2040ಕ್ಕೆ ಚಂದ್ರನ ಮೇಲೆ ನಡಿಗೆ, 2035ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಇಸ್ರೋ ಉದ್ದೇಶ

Date:

2040ರ ವೇಳೆಗೆ ಭಾರತದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವುದು ಭಾರತದ ಮಹತ್ವಾಕಾಂಕ್ಷೆ ಯೋಜನೆಗಳಾಗಿವೆ. ಇವೆರೆಡು ಯೋಜನೆಗಳು ಪ್ರಗತಿಯ ಹಾದಿಯಲ್ಲಿವೆ ಎಂದು ಇಸ್ರೋ ಚಂದ್ರಯಾನ ಯೋಜನೆಯ ಯೋಜನಾ ನಿರ್ದೇಶಕರಾದ ಪಿ ವೀರಮುತ್ತುವೇಲ್ ತಿಳಿಸಿದ್ದಾರೆ.

- Advertisement -

ಊಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೋ ಅಧ್ಯಕ್ಷರು 2040ರ ವೇಳೆಗೆ ಭಾರತದ ಗಗನಯಾತ್ರಿ ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ ವೆಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವುದರ ಬಗ್ಗೆ ಈಗಾಗಲೆ ತಿಳಿಸಿದ್ದಾರೆ. ಇವೆರೆಡು ಮಹತ್ವಾಕಾಂಕ್ಷೆ ಯೋಜನೆಗಳನ್ನು ಇಸ್ರೋ ಕೈಗೆತ್ತಿಕೊಂಡಿದೆ. ನಾವು ಈ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಚಂದ್ರಯಾನ 3ರ ಪ್ರೊಪಲ್ಷನ್ ಮಾಡಲ್ ಅನ್ನು ಭೂಮಿಗೆ ಕರೆತಂದ ಇಸ್ರೋ ಯಶಸ್ಸಿನ ಬಗ್ಗೆ ಮಾತನಾಡಿದ ವೀರಮುತ್ತುವೇಲ್,” ಚಂದ್ರಯಾನ 3ಕ್ಕೆ ಸಂಬಂಧಿಸಿದಂತೆ ಲ್ಯಾಂಡರ್‌ ಹಾಗೂ ರೋವರ್‌ ಯೋಜನೆ ಯಶಸ್ವಿಯಾಗಿ ಒಂದು ದಿನ ಪೂರ್ಣಗೊಳಿಸಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಚುನಾವಣಾ ಬಾಂಡ್ ಮತ್ತು ಕಾರ್ಪೊರೇಟ್ ಕಪ್ಪು ಹಣ

“ಚಂದ್ರಯಾನ 3ರಲ್ಲಿ ನಾವು ಹಾಪ್‌ ಆನ್‌ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ನಾವು ಕಕ್ಷೆಗೆ ಇಳಿದ ಅದೇ ಇಂಜಿನ್‌ಅನ್ನು ಬಳಸಿದ್ದೇವೆ. ನಾವು ಮತ್ತೊಮ್ಮೆ ಒಂದು ಭೂಮಿಯ ದಿನಕ್ಕೆ ಪೇಲೋಡ್‌ ಅನ್ನು ನಿರ್ವಹಿಸಿದ್ದೇವೆ” ಎಂದು ಇಸ್ರೋ ನಿರ್ದೇಶಕ ಹೇಳಿದರು.

ಪ್ರೊಪಲ್ಷನ್ ಮಾಡಲ್ ಚಂದ್ರನ ಸುತ್ತ ಪರಿಭ್ರಮಿಸಬೇಕಿದ್ದ ಯೋಜನೆಯ ಎಲ್ಲ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ. “ನಾವು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಭೂಮಿಯ ಕಕ್ಷೆಗೆ ಮರಳಿ ತಂದಿದ್ದೇವೆ. ಏಕೆಂದರೆ ನಾವು ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿ ಕೆಲವು ಪ್ರೊಪೆಲೆಂಟ್‌ಗಳನ್ನು ಪಡೆದುಕೊಂಡಿದ್ದೇವೆ ಮತ್ತು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ತರುವ ಮೂಲಕ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದೇವೆ” ಎಂದು ಪಿ ವೀರಮುತ್ತುವೇಲ್ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐ ಸ್ಮಾರ್ಟ್ ಗ್ಲಾಸ್‌ಗಳ ರಹಸ್ಯ ಚಿತ್ರೀಕರಣಕ್ಕೆ ತಡೆ: ಡಿಜಿಟಲ್ ಲೋಕದಲ್ಲಿ ಸದ್ದು ಮಾಡುತ್ತಿದೆ ಹೊಸ ಆ್ಯಪ್

ತಂತ್ರಜ್ಞಾನ ಬೆಳೆದಂತೆ ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವ ಆತಂಕದ ನಡುವೆಯೇ, ರಹಸ್ಯವಾಗಿ ವಿಡಿಯೊ ಅಥವಾ...

ಎಐ ವೇಗಕ್ಕೆ ತಡೆ ನೀಡಲು ಜಾಗತಿಕ ಕೂಗು: ಭುಗಿಲೆದ್ದ ಅಮೆರಿಕ–ಚೀನಾ ತಾಂತ್ರಿಕ ಜಟಾಪಟಿ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಅತಿವೇಗದ ಓಟಕ್ಕೆ ಕಡಿವಾಣ ಹಾಕಿ, ಸುರಕ್ಷತೆಗೆ...

ಐಫೋನ್ 18 ಪ್ರೊ ಸರಣಿ ಬಿಡುಗಡೆ: ಭಾರತದಲ್ಲಿ ಹಳೆಯ ಐಫೋನ್ ಮಾದರಿಗಳ ಬೆಲೆ ಭಾರಿ ಏರಿಕೆ

ಆ್ಯಪಲ್ ಕಂಪನಿಯು ತನ್ನ ನೂತನ 'ಐಫೋನ್ 18 ಪ್ರೊ' ಸರಣಿಯನ್ನು ಮಾರುಕಟ್ಟೆಗೆ...

ಸೈಬರ್ ವಂಚಕರ ಹೊಸ ಅಸ್ತ್ರ: ಏನಿದು frozen screen ಯುಪಿಐ ಸ್ಕ್ಯಾಮ್?

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮೂಲಕ ಹಣದ ವಹಿವಾಟು ಅತ್ಯಂತ ಸಾಮಾನ್ಯವಾಗಿದೆ....