ಸಿನಿಮಾಗಿಂತ ವಾಸ್ತವ ಬದುಕು ಭಿನ್ನ : `ಚಿತ್ತರಂಗ’ ಕೃತಿ ಬಿಡುಗಡೆಯಲ್ಲಿ ಅಗ್ರಹಾರ ಕೃಷ್ಣಮೂರ್ತಿ

Date:

  • ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚಿತ್ತರಂಗ ಕಾದಂಬರಿ ಬಿಡುಗಡೆ
  • ಕೃತಿ ಲೋಕಾರ್ಪಣೆ ಮಾಡಿದ ಹಿರಿಯ ನಟ ಶ್ರೀನಿವಾಸ ಪ್ರಭು

ಸಿನಿಮಾ ರಂಗದಲ್ಲಿ ಏನು ನಡೆದರೂ ನಾವು ಚಿಂತಿಸುವುದಿಲ್ಲ. ಏಕೆಂದರೆ ಸಿನಿಮಾಗಿಂತ ವಾಸ್ತವ ಬದುಕು ಭಿನ್ನವಾಗಿದೆ ಎಂದು ಹಿರಿಯ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು `ಚಿತ್ತರಂಗ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

- Advertisement -

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯಲೋಕ ಪಬ್ಲಿಕೇಷನ್ಸ್‌ ಹಾಗೂ ಬುಕ್‌ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

“ನಿಜ ಜೀವನದ ಘಟನೆಗಳನ್ನೇ ನಾವು ಸಿನಿಮಾಗೆ ಕೊಂಡಿಯಾಗಿಸುತ್ತೇವೆ. ಆದ್ದರಿಂದ ಸಿನಿಮಾ ರಂಗದ ವ್ಯಕ್ತಿಗಳ ಬಗ್ಗೆ ನಾವು ಚಿಂತಿಸುವುದಿಲ್ಲ. ಅವರಿಗಿಂತ ನಮ್ಮ ಬದುಕು ಭಿನ್ನವಾಗಿದೆ” ಎಂದು ತಿಳಿಸಿದರು.

“ಸಿನಿಮಾ ಜಗತ್ತನ್ನು ನಾವು ದೂರ ನಿಂತೇ ನೋಡುತ್ತೇವೆ. ಸಿನಿಮಾ ರಂಗವನ್ನು ನೋಡುವ ಹಾಗೂ ಅನುಭವಿಸುವ ಮೂಲಕ ಕಲಾ ಜಗತ್ತಿನ ಸುಖ ಪಡೆಯುತ್ತೇವೆ” ಎಂದು ವಿವರಿಸಿದರು.

ಹಿರಿಯ ನಟ ಶ್ರೀನಿವಾಸ ಪ್ರಭು ಕೃತಿ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿ, “ಕೃತಿಯ ಕೇಂದ್ರ ಪಾತ್ರಗಳು ಮನೋ ಆಳಕ್ಕೆ ಇಳಿದು ಬಗೆಯುತ್ತಾ ಎಳೆ ಎಳೆಯಾಗಿ ಮನೋ ವ್ಯಾಪಾರಗಳ ಬಿಡಿಸಿ, ಅನಾವರಣಗೊಳಿಸುವ ಲೇಖಕಿಯ ನಿರೂಪಣಾ ಶೈಲಿ ಇಲ್ಲಿ ಮುಖ್ಯವಾಗಿದೆ. ರೋಚಕ ಘಟನೆಗಳಿಂದ ಹಾಗೂ ನಿರೀಕ್ಷಿತ ವಿಚಾರಗಳಿಂದ ಕೃತಿಯನ್ನು ಪಾರು ಮಾಡುವುದು ಲೇಖಕಿಗೆ ಸವಾಲಾಗಿದೆ” ಎಂದು ತಿಳಿಸಿದರು.

“ಒಬ್ಬ ನಿರ್ದೇಶಕ ತಾನು ನಿರ್ದೇಶಿಸುವ ಚಿತ್ರ ಅಥವಾ ನಾಟಕವನ್ನು ತನ್ನ ಮನೋರಂಗದಲ್ಲಿ ಪೂರ್ವಭಾವಿಯಾಗಿ ನೋಡಿರಬೇಕು. ಲೇಖಕರು ತಮ್ಮ ಮನೋರಂಗದಲ್ಲಿ ಎಲ್ಲ ಘಟನೆಗಳನ್ನು ಸಾಕ್ಷಾತ್ಕಾರ ಮಾಡಿಕೊಂಡು ಕಾದಂಬರಿ ರೂಪವನ್ನು ಕೊಟ್ಟಿದ್ದಾರೆ. ಚಿತ್ತರಂಗ ಇನ್ನಿಲ್ಲದ ಹಾಗೆ ಓದುಗರ ತೆಕ್ಕೆಗೆ ಆವರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ವಿಮರ್ಶಕ ಎಚ್.ಎಸ್. ಸತ್ಯನಾರಾಯಣ, “ಲೇಖಕಿ ಮೂಲ ಕತೆಯ ಸೂಕ್ಷ್ಮತೆಯ ಬರವಣಿಗೆಯನ್ನು ಇಟ್ಟುಕೊಂಡು ಕೃತಿಗೆ ಚಿತ್ತರಂಗ ಎಂದು ಹೆಸರಿಟ್ಟಿದ್ದಾರೆ. ಸಿನಿಮಾ ಹಾಗೂ ಸಾಹಿತ್ಯಕ್ಕೆ ಶೀರ್ಷಿಕೆ ಬಹುಮುಖ್ಯ ಎಂಬುದು ಇಲ್ಲಿ ಸಾಬೀತಾಗಿದೆ. ಇದರ ವಸ್ತು ವಿಶ್ಲೇಷಣೆ, ನಿರೂಪಣೆ ಮಹತ್ವ ಪಡೆದುಕೊಂಡಿದೆ” ಎಂದು ಬಣ್ಣಿಸಿದರು.

ಹಿರಿಯ ಪತ್ರಕರ್ತ ಗಣೇಶ ಕಾಸರಗೋಡು, “ಇದು ಸುಬ್ಬಣ್ಣ ಅಲ್ಲ, ನಿರ್ದೇಶಕ ಪುಟ್ಟಣ್ಣ ಎಂದು ಘಂಟಾಘೋಷವಾಗಿ ಹೇಳಬಹುದು. ಚಿತ್ತರಂಗ ಒಳಗಿನ ಮಾನಸಿಕ ವಿಶ್ಲೇಷಣೆಯೇ ಈ ಕೃತಿ. ಸಿನಿಮಾವಾಗುವಂತಹ ಎಲ್ಲ ಸದಭಿರುಚಿಯ ವಿಚಾರಗಳು ಕೃತಿಯೊಳಗೆ ಅಡಕವಾಗಿದೆ” ಎಂದು ವಿಶ್ಲೇಷಿಸಿದರು.

ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ಸಂಸತ್ತಿನಿಂದ ಅನರ್ಹ | ಹತ್ತು ಗಂಭೀರ ಪ್ರಶ್ನೆಗಳು

ಲೇಖಕಿ ಆಶಾ ರಘು, “ಆಧುನಿಕ ಕಾಲಘಟ್ಟದ ನನ್ನ ಕಾದಂಬರಿ ಚಿತ್ತರಂಗ. ಇದು ನನ್ನ ಸಿನಿಮಾರಂಗದ ಕುರಿತಾದ ವಿಭಿನ್ನ ಪ್ರಯತ್ನವಾಗಿದೆ. 70-80ರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಒಳಗೊಂಡಂತಹ ಕಾದಂಬರಿ ಇದು” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಬಣಕಲ್; ಸ.ಮಾ.ಹಿ ಪ್ರಾ. ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಸರ್ಕಾರಿ ಮಾದರಿ ಹಿರಿಯ...

ಬರಕ್ಕೆ ಮಾನದಂಡ ಮುಖ್ಯವೋ, ಬದುಕು ಮುಖ್ಯವೋ?: ಸಿ. ಬೈರೇಗೌಡರ ಪ್ರಶ್ನೆ ಇಂದಿಗೂ ಪ್ರಸ್ತುತ

ಬರ ಮೊದಲು ರೈತನ ಹೊಲದಲ್ಲಿ ಕಾಣಿಸುತ್ತದೆ. ನಂತರ ಅವನ ಸಾಲ, ಮನೆಯ...

ಚಿಕ್ಕಮಗಳೂರು | ಕಸ್ತೂರಿ ರಂಗನ್ ವಿರೋಧಿಸಿ ನಾಳೆ ಬಾಳೆಹೊನ್ನೂರು ಬಂದ್ 

ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡು ಭಾಗದಲ್ಲಿ ಸಮಸ್ಯೆ ಹಿನ್ನಲೆಯಲ್ಲಿ ಮಲೆನಾಡು...

ಗುಜರಾತ್‌ | ಕಲಬೆರಕೆ ಪಶು ಆಹಾರ ಮಾರಿದರೆ ಜೈಲು; ಕೋಳಿ, ಜಾನುವಾರು ಆಹಾರ ಉತ್ಪಾದನೆಗೆ ಲೈಸೆನ್ಸ್‌ ಕಡ್ಡಾಯ

ಜಾನುವಾರು ಮತ್ತು ಕೋಳಿಗಳಿಗೆ ನೀಡುವ ಆಹಾರದ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ...