ಬೆಂಗಳೂರು | ಇನ್ಸ್​ಪೆಕ್ಟರ್​, ಎಸಿಪಿಗೆ ಪೊಲೀಸ್​ ಪೇದೆಯಿಂದ ಕೊಲೆ ಬೆದರಿಕೆ; ಪ್ರಕರಣದ ತನಿಖೆ ಸಿಸಿಬಿಗೆ

Date:

ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದರು ಎಂಬ ಕಾರಣಕ್ಕೆ ಕಾನ್‌ಸ್ಟೆಬಲ್‌ ಒಬ್ಬರು ಇನ್‌ಸ್ಪೆಕ್ಟರ್‌ ಹಾಗೂ ಎಸಿಪಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ನಗರ ಪೊಲೀಸರು ಆಯುಕ್ತ ಬಿ.ದಯಾನಂದ ಅವರು ಆದೇಶಿಸಿದ್ದಾರೆ.

- Advertisement -

ಕರ್ತವ್ಯಲೋಪ ಎಸಗಿದ್ದ ಆರೋಪದಲ್ಲಿ ಬಾಣಸವಾಡಿ ಠಾಣೆಯ ಇನ್ಸ್​ಪೆಕ್ಟರ್ ಮತ್ತು ಎಸಿಪಿ ಅವರು ಪೊಲೀಸ್‌ ಪೇದೆಯ ಅಮಾನತಿಗೆ ಶಿಫಾರಸು ಮಾಡಿದ್ದರು. ಇದಕ್ಕೆ ಕೋಪಗೊಂಡ ಪೇದೆ ಚಾಕುವಿನಿಂದ ಇರಿದು ಕೊಲೆ‌ ಮಾಡೋದಾಗಿ ಇನ್ಸ್‌ಪೆಕ್ಟರ್ ಮತ್ತು ಎಸಿಪಿಗೆ ಜೀವ ಬೆದರಿಕೆ ಹಾಕಿದ್ದಾರೆ. ರೇಣುಕಾ ನಾಯಕ್ ಜೀವ ಬೆದರಿಕೆ ಹಾಕಿದ ಪೊಲೀಸ್​ ಪೇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು...

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಮೇ 7ರಂದು ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಾರ್ತಿಕೇಯನ್ ಎಂಬಾತನ ಹತ್ಯೆಯಾಗಿತ್ತು. ಆರೋಪಿ ಮಂಜು ಹಾಗೂ ಆತನ ಸಹಚರರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯಕ್ಕೆ ಹಳೇ ದ್ವೇಷವೇ ಕಾರಣ ಎಂಬುದು ಗೊತ್ತಾಗಿತ್ತು.

ಹತ್ಯೆಯಾದ ವ್ಯಕ್ತಿಗೂ, ಆರೋಪಿಗಳಿಗೂ ಹಳೇ ದ್ವೇಷವಿದೆ ಎಂಬ ಮಾಹಿತಿ ಠಾಣೆಯ ಕ್ರೈಂ ಸಿಬ್ಬಂದಿ ಮೊದಲೇ ಗೊತ್ತಿದ್ದರೂ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಈ ಹಿನ್ನೆಲೆ, ಇನ್‌ಸ್ಪೆಕ್ಟರ್ ಹಾಗೂ ಎಸಿಪಿ ಶಿಫಾರಸಿನ ಮೇರೆಗೆ ಠಾಣೆಯ ಕಾನ್​ಸ್ಟೇಬಲ್‌ಗಳಾದ ಸಂತೋಷ್, ಪುಟ್ಟಸ್ವಾಮಿ ಮತ್ತು ವಿನೋದ್ ಎಂಬವರನ್ನು ಅಮಾನತುಗೊಳಿಸಿ ಪೂರ್ವವಿಭಾಗದ ಡಿಸಿಪಿ ಕುಲದೀಪ್​ ಕುಮಾರ್ ಆರ್​. ಜೈನ್ ಆದೇಶಿಸಿದ್ದರು.

ಪೊಲೀಸ್​ ಪೇದೆ ರೇಣುಕಾ ನಾಯಕ್ ಅವರನ್ನೂ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿತ್ತು. ತನ್ನ ಹೆಸರನ್ನು ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದ ವಿಚಾರ ತಿಳಿದ ಕಾನ್‌ಸ್ಟೆಬಲ್, ಪಿಐ ಮತ್ತು ಎಸಿಪಿಗೆ ಕರೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಹುಬ್ಬಳ್ಳಿಯ ಸಹೋದರರು ಸೇರಿ 11 ಮಂದಿ ಎನ್‌ಐಎ ವಶಕ್ಕೆ!

ಅದರಿಂದ ವಿಚಲಿತಗೊಂಡ ಪಿಐ ಮತ್ತು ಎಸಿಪಿ ಶಿಫಾರಸು ಪತ್ರ ವಾಪಸ್ ಪಡೆದುಕೊಂಡಿದ್ದರು. ಅಲ್ಲದೇ, ಕಾನ್‌ಸ್ಟೆಬಲ್‌ನನ್ನು 1 ತಿಂಗಳ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಇದೇ ಪ್ರಕರಣದ ತನಿಖೆಯನ್ನು ಸಿಸಿಬಿ ವರ್ಗಾವಣೆ ಮಾಡಲಾಗಿದೆ.

ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್​ ಆಯುಕ್ತ ಬಿ. ​ದಯಾನಂದ್ ಆದೇಶ ಹೊರಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆ ಆತ್ಮಹತ್ಯೆಗೆ ಶರಣು

ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಶಿವಮೊಗ್ಗ...

ಜಮಖಂಡಿಯಲ್ಲಿ ಅ.4ರಂದು 10ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ನಾಡು–ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಸೊಗಡನ್ನು ಪಸರಿಸುವ ಉದ್ದೇಶದಿಂದ ಜಮಖಂಡಿ...

ಕಾರವಾರ | ನಾಗರಮಡಿ ಫಾಲ್ಸ್‌ನಲ್ಲಿ ಪ್ರವಾಸಿಗರು–ಸ್ಥಳೀಯರ ನಡುವೆ ಗಲಾಟೆ; ದೂರು ಪ್ರತಿದೂರು ದಾಖಲು

ಕಾರವಾರ: ತಾಲೂಕಿನ ಚೆಂಡಿಯಾ ಸಮೀಪದ ನಾಗರಮಡಿ ಫಾಲ್ಸ್‌ನಲ್ಲಿ ಬಾಟಲಿ ಎಸೆದ ವಿಚಾರಕ್ಕೆ...

ಬಳ್ಳಾರಿ | ಮತದಾರರ ಹೆಸರು ತೆಗೆದುಹಾಕಲು ಸಂಚು: ಕಾರ್ಪೊರೇಟರ್, ಪಾಲಿಕೆ ಅಧಿಕಾರಿಗಳ ವಿರುದ್ಧ FIR

ಬಳ್ಳಾರಿ ನಗರ ಕ್ಷೇತ್ರದ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ತೆಗೆದು ಹಾಕಲು...