ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

Date:

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆಗಳನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಶುಭಾರಂಭ ಮಾಡಿದರು.

- Advertisement -

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ವಿದ್ಯಾನಗರದಲ್ಲಿರುವ ದಾಸೋಹಿ ರೈತ ಉತ್ಪಾದಕ ಸಮೂಹ ಸಂಸ್ಥೆಗಳ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ತಮ್ಮ ಪವಿತ್ರ ಹಸ್ತಾಕ್ಷರದ ಮೂಲಕ ಸಂಘದ ಆರ್ಥಿಕ ವ್ಯವಹಾರಗಳಿಗೆ ಚಾಲನೆ ನೀಡಿದ ಶ್ರೀಗಳು, ರೈತ ಸಮುದಾಯದ ಒಗ್ಗಟ್ಟು ಹಾಗೂ ಸಹಕಾರದ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಪ್ರಯತ್ನವನ್ನು ಶ್ಲಾಘಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ʼರೈತರ ಒಡೆತನದಲ್ಲಿ ಸಮೃದ್ಧಿಯತ್ತ ನಡಿಗೆ’ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ದಾಸೋಹಿ ಸಂಸ್ಥೆಯ ಚಟುವಟಿಕೆಗಳು ಕೇವಲ ವ್ಯವಹಾರಕ್ಕೆ ಸೀಮಿತವಾಗದೆ, ರೈತರ ಬದುಕಿನ ಗುಣಮಟ್ಟ ಸುಧಾರಿಸುವ ದಿಕ್ಕಿನಲ್ಲಿ ಸಾಗಬೇಕು. ರೈತರ ಅಗತ್ಯಗಳಿಗೆ ಸ್ಪಂದಿಸುವ ಆರ್ಥಿಕ ನೆರವು, ಉದ್ಯಮಶೀಲತೆಗೆ ಉತ್ತೇಜನ ಹಾಗೂ ಸುಸ್ಥಿರ ಅಭಿವೃದ್ಧಿಯ ಮೂಲಕ ಹೆಚ್ಚಿನ ಸಂಖ್ಯೆಯ ರೈತ ಕುಟುಂಬಗಳ ಬದುಕಿಗೆ ಆಸರೆಯಾಗಲೆಂದು ಶ್ರೀಗಳು ಆಶೀರ್ವದಿಸಿದರು.

ಇದಕ್ಕೂ ಮುನ್ನ ದಾಸೋಹಿ ಸಮೂಹ ಸಂಸ್ಥೆಗಳು ರೈತರನ್ನು ಕೇಂದ್ರವಾಗಿಟ್ಟುಕೊಂಡು ನಡೆಸುತ್ತಿರುವ ವಿವಿಧ ಚಟುವಟಿಕೆಗಳು, ಸೇವೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರ ಒಗ್ಗಟ್ಟಿಗೆ ಹೊಸ ವೇದಿಕೆ

ರೈತ ಉತ್ಪಾದಕ ಸಂಸ್ಥೆಗಳ ಚಟುವಟಿಕೆಗಳಿಗೆ ಪೂರಕವಾಗಿ ರೂಪುಗೊಂಡಿರುವ ನೂತನ ಸಹಕಾರಿ ಸಂಘವು ರೈತರ ಆರ್ಥಿಕ ಅಗತ್ಯಗಳಿಗೆ ನೆರವಾಗುವ ಜತೆಗೆ, ಅವರ ವ್ಯವಹಾರಿಕ ಚಟುವಟಿಕೆಗಳಿಗೆ ಸಹಕಾರ ನೀಡುವ ಉದ್ದೇಶ ಹೊಂದಿದೆ. ರೈತರ ಪಾಲುದಾರಿಕೆ ಮತ್ತು ಮಾಲೀಕತ್ವದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ಯಮಶೀಲತೆಯ ವಾತಾವರಣ ನಿರ್ಮಿಸುವ ಆಶಯವನ್ನು ಸಂಸ್ಥೆ ಹೊಂದಿದೆ.

ಇದನ್ನೂ ಓದಿದ್ದೀರಾ? ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಕಾರ್ಯಕ್ರಮದಲ್ಲಿ ದಾಸೋಹಿ ಸಮೂಹ ಸಂಸ್ಥೆಗಳ ರೂವಾರಿ ಅರವಿಂದ ಹು. ಕೊಪ್ಪ, ಕುಕ್ಕುಟ ಕಂಪನಿಯ ಚೇರನ್ ರಶ್ಮಿ ಕೊಪ್ಪ, ಉಪಾಧ್ಯಕ್ಷ ಆರ್ ಬಿ ಸಜ್ಜನ, ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ ಕಳಸಗೊಂಡ, ನಿರ್ದೇಶಕರಾದ ಅಮರೇಶ ಹಟ್ಟಿ, ಸಿದ್ದಪ್ಪ ಕುರಿ, ಕಾಶೀನಾಥ ಹೆಬ್ಬಾಳ, ಭೀಮಾಶಂಕರಗೌಡ ಪಾಟೀಲ, ಗುರುಬಸಪ್ಪಗೌಡ ಪಾಟೀಲ, ಪ್ರೀತಿ ದೇಗಿನಾಳ, ಕಲ್ಲನಗೌಡ ಹಗರಟಗಿ, ಕಾಂತು ಲಮಾಣಿ, ಮಲ್ಲಣ್ಣ ಮಂಗ್ಯಾಳ, ಬಸವರಾಜ ಸಿದ್ದಾಪೂರ, ಲೇಶಪ್ಪ ಪ್ಯಾಟಿಗೌಡರ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಬರ ಘೋಷಣೆ ರೈತರಿಗೆ ಮಾಡಿದ ಅವಮಾನ: ಚನ್ನರಾಯಪ್ಪ ಟೀಕೆ

ರಾಜ್ಯ ಸರ್ಕಾರ ಬರ ಪರಿಸ್ಥಿತಿಯಲ್ಲಿ ರೈತರಿಗೆ ₹2,500 ಆರ್ಥಿಕ ನೆರವು ನೀಡಲು...

ಧಾರವಾಡ | ಭಾರತದ ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿ ಬಿಂಬಿಸುವ ಕೃತಿಯಾಗಿದೆ: ಡಾ. ರಾಘವೇಂದ್ರ ಪಾಟೀಲ

"ಭಾರತದ ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿ ಬಿಂಬಿಸುವ ಕೃತಿಯಾಗಿದೆ. ಭಾರತದ ಸಂವಿಧಾನ...

‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ...