ಏಷ್ಯಾ ಕಪ್ | ಕುಲ್‌ದೀಪ್‌ ಮಾರಕ ದಾಳಿ; ಪಾಕ್‌ ವಿರುದ್ಧ ಭಾರತಕ್ಕೆ 228 ರನ್‌ಗಳ ಭರ್ಜರಿ ಜಯ

Date:

ಸ್ಪಿನ್ನರ್‌ ಕುಲ್‌ದೀಪ್ ಯಾದವ್‌ ಮಾರಕ ದಾಳಿಯ ನೆರವಿನಿಂದ ಏಷ್ಯಾ ಕಪ್ ಸೂಪರ್ 4ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ 228 ರನ್‌ಗಳ ದಾಖಲೆ ಅಂತರದ ಜಯ ಸಾಧಿಸಿದೆ.

ಕೊಲೊಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 357 ರನ್‌ಗಳ ಭಾರಿ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 32 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 128 ರನ್‌ ಮಾತ್ರ ಗಳಿಸಿತು. ಗಾಯದಿಂದ ಕೊನೆಯ ಇಬ್ಬರು ಆಟಗಾರರಾದ ನಸೀಮ್‌ ಶಾ ಹಾಗೂ ಹ್ಯಾರಿಸ್ ರಾವುಫ್ ಆಟವಾಡದ ಕಾರಣ ಟೀಂ ಇಂಡಿಯಾ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

8 ಓವರ್‌ಗಳಲ್ಲಿ 25 ರನ್‌ ನೀಡಿ ಪಾಕಿಸ್ತಾನದ ಪ್ರಮುಖ 5 ವಿಕೆಟ್ ಕಬಳಿಸಿದ ಕುಲದೀಪ್‌ ಯಾದವ್ ಗೆಲುವಿನ ರೂವಾರಿಯಾದರು. ಉಳಿದಂತೆ ಹಾರ್ದಿಕ್‌ ಪಾಂಡ್ಯಾ, ಬೂಮ್ರಾ ಹಾಗೂ ಶಾರ್ದೂಲ್‌ ಠಾಕೂರ್‌ ತಲಾ ಒಂದು ವಿಕೆಟ್ ಕಿತ್ತರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಫಾಕರ್‌ ಜಮಾನ್ 27, ಆಘಾ ಸಲ್ಮಾನ್ ಹಾಗೂ ಇಫ್ತಿಕರ್ ಅಹಮದ್‌ ತಲಾ 23 ಗಳಿಸಿದ್ದನ್ನು ಬಿಟ್ಟರೆ ಉಳಿದ ಪಾಕಿಸ್ತಾನದ ಆಟಗಾರರು 20ರ ಗಡಿ ದಾಟಲಿಲ್ಲ.

ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಆಕರ್ಷಕ ಶತಕದಿಂದ ಭಾರತ ಬೃಹತ್ ಮೊತ್ತ

ಇದಕ್ಕೂ ಮೊದಲು ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ಗೆ ಇಳಿದು ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಅವರ ತಲಾ ಶತಕಗಳ ನೆರವಿನಿಂದ ಟೀಂ ಇಂಡಿಯಾ ಏಷ್ಯಾ ಕಪ್ ಸೂಪರ್‌ 4 ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಗೆಲುವಿಗೆ 357 ರನ್‌ಗಳ ಬೃಹತ್ ಗುರಿ ನೀಡಿತ್ತು.

ಕೆ ಎಲ್ ರಾಹುಲ್ 106 ಎಸೆತಗಳಿಂದ 12 ಬೌಂಡರಿ ಹಾಗೂ 2 ಸಿಕ್ಸರ್ ಸೇರಿ ಅಜೇಯ 111 ರನ್ ಗಳಿಸಿದರು.

ಕಿಂಗ್ ಕೊಹ್ಲಿ ಪಾಕ್ ವೇಗಿ ಶಾಹೀನ್ ಅಫ್ರಿದಿ ಅವರ 10ನೇ ಓವರ್‌ನ ಮೂರನೇ ಎಸೆತದಲ್ಲಿ ಸಿಂಗಲ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ನಲ್ಲಿ 47ನೇ ಶತಕ ಬಾರಿಸಿದರು. ವಿರಾಟ್ 94 ಎಸೆತಗಳಿಂದ ಅಜೇಯ 122 ರನ್ ಗಳಿಸಿದರು. ಇದರಲ್ಲಿ 9 ಬೌಂಡರಿ 3 ಸಿಕ್ಸರ್‌ಗಳಿದ್ದವು.

ಈ ಸುದ್ದಿ ಓದಿದ್ದೀರಾ? ಬಿಸಿಸಿಐ ಹಾಳು ಮಾಡಲು ಭ್ರಷ್ಟ ಜಯ್‌ ಶಾ ಸಾಕು ಎಂದಿದ್ದ ಮಾಜಿ ಕ್ರಿಕೆಟಿಗ ವೆಂಕಿ: ಕೆಲವೇ ನಿಮಿಷದಲ್ಲಿ ಪೋಸ್ಟ್‌ ಡಿಲೀಟ್!

ಭಾರತ ತಂಡದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅದ್ಭುತ ಆರಂಭವನ್ನು ಒದಗಿಸಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 121 ರನ್ ಜೊತೆಯಾಟ ನೀಡಿತ್ತು.

49 ಎಸೆತಗಳಿಂದ 6 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿ 56 ರನ್ ಗಳಿಸಿದ್ದ ರೋಹಿತ್ ಶರ್ಮಾ, ಶಾದಾಬ್ ಖಾನ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರೆ, ವೇಗಿ ಶಾಹೀದ್ ಅಫ್ರಿದಿ ಎಸೆತದಲ್ಲಿ ಗಿಲ್ 52 ಎಸೆತಗಳಿಂದ 10 ಬೌಂಡರಿ ಸೇರಿ 58 ರನ್ ಗಳಿಸಿದ್ದಾಗ ಸುಲಭ ಕ್ಯಾಚ್ ನೀಡಿ ಮೈದಾನ ತೊರೆದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ ಕೊಹ್ಲಿ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅವರು ಉತ್ತಮ ಜೊತೆಯಾಟವನ್ನು ಆಡುವ ಮೂಲಕ ಟೀಂ ಇಂಡಿಯಾ 300ರ ಗಡಿ ದಾಟಲು ಉಪಯುಕ್ತ ಕಾಣಿಕೆ ನೀಡಿದರು.

ಅಜೇಯ 122 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಏಷ್ಯಾ ಕಪ್ ಸೂಪರ್‌ 4ನ ಭಾರತದ 2ನೇ ಪಂದ್ಯ ಸೆ.12 ರಂದು ಶ್ರೀಲಂಕಾದ ವಿರುದ್ಧ ಆಡಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ ಫೈನಲ್ | ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಾರಕ ಬೌಲಿಂಗ್‌ಗೆ ಮಕಾಡೆ ಮಲಗಿದ ಹೈದರಾಬಾದ್!

ಐಪಿಎಲ್‌ನ ಲೀಗ್ ಹಂತದಲ್ಲಿ ಭರ್ಜರಿ ಸ್ಫೋಟಕ ಬ್ಯಾಟಿಂಗ್‌ನ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಪ್ಯಾಟ್...

ಟಿ20 ವಿಶ್ವಕಪ್ | ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಅಮೆರಿಕಕ್ಕೆ ಹಾರಿದ ಟೀಮ್ ಇಂಡಿಯಾದ ಮೊದಲ ಬ್ಯಾಚ್

ಜೂನ್ 2ರಿಂದ ಆರಂಭವಾಗಲಿರುವ 9ನೇ ಆವೃತ್ತಿಯ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ...

ಅವಕಾಶ ಕೈಚೆಲ್ಲಿದ ರಾಜಸ್ಥಾನ ಸ್ಪಿನ್ ಮೋಡಿಗೆ ‘ಬಲಿ’ : ಫೈನಲ್‌ಗೆ ಲಗ್ಗೆ ಇಟ್ಟ ಸನ್‌ರೈಸರ್ಸ್‌ ಹೈದರಾಬಾದ್

ಈ ಬಾರಿಯ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಬಳಗ...