ಜನರೇಷನ್ ಝಡ್(Gen Z) ಪ್ರತಿಭಟನೆ : ಮೆಕ್ಸಿಕೋ ನಗರದಲ್ಲಿ ಬೀದಿಗಿಳಿದ ಯುವಕರು

Date:

ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರ ಸರ್ಕಾರದಲ್ಲಿ ಹೆಚ್ಚುತ್ತಿರುವ ಅಪರಾಧ, ಭ್ರಷ್ಟಾಚಾರ, ಹಿಂಸಾಚಾರ ಹಾಗೂ ಸರ್ಕಾರದ ಭದ್ರತಾ ವೈಫಲ್ಯದ ವಿರುದ್ಧ ಮೆಕ್ಸಿಕೋ ನಗರದಲ್ಲಿ ಶನಿವಾರ ಜನರೇಷನ್ ಝಡ್ ನ (Gen Z) ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನಾ ರ‍್ಯಾಲಿ ನಡೆಸಿದರು.

- Advertisement -

ದಕ್ಷಿಣ ಅಮೆರಿಕದಲ್ಲಿರುವ ಮೆಕ್ಸಿಕೋ ನಗರದಲ್ಲಿ ನಡೆಯುತ್ತಿರುವ ಈ ಜನರೇಷನ್ ಝಡ್ ಪ್ರತಿಭಟನೆಯಲ್ಲಿ, ಇದೇ ತಿಂಗಳ ನವೆಂಬರ್ 1 ರಂದು ಸಾರ್ವಜನಿಕವಾಗಿ ಮೇಯರ್ ಕಾರ್ಲೋಸ್ ಮಾಂಜೊನನ್ನು ಹತ್ಯೆ ಮಾಡಲಾಗಿದೆ. ಅದೇ ರೀತಿ ನಗರದಲ್ಲಿ ಹಲವು ಹತ್ಯೆಗಳು ನಡೆದಿವೆ, ಮತ್ತು ಅಧ್ಯಕ್ಷೆ ಕ್ಲೌಡಿಯಾ ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ ಎಂದು ಘೋಷಣೆಗಳನ್ನು ಕೂಗಿದರು. ಈ ರ‍್ಯಾಲಿ ಪ್ರತಿಭಟನೆಗೆ ವಿರೋಧ ಪಕ್ಷಗಳ ಬೆಂಬಲವು ಜನರೇಷನ್ ಝಡ್ ಯುವಕರಿಗೆ ದೊರೆತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಶನಿವಾರ (ನವೆಂಬರ್ 15, 2025) ನಡೆದ ಈ ಪ್ರತಿಭಟನಾ ರ‍್ಯಾಲಿಯಲ್ಲಿ ಮುಸುಕು ಧರಿಸಿದ್ದ ಕೆಲ ಯುವಕರ ಗುಂಪು, ಅಧಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅರಮನೆಯ ಸುತ್ತಲಿನ ಬೇಲಿಗಳನ್ನು ಕಿತ್ತು ಒಳನುಗ್ಗಲು ಪ್ರಯತ್ನಿಸಿತು. ಈ ವೇಳೆ ಕಲ್ಲು ತೂರಾಟ, ಜೊತೆಗೆ ಅಲ್ಲಿದ್ದ ಪೊಲೀಸರು ಯುವಕರನ್ನು ಚದುರಿಸಲು ಅಶ್ರುವಾಯುಗಳನ್ನು ಸಿಡಿಸಿದರು ಮತ್ತು ಪೊಲೀಸರು ಮತ್ತು ಯುವಕರ ನಡುವೆ ಘರ್ಷಣೆ ಸಹ ನಡೆಯಿತು. 90ರ ದಶಕದ ಉತ್ತರಾರ್ಧ ಮತ್ತು 2010 ರ ಒಳಗೆ ಜನಿಸಿದ ಯುವಕರ ಗುಂಪನ್ನು ಜನರೇಷನ್ ಝಡ್ ಎಂದು ಕರೆಯಲಾಗುತ್ತದೆ.

ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲೇ ಸ್ಥಳೀಯದಲ್ಲಿದ್ದ ಹಲವಾರು ನಾಗರಿಕರು ಸಹ ಗಾಯಗೊಂಡಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ ಹತ್ಯೆಯಾದ ಒಬ್ಬ ಮೇಯರ್‌ಗೆ ನ್ಯಾಯ ಕೇಳಲು ಆರಂಭವಾದ ಜನರೇಷನ್ ಝಡ್  ಪ್ರತಿಭಟನೆ ಶನಿವಾರ ಹಿಂಸಾಚಾರಕ್ಕೆ ತಿರುಗಿತು. “ಮೇಯರ್ ಕಾರ್ಲೋಸ್ ಸಾಯಲಿಲ್ಲ. ಅವರನ್ನು ಸರ್ಕಾರವೇ ಕೊಂದಿತು” ಎಂದು ಘೋಷಣೆಗಳನ್ನು ಕೂಗಿದರು.

“ನಮಗೆ ಹೆಚ್ಚಿನ ಭದ್ರತೆ ಬೇಕು. ಭದ್ರತಾ ವೈಫಲ್ಯಗಳು ಸರಿಯಾಗಬೇಕು” ಎಂದು ಪ್ರತಿಭಟನೆಯಲ್ಲಿ ತೊಡಗಿದ್ದ 29 ವರ್ಷದ ಆಂಡ್ರೆಸ್ ಮಾಸಾ ಹೇಳಿದ್ದಾರೆ. ಅದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 43 ವರ್ಷದ ವೈದ್ಯೆ ಅರಿಜ್‌ಬೆತ್ ಗಾರ್ಸಿಯಾ, “ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಹಣಕಾಸು ಒದಗಿಸುಬೇಕು” ಎಂದರು.

ಈ ಪ್ರತಿಭಟನ ರ‍್ಯಾಲಿಯಲ್ಲಿ ಭಾವಹಿಸಿದ ಹಲವಾರು ಯುವಕರನ್ನು ಬಂಧಿಸಲಾಗಿದೆ. ಈ ಪ್ರತಿಭಟನೆಯ ಮೂಲಕ ಶೀನ್ ಬಾಮ್ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನೇರವಾಗಿವಾಗಿ ಗುರಿಮಾಡಲಾಗಿದೆ.

ಸಾಮಾಜಿಕ ಮಾಧ್ಯಮದ ಮೇಲಿನ ನಿಷೇಧದ ವಿರುದ್ಧ ಸೆಪ್ಟೆಂಬರ್‌ನಲ್ಲಿ ನೇಪಾಳದಲ್ಲಿ ಅತಿದೊಡ್ಡ “ಜನರೇಷನ್ ಝಡ್” ಪ್ರತಿಭಟನೆಗಳು ನಡೆದವು ಮತ್ತು ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದಲ್ಲದೇ, ದೇಶದ ಪ್ರಧಾನ ಮಂತ್ರಿಯ ರಾಜೀನಾಮೆಗೆ ಕಾರಣವಾಯಿತು. ಜನರೇಷನ್ ಝಡ್ ನಡೆಸಿದ ಹೋರಾಟದ ದೊಡ್ಡ ಗೆಲುವು ಇದಾಗಿತ್ತು. ಇದೇ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗ ಮೀಸಲಾತಿಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರರು ನಡೆಸಿದ ಪ್ರತಿಭಟನೆಯ ಪರಿಣಾಮವಾಗಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶವನ್ನು ತೊರೆಯಬೇಕಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತಿಭಟನಾಕಾರರ ಬಂಧನ ಪ್ರಜಾಪ್ರಭುತ್ವದ ಹಕ್ಕುಗಳ ದಮನ: ದೆಹಲಿ ಪೊಲೀಸ್ ಕ್ರಮಕ್ಕೆ ವಿಶ್ವಸಂಸ್ಥೆ ಆಕ್ಷೇಪ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ...

ಪ್ರಧಾನಮಂತ್ರಿ ಅಂಬಾನಿ ಕ್ಷಮಿಸಿ: ಭಾರತದಲ್ಲಿ ಸ್ಟಾರ್‌ಲಿಂಕ್ ವಿಳಂಬಕ್ಕೆ ಮುಕೇಶ್ ಅಂಬಾನಿ ವಿರುದ್ಧ ಎಲಾನ್ ಮಸ್ಕ್ ವ್ಯಂಗ್ಯ

ಭಾರತದಲ್ಲಿ ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ‘ಸ್ಟಾರ್‌ಲಿಂಕ್’ ಮಾರುಕಟ್ಟೆಗೆ ಪ್ರವೇಶಿಸುವುದನ್ನು...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನವಿ ಪಿಳ್ಳೈಗೆ ಒಲಿದ ಶಾಂತಿ ಪುರಸ್ಕಾರ

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು...