ನಾವಿಕರ ಸಾವು, ಭಾರಿ ಸುಂಕದ ನಡುವೆ ಟ್ರಂಪ್ ಹೊಗಳಿಕೆಗೆ ಮಾರುಹೋದವೇ ಭಾರತೀಯ ಮಾಧ್ಯಮಗಳು?

Date:

ಫ್ರಾನ್ಸ್‌ನ ಇವಿಯಾನ್ ನಗರದಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಮೋದಿಯವರು ಪ್ರಧಾನಿ ಹುದ್ದೆಯಲ್ಲಿರುವವರೆಗೂ ಭಾರತವನ್ನು ಮುಟ್ಟಲು ಯಾರಿಗೂ ಬಿಡುವುದಿಲ್ಲ” ಎಂದಿರುವ ಹೇಳಿಕೆಯನ್ನೇ ಭಾರತೀಯ ಮಾಧ್ಯಮಗಳು ಅತ್ಯಂತ ಪ್ರಮುಖ ಸುದ್ದಿಯನ್ನಾಗಿ ಬಿತ್ತರಿಸುತ್ತಿವೆ.

- Advertisement -

ಅಂತಾರಾಷ್ಟ್ರೀಯ ಒಪ್ಪಂದಗಳು ಮತ್ತು ರಕ್ಷಣೆ ಎಂಬುದು ಎರಡು ದೇಶಗಳ ನಡುವೆ ಇರಬೇಕಾದದ್ದು. ಆದರೆ ಟ್ರಂಪ್, “ಮೋದಿ ಇರುವವರೆಗೆ ಮಾತ್ರ ಭಾರತವನ್ನು ಮುಟ್ಟಲು ಬಿಡಲ್ಲ, ಬೇರೆಯವರು ಬಂದರೆ ನನಗೆ ಗೊತ್ತಿಲ್ಲ” ಎನ್ನುತ್ತಿದ್ದಾರೆ. ಅಂದರೆ, ಅಮೆರಿಕಕ್ಕೆ ಭಾರತ ದೇಶ ಮುಖ್ಯವಲ್ಲ, ಕೇವಲ ಮೋದಿ ಮುಖ್ಯ ಎಂಬಂತಿದೆ ಈ ಮಾತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಒಂದೆಡೆ ಮೋದಿಯವರನ್ನು “ದೇವದೂತ”, “ಬಲಿಷ್ಠ” ಎಂದು ಅಮೆರಿಕ ಹೊಗಳುತ್ತಿದ್ದರೆ, ಮತ್ತೊಂದೆಡೆ ಅದೇ ಅಮೆರಿಕ ಭಾರತದ ಉತ್ಪನ್ನಗಳ ಮೇಲೆ 50% ರಷ್ಟು ಭಾರಿ ಸುಂಕ (Tariff) ಹೇರಿ ಭಾರತದ ಆರ್ಥಿಕತೆಗೆ ಪೆಟ್ಟು ನೀಡುತ್ತಿದೆ. ಅಂದರೆ, “ಹಣಕಾಸಿನ ವಿಷಯದಲ್ಲಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತೇವೆ, ಆದರೆ ಮಾತಿನಲ್ಲಿ ಮಾತ್ರ ನೀವೇ ನಮ್ಮ ಸ್ನೇಹಿತ” ಎನ್ನುವ ಟ್ರಂಪ್ ದ್ವಂದ್ವ ನಿಲುವು ಇಲ್ಲಿ ಎದ್ದು ಕಾಣುತ್ತದೆ.

ಇದನ್ನೂ ಓದಿ: ಸೈಬರ್ ವಂಚಕರು ಪರಾವಲಂಬಿಗಳು: ಸೈಬರ್ ವಂಚನೆ ವಿರುದ್ಧ ಬಿಗಿ ಕಾನೂನು ತರುವಂತೆ ಸುಪ್ರೀಂ ತಾಕೀತು

ಒಮಾನ್ ಸಮುದ್ರದಲ್ಲಿ ಅಮೆರಿಕ ನಡೆಸಿದ ದಾಳಿಗೆ ಭಾರತೀಯ ನಾವಿಕರು ಬಲಿಯಾಗಿದ್ದಾರೆ. ಇದು ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಗಂಭೀರ ವಿಷಯ. ಇದರ ಬಗ್ಗೆ ಅಮೆರಿಕವನ್ನು ಕಟುವಾಗಿ ಪ್ರಶ್ನಿಸಬೇಕಿದ್ದ ಮಾಧ್ಯಮಗಳು, ಆ ಗಂಭೀರ ಸಮಸ್ಯೆಯನ್ನು ಪಕ್ಕಕ್ಕಿಟ್ಟು, ಟ್ರಂಪ್ ಆಡಿದ ನಾಲ್ಕು ಹೊಗಳಿಕೆಯ ಮಾತುಗಳನ್ನೇ ದೇಶದ ದೊಡ್ಡ ಸಾಧನೆ ಎಂಬಂತೆ ಹೈಲೈಟ್ ಮಾಡುತ್ತಿರುವುದು ಭಾರತೀಯ ಮಾಧ್ಯಮ ರಂಗದ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಬಿಚ್ಚಿಟ್ಟಿದೆ.

ಈ ಇಡೀ ಪ್ರಸಂಗದಲ್ಲಿ ಅಮೆರಿಕದ ವ್ಯಾಪಾರೀ ಚಾತುರ್ಯ ಮತ್ತು ಭಾರತೀಯ ಮಾಧ್ಯಮಗಳ ಟಿಆರ್‌ಪಿ ಹಪಾಹಪಿತನ ಕಾಣುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರಿನಲ್ಲಿ ಸಚಿವ ಸಂಪುಟ; ಕರಾವಳಿ–ಮಲೆನಾಡಿಗೆ ಹೊಸ ರೂಪ: ಸಿಎಂ ಡಿಕೆಶಿ

ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಹೊಸ ರೂಪ ನೀಡುವ ಮೂಲಕ ಇಲ್ಲಿನ...

ಯುಪಿಐ ಪಾವತಿಗೆ ಶುಲ್ಕ; ಕೇಂದ್ರ ಸಚಿವರು ಪಿಕ್ ಪಾಕೆಟ್‌ನಲ್ಲಿ ಪಿಎಚ್‌ಡಿ: ಸಿಎಂ ಡಿ ಕೆ ಶಿವಕುಮಾರ್

"ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರ ಪಿಕ್...

SIR | ಒಂದೇ ಮತಗಟ್ಟೆಯಲ್ಲಿ ಶೇ. 62ರಷ್ಟು ಮತದಾರರ ಹೆಸರು ಡಿಲೀಟ್: ಚುನಾವಣಾ ಆಯೋಗಕ್ಕೆ ರಮೇಶ್ ಬಾಬು ದೂರು

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)...