೆ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ

Date:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 83.5 ಓವರ್‌ಗಳಲ್ಲಿ ಕೇವಲ 201 ರನ್‌ಗಳಿಗೆ ಆಲೌಟ್ ಆಗಿ 288 ರನ್‌ಗಳ ಭಾರೀ ಹಿನ್ನಡೆ ಅನುಭವಿಸಿದೆ.

- Advertisement -

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 489 ರನ್‌ಗಳಿಗೆ ಉತ್ತರವಾಗಿ ಭಾರತ ತಂಡ ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೋ ಯಾನ್ಸನ್ ಅದ್ಭುತ ಬೌಲಿಂಗ್‌ನಿಂದ ತತ್ತರಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ದಿನದ ಆರಂಭದಲ್ಲಿ ಭಾರತದ ಆರಂಭಿಕ ಆಟಗಾರರು ಸ್ಥಿರತೆ ತೋರುತ್ತಾರೆಂಬ ನಿರೀಕ್ಷೆಯಿದ್ದರೂ, ಯಶಸ್ವಿ ಜೈಸ್ವಾಲ್ (58 ರನ್) ಮತ್ತು ಕೆಎಲ್ ರಾಹುಲ್ (22 ರನ್) ಮಾತ್ರ ಚೂರು ಭರವಸೆ ನೀಡಿದರು. ಮೊದಲ ವಿಕೆಟ್ 65 ರನ್‌ಗಳಿಗೆ ಬಿದ್ದ ನಂತರ, ಸಾಯಿ ಸುದರ್ಶನ್ (15 ರನ್) ಮತ್ತು ಧ್ರುವ್ ಜುರೆಲ್ (0 ರನ್) ಬೇಗನೇ ಔಟ್ ಆದರು.

ಇದನ್ನು ಓದಿದ್ದೀರಾ? ಮೀಸಲಾತಿ ಆಟಗಾರʼ ಎಂದು ಹಂಗಿಸಿದವರಿಗೆ ಗೆಲುವಿನ ಉತ್ತರ ಕೊಟ್ಟ ತೆಂಬಾ ಬವುಮಾ

ನಾಯಕ ರಿಷಭ್ ಪಂತ್ (7 ರನ್) ಮತ್ತು ರವೀಂದ್ರ ಜಡೇಜಾ (6 ರನ್) ಸಹ ಆರಂಭದಲ್ಲೇ ವಿಕೆಟ್ ಕಳೆದುಕೊಂಡರು. ನಿತೀಶ್ ಕುಮಾರ್ ರೆಡ್ಡಿ (10 ರನ್) ಮತ್ತು ವಾಷಿಂಗ್ಟನ್ ಸುಂದರ್ (48 ರನ್) ಸಣ್ಣ ಪ್ರತಿರೋಧ ತೋರಿದರೂ, ಮಾರ್ಕೋ ಯಾನ್ಸನ್‌ನ ವೇಗದ ಬೌಲಿಂಗ್ ಮುಂದೆ ನಿಲ್ಲಲಿಲ್ಲ.

ಯಾನ್ಸನ್ ಏಕಾಂಗಿಯಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಹೈರಾಣು ಮಾಡಿದರು. ಅವರು 19.5 ಓವರ್‌ಗಳಲ್ಲಿ ಕೇವಲ 48 ರನ್ ನೀಡಿ 6 ವಿಕೆಟ್ ಪಡೆದರು.

ಕೆಳಕ್ರಮಾಂಕದಲ್ಲಿ ಕುಲದೀಪ್ ಯಾದವ್ (19 ರನ್) ಮತ್ತು ಜಸ್ಪ್ರೀತ್ ಬುಮ್ರಾ (5 ರನ್) ರನ್ ಗಳಿಸಿ ಔಟ್ ಆದರು. ವಾಷಿಂಗ್ಟನ್ ಸುಂದರ್ ಅತೀ ಹೆಚ್ಚು 48 ರನ್ ಗಳಿಸಿ ತಂಡಕ್ಕೆ ಸಣ್ಣ ಗೌರವ ನೀಡಿದರು. ಯಾನ್ಸನ್ ಹೊರತುಪಡಿಸಿ ಸೈಮನ್ ಹಾರ್ಮರ್ 3 ವಿಕೆಟ್ ಮತ್ತು ಕೇಶವ ಮಹಾರಾಜ್ 1 ವಿಕೆಟ್ ಪಡೆದರು.

ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 288 ರನ್​ಗಳ ಹಿನ್ನಡೆ ಅನುಭವಿಸಿದ್ದರೂ ದಕ್ಷಿಣ ಆಫ್ರಿಕಾ ತಂಡ ಫಾಲೋಆನ್ ಹೇರದೇ ಅಚ್ಚರಿ ಮೂಡಿಸಿದೆ. ಎದುರಾಳಿ ತಂಡವು ಮೊದಲ ಇನಿಂಗ್ಸ್​ನಲ್ಲಿ 200 ರನ್​ಗಳ ಹಿನ್ನಡೆ ಅನುಭವಿಸಿದರೆ, ಆ ತಂಡವನ್ನು ಮೊದಲು ದ್ವಿತೀಯ ಇನಿಂಗ್ಸ್ ಆಡಲು ಆಹ್ವಾನಿಸಬಹುದು. ಆದರೆ ನಾಯಕ ತೆಂಬಾ ಬವುಮಾ ಫಾಲೋಆನ್ ಹೇರದೆ ಮತ್ತೆ ಬ್ಯಾಟಿಂಗ್ ನಡೆಸಲು ನಿರ್ಧರಿಸಿದ್ದಾರೆ.  ಅದರಂತೆ 288 ರನ್​ಗಳ ಮುನ್ನಡೆಯೊಂದಿಗೆ ಸೌತ್ ಆಫ್ರಿಕಾ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.

2ನೇ ಇನಿಂಗ್ಸ್‌ ಆರಂಭಿಸಿರುವ ದಕ್ಷಿಣ ಆಫ್ರಿಕಾ 4 ಓವರ್‌ಗಳಲ್ಲಿ 18 ರನ್‌ ಗಳಿಸಿದೆ. ಐಡೆನ್ ಮಾರ್ಕ್ರಾಮ್ ಹಾಗೂ ರಯಾನ್ ರಿಕೆಲ್ಟನ್ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದುಲೀಪ್ ಟ್ರೋಫಿ ಫೈನಲ್: 13 ವರ್ಷಗಳ ನಂತರ ಚಾಂಪಿಯನ್ ಪಟ್ಟ ಅಲಂಕರಿಸಿದ ಪೂರ್ವ ವಲಯ

ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ 'ದುಲೀಪ್ ಟ್ರೋಫಿ 2026'ರ ಫೈನಲ್...

ಮಹಿಳಾ ಟಿ20 ಇತಿಹಾಸದಲ್ಲೇ ಮೊದಲು: ಏಷ್ಯಾಕಪ್‌ನಲ್ಲಿ ಲಂಕಾ, ಪಾಕ್ ಸ್ಪಿನ್ನರ್‌ಗಳ ವಿಕ್ರಮ

ಮಹಿಳಾ ಟಿ20 ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟರ್‌ಗಳಿಗಿಂತ ಸ್ಪಿನ್ ಬೌಲರ್‌ಗಳು ಸಂಪೂರ್ಣ...

ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೆ ‘ಮ್ಯಾಚ್ ಫಿಕ್ಸಿಂಗ್’ ಕಳಂಕ: 7 ಮಂದಿ ತಂಡದಿಂದ ಔಟ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ನಡುವೆಯೇ ಪಾಕಿಸ್ತಾನ...

3 ಗಂಟೆಗಳ ರೋಚಕ ಹೋರಾಟ: ಯುಎಸ್ ಓಪನ್ ಮೊದಲ ಸುತ್ತಿನಲ್ಲೇ ವಿಲಿಯಮ್ಸ್ ಸಹೋದರಿಯರಿಗೆ ಸೋಲು

ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಸ್ಮಯಕಾರಿ ಪುನರಾಗಮನದ ನಿರೀಕ್ಷೆಯಲ್ಲಿದ್ದ ಲೆಜೆಂಡರಿ ಜೋಡಿ...