ಐಪಿಎಲ್‌ 2023 | ಬದಲಾದ ಮಹತ್ವದ ನಿಯಮಗಳ ಮಾಹಿತಿ ಇಲ್ಲಿದೆ ನೋಡಿ

Date:

ವಿಶ್ವದ ಶ್ರೀಮಂತ ಕ್ರಿಕೆಟ್‌ ಟೂರ್ನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌, ಐಪಿಎಲ್‌ನ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್‌ 31 ರಂದು ಅಹ್ಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಜೈಂಟ್ಸ್‌ ಮತ್ತು ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಈ ಬಾರಿಯ ಚುಟುಕು ಕ್ರಿಕೆಟ್‌ ಹಬ್ಬಕ್ಕೆ ಚಾಲನೆ ದೊರೆಯಲಿದೆ.

ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುವ ಐಪಿಎಲ್‌, ಈ ಬಾರಿ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಟೂರ್ನಿಗೆ ಮತ್ತಷ್ಟು ರೋಚಕತೆ ತುಂಬಲು ಮುಂದಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಮೂರು ಪ್ರಮುಖ ನಿಯಮಗಳನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ.

ಟಾಸ್‌ ನಂತರವೂ ಬದಲಾವಣೆಗೆ ಅವಕಾಶ

ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗವನ್ನು ಟಾಸ್‌ನ ನಂತರವೂ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಟಾಸ್‌ ಬಳಿಕ ಬ್ಯಾಟಿಂಗ್/ಫೀಲ್ಡಿಂಗ್‌ ಆಯ್ಕೆ ನೋಡಿಕೊಂಡು ಅದಕ್ಕನುಗುಣವಾಗಿ ತಂಡವನ್ನು ಬದಲಾಯಿಸಲು ಹೊಸ ನಿಯಮ ಅವಕಾಶ ನೀಡಲಿದೆ. ಟಾಸ್​ ಬಳಿಕ ತಂಡಗಳ ನಾಯಕರು ಆಡುವ ಹನ್ನೊಂದರ ಬಳಗ ಮತ್ತು ನಾಲ್ವರು ಬದಲಿ ಆಟಗಾರರು ಸೇರಿದಂತೆ ಒಟ್ಟು 15 ಆಟಗಾರರ ಪಟ್ಟಿಯನ್ನು ಮ್ಯಾಚ್​ ರೆಫ್ರಿಗೆ ನೀಡಬೇಕು. ಅದನ್ನು ರೆಫ್ರಿ ಘೋಷಿಸಿದ ಬಳಿಕ ತಂಡವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವಂತಿಲ್ಲ. ಅದಾಗಿಯೂ ಬದಲಾವಣೆ ಮಾಡಬೇಕಾದರೆ ಪಂದ್ಯದ ರೆಫ್ರಿ ಮತ್ತು ಎದುರಾಳಿ ತಂಡದ ನಾಯಕನ ಒಪ್ಪಿಗೆ ಪಡೆಯಬೇಕಿದೆ. ಈವರೆಗೂ ಟಾಸ್‌ಗೂ ಮುನ್ನ ಉಭಯ ನಾಯಕರು ತಮ್ಮ ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಬೇಕಿತ್ತು.

ಈ ವರ್ಷದ ಆರಂಭದಲ್ಲಿ ನಡೆದ ʻಸೌತ್‌ ಆಫ್ರಿಕಾ 20 ಲೀಗ್‌ʼ ಟೂರ್ನಿಯಲ್ಲಿ ಈ ನಿಯಮವನ್ನು ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿತ್ತು.  ಇದೀಗ ಐಪಿಎಲ್‌ನಲ್ಲೂ ಪರಿಚಯಿಸಲಾಗುತ್ತಿದೆ.

ಓವರ್ ರೇಟ್ ಪೆನಾಲ್ಟಿ

ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳಿಸದಿದ್ದರೆ, ಪೆನಾಲ್ಟಿ ರೂಪದಲ್ಲಿ ಪ್ರತಿ ಓವರ್‌ಗೆ 30-ಯಾರ್ಡ್ ವೃತ್ತದ ಹೊರಗೆ ಕೇವಲ ನಾಲ್ವರು ಫೀಲ್ಡರ್‌ಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಕೀಪರ್- ಫೀಲ್ಡರ್‌ ಚಲನೆಗೆ ದಂಡ

ಬ್ಯಾಟರ್ ಚೆಂಡನ್ನು ಎದುರಿಸುವ ಮೊದಲು ಕೀಪರ್ ಅಥವಾ ಫೀಲ್ಡರ್‌ ತನ್ನ ಸ್ಥಾನ ಬದಲಾಯಿಸಿದರೆ ಅದನ್ನು ಅನ್ಯಾಯದ ಚಲನೆ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ. ವಿಕೆಟ್ ಕೀಪರ್‌ ಸ್ಥಾನ ಬದಲಾವಣೆಯ ಸಂದರ್ಭದಲ್ಲಿ, ಅಂಪೈರ್‌ಗಳು ಡೆಡ್ ಬಾಲ್‌  – ವೈಡ್ ಅಥವಾ ನೋ ಬಾಲ್‌ ಆಗಿ ತೀರ್ಪು ನೀಡಿ ಒಂದು ರನ್ ಪೆನಾಲ್ಟಿ ಅಥವಾ ಬ್ಯಾಟಿಂಗ್ ತಂಡಕ್ಕೆ ಐದು ಪೆನಾಲ್ಟಿ ರನ್ ನೀಡಲು ಅವಕಾಶ ನೀಡಲಾಗಿದೆ.

ಇಂಪ್ಯಾಕ್ಟ್​ ಪ್ಲೇಯರ್​ ನಿಯಮ

ಐಪಿಎಲ್​ನಲ್ಲಿ ಈಗಾಗಲೇ ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಘೋಷಿಸಲಾಗಿದೆ. ಅಂದರೆ, ಒಬ್ಬ ಆಟಗಾರನನ್ನು ಆಟದ ಪ್ರಾರಂಭದಲ್ಲಿ ಅಥವಾ ಪಂದ್ಯದ ನಡುವೆ ಇನ್ನೊಬ್ಬ ಆಟಗಾರನ ಬದಲಿಗೆ ಕಣಕ್ಕಿಳಿಸುವುದು.

ಬದಲಿ ಆಟಗಾರನಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್​ನನ್ನು ಕಣಕ್ಕಿಳಿಸಿದರೆ, ಮೊದಲು ಗುರುತಿಸಿದ್ದ ಆಟಗಾರರಲ್ಲಿ ಒಬ್ಬರು ಹೊರಗುಳಿಯಬೇಕು. ಹೀಗೆ ಹೊರಬಿದ್ದ ಪ್ಲೇಯರ್​ ಮತ್ತೆ ಪಂದ್ಯದಲ್ಲಿ ಯಾವುದೇ ರೂಪದಲ್ಲೂ ಮೈದಾನಕ್ಕಿಳಿಯುವಂತಿಲ್ಲ. ಬದಲಿ ಫೀಲ್ಡರ್, ರನ್ನರ್ ಆಗಿಯೂ ಕೂಡ ಬರಲು ಅವಕಾಶವಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯು ಓವರ್‌ನ ಮಧ್ಯದಲ್ಲಿ ಮಾಡುವಂತಿಲ್ಲ. ಪೂರ್ಣ ಓವರ್​ ಮುಗಿದು ಹೊಸ ಓವರ್​ ಶುರುವಾದಾಗ ಈ ನಿಯಮ ಬಳಸಬೇಕು. ಫೀಲ್ಡಿಂಗ್ ತಂಡವು ಬೌಲರ್ ಅನ್ನು ಕಣಕ್ಕಿಳಿಸಲು ಬಯಸಿದರೆ, ಸಂಪೂರ್ಣ ಓವರ್​ ಎಸೆಯುವ ಅವಕಾಶ ಕೂಡ ಇರಲಿದೆ. ಅಂದರೆ ಒಂದಕ್ಕಿಂತ ಹೆಚ್ಚು ಓವರ್‌ಗಳನ್ನು ಬೌಲ್ ಮಾಡದಿದ್ದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುವ ಆಟಗಾರನಿಗೆ ಪೂರ್ಣ 4 ಓವರ್‌ಗಳನ್ನು ಬೌಲ್ ಮಾಡಲು ಅನುಮತಿಸಲಾಗುತ್ತದೆ.

ಐಪಿಎಲ್‌ ನಿಯಮಾವಳಿಗಳ ಪ್ರಕಾರ ಒಂದು ತಂಡದ ಆಡುವ ಹನ್ನೊಂದರ ಬಳಗದಲ್ಲಿ ಗರಿಷ್ಠ ನಾಲ್ವರು ವಿದೇಶಿ ಆಟಗಾರರನ್ನು ಮಾತ್ರ ಕಣಕ್ಕಿಳಸಬಹದಾಗಿದೆ. ಹೀಗಾಗಿ ಇಂಪ್ಯಾಕ್ಟ್‌  ಆಟಗಾರನಾಗಿ ವಿದೇಶಿ ಆಟಗಾರನನ್ನು ಕಣಕ್ಕಿಳಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಆಡುವ ಹನ್ನೊಂದರ ಬಳಗದಲ್ಲಿ ಮೂವರು ವಿದೇಶಿ ಆಟಗಾರರಿದ್ದರೆ, ಈ ವೇಳೆ ಹೆಚ್ಚುವರಿ ನಾಲ್ವರು ಆಟಗಾರರ ಪಟ್ಟಿಯಲ್ಲಿ ವಿದೇಶಿ ಆಟಗಾರನಿದ್ದರೆ ಇಂಪ್ಯಾಕ್ಟ್‌  ಆಟಗಾರನಾಗಿ ಮೈದಾನಕ್ಕಿಳಿಯಬಹುದಾಗಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 | ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ರೋಚಕ ಗೆಲುವು: ಜೋಶ್ ಇಂಗ್ಲಿಸ್ ಶತಕ ವ್ಯರ್ಥ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್...

ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ 18.7 ಲಕ್ಷ ರೂ. ವಂಚನೆ, ದೂರು ದಾಖಲು

ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ...

ಪಾಪಿಗಳು ಹಾಜರಾದ ಕಾರಣ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತಿದೆ: ಮಮತಾ ಬ್ಯಾನರ್ಜಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಂತರ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ...

ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು?

2007ರಲ್ಲಿ ರಾಹುಲ್ ದ್ರಾವಿಡ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುವ ಹೊತ್ತಿಗೆ ಮಹೇಂದ್ರ ಸಿಂಗ್...