ಜಿ ರಾಮ್‌ ಜಿ ಅಲ್ಲಿ ʼರಾಮʼನ ಹೆಸರಿದ್ದರೆ ಆರ್‌ಎಸ್‌ಎಸ್‌ ಕಚೇರಿ ಕಸ ಗುಡಿಸುತ್ತೇನೆ: ವಿ.ಎಸ್‌ ಉಗ್ರಪ್ಪ

Date:

“ಗಾಂಧಿ ಮತ್ತು ನೆಹರೂ ವಿಚಾರಗಳ ಮೇಲೆ ನೇರವಾಗಿ ದಾಳಿ ನಡೆಯುತ್ತಿದೆ. ಮನರೇಗಾದಲ್ಲಿದ್ದ ಗಾಂಧಿ ಹೆಸರನ್ನು ಶಾಶ್ವತವಾಗಿ ತೆಗೆಯಲು ಹೊರಟಿದ್ದಾರೆ. ಈ ಹೊಸದಾಗಿ ತಂದಿರುವ ಜಿ ರಾಮ್‌ ಜಿ ಅಲ್ಲಿ ರಾಮನ ಹೆಸರಿದ್ದರೆ, ಆರ್‌ಎಸ್‌ಎಸ್‌ ಕಚೇರಿಯ ಕಸ ಗುಡಿಸುತ್ತೇನೆ. ಇಲ್ಲವಾದರೆ ಮೋದಿ ಅವರು ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಮಾಜಿ ಸಂಸದರಾದ ವಿ. ಎಸ್‌. ಉಗ್ರಪ್ಪ ಆಗ್ರಹಿಸಿದರು.

- Advertisement -

ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಬರಹಗಾರ ಹಾಗೂ ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. “ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಲೆಂದು ಮನಮೋಹನ್‌ ಸಿಂಗ್‌ ಅವರು ತಂದಿದ್ದ ನರೇಗಾ ಯೋಜನೆಯನ್ನು ಸಂಪೂರ್ಣ ರದ್ದುಗೊಳಿಸಿದೆ ವಿಬಿ-ಜಿ ರಾಮ್‌ ಜಿ ಅಂತ ಹೊಸ ಕಾನೂನನ್ನು ತರಲು ಹೊರಟಿದ್ದಾರೆ. ಜಿ ರಾಮ್‌ ಜಿ ಅಲ್ಲಿ ʼರಾಮ್‌ʼ ಅಂದರೆ ರೋಜ್‌ಗಾರ್‌ ಮತ್ತು ಅಜೀವಿಕಾ ಮಿಷನ್‌ ಅಂತ. ಅಂದರೆ ನಿರುದ್ಯೋಗಿ ಮತ್ತು ಬಿಕ್ಷುಕರ ಮಿಷನ್‌ ಅನ್ನು ತರುತ್ತಿದ್ದಾರೆ. ಮೋದಿ ಮತ್ತು ಅವರ ಹಿಂಬಾಲಕರು ʼರಾಮʼನ ಹೆಸರು ತಂದಿದ್ದೇವೆ ಅಂತ ಸುಳ್ಳು ಹೇಳುತ್ತಿದ್ದಾರೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

“ಆರ್‌ಎಸ್‌ಎಸ್‌ ನಲ್ಲಿ ಸುಮಾರು 42 ಸಂಘನೆಗಳಿವೆ. ಇವೆಲ್ಲವು ಚಿತ್ಪವನ ಬ್ರಾಹ್ಮಣರ ವಶದಲ್ಲಿವೆ. ಆರ್‌ಎಸ್‌ಎಸ್‌ ಎಂದೂ ಶೋಷಿತ ವರ್ಗದವರ ಪರ ಧ್ವನಿ ಎತ್ತುವುದಿಲ್ಲ. ರಾಮನನ್ನು, ಕೃಷ್ಣನನ್ನು ಹೊಗಳುವವರು, ಅವರನ್ನು ಹುಟ್ಟು ಹಾಕಿದ ವಾಲ್ಮೀಕಿಯನ್ನು, ವ್ಯಾಸನನ್ನು ಕೈ ಬಿಟ್ಟಿದ್ದಾರೆ.” ಎಂದರು.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದ ʼಹಿಂದುಗಳು ಮೂರು ಮಕ್ಕಳನ್ನು ಮಾಡಿಕೊಳ್ಳಿʼ ಎಂಬ ಹೇಳಿಕೆಗೆ ಚಿಂತಕರಾದ ಶಿವಸುಂದರ್‌ “ಹೆಣ್ಣಿನ ಸಂತಾನೋತ್ಪತ್ತಿಗೂ, ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಸಂತಾನೋತ್ಪತ್ತಿ ಎನ್ನುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಯನ್ನು ಒಳಗೊಂಡಿರುತ್ತದೆ. ಮುಂದಿನ ದಿನಗಳಲಿ ಇಡೀ ಜಗತ್ತಿನ ಸಂತಾನೋತ್ಪತ್ತಿ ಕಡಿಮೆ ಆಗುತ್ತದೆ” ಎಂದು ತಿರುಗೇಟು ಕೊಟ್ಟರು.

ಪುಸ್ತಕ ಬಿಡುಗಡೆ 2

“2011ರ ಜನಗಣತಿಯ ಪ್ರಕಾರ ಕೇರಳದಲ್ಲಿ ಮುಸ್ಲಿಂ ಮಹಿಳೆಯರ ಸಂತಾನೋತ್ಪತ್ತಿ ದರ ಶೇ 1.8ರಷ್ಟಿದೆ. ಆದರೆ ಉತ್ತರ ಪ್ರದೇಶದಲ್ಲಿ ಇಂದಿಗೂ ಶೇ 4.5 ರಷ್ಟಿದೆ. ಜನಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ, ಮುಸ್ಲಿಂ ಮತ್ತು ಹಿಂದೂಗಳ ಸಂಖ್ಯೆ 2070ರ ವೇಳೆಗೆ ತೀವ್ರವಾಗಿ ಕುಸಿಯುತ್ತದೆ. ಕೇರಳದಲ್ಲಿ ಮಹಿಳಾ ಉದ್ಯೋಗ ಭಾಗವಹಿಸುವಿಕೆ ದರ ಹೆಚ್ಚಿದೆ. ಆದ್ದರಿಂದ ಅಲ್ಲಿ ಸಂತಾನೋತ್ಪತ್ತಿ ಕಡಿಮೆ ಇದೆ” ಎಂದರು.

“ಬಿಜೆಪಿಯನ್ನು ವಿರೋಧಿಸಲು ಕೇಂದ್ರದಲ್ಲಿ ಕಾಂಗ್ರೆಸ್‌ ಇದೆ ಎಂದು ನಾವು ಭಾವಿಸಿದ್ದೇವೆ. ಆದರೆ ಕಾಂಗ್ರೆಸ್‌ ಪಕ್ಷದಲ್ಲಿ ಸಂಘಿಫ್ಯಾಸಿಸಂ ಅನ್ನು ನೇರವಾಗಿ ವಿರೋಧಿಸುವವರು ಎಷ್ಟು ಜನರಿದ್ದಾರೆ?. 2022ರಲ್ಲಿ ಭಾರತದಲ್ಲಿನ 31 ರಾಜ್ಯಗಳಲ್ಲಿ 600 ಎಂಎಲ್‌ಎಗಳು ಪಕ್ಷಾಂತರಗೊಂಡಿದ್ದಾರೆ. ಅವರಲ್ಲಿ 400ಕ್ಕೂ ಹೆಚ್ಚು ಎಂಎಲ್‌ಗಳು ಕಾಂಗ್ರೆಸ್‌ನಿಂದ ಬಂದವರೇ ಆಗಿದ್ದಾರೆ” ಎಂದು ಹೇಳಿದರು.

“ಕಾರ್ಪೊರೇಟ್‌ ಹಣದ ಮೂಲಕ ಹಿಂದುತ್ವ ಎನ್ನುವುದು ಬೀದಿ ಬೀದಿಗಳಲ್ಲಿ ಓಡಾಡುತ್ತಿದೆ. ಮೋದಿಯನ್ನು ಅಂಬೇಡ್ಕರ್‌, ಪೆರಿಯಾರ್‌, ಭಗತ್‌ಸಿಂಗ್‌ ಚಿಂತನೆಗಳ ಮೂಲಕ ಸೋಲಿಸಬೇಕು. ಅವರು ಸಾವಿರ ಬಾರಿ ಸುಳ್ಳುಗಳನ್ನು ಹೇಳಿದರೆ, ನಾವು ಲಕ್ಷ ಬಾರಿ ಸತ್ಯವನ್ನು ಹೇಳುತ್ತಿರಬೇಕು” ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್‌ ಮಾತನಾಡಿ, “ಹಿಂದುಗಳು ಕೋಮುವಾದಿಗಳಾದರೆ ಹಿಂದೂ ಸಮುದಾಯ ನಾಶವಾಗುತ್ತದೆ. ಅದೇ ರೀತಿ ಮುಸ್ಲಿಮರು ಕೋಮುವಾದಿಗಳು ಆದ್ರೆ ಮುಸ್ಲಿಂ ಸಮುದಾಯ ನಾಶವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಟ್ಟಿಗೆ ಕೂತು ಮಾತನಾಡಬೇಕು. ಹಿಂದೂ ರಾಷ್ಟ್ರ ಮತ್ತು ಇಸ್ಲಾಂ ಚಿಂತೆಯನ್ನು ಬಿಟ್ಟು ಸೌಹಾರ್ದಯುತವಾಗಿ ಬದುಕುವುದನ್ನು ಕಲಿಯಬೇಕು” ಎಂದರು

“ಕರಾವಳಿಯಲ್ಲಿ ಕೋಮು ದ್ವೇಷವಿಲ್ಲ. ಹಿಂದೂ-ಮುಸ್ಲಿಮರೆಲ್ಲರೂ ಒಟ್ಟಿಗೆ ಬದುಕುತ್ತಿದ್ದೇವೆ. ಆದರೆ, ಕರಾವಳಿಯಲ್ಲಿರುವುದು ಉತ್ತರ ಭಾರತದ ಬಲಿಷ್ಠ ಕೈಗಾರಿಕೋದ್ಯಮಿಗಳ ಉದ್ಯಮಗಳು. ಇದರ ಬಗ್ಗೆ ಮಾತನಾಡುತ್ತಾರೆ ಅಂತ, ಕೋಮು ಸಂಘರ್ಷವನ್ನು ಹುಟ್ಟುಹಾಕುತ್ತಾರೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಸುಧಾಕರ ಬನ್ನಂಜೆ, ಕೃತಿಯ ಕರ್ತೃ ಎಂ.ಜಿ.ಹೆಗಡೆ, ಕ್ರಿಯಾ ಮಾಧ್ಯಮದ ನಿರ್ದೇಶಕರಾದ ವಿಮಲಾ. ಕೆ. ಎಸ್ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಶಾರ್ಜಾದಲ್ಲಿ ಹತ್ಯೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್‌ಗೆ ಹುಟ್ಟೂರಿನಲ್ಲಿ ಅಂತಿಮ ನಮನ

ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ನಿಗೂಢವಾಗಿ ಹತ್ಯೆಗೀಡಾದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ...

ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್ 

ಹಾಸನ ಜಿಲ್ಲೆಯ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ‘ಆಸ್ತಿಕತೆ ಮತ್ತು ನಾಸ್ತಿಕತೆ ವೈಯಕ್ತಿಕ ವಿಚಾರವೇ...

ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ: ವಿರೋಧಿಸಿ ಬೃಹತ್ ಪಾದಯಾತ್ರೆ 

ಮಲೆನಾಡಿನ ಜನರ ಪಾಲಿಗೆ 'ಮರಣಶಾಸನ'ವಾಗಿ ಪರಿಣಮಿಸಿರುವ ಅರಣ್ಯ ಕಾಯ್ದೆಗಳಲ್ಲೊಂದಾದ ಕಸ್ತೂರಿ ರಂಗನ್...

ಬಾಗಲಕೋಟೆ | ಸವಿತಾ ಸಮಾಜ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬಾಗಲಕೋಟೆಯ ಸವಿತಾ ಸಮಾಜ ಹಾಗೂ ಅದರ ಉಪಜಾತಿಗಳಿಗೆ ಸೇರಿದ ನಿರುದ್ಯೋಗಿಗಳು ಮತ್ತು...