‘ಇದರಲ್ಲಿ ಹಲವು ಸಂಗತಿಗಳು ತಪ್ಪಾಗಿದೆ’: ರೋಹಿತ್ ನಾಯಕತ್ವ ಬದಲಾವಣೆ ಬಗ್ಗೆ ಪತ್ನಿ ಮಾತು

Date:

ರೋಹಿತ್ ಶರ್ಮಾ ಅವರನ್ನು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆಯ ಬಗ್ಗೆ ಕೋಚ್‌ ಮಾರ್ಕ್‌ ಬುಚರ್‌ ಹೇಳಿಕೆಗೆ ಪತ್ನಿ ರಿತಿಕಾ ಸಜ್ದೇಹ್ ನೀಡಿದ ಪ್ರತಿಕ್ರಿಯೆ ವಿವಾದವುಂಟಾಗಿದೆ. ಪ್ರತಿಕ್ರಿಯೆ ನೀಡಿದ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಅಳಿಸಿಹಾಕಲಾಗಿದ್ದು. ಪೋಸ್ಟ್‌ನ ಭಾವಚಿತ್ರ ಈಗ ಎಲ್ಲಡೆ ವೈರಲ್ ಆಗುತ್ತಿದೆ.

ರೋಹಿತ್‌ ಶರ್ಮಾ ಅವರನ್ನು ಬದಲಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನನ್ನಾಗಿ ಮಾಡಿರುವುದರ ಬಗ್ಗೆ ಸ್ಮಾಶ್‌ಸ್ಪೋರ್ಟ್ಇಂಕ್ ಎಂಬ ಪಾಡ್‌ಕಾಸ್ಟ್‌ಗೆ ಮುಂಬೈ ತಂಡದ ಕೋಚ್ ಮಾರ್ಕ್ ಬುಚರ್ ಸಂದರ್ಶನ ನೀಡಿದ್ದರು.

ಸಂದರ್ಶನದಲ್ಲಿ, ಇದು ಕ್ರಿಕೆಟ್ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಅವರು ಒಬ್ಬ ಆಟಗಾರನಾಗಿ ಉತ್ತಮವಾದ ಕೊಡುಗೆ ನೀಡಲು ಎಂದು ನಾನುಭಾವಿಸುತ್ತೇನೆ.ಅವರನ್ನು ಖುಷಿಯಾಗಿ ಉತ್ತಮ ರನ್‌ಗಳನ್ನು ಸ್ಕೋರ್‌ ಮಾಡಲು ಬಿಡಿ ಎಂದು ಹೇಳಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಪಾಡ್‌ಕಾಸ್ಟ್ ಲಿಂಕ್‌ಗೆ ಪ್ರತಿಕ್ರಿಯೆ ನೀಡಿದ್ದ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್, ಇದರಲ್ಲಿ ಹಲವು ಸಂಗತಿಗಳು ತಪ್ಪಾಗಿವೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ

“ಇದು ಸಂಪೂರ್ಣವಾಗಿ ಕ್ರಿಕೆಟ್‌ನ ನಿರ್ಧಾರವಾಗಿತ್ತು. ಹಾರ್ದಿಕ್ ಆಡಿದ ಹಿಂದಿನ ಆಟಗಳನ್ನು ನಾವು ನೋಡಿದ್ದೇವೆ. ನನಗೆ ಇದು ಬದಲಾವಣೆಯ ಹಂತವಾಗಿದೆ. ಭಾರತದಲ್ಲಿ ಬಹುತೇಕ ಜನರು ಇದರ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಜನರು ಸಾಕಷ್ಟು ಭಾವುಕರಾಗುತ್ತಾರೆ. ಆದರೆ ನೀವು ಭಾವನೆಗಳಿಂದ ಕೆಲವೊಂದು ವಿಷಯಗಳನ್ನು ದೂರವಿಡುತ್ತೀರಾ. ಇದು ಕ್ರಿಕೆಟ್‌ನ ನಿರ್ಧಾರವಾಗಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ರೋಹಿತ್ ಅವರ ನಾಯಕತ್ವವು ಅವರ ಬ್ಯಾಟಿಂಗ್‌ ಅವರ ಮೇಲೆ ಅವಲಂಬಿತವಾಗಿದೆ” ಎಂದು ಮಾರ್ಕ್ ಬುಚರ್ ತಿಳಿಸಿದ್ದರು.

“ರೋಹಿತ್‌ ಇನ್ನೂ ಭಾರತ ತಂಡದ ನಾಯಕರಾಗಿದ್ದಾರೆ. ಆದರೆ ಐಪಿಎಲ್‌ಗೆ ಕಾಲಿಟ್ಟಾಗ ಇಲ್ಲಿನ ನಾಯಕತ್ವದ ಮೇಲೆ ಇನ್ನು ಹೆಚ್ಚು ಒತ್ತಡ ಬೀಳುತ್ತದೆ. ಆದ ಕಾರಣ ಕೇವಲ ಆಟಗಾರನಾಗಿ ಅವರಿಂದ ಉತ್ತಮವಾದುದನ್ನು ಪಡೆಯಬಹುದು. ಐಪಿಎಲ್‌ ಪರಿಸ್ಥಿತಿಯೇ ಬೇರೆ ಇರುತ್ತದೆ” ಎಂದು ಬುಚರ್ ಹೇಳಿದ್ದರು.

ರೋಹಿತ್ ಶರ್ಮಾ ಇತ್ತೀಚಿನ ಕೆಲವು ಐಪಿಎಲ್ ಆವೃತ್ತಿಗಳಲ್ಲಿ ಬ್ಯಾಟಿಂಗ್ ಹಾಗೂ ತಂಡವನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವುದಕ್ಕೆ ಹೆಣಗಾಡುತ್ತಿದ್ದಾರೆ. 2023ರ ಆವೃತ್ತಿಯಲ್ಲಿ 16 ಪಂದ್ಯಗಳಿಂದ 332 ರನ್ ಗಳಿಸಿದ್ದರೆ, 2022ರಲ್ಲಿ 14 ಪಂದ್ಯಗಳಿಂದ 268 ರನ್‌ ಮಾತ್ರ ಬಾರಿಸಿದ್ದು. ವೈಯಕ್ತಿಕ ಆಟ ಗಳಿಕೆ ಕೂಡ 20ಕ್ಕಿಂತ ಕಡಿಮೆ ಇತ್ತು.

2015 ರಿಂದ 2021ರವರೆಗೆ ಮುಂಬೈ ಇಂಡಿಯನ್ಸ್ ಐದು ಬಾರಿ ಟ್ರೋಫಿ ಜಯಿಸಿದ್ದು, ಪಾಂಡ್ಯ ನಾಲ್ಕು ಟ್ರೋಫಿಗಳಲ್ಲಿ ತಂಡದ ಭಾಗವಾಗಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

4ನೇ ಟೆಸ್ಟ್‌ | ಇಂಗ್ಲೆಂಡ್‌ ಸ್ಪಿನ್‌ ದಾಳಿಗೆ ನಲುಗಿದ ಟೀಮ್ ಇಂಡಿಯಾ; ಯಶಸ್ವಿ ಜೈಸ್ವಾಲ್ ಹೊಸ ದಾಖಲೆ

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ...

ನಾಲ್ಕನೇ ಟೆಸ್ಟ್ | ರೂಟ್ ಶತಕ, ಇಂಗ್ಲೆಂಡ್ 302/7; ಸ್ಪಿನ್ನರ್ ಅಶ್ವಿನ್ ಮತ್ತೊಂದು ಮೈಲಿಗಲ್ಲು

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಪ್ರವಾಸಿ ಇಂಗ್ಲೆಂಡ್...

ನಾಲ್ಕನೇ ಟೆಸ್ಟ್ | ಚೊಚ್ಚಲ ಪಂದ್ಯದಲ್ಲೇ ಆಕಾಶ್‌ ದೀಪ್‌ಗೆ 3 ವಿಕೆಟ್: ಇಂಗ್ಲೆಂಡ್‌ನ 5 ವಿಕೆಟ್ ಪತನ

ಭಾರತ - ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ರಾಂಚಿಯ ಜೆಎಸ್‌ಸಿಎ...

ಐಪಿಎಲ್ 2024 | ಪಂದ್ಯಗಳ ವೇಳಾಪಟ್ಟಿ ಪ್ರಕಟ: ಚೆನ್ನೈ-ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ

ಹಲವು ವಿವಾದಗಳ ನಡುವೆಯೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ ಎಂದೇ ಪರಿಗಣಿತವಾಗಿರುವ...