IND vs ENG 4th Test | ಭಾರತದ ಭರವಸೆಯ ಆರಂಭ; ಯಶಸ್ವಿ, ಸಾಯಿ ಅರ್ಧಶತಕ

Date:

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಭರವಸೆಯ ಆರಂಭ ಕಂಡಿದ್ದು, ಯಶಸ್ವಿ ಜೈಸ್ವಾಲ್ (58) ಮತ್ತು ಸಾಯಿ ಸುದರ್ಶನ್ (61) ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 4 ವಿಕೆಟ್‌ಗೆ 264 ರನ್‌ ಗಳಿಸಿದೆ.

- Advertisement -

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಭಾರತದ ಆರಂಭಿಕ ಆಟಗಾರರು ಈ ಸವಾಲನ್ನು ಉತ್ತಮದಿಂದ ಎದುರಿಸಿದರು. ಆರಂಭಿಕರಾದ ಕೆಎಲ್ ರಾಹುಲ್ (46) ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 94 ರನ್‌ಗಳ ಜೊತೆಯಾಟ ನೀಡಿತು. ಇಂಗ್ಲೆಂಡ್ ಬೌಲರ್‌ಗಳ ಆರಂಭಿಕ ದಾಳಿಯನ್ನು ಯಶಸ್ವವಾಗಿ ನಿಭಾಯಿಸಿದ ಈ ಜೋಡಿ, ಭೋಜನ ವಿರಾಮದ ವೇಳೆಗೆ ವಿಕೆಟ್‌ ನಷ್ಟವಿಲ್ಲದೆ 78 ರನ್‌ ಸೇರಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ...

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಕ್ಷೇತ್ರದ...

ಭೋಜನ ವಿರಾಮದ ಬಳಿಕ ಕೆಎಲ್ ರಾಹುಲ್, ಕ್ರಿಸ್ ವೋಕ್ಸ್ ಎಸೆತದಲ್ಲಿ 46 ರನ್‌ಗೆ ಔಟಾದರು. ಆದರೆ, ಯಶಸ್ವಿ ಜೈಸ್ವಾಲ್ ತಮ್ಮ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿ 58 ರನ್‌ ಗಳಿಸಿದರು. ಆದರೆ, ಲಿಯಾಮ್ ಡಾಸನ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಶುಭಮನ್ ಗಿಲ್ (12) ದೊಡ್ಡ ರನ್‌ ಗಳಿಸಲು ವಿಫಲರಾದರು.

ಇದನ್ನು ಓದಿದ್ದೀರಾ? ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ಜಯಗಳಿಸಿದ್ದು ಹೇಗೆ? ಗೆಲುವಿಗೆ ತಂತ್ರ ರೂಪಿಸಿದ್ದು ಹೇಗಿತ್ತು?

ನಾಲ್ಕನೇ ವಿಕೆಟ್‌ಗೆ ಸಾಯಿ ಸುದರ್ಶನ್ ಮತ್ತು ರಿಷಭ್ ಪಂತ್ (ಅಜೇಯ 37) ಜೋಡಿ 112 ಎಸೆತಗಳಲ್ಲಿ 72 ರನ್‌ಗಳ ಉತ್ತಮ ಜೊತೆಯಾಟ ನೀಡಿತು. ಆದರೆ, ಕ್ರಿಸ್ ವೋಕ್ಸ್‌ನ ಯಾರ್ಕರ್ ಎಸೆತಕ್ಕೆ ರಿಷಭ್ ಪಂತ್ ಗಾಯಗೊಂಡು ಆಂಬುಲೆನ್ಸ್‌ನಲ್ಲಿ ಮೈದಾನದಿಂದ ಹೊರಕ್ಕೆ ಹೋಗಬೇಕಾಯಿತು. ಸಾಯಿ ಸುದರ್ಶನ್ ತಮ್ಮ ಎರಡನೇ ಟೆಸ್ಟ್‌ನಲ್ಲಿ 151 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 61 ರನ್‌ ಗಳಿಸಿ ಔಟಾದರು.

ದಿನದಾಟದ ಅಂತ್ಯಕ್ಕೆ ರವೀಂದ್ರ ಜಡೇಜಾ (ಅಜೇಯ 19) ಮತ್ತು ಶಾರ್ದೂಲ್ ಠಾಕೂರ್ (ಅಜೇಯ 19) ಕ್ರೀಸ್‌ನಲ್ಲಿದ್ದಾರೆ. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 2 ವಿಕೆಟ್‌, ಲಿಯಾಮ್ ಡಾಸನ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್‌ ಪಡೆದರು.

ಸ್ಕೋರ್ ವಿವರ

  • ಭಾರತ (ಮೊದಲ ಇನಿಂಗ್ಸ್): 264/4 (ಮೊದಲ ದಿನದ ಅಂತ್ಯ)
  • ಯಶಸ್ವಿ ಜೈಸ್ವಾಲ್: 58
  • ಸಾಯಿ ಸುದರ್ಶನ್: 61
  • ಕೆಎಲ್ ರಾಹುಲ್: 46
  • ರಿಷಭ್ ಪಂತ್: 37* (ಗಾಯದಿಂದ ಹೊರಕ್ಕೆ)
  • ರವೀಂದ್ರ ಜಡೇಜಾ: 19 ಅಜೇಯ
  • ಶಾರ್ದೂಲ್ ಠಾಕೂರ್: 19 ಅಜೇಯ
  • ಇಂಗ್ಲೆಂಡ್ : ಬೆನ್ ಸ್ಟೋಕ್ಸ್ (2 ವಿಕೆಟ್), ಲಿಯಾಮ್ ಡಾಸನ್ (1 ವಿಕೆಟ್), ಕ್ರಿಸ್ ವೋಕ್ಸ್ (1 ವಿಕೆಟ್)
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3 ಗಂಟೆಗಳ ರೋಚಕ ಹೋರಾಟ: ಯುಎಸ್ ಓಪನ್ ಮೊದಲ ಸುತ್ತಿನಲ್ಲೇ ವಿಲಿಯಮ್ಸ್ ಸಹೋದರಿಯರಿಗೆ ಸೋಲು

ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಸ್ಮಯಕಾರಿ ಪುನರಾಗಮನದ ನಿರೀಕ್ಷೆಯಲ್ಲಿದ್ದ ಲೆಜೆಂಡರಿ ಜೋಡಿ...

75ನೇ ವರ್ಷದ ಬಾಂಧವ್ಯ: ಭಾರತ-ಜಪಾನ್ ನಡುವೆ ಚೊಚ್ಚಲ ಟಿ20 ಕ್ರಿಕೆಟ್

ಭಾರತ ಹಾಗೂ ಜಪಾನ್ ನಡುವಿನ 75ನೇ ವರ್ಷದ ರಾಜತಾಂತ್ರಿಕ ಬಾಂಧವ್ಯದ ಸಂಭ್ರಮಾಚರಣೆಯ...

ಏಷ್ಯನ್ ಗೇಮ್ಸ್ | ಟೀಂ ಇಂಡಿಯಾಗೆ ‘ವೆರಿ ವೆರಿ ಸ್ಪೆಷಲ್’; ವಿವಿಎಸ್‌ ಲಕ್ಷ್ಮಣ್ ಹೆಡ್‌ ಕೋಚ್!

ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್ ಹಾಗೂ...

ನೂರಾರು ವಿವಾದ, ಅದಕ್ಕೂ ಮೀರಿದ ಮನುಷ್ಯತ್ವ: ಮೆಸ್ಸಿಯ 21 ವರ್ಷದ ಪಯಣದತ್ತ ಒಂದು ಹಿನ್ನೋಟ

ಲಿಯೋನೆಲ್ ಮೆಸ್ಸಿ ಎಂಬ ದಂತಕಥೆಯನ್ನು ನಾವು ಅತ್ಯಂತ ಸಮತೋಲಿತ ದೃಷ್ಟಿಕೋನದಿಂದ ನೋಡಬೇಕಾಗಿದೆ....