ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ ಸೇರಿ 26 ಮಂದಿಗೆ ಪ್ರತಿಷ್ಠಿತ ‘ಅರ್ಜುನ ಪ್ರಶಸ್ತಿ’

Date:

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು 2023ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಅದರಂತೆ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಸೇರಿದಂತೆ 26 ಕ್ರೀಡಾಪಟುಗಳು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ಮಿಂಚಿದ್ದ ಸ್ಟಾರ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಅವರಿಗೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿ ಒಲಿದಿದೆ. ಎಲ್ಲ ಕ್ರೀಡಾಪಟುಗಳಿಗೆ 2024 ರ ಜನವರಿ 9ರಂದು ನಡೆಯಲ್ಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಅರ್ಜುನ ಮತ್ತು ಖೇಲ್‌ರತ್ನ ಪ್ರಶಸ್ತಿಗೆ 19 ವಿವಿಧ ಕ್ರೀಡೆಗಳ 28 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಮೊಹಮ್ಮದ್ ಶಮಿ ಸೇರಿದಂತೆ ಒಟ್ಟು 26 ಆಟಗಾರರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದು ವಿವಿಧ ಕ್ರೀಡೆಗಳ ಪ್ರಮುಖ ಆಟಗಾರರನ್ನು ಒಳಗೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅರ್ಜುನ ಪ್ರಶಸ್ತಿಗೆ ಆಯ್ಕೆಯಾದವ ವಿವರ ಹೀಗಿದೆ:

 1. ಓಜಸ್ ಪ್ರವೀಣ್ ದೇವತಾಳೆ: ಬಿಲ್ಲುಗಾರಿಕೆ (ಆರ್ಚರಿ)
 2. ಅದಿತಿ ಗೋಪಿಚಂದ್ ಸ್ವಾಮಿ: ಬಿಲ್ಲುಗಾರಿಕೆ (ಆರ್ಚರಿ)
 3. ಶ್ರೀಶಂಕರ್ ಎಂ: ಅಥ್ಲೆಟಿಕ್ಸ್
 4. ಪಾರುಲ್ ಚೌಧರಿ: ಅಥ್ಲೆಟಿಕ್ಸ್
 5. ಮೊಹಮ್ಮದ್ ಹುಸಾಮುದ್ದೀನ್: ಬಾಕ್ಸಿಂಗ್
 6. ಆರ್ ವೈಶಾಲಿ: ಚೆಸ್
 7. ಮೊಹಮ್ಮದ್ ಶಮಿ: ಕ್ರಿಕೆಟ್
 8. ಅನುಷ್ ಅಗರ್ವಾಲ್: ಕುದುರೆ ಸವಾರಿ
 9. ದಿವ್ಯಾಕೃತಿ ಸಿಂಗ್: ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್
 10. ದೀಕ್ಷಾ ದಾಗರ್: ಗಾಲ್ಫ್
 11. ಕೃಷ್ಣ ಬಹದ್ದೂರ್ ಪಾಠಕ್: ಹಾಕಿ
 12. ಪುಖ್ರಾಂಬಂ ಸುಶೀಲಾ ಚಾನು: ಹಾಕಿ
 13. ಪವನ್ ಕುಮಾರ್: ಕಬಡ್ಡಿ
 14. ರಿತು ನೇಗಿ: ಕಬಡ್ಡಿ
 15. ನಸ್ರೀನ್: ಖೋ-ಖೋ
 16. ಪಿಂಕಿ: ಲಾನ್ ಬಾಲ್ಸ್
 17. ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್: ಶೂಟಿಂಗ್
 18. ಇಶಾ ಸಿಂಗ್: ಶೂಟಿಂಗ್
 19. ಹರಿಂದರ್ ಪಾಲ್ ಸಿಂಗ್ ಸಂಧು: ಸ್ಕ್ವಾಷ್
 20. ಅಹಿಕಾ ಮುಖರ್ಜಿ: ಟೇಬಲ್ ಟೆನಿಸ್
 21. ಸುನೀಲ್ ಕುಮಾರ್: ಕುಸ್ತಿ
 22. ಶ್ರೀಮತಿ ಆಂಟಿಮ್: ಕುಸ್ತಿ
 23. ನವೋರೆಮ್ ರೋಶಿಬಿನಾ ದೇವಿ: ವುಶು
 24. ಶೀತಲ್ ದೇವಿ: ಪ್ಯಾರಾ ಆರ್ಚರಿ
 25. ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ: ಅಂಧರ ಕ್ರಿಕೆಟ್
 26. ಪ್ರಾಚಿ ಯಾದವ್: ಪ್ಯಾರಾ ಕ್ಯಾನೋಯಿಂಗ್

ಖೇಲ್ ರತ್ನ ಪ್ರಶಸ್ತಿ

 1. ಚಿರಾಗ್ ಶೆಟ್ಟಿ – ಬ್ಯಾಡ್ಮಿಂಟನ್
 2. ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ – ಬ್ಯಾಡ್ಮಿಂಟನ್

ಅತ್ಯುತ್ತಮ ತರಬೇತುದಾರರಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಗೆ(ಸಾಮಾನ್ಯ ವಿಭಾಗ): ಲಲಿತ್ ಕುಮಾ‌ರ್ (ಕುಸ್ತಿ), ಆರ್ ಬಿ ರಮೇಶ್ (ಚೆಸ್), ಮಹಾವೀರ್ ಪ್ರಸಾದ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್‌), ಶಿವೇಂದ್ರ ಸಿಂಗ್ (ಹಾಕಿ), ಗಣೇಶ್ ಪ್ರಭಾಕರ್ ದೇವುರುಷ್ಕರ್ (ಮಲ್ಲಕಂಬ).

ದ್ರೋಣಾಚಾರ್ಯ ಪ್ರಶಸ್ತಿಯ ಜೀವಮಾನ ಸಾಧನೆ ವಿಭಾಗದಲ್ಲಿ ಜಸ್ಕಿರತ್ ಸಿಂಗ್ ಗ್ರೆವಾಲ್ (ಗಾಲ್ಫ್), ಇ ಭಾಸ್ಕರನ್(ಕಬಡ್ಡಿ), ಜಯಂತ ಕುಮಾ‌ರ್ ಪುಶಿಲಾಲ್ (ಟೇಬಲ್ ಟೆನಿಸ್).

ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಗೆ ಮಂಜೂಷಾ ಕನ್ವರ್ (ಬ್ಯಾಡ್ಮಿಂಟನ್), ವಿನೀತ್ ಕುಮಾರ್ ಶರ್ಮಾ (ಹಾಕಿ), ಕವಿತಾ ಸೆಲ್ವರಾಜ್ (ಕಬಡ್ಡಿ).

ಮೌಲಾನಾ ಅಬುಲ್ ಕಲಾಂ ಆಜಾದ್ (MAKA) ಟ್ರೋಫಿ 2023:

ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ

ಲವಿ ಪ್ರೊಫೆಷನಲ್ ಯೂನಿವರ್ಸಿಟಿ, ಪಂಜಾಬ್ (1ನೇ ರನ್ನರ್-ಅಪ್)

ಕುರುಕ್ಷೇತ್ರ ವಿಶ್ವವಿದ್ಯಾಲಯ, ಕುರುಕ್ಷೇತ್ರ (2ನೇ ರನ್ನರ್ ಅಪ್)

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ 2024 | ಪಂದ್ಯಗಳ ವೇಳಾಪಟ್ಟಿ ಪ್ರಕಟ: ಚೆನ್ನೈ-ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ

ಹಲವು ವಿವಾದಗಳ ನಡುವೆಯೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ ಎಂದೇ ಪರಿಗಣಿತವಾಗಿರುವ...

ಹಿಮ್ಮಡಿ ಶಸ್ತ್ರಚಿಕಿತ್ಸೆ: ಐಪಿಎಲ್ ಟೂರ್ನಿಯಿಂದ ಶಮಿ ಹೊರಗೆ

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಂ...

ಯಶಸ್ವಿ ಜೈಸ್ವಾಲ್ ಎರಡು ದ್ವಿಶಕ ಸಾಧನೆ: ಐಸಿಸಿ ಟಾಪ್ 20 ಟೆಸ್ಟ್ ಶ್ರೇಯಾಂಕದಲ್ಲಿ ಜೈಸ್ವಾಲ್‌ಗೆ ಸ್ಥಾನ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್ ಸರಣಿಯಲ್ಲಿ ಸತತ ಎರಡು ದ್ವಿಶತಕ...

ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ಗಂಡು ಮಗು: ಟ್ವೀಟ್ ಮೂಲಕ ಖುಷಿ ಹಂಚಿಕೊಂಡ ಸ್ಟಾರ್ ಆಟಗಾರ

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಟೀಮ್...