ಭಾರತ – ವೆಸ್ಟ್‌ ಇಂಡೀಸ್‌ ಐದನೇ ಟಿ20 | ನಿರ್ಣಾಯಕ ಪಂದ್ಯದಲ್ಲಿ ಯಾರ ಮುಡಿಗೆ ಟ್ರೋಫಿ?

Date:

ಭಾರತ – ವೆಸ್ಟ್ ಇಂಡೀಸ್‌ ವಿರುದ್ಧದ ಟಿ20 ಸರಣಿಯ ನಿರ್ಣಾಯಕ ಐದನೇ ಪಂದ್ಯ ಅಮೆರಿಕದ ಲೌಡರ್‌ಹಿಲ್‌ ಸೆಂಟ್ರಲ್ ಬ್ರೊವಾರ್ಡ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳಲ್ಲಿ ಭಾರತ ತಂಡವೇ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದೆ. 5 ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 2-2 ಸಮಬಲ ಸಾಧಿಸಿದ್ದು, ನಿರ್ಣಾಯಕ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ.

ಸರಣಿಯ ಮೊದಲ ಮತ್ತು ಎರಡನೇ ಟಿ20 ಪಂದ್ಯದಲ್ಲಿ ಮೇಲುಗೈ ಸಾಧಿಸಿದ ವೆಸ್ಟ್‌ ಇಂಡೀಸ್‌ ಕ್ರಮವಾಗಿ 4 ರನ್ ಮತ್ತು 2 ವಿಕೆಟ್‌ಗಳ ರೋಚಕ ಜಯ ದಾಖಲಿಸಿತ್ತು. ಸೋಲಿಗೆ ದಿಟ್ಟ ಉತ್ತರವಾಗಿ ಭಾರತ ತಂಡ 3 ಮತ್ತು 4ನೇ ಪಂದ್ಯಗಳಲ್ಲಿ 7 ಮತ್ತು 9 ವಿಕೆಟ್‌ಗಳ ಜಯ ಪಡೆದು 2-2 ಅಂತರದ ಸಮಬಲ ತಂದುಕೊಂಡಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಟಿ20 | ಜೈಸ್ವಾಲ್ – ಶುಭ್‌ಮನ್ ಜೋಡಿ ಭರ್ಜರಿ ಬ್ಯಾಟಿಂಗ್ : ವಿಂಡೀಸ್ ವಿರುದ್ಧ ಅಮೋಘ ಗೆಲುವು

ಉತ್ತಮ ನೆಲೆ ಕಂಡುಕೊಂಡಿರುವ ಜೈಸ್ವಾಲ್ – ಶುಭಮನ್‌ ಜೋಡಿ  

ಕಳೆದ ಎರಡು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಇಂದು ಕೂಡ ಅದೇ ಉತ್ಸಾಹದಲ್ಲಿ ಕಣಕ್ಕಿಳಿಯಲಿದೆ. ಹಿಂದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್‌ ಗಿಲ್ ಜವಾಬ್ದಾರಿಯುತ ಆಟವಾಡಿದರು. 165 ರನ್‌ಗಳ ಜೊತೆಯಾಟದ ಮೂಲಕ ತಂಡವನ್ನು ಸುಲಭವಾಗಿ ಗೆಲ್ಲಿಸಿದ್ದರು.

ವಿಂಡೀಸ್ ನೀಡಿದ್ದ 179 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡಿ ಕೆರಿಬಿಯನ್ ಬೌಲರ್‌ಗಳಿಗೆ ಬೆವರಿಳಿಸಿದ್ದರು.

ಯಶಸ್ವಿ ಜೈಸ್ವಾಲ್ 51 ಎಸೆತಗಳಿಂದ 11 ಬೌಂಡರಿ ಹಾಗೂ 3 ಸಿಕ್ಸರ್ ಸೇರಿ 84 ರನ್ ಗಳಿಸಿ ಔಟಾಗದೆ ಉಳಿದರು. ಗಿಲ್ 47 ಎಸೆತಗಳಿಂದ 3 ಬೌಂಡರಿ ಮತ್ತು 5 ಅಮೋಘ ಸಿಕ್ಸರ್‌ಗಳೊಂದಿಗೆ 77 ರನ್ ಗಳಿಸಿ ರೊಮಾರಿಯೊ ಶೆಫರ್ಡ್ ಬೌಲಿಂಗ್‌ನಲ್ಲಿ ವಿಕೆಟ್ 16ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದರು. ಅಂತಿಮವಾಗಿ 17 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 179 ರನ್‌ ಗಳಿಸಿ ಸರಣಿಯನ್ನು 2-2 ಅಂತರದಲ್ಲಿ ಸಮ ಬಲ ಸಾಧಿಸಲು ನೆರವಾದರು.

ಇವತ್ತಿನ ಸರಣಿ ನಿರ್ಣಾಯಕದ ಪಂದ್ಯದಲ್ಲೂ ನಿನ್ನೆ (ಆಗಸ್ಟ್ 12) ಆಡಿದ ತಂಡವನ್ನೇ ಆಡಿಸುವ ಸಾಧ್ಯತೆ ಇದ್ದು, ಗಿಲ್ ಮತ್ತು ಜೈಸ್ವಾಲ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಲಿದ್ದಾರೆ.

ಇತ್ತ ಮೊದಲೆರಡು ಸರಣಿಗಳನ್ನು ಕಳೆದುಕೊಂಡು ಮುಜುಗರಕ್ಕೊಳಗಾಗಿರುವ ವಿಂಡೀಸ್ ಪಡೆ ತನ್ನ ಟಿ20 ಸರಣಿಯನ್ನಾದರೂ ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿದೆ. ಹೀಗಾಗಿ ಅಂತಿಮ ಟಿ20 ಪಂದ್ಯ ಮತ್ತಷ್ಟು ರೋಚಕತೆ ಪಡೆದಿದೆ.

ಪಂದ್ಯವನ್ನಾಡುವ ಉಭಯ ತಂಡಗಳ ಸಂಭಾವ್ಯ ಬಳಗ

ಭಾರತ

ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್‌), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪ ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಮುಖೇಶ್ ಕುಮಾರ್, ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್, ಅವೇಶ್ ಖಾನ್.

ವೆಸ್ಟ್‌ ಇಂಡೀಸ್

ರೋವ್‌ಮನ್ ಪೊವೆಲ್ (ನಾಯಕ), ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್‌ಕೀಪರ್‌), ಶಿಮ್ರಾನ್ ಹೆಟ್ಮಾಯೆರ್‌, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಅಲ್ಝಾರಿ ಜೋಸೆಫ್, ಒಬೆಡ್ ಮೆಕಾಯ್, ಶೇಯ್ ಹೋಪ್, ರಾಸ್ಟನ್ ಚೇಸ್, ಒಶೇನ್ ಥಾಮಸ್, ಒಡಿಯನ್ ಸ್ಮಿತ್.

ಪಂದ್ಯ ಆರಂಭ: ಸಂಜೆ 8ಕ್ಕೆ

ನೇರ ಪ್ರಸಾರ: ಜಿಯೋ ಸಿನಿಮಾ, ಡಿಡಿ ಸ್ಪೋರ್ಟ್ಸ್‌, ಫ್ಯಾನ್‌ಕೋಡ್‌ ಆ್ಯಪ್‌

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೌತಮ್ ಗಂಭೀರ್ ಬೇಡಿಕೆಗಳಿಗೆ ಬಿಸಿಸಿಐ ಒಪ್ಪಿಗೆ: ಟೀಂ ಇಂಡಿಯಾ ಕೋಚ್ ಸ್ಥಾನ ಬಹುತೇಕ ಖಚಿತ

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೆಕೆಆರ್‌ನ ಮುಖ್ಯ ಕೋಚ್‌ ಆಗಿ ಕಾರ್ಯ...

NOC ಬಳಿಕವಷ್ಟೇ ಲೀಗ್‌ಗಳಲ್ಲಿ ಅವಕಾಶ: T20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದ ಬೆನ್ನಲ್ಲೇ ಹೊಸ ನಿಯಮ

ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ...

ಟಿ20 ವಿಶ್ವಕಪ್ | ನೇಪಾಳಕ್ಕೆ ಆಘಾತ; 1 ರನ್‌ನಿಂದ ಸೌತ್ ಆಫ್ರಿಕಾ ವಿರುದ್ಧ ವಿರೋಚಿತ ಸೋಲು

ಏಡೆನ್ ಮಾರ್ಕರಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು 115 ರನ್‌ಗಳಿಗೆ ಕಟ್ಟಿ ಹಾಕಿದ್ದ...

ಟಿ20 ವಿಶ್ವಕಪ್ | ಐರ್ಲ್ಯಾಂಡ್-ಯುಎಸ್‌ಎ ಪಂದ್ಯ ಮಳೆಗಾಹುತಿ; ಟೂರ್ನಿಯಿಂದಲೇ ಔಟಾದ ಪಾಕಿಸ್ತಾನ!

ಟಿ20 ವಿಶ್ವಕಪ್ 2024ರ ಲೀಗ್ ಹಂತದಲ್ಲೇ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್...