ಸರ್ವರ್ ಡೌನ್ | ಏಕಕಾಲದಲ್ಲಿ ಜಗತ್ತಿನಾದ್ಯಂತ ಬಳಕೆದಾರರಿಗೆ ಕೈಕೊಟ್ಟ ಫೇಸ್‌ಬುಕ್, ಇನ್‌ಸ್ಟಾಗ್ರಾಮ್!

Date:

ಜಗತಿನಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಲಾಗಿನ್ ಮಾಡಲಾಗದೇ ಬಳಕೆದಾರರು ಪರದಾಡುತ್ತಿರುವುದಾಗಿ ಟ್ವೀಟ್ ಮಾಡುತ್ತಿದ್ದಾರೆ. ಈ ಬಗ್ಗೆ ಮಾತೃಸಂಸ್ಥೆಯಾದ ಮೆಟಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

- Advertisement -

ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಮಾರ್ಚ್ 05 ರಾತ್ರಿ 9ರ ಸುಮಾರಿಗೆ ಏಕಾಏಕಿ ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ​ಇದರಿಂದ ಬಳಕೆದಾರರು ಕಂಗಾಲಾಗಿದ್ದಾರೆ. ಇನ್ನು ಫೇಸ್ಬುಕ್​ ಪಾಸ್​ವರ್ಡ್​ ಮರೆತವರು ಪುನಃ ಲಾಗಿನ್ ಆಗುವುದಕ್ಕೆ ಪರದಾಡುತ್ತಿರುವುದಾಗಿ ದೂರುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

server

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿರುವುದರಿಂದ ಎಕ್ಸ್(ಟ್ವಿಟ್ಟರ್‌)ಗೆ ನುಗ್ಗಿರುವ ಬಳಕೆದಾರರು, ದೂರು ಸಲ್ಲಿಸಲು ಮೆಟಾವನ್ನು ಟ್ಯಾಗ್ ಮಾಡುತ್ತಿದ್ದಾರೆ.

ಈ ನಡುವೆ ಟ್ವಿಟ್ಟರ್‌ನಲ್ಲಿ ಸರ್ವರ್‌ಡೌನ್ ವಿಚಾರವು ಟ್ರೆಂಡಿಂಗ್‌ನಲ್ಲಿದೆ. ಕೆಲವರು ಇದನ್ನೇ ಈಗ ಟ್ರೋಲ್‌ ಮಾಡಲು ಬಳಸಿಕೊಳ್ಳುತ್ತಿದ್ದಾರೆ.

ಈ ನಡುವೆ ಎಲಾನ್ ಮಸ್ಕ್ ಒಡೆತನದಲ್ಲಿರುವ ಎಕ್ಸ್(ಟ್ವಿಟ್ಟರ್‌)ಗೆ ಜನರು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಂಸ್ಥೆ, “ನೀವು ಯಾಕಾಗಿ ಇಲ್ಲಿಗೆ ಬರ್ತಾ ಇದ್ದೀರಿ ಅನ್ನೋದು ನಮಗೆ ಗೊತ್ತಿದೆ” ಎಂದು ತಿಳಿಸಿದೆ.

ಇದನ್ನು ಓದಿದ್ದೀರಾ? ಸಾವರ್ಕರ್‌ ಜೊತೆಗೆ ಸುಭಾಶ್ಚಂದ್ರ ಬೋಸ್‌ನವರಿಗೆ ಸಂಬಂಧ ಕಲ್ಪಿಸಬೇಡಿ: ಟ್ರೇಲರ್‌ಗೆ ಆಕ್ಷೇಪ ಎತ್ತಿದ ನೇತಾಜಿ ಮೊಮ್ಮಗ

ಫೇಸ್ ಬುಕ್, ಇನ್‌ಸ್ಟಾಗ್ರಾಮ್ ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿದ್ದು, ಈ ವೇದಿಕೆಯಲ್ಲಿ ವಿಶ್ವದಾದ್ಯಂತ ಬಿಲಿಯನ್ ಗಟ್ಟಲೇ ಬಳಕೆದಾರರಿದ್ದಾರೆ. ಹಾಗೇ ಪ್ರತಿದಿನ ಸಾವಿರಾಕ್ಕೂ ಅಧಿಕ ಮಂದಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಮ್ ಫೋಟೋ ಹಾಗೂ ರೀಲ್ಸ್‌ಗೆ ಖ್ಯಾತಿ ಪಡೆದಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಫೋನ್ 18 ಪ್ರೊ ಸರಣಿ ಬಿಡುಗಡೆ: ಭಾರತದಲ್ಲಿ ಹಳೆಯ ಐಫೋನ್ ಮಾದರಿಗಳ ಬೆಲೆ ಭಾರಿ ಏರಿಕೆ

ಆ್ಯಪಲ್ ಕಂಪನಿಯು ತನ್ನ ನೂತನ 'ಐಫೋನ್ 18 ಪ್ರೊ' ಸರಣಿಯನ್ನು ಮಾರುಕಟ್ಟೆಗೆ...

ಸೈಬರ್ ವಂಚಕರ ಹೊಸ ಅಸ್ತ್ರ: ಏನಿದು frozen screen ಯುಪಿಐ ಸ್ಕ್ಯಾಮ್?

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮೂಲಕ ಹಣದ ವಹಿವಾಟು ಅತ್ಯಂತ ಸಾಮಾನ್ಯವಾಗಿದೆ....

ಸತತ ವೈಫಲ್ಯಗಳ ಬಳಿಕ ಇಸ್ರೋಗೆ ಗೆಲುವು: ಇಒಎಸ್‌-05 ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ

ಸತತ ವೈಫಲ್ಯಗಳ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಅತ್ಯಂತ...

2.98 ಲಕ್ಷ ಕಾನೂನುಬಾಹಿರ ವೆಬ್‌ಲಿಂಕ್‌ಗಳ ಡಿಲೀಟ್‌ಗೆ ಶಿಫಾರಸು: ಐ4ಸಿ, ರಾಜ್ಯ ಸರ್ಕಾರಗಳ ಕ್ರಮ

ದೇಶದಲ್ಲಿ ಸೈಬರ್ ಅಪರಾಧ, ಹಣಕಾಸು ವಂಚನೆ ಹಾಗೂ ಅಕ್ರಮ ಕಂಟೆಂಟ್‌ಗಳಿಗೆ ಕಡಿವಾಣ...