ಐಪಿಎಲ್‌ 2023 | ಹೀಗಿದೆ ಪ್ಲೇ ಆಫ್‌ ಲೆಕ್ಕಾಚಾರ

Date:

ಐಪಿಎಲ್‌ 16ನೇ ಆವೃತ್ತಿ ಕುತೂಹಲಕಾರಿ ಘಟ್ಟ ತಲುಪಿದೆ. ಮಾರ್ಚ್‌ 31ರಂದು ಆರಂಭವಾದ ಟೂರ್ನಿಯ ಲೀಗ್‌ ಹಂತದಲ್ಲಿ ನಿಗದಿಯಾಗಿರುವ 70 ಪಂದ್ಯಗಳ ಪೈಕಿ, ಈಗಾಗಲೇ 55 ಪಂದ್ಯಗಳು ಮುಕ್ತಾಯಕಂಡಿದೆ.

ಅದಾಗಿಯೂ ಸಹ ಯಾವುದೇ ತಂಡ ಪ್ಲೇ ಆಫ್‌ ಹಂತವನ್ನು ಖಚಿತಪಡಿಸಿಕೊಂಡಿಲ್ಲ ಮತ್ತು ಯಾವುದೇ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿಲ್ಲ ಎಂಬುದು ವಿಶೇಷ.

ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಹೊರತುಪಡಿಸಿ ಉಳಿದ ಎಲ್ಲ 8 ತಂಡಗಳು ಈಗಾಗಲೇ ಲೀಗ್‌ ಹಂತದಲ್ಲಿ 11 ಪಂದ್ಯಗಳನ್ನಾಡಿವೆ. ಚೆನ್ನೈ 12 ಮತ್ತು ಹೈದರಾಬಾದ್‌ 10 ಪಂದ್ಯಗಳನ್ನಾಡಿದೆ.

ಚೆನ್ನೈ ಎರಡು, ಹೈದರಾಬಾದ್‌ ಮೂರು ಹಾಗೂ ಉಳಿದ 8 ತಂಡಗಳು ಲೀಗ್‌ ಹಂತದಲ್ಲಿ ತಲಾ ಮೂರು ಪಂದ್ಯಗಳನ್ನಾಡಬೇಕಿದೆ.

ಗುಜರಾತ್‌ ಟೈಟನ್ಸ್‌ ಮತ್ತು ಸಿಎಸ್‌ಕೆ ತಂಡಗಳು ಪ್ಲೇ ಆಫ್‌ ಹಂತಕ್ಕೇರುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಉಳಿದ 2 ಸ್ಥಾನಗಳಿಗಾಗಿ 8 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.  

ಗುಜರಾತ್‌ ಟೈಟನ್ಸ್‌

11 ಪಂದ್ಯಗಳನ್ನಾಡಿರುವ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಉಳಿದ ಮೂರು ಪಂದ್ಯಗಳಲ್ಲಿ  ಎರಡು ಪಂದ್ಯಗಳನು ಗೆದ್ದರೆ ಹಾರ್ದಿಕ್‌ ಪಡೆ  ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲಿದೆ. 

ಮುಂದಿನ 3 ಪಂದ್ಯಗಳು

ಚೆನ್ನೈ ಸೂಪರ್‌ ಕಿಂಗ್ಸ್

12 ಪಂದ್ಯಗಳನ್ನಾಡಿರುವ ಧೋನಿ ಸಾರಥ್ಯದ ಚೆನ್ನೈ‌, ಅಂಕಪಟ್ಟಿಯಲ್ಲಿ 15 ಅಂಕಗಳನ್ನು ಹೊಂದಿದೆ. ಉಳಿದ 2 ಪಂದ್ಯಗಳನ್ನು ಗೆದ್ದರೆ, ಸಿಎಸ್‌ಕೆ  ಅಂಕ 19ಕ್ಕೇರಲಿದೆ. ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಚೆನ್ನೈ ಪಡೆಗೆ ಸಾಧ್ಯವಾಗಲಿದೆ.

ಮುಂದಿನ 3 ಪಂದ್ಯಗಳು

  • VS ಕೋಲ್ಕತ್ತಾ ನೈಟ್‌ ರೈಡರ್ಸ್‌ (ಮೇ 14, ಚೆಪಾಕ್ ಮೈದಾನ)
  • VS ಡೆಲ್ಲಿ ಕ್ಯಾಪಿಟಲ್ಸ್ (ಮೇ 201, ಡೆಲ್ಲಿ).

ಮುಂಬೈ ಇಂಡಿಯನ್ಸ್‌

11 ಪಂದ್ಯಗಳನ್ನಾಡಿರುವ ಮುಂಬೈ ಕೈಯಲ್ಲಿ 12 ಅಂಕಗಳಿವೆ. ಮುಂದಿನ ಮೂರೂ ಪಂದ್ಯಗಳನ್ನು ಗೆದ್ದರೆ 18 ಅಂಕಗಳನ್ನು ಹೊಂದಲಿದೆ. ಆದರೆ ಸದ್ಯ ರೋಹಿತ್‌ ಪಡೆ ಮೈನಸ್‌ ರನ್‌ ರೇಟ್‌ ಹೊಂದಿದೆ.

ಮುಂದಿನ 3 ಪಂದ್ಯಗಳು

  • VS ಗುಜರಾತ್‌ ಟೈಟನ್ಸ್‌ (ಮೇ 12, ವಾಂಖೆಡೆ ಮೈದಾನ)
  • VS ಲಕ್ನೋ ಸೂಪರ್‌ ಜೈಂಟ್ಸ್ (ಮೇ 16, ಲಕ್ನೋ)
  • VS‌ ಸನ್‌ರೈಸರ್ಸ್‌ ಹೈದರಾಬಾದ್‌,  (ಮೇ 21, ವಾಂಖೆಡೆ ಮೈದಾನ)

ಈ ಸುದ್ದಿ ಓದಿದ್ದೀರಾ?: ಏಷ್ಯಾ ಕಪ್‌ 2023 | ಪಾಕಿಸ್ತಾನಕ್ಕೆ ಹಿನ್ನಡೆ, ಭಾರತದ ಬೆಂಬಲಕ್ಕೆ ನಿಂತ ಶ್ರೀಲಂಕಾ, ಬಾಂಗ್ಲಾದೇಶ

ಲಕ್ನೋ ಸೂಪರ್‌ ಜೈಂಟ್ಸ್

11 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್‌ ಜೈಂಟ್ಸ್ ತಂಡ 11 ಅಂಕಗಳನ್ನು ಹೊಂದಿದೆ. ಮುಂದಿನ ಮೂರೂ ಪಂದ್ಯಗಳನ್ನು ಗೆದ್ದರೆ 19 ಅಂಕಗಳನ್ನು ಹೊಂದಲಿದೆ. ಆ ಮೂಲಕ ಪ್ಲೇ ಆಫ್‌ ಹಾದಿ ಸುಗಮವಾಗಲಿದೆ.

ಮುಂದಿನ 3 ಪಂದ್ಯಗಳು

  • VS ಸನ್‌ರೈಸರ್ಸ್‌ ಹೈದರಾಬಾದ್‌ (ಮೇ 13, ಹೈದರಾಬಾದ್‌)
  • VS ಮುಂಬೈ ಇಂಡಿಯನ್ಸ್‌  (ಮೇ 16, ಲಕ್ನೊ)
  • VS‌ ಕೆಕೆಆರ್‌, (ಮೇ 21, ಈಡೆನ್‌ ಗಾರ್ಡನ್ ಮೈದಾನ)

ಉಳಿದಂತೆ ರಾಜಸ್ಥಾನ ರಾಯಲ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌, ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ 11 ಪಂದ್ಯಗಳನ್ನು ಆಡಿದ್ದು, ತಲಾ 10 ಅಂಕಗಳನ್ನು ಹೊಂದಿವೆ. ರಾಜಸ್ಥಾನ ಹೊರತುಪಡಿಸಿ ಉಳಿದ ಮೂರೂ ತಂಡಗಳು ಮೈನಸ್‌ ರನ್‌ರೇಟ್‌ ಹೊಂದಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು 8 ಅಂಕಗಳನ್ನು ಹೊಂದಿದ್ದು, ಉಳಿದ ಮೂರೂ ಪಂದ್ಯಗಳನ್ನು ಗೆದ್ದರೂ ಸಹ, ಉಳಿದ ತಂಡಗಳ ಫಲಿತಾಂಶದ ಮೇಲೆ ಡೆಲ್ಲಿ-ಹೈದರಾಬಾದ್‌ ಪ್ಲೇ ಆಫ್‌ ಭವಿಚ್ಯ ನಿರ್ಧಾರವಾಗಲಿದೆ.   

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಸಿಸಿ ಏಕದಿನ ರ್‍ಯಾಂಕಿಂಗ್ | ವಿಶ್ವದ ನಂಬರ್ ಒನ್ ಬೌಲರ್ ಆಗಿ ವೇಗಿ ಮೊಹಮ್ಮದ್ ಸಿರಾಜ್

ಕಳೆದ ರವಿವಾರ ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಟೀಮ್...

ಏಷ್ಯಾ ಕಪ್ ಫೈನಲ್ | ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿದ ಸಿರಾಜ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | ಸಿರಾಜ್ ಮ್ಯಾಜಿಕ್; 8ನೇ ಬಾರಿಗೆ ಟೀಮ್ ಇಂಡಿಯಾ ಚಾಂಪಿಯನ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | 50 ರನ್‌ಗೆ ಆಲೌಟಾದ ಶ್ರೀಲಂಕಾ!

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ...