ಪುಟ್ಟ ರಬ್ಬರ್ ದೋಣಿಯಲ್ಲಿ ದಕ್ಷಿಣ ಕೊರಿಯಾಕ್ಕೆ ಚೀನೀ ಭಿನ್ನಮತೀಯ ಪಲಾಯನ; ವೃದ್ಧನ ರೋಮಾಂಚಕ ಯಾನ!

Date:

ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದು ಭಾರೀ ವೈರಲ್‌ ಆಗುತ್ತಿದೆ. ಅದರಲ್ಲಿ, ಕೆನಡಾದ ಟೊರೊಂಟೊ ನಗರದ ಬೀದಿಯೊಂದರಲ್ಲಿ 68 ವರ್ಷದ ವೃದ್ಧರೊಬ್ಬರು ಅಲ್ಲಿನ ರಾಷ್ಟ್ರಧ್ವಜದೊಂದಿಗೆ ಅತ್ಯಂತ ಸಡಗರದಿಂದ ಫೋಟೋಗೆ ಫೋಸ್ ನೀಡಿದ್ದಾರೆ. ಕಳೆದ ಒಂದೂವರೆ ದಿನದಿಂದ ಕಣ್ಣಿಗೆ ನಿದ್ದೆಯಿಲ್ಲದಿದ್ದರೂ ಅವರ ಮುಖದಲ್ಲಿ ಸುಸ್ತಿನ ಬದಲು, ದಶಕಗಳ ಸುದೀರ್ಘ ಹೋರಾಟ ಮತ್ತು ಜೈಲು ವಾಸದ ನಂತರ ಸಿಕ್ಕ ಸ್ವಾತಂತ್ರ್ಯದ ನಿರಾಳತೆ ಎದ್ದು ಕಾಣುತ್ತಿದೆ. ಆ ವೃದ್ಧನ ಹೆಸರು ‘ಡಾಂಗ್ ಗುವಾಂಗ್‌ಪಿಂಗ್’.

- Advertisement -

‘ಡಾಂಗ್ ಗುವಾಂಗ್‌ಪಿಂಗ್’ ಅವರು ಚೀನಾದಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದರು. ಆದರೆ, ಚೀನಾ ಸರ್ಕಾರದ ಹಲವು ನೀತಿ-ಧೋರಣೆಗಳ ವಿರುದ್ಧ ಧ್ವನಿ ಎತ್ತಿ, ಹೋರಾಟ ನಡೆಸಿದ್ದರು. ಅದಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಚೀನಾದಲ್ಲಿ ತಮಗೆ ಉಳಿಗಾಲವಿಲ್ಲವೆಂದು ಅರಿತ ಅವರು, ಜೀವ ಉಳಿಸಿಕೊಳ್ಳಲು ಕೇವಲ ಒಂದು ಸಣ್ಣ ರಬ್ಬರ್ ಬೋಟ್‌ನಲ್ಲಿ ಸಮುದ್ರ ದಾಟಿ ಬಂದಿದ್ದಾರೆ. “ನನಗೆ ತುಂಬಾ ಸಂತೋಷವಾಗುತ್ತಿದೆ. ಇಲ್ಲಿ ಕುಳಿತಿರುವಾಗ ನನಗೆ ನನ್ನ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತಿದೆ” ಎನ್ನುವ ಡಾಂಗ್ ಅವರ ಮಾತುಗಳಲ್ಲಿ ದಶಕಗಳ ಅಲೆದಾಟಕ್ಕೆ ಸಿಕ್ಕ ಶಾಂತಿಯ ಭಾವ ಎದ್ದು ಕಾಣುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಕಳೆದ ತಿಂಗಳು ಚೀನಾದ ವೀಹೈ ನಗರದಿಂದ ಕೇವಲ 3.3 ಮೀಟರ್ ಉದ್ದದ ಸಣ್ಣ ರಬ್ಬರ್ ಬೋಟ್ ಒಂದನ್ನು ಏರಿ ಡಾಂಗ್ ಅವರು ಹಳದಿ ಸಮುದ್ರಕ್ಕೆ ಧುಮುಕಿದಾಗ ಅವರ ಮುಂದಿದ್ದದ್ದು ಕೇವಲ 9.9 ಹಾರ್ಸ್‌ಪವರ್‌ನ ಒಂದು ಸಣ್ಣ ಇಂಜಿನ್ ಮತ್ತು ಸಾಹಸದ ಹಠ ಮಾತ್ರ.

ನಿಜ ಹೇಳಬೇಕೆಂದರೆ, ಅವರು ಮೊದಲು ಹೊರಟಿದ್ದು ಜಪಾನ್ ದೇಶದತ್ತ. ಆದರೆ, ಸಮುದ್ರದ ಮಧ್ಯೆ ತಲುಪಿದಾಗ ಅಲೆಗಳ ಅಬ್ಬರಕ್ಕೆ ಅವರು ದಾರಿ ತಪ್ಪಿದರು. ಕಣ್ಣು ಹಾಯಿಸಿದಷ್ಟೂ ಕೇವಲ ಬಿಳಿ ಬಣ್ಣದ ಆಕಾಶ ಮತ್ತು ಅಷ್ಟೇ ಭೀಕರವಾದ ನೀರು ಮಾತ್ರ ಕಾಣಿಸುತ್ತಿತ್ತು. ಯಾವುದು ಪೂರ್ವ, ಯಾವುದು ಪಶ್ಚಿಮ ಎಂದು ತಿಳಿಯದ ಆ ಘೋರ ಪರಿಸ್ಥಿತಿಯಲ್ಲಿ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಇತ್ತ ಇಂಜಿನ್ ಕೂಡ ಕೈಕೊಡಲು ಆರಂಭಿಸಿತು. ಆದರೂ ಧೃತಿಗೆಡದ ಅವರು ತಮ್ಮ ಬೋಟ್‌ನ ದಿಕ್ಕನ್ನು ದಕ್ಷಿಣ ಕೊರಿಯಾದತ್ತ ತಿರುಗಿಸಿದರು. ಕೊನೆಗೆ ಸಾವಿನ ದವಡೆಯಲ್ಲಿದ್ದ ಇವರನ್ನು ದಕ್ಷಿಣ ಕೊರಿಯಾದ ಮೀನುಗಾರರೊಬ್ಬರು ರಕ್ಷಿಸಿದರು. ಅಲ್ಲಿನ ಅಧಿಕಾರಿಗಳು ಇವರನ್ನು ಕೆಲಕಾಲ ವಶದಲ್ಲಿಟ್ಟುಕೊಂಡಿದ್ದರೂ, ಕೊನೆಗೆ ಅಂತರರಾಷ್ಟ್ರೀಯ ನೆರವು ಮತ್ತು ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಕೆನಡಾಕ್ಕೆ ತೆರಳಲು ಅನುಮತಿ ನೀಡಿದರು.

ಒಂದು ಕಾಲದಲ್ಲಿ ಚೀನಾದಲ್ಲೇ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾಂಗ್ ಗುವಾಂಗ್‌ಪಿಂಗ್ ಅವರು ಬಯಸಿದ್ದರೆ ವ್ಯವಸ್ಥೆಯ ಭಾಗವಾಗಿಯೇ ಆರಾಮದಾಯಕವಾಗಿ ಬದುಕಬಹುದಿತ್ತು. ಆದರೆ, 1989ರಲ್ಲಿ ಟಿಯಾನನ್ಮೆನ್‌ ನಡೆದಿದ್ದ ಕರಾಳ ಹತ್ಯಾಕಾಂಡ ನಡೆದು ಹತ್ತು ವರ್ಷಗಳ ನಂತರ, ಚೀನಾದಲ್ಲಿ ರಾಜಕೀಯ ಸುಧಾರಣೆ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ನಡೆದ ಸಹಿ ಸಂಗ್ರಹ ಅಭಿಯಾನಕ್ಕೆ ಸಹಿ ಹಾಕುವ ಮೂಲಕ ಅವರು ಸರ್ಕಾರದ ಕಂಗಣ್ಣಿಗೆ ಗುರಿಯಾದರು. ಪರಿಣಾಮವಾಗಿ ಅವರನ್ನು ತಕ್ಷಣವೇ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಯಿತು.

ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ 2001ರಿಂದ 2003ರವರೆಗೆ ಮೂರು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಯನ್ನೂ ಅನುಭವಿಸಿದರು. ನಂತರ 2014ರಲ್ಲಿ ಟಿಯಾನನ್ಮೆನ್ ಹತ್ಯಾಕಾಂಡದ ವಿರುದ್ಧದ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಮತ್ತೆ ಬಂಧಿಸಲಾಯಿತು. ಆದರೂ ಅವರೊಳಗಿದ್ದ ಜೀವಪರ ಮತ್ತು ಪ್ರಜಾಪ್ರಭುತ್ವದ ಆಶಯಗಳು ಎಂದಿಗೂ ಕುಗ್ಗಲಿಲ್ಲ.

2015ರಲ್ಲಿ ಅವರು ಚೀನಾದಿಂದ ತಮ್ಮ ಕುಟುಂಬದೊಂದಿಗೆ ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದರು. ಅಲ್ಲಿ ವಿಶ್ವಸಂಸ್ಥೆಯಿಂದ ನಿರಾಶ್ರಿತರ ಪಟ್ಟಿಗೆ ಸೇರಿದರೂ ಸಹ, ಥಾಯ್ ಅಧಿಕಾರಿಗಳು ಅವರನ್ನು ಮರಳಿ ಚೀನಾ ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ವಿಶ್ವಾಸದ್ರೋಹ ಬಗೆದಿದ್ದರು. ಇದರಿಂದಾಗಿ ಅವರು ಮತ್ತೆ ಚೀನಾದ ಕರಾಳ ಜೈಲು ಸೇರಬೇಕಾಯಿತು.

ಈ ಲೇಖನ ಓದಿದ್ದೀರಾ?: ಇಂದಿರಾ ತಿವಿದರೆ ನೋವೇ? ಮೋದಿ ತಿವಿದರದು ಹೂವೆ?

ಆದರೆ, ಅವರ ಸ್ವಾತಂತ್ರ್ಯದ ಹಂಬಲ ಮಾತ್ರ ಕಡಿಮೆಯಾಗಲಿಲ್ಲ. 2019ರಲ್ಲಿ ಅವರು ತೈವಾನ್‌ನ ಕಿನ್ಮೆನ್ ದ್ವಿಪಕ್ಕೆ ಈಜಿಯೇ ತಲುಪುವ ಸಾಹಸ ಮಾಡಿ ವಿಫಲರಾಗಿದ್ದರು. 2020ರಲ್ಲಿ ವಿಯೆಟ್ನಾಂ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಲ್ಲಿನ ಸ್ಥಳೀಯ ಪೊಲೀಸರು ಅವರನ್ನು ಬಂಧಿಸಿದ್ದರು. ಇಷ್ಟೆಲ್ಲ ಪ್ರಯತ್ನಗಳು ಮತ್ತು ಸೋಲುಗಳು, ಬಂಧನಗಳು ಹಾಗೂ ಪ್ರಾಣಾಪಾಯಗಳನ್ನು ಎದುರಿಸಿದರೂ ಅವರು ಚೀನಾ ಸರ್ಕಾರದ ವಿರುದ್ಧದ ತಮ್ಮ ನಿಲುವಿಗೆ ಎಂದಿಗೂ ವಿಷಾದಿಸಲಿಲ್ಲ ಅಥವಾ ಧೃತಿಗೆಡಲಿಲ್ಲ.

ನಿರಂತರ ಪ್ರಯತ್ನಗಳು, ಮಾನವ ಹಕ್ಕುಗಳ ಕಾರ್ಯಕರ್ತರ ನೆರವಿನ ಫಲವಾಗಿ ಇಂದು ಡಾಂಗ್ ಗುವಾಂಗ್‌ಪಿಂಗ್ ಅವರು ಕೆನಡಾದಲ್ಲಿ ಸುರಕ್ಷಿತವಾಗಿದ್ದಾರೆ. ಅವರ ಕುಟುಂಬವು ಈಗಾಗಲೇ ನಿರಾಶ್ರಿತರಾಗಿ ಕೆನಡಾದಲ್ಲಿ ನೆಲೆಸಿದ್ದು, ಈಗ ಡಾಂಗ್ ಅವರೂ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.

ಇಡೀ ವೃತ್ತಿಜೀವನವನ್ನು ಕ್ರೌರ್ಯದ ವಿರುದ್ಧದ ಹೋರಾಟದಲ್ಲೇ ಸವೆಸಿದ ಡಾಂಗ್‌ ಅವರು 68ನೇ ವಯಸ್ಸಿನಲ್ಲಿ ಚೀನಾ ಸರ್ಕಾರದ ಕಪಿಮುಷ್ಠಿಯಿಂದ ಸ್ವತಂತ್ರರಾಗಿದ್ದಾರೆ. ಸದ್ಯ ಟೊರೊಂಟೊ ನಗರದ ಬೀದಿಗಳಲ್ಲಿ ಕೆನಡಾ ಧ್ವಜದೊಂದಿಗೆ ಹೆಮ್ಮೆ ಮತ್ತು ಸಂತಸದಿಂದ ಓಡಾಡುತ್ತಿರುವ ಡಾಂಗ್ ಅವರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...