ಐಪಿಎಲ್ 2023 | ಕೈಲ್ ಮೆಯರ್ಸ್ ಸ್ಪೋಟಕ ಆಟ; ಲಖನೌ ಉತ್ತಮ ಮೊತ್ತ

Date:

ಐಪಿಎಲ್‌ 16ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಆರಂಭಿಕ ಆಟಗಾರ ಕೈಲ್ ಮೆಯರ್ಸ್ ಅವರ ಸ್ಪೋಟಕ ಬ್ಯಾಟಿಂಗ್‌ನಿಂದಾಗಿ ಲಖನೌ ಸೂಪರ್‌ ಜೈಂಟ್ಸ್‌ , ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 194 ರನ್‌ಗಳ ಗುರಿ ನೀಡಿದೆ.    

ಲಖನೌದ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೈಲ್ ಮೆಯರ್ಸ್ ಅದ್ಭುತವಾಗಿ ಬ್ಯಾಟಿಂಗ್‌ ಮಾಡಿದರು. ನಾಯಕ ಕೆ ಎಲ್‌ ರಾಹುಲ್‌(8), ದೀಪಕ್‌ ಹೂಡ(17) ಸಹಿತ ಪ್ರಮುಖ ಬ್ಯಾಟ್ಸ್‌ಮೆನ್‌ಗಳೆಲ್ಲ ಪೆವಿಲಿಯನ್‌ಗೆ ತರೆಳುತ್ತಿದ್ದರೂ ಏಕಾಂಗಿಯಾಗಿ ಕ್ರೀಸ್‌ನಲ್ಲಿ ನಿಂತು ಡೆಲ್ಲಿ ಬೌಲರ್‌ಗಳ ಬೆವರಿಳಿಸಿದರು.

12ನೇ ಓವರ್‌ನಲ್ಲಿ ಅಕ್ಷರ್‌ ಪಟೇಲ್‌ಗೆ ಬೌಲ್ಡ್‌ ಆದ ವೇಳೆಗಾಗಲೇ ಕೈಲ್, ಕೇವಲ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್‌ ಹಾಗೂ 2 ಬೌಂಡರಿಯೊಂದಿಗೆ 73 ರನ್‌ ಬಾರಿಸಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದ್ದರು. ಹದಿನೈದನೇ ಓವರ್‌ನಲ್ಲಿ ಬ್ಯಾಟಿಂಗ್‌ ಆರಂಭಿಸಿದ ನಿಕೋಲಸ್ ಪೂರನ್ ಕೂಡ 21 ಎಸತಗಳಲ್ಲಿ  3 ಸಿಕ್ಸರ್‌ ಹಾಗೂ 2 ಬೌಂಡರಿಯೊಂದಿಗೆ 36 ರನ್‌ ಚಚ್ಚಿದರು. ಉಳಿದಂತೆ ಆಯುಶ್ ಬದೋನಿ (12), ಕೃನಾಲ್‌ ಪಾಂಡ್ಯ (15) ರನ್‌ನಿಂದಾಗಿ ತಂಡವು 20 ಓವರ್‌ಗಳಲ್ಲಿ 193 ರನ್‌ ಕಲೆ ಹಾಕಿತು.

ಡೆಲ್ಲಿ ಪರ ಖಲೀಲ್ ಅಹಮ್ಮದ್ 30/2 ಹಾಗೂ ಚೇತನ್ ಸಕಾರಿಯಾ 53/2 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.

ಆಡುತ್ತಿರುವ ತಂಡಗಳ ಹನ್ನೊಂದರ ಬಳಗ

ಡೆಲ್ಲಿ ಕ್ಯಾಪಿಟಲ್ಸ್
ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಶ್, ರೀಲೆ ರೊಸೊ, ಸರ್ಫರಾಜ್ ಖಾನ್, ರೊಮ್ಮಾನ್ ಪೊವೆಲ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹಮ್ಮದ್, ಮುಕೇಶ್ ಕುಮಾರ್ 

ಲಖನೌ ಸೂಪರ್ ಜೈಂಟ್ಸ್
ಕೆಎಲ್ ರಾಹುಲ್ (ನಾಯಕ), ಕೈಲ್ ಮೆಯರ್ಸ್, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡ, ಕ್ರುನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ಮಾರ್ಕ್ ವುಡ್,ಜಯದೇವ್ ಉನಾದ್ಕಟ್, ರವಿ ಬಿಶ್ನೋಯ್, ಆವೇಶ್ ಖಾನ್

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೂನ್‌ 15ರವರೆಗೆ ಪ್ರತಿಭಟನೆ ನಿಲ್ಲಿಸಲು ಕುಸ್ತಿಪಟುಗಳ ನಿರ್ಧಾರ

ಭಾರತೀಯ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ ಭೂಷಣ್​...

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ | ತಂಡದಿಂದ ಹೊರಬಿದ್ದ ವಿಶ್ವ ನಂ.1 ಬೌಲರ್‌ ಅಶ್ವಿನ್‌!

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌...

ಕುಸ್ತಿಪಟುಗಳನ್ನು ಮಾತುಕತೆಗೆ ಆಹ್ವಾನಿಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್

ಕುಸ್ತಿಪಟುಗಳೊಂದಿಗೆ ಅವರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಮತ್ತೊಮ್ಮೆ ಕುಸ್ತಿಪಟುಗಳನ್ನು...

ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ ಫೈನಲ್‌ | ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಕೈ ಬೆರಳಿಗೆ ಗಾಯ

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ರೋಹಿತ್‌...