ಜಾತ್ಯತೀತ ನೇಪಾಳದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಹಿಂದೆ ಆರೆಸ್ಸೆಸ್ ಕೈವಾಡದ ಶಂಕೆ?

Date:

ನೇಪಾಳದ ದಕ್ಷಿಣ ಭಾಗದಲ್ಲಿರುವ, ಭಾರತದ ಗಡಿಗೆ ತಾಗಿಕೊಂಡಿರುವ ‘ಮಾಧೆಸ್’ (Madhes) ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಇತ್ತೀಚಿನ ವರ್ಷಗಳಲ್ಲೇ ಅತಿ ಭೀಕರ ಕೋಮು ಹಿಂಸಾಚಾರ ಭುಗಿಲೆದ್ದಿದೆ. ಕನಿಷ್ಠ ಮೂವರನ್ನು ಬಲಿತೆಗೆದುಕೊಂಡಿರುವ ಈ ಗಲಭೆಯನ್ನು ನಿಯಂತ್ರಿಸಲು ಸೇನೆ ಇಳಿಸಲಾಗಿದ್ದು, ಹಲವೆಡೆ ಕರ್ಫ್ಯೂ ಜಾರಿಯಲ್ಲಿದೆ.ಸ್ವತಂತ್ರ ಡಿಜಿಟಲ್ ಮಾಧ್ಯಮ ‘ದಿ ವೈರ್ ಪ್ರಕಟಿಸಿರುವ ವರದಿಯು ಈ ಹಿಂಸಾಚಾರದ ಹಿಂದಿನ ಆತಂಕಕಾರಿ ರಾಜಕೀಯ, ಸಾಮಾಜಿಕ ಪಲ್ಲಟಗಳು ಹಾಗೂ ಆಡಳಿತ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

- Advertisement -

ಜುಲೈ 26ರಂದು ಸುನ್ಸರಿ ಜಿಲ್ಲೆಯ ದಿವಾನ್‌ಗಂಜ್‌ನಲ್ಲಿ ಶ್ರಾವಣ ಮಾಸದ ‘ಬೋಲ್ ಬಮ್’ ಯಾತ್ರಾರ್ಥಿಗಳು ಕೋಶಿ ಬ್ಯಾರೇಜ್‌ನಿಂದ ಪವಿತ್ರ ಜಲ ತರುತ್ತಿದ್ದಾಗ ಘರ್ಷಣೆ ಸ್ಫೋಟಗೊಂಡಿತು. ಮೆರವಣಿಗೆಯಲ್ಲಿದ್ದ ಡಿಜೆ ಸಂಗೀತದ ಶಬ್ದ ಹಾಗೂ ಧಾರ್ಮಿಕ ಧ್ವಜಗಳ ಬಗ್ಗೆ ಮುಸ್ಲಿಮರು ಆಕ್ಷೇಪಿಸಿದ್ದರು. ಇದಕ್ಕೂ ಮುನ್ನ ಅದೇ ದಿನ, ಮುಸ್ಲಿಂ ಧ್ವಜವೊಂದನ್ನು ಕಿತ್ತು ಅಲ್ಲಿ ಹಿಂದೂ ಧ್ವಜ ಹಾರಿಸಲಾಗಿತ್ತು ಎಂಬ ಗಂಭೀರ ಆರೋಪಗಳಿದ್ದವು. ಈ ವಾಗ್ವಾದ ಕಲ್ಲುತೂರಾಟಕ್ಕೆ ತಿರುಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಸ್ಥಳದಲ್ಲೇ ಒಬ್ಬರು ಹಾಗೂ ಜುಲೈ 30ರಂದು ಸಿರಾಹಾದಲ್ಲಿ 15 ವರ್ಷದ ಬಾಲಕ ಸೇರಿದಂತೆ ಒಟ್ಟು ಮೂವರು ಬಲಿಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಸರ್ಕಾರದ ವಿಳಂಬ ಧೋರಣೆಯೇ ಗಲಭೆ ಇಷ್ಟೊಂದು ವ್ಯಾಪಿಸಲು ಕಾರಣವಾಯಿತು ಎಂಬ ಟೀಕೆಗಳು ವ್ಯಕ್ತವಾಗಿವೆ. ಗಲಭೆ ಶುರುವಾದ ನಾಲ್ಕು ದಿನಗಳ ಬಳಿಕ ಗೃಹ ಸಚಿವ ಸುಡಾನ್ ಗುರುಂಗ್ ಸುನ್ಸರಿಗೆ ಭೇಟಿ ನೀಡಿದರೆ, ಪ್ರಧಾನಿ ಬಾಲೇಂದ್ರ ಶಾ ಕೇವಲ ಟಿವಿ ಭಾಷಣಕ್ಕಷ್ಟೇ ಸೀಮಿತರಾಗಿದ್ದರು. ಈ ನಡುವೆ ಪಕ್ಷದ ಅಧ್ಯಕ್ಷ ರಬಿ ಲಾಮೇಚಾನೆ, ಪ್ರಧಾನಿ ಮತ್ತು ಗೃಹ ಸಚಿವರ ಅನುಪಸ್ಥಿತಿಯಲ್ಲೇ ಜುಲೈ 29ರಂದು ಸರ್ವಪಕ್ಷ ಸಭೆ ನಡೆಸಿ, ಹಿಂದೂ-ಮುಸ್ಲಿಂ ಮುಖಂಡರೊಂದಿಗೆ ಶಾಂತಿ ಮಾತುಕತೆ ನಡೆಸಿದರು. ಗುಂಪನ್ನು ಚದುರಿಸಲು ಪೊಲೀಸರು ಸೊಂಟಕ್ಕಿಂತ ಮೇಲ್ಭಾಗಕ್ಕೆ ಗುಂಡು ಹಾರಿಸಿದ್ದು ಏಕೆ ಎಂದು ಪ್ರಧಾನಿ ತೀವ್ರ ಪ್ರಶ್ನೆಗಳನ್ನು ಎದುರಿಸುವಂತಾಯಿತು.

ಈ ಕೋಮುದ್ವೇಷ ದಿಢೀರ್ ಹುಟ್ಟಿಕೊಂಡಿದ್ದಲ್ಲ; ಮೂರು ವರ್ಷಗಳ ಹಿಂದೆಯೇ ನೇಪಾಳದ ಸಶಸ್ತ್ರ ಪೊಲೀಸ್ ಪಡೆ ಮತ್ತು ಸೇನೆಯು ಈ ಬಗ್ಗೆ ಸರ್ಕಾರಕ್ಕೆ ಮುನ್ಸೂಚನೆ ನೀಡಿದ್ದವು. ಸಂಘರ್ಷ ತಜ್ಞ ಪ್ರಕಾಶ್ ಭಟ್ಟಾರೈ ಅವರ ಪ್ರಕಾರ, ಧಾರ್ಮಿಕ ಸೌಹಾರ್ದತೆಗೆ ಹೆಸರಾಗಿದ್ದ ನೇಪಾಳದಲ್ಲಿ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 37 ಘರ್ಷಣೆಗಳು ನಡೆದಿರುವುದು ದೊಡ್ಡ ಬದಲಾವಣೆಯಾಗಿದೆ. ದತ್ತಾಂಶಗಳಂತೆ 2022ರಲ್ಲಿ 1, 2024ರಲ್ಲಿ 8 ಹಾಗೂ 2025ರಲ್ಲಿ 3 ಇದ್ದ ಕೋಮು ಸಂಘರ್ಷಗಳ ಸಂಖ್ಯೆ, 2026ರ ಮೊದಲ ಐದು ತಿಂಗಳಲ್ಲೇ 13ಕ್ಕೆ ಏರಿಕೆಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಭಾರತ-ನೇಪಾಳ ನಡುವಿನ ಮುಕ್ತ ಗಡಿಯು ಭಾಷೆ, ಸಂಸ್ಕೃತಿ ಮತ್ತು ಕೌಟುಂಬಿಕ ನಂಟನ್ನು ಹೊಂದಿದ್ದು, ಇಲ್ಲಿ ಪ್ರಚೋದನಾತ್ಮಕ ವಿಚಾರಗಳು ವೇಗವಾಗಿ ಹರಡುತ್ತಿವೆ. ಸ್ಥಳೀಯ ಮಟ್ಟದ ಸಣ್ಣಪುಟ್ಟ ವಿವಾದಗಳಿಗೂ ಕೋಮುಬಣ್ಣ ಬಳಿದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವೀಡಿಯೊಗಳನ್ನು ಹರಿಬಿಡಲಾಗುತ್ತಿದೆ. ಇದರಿಂದಾಗಿ ಒಂದು ಹಳ್ಳಿಯ ಘರ್ಷಣೆ ಕೆಲವೇ ಗಂಟೆಗಳಲ್ಲಿ ಬೀರ್‌ಗಂಜ್, ಮೊಹೋತ್ತರಿಯಂತಹ ವಾಣಿಜ್ಯ ನಗರಗಳಿಗೂ ವ್ಯಾಪಿಸಿ, ಇಡೀ ಪ್ರಾಂತ್ಯಕ್ಕೆ ಸೇನೆ ಇಳಿಸುವ ಮಟ್ಟಕ್ಕೆ ಪರಿಸ್ಥಿತಿ ಕೈಮೀರಿತು ಎಂದು ವರದಿಗಳು ಉಲ್ಲೇಖಿಸಿದೆ.

2008ರಲ್ಲಿ ನೇಪಾಳ ಜಾತ್ಯತೀತ ರಾಷ್ಟ್ರವಾದಾಗಿನಿಂದ ಅಲ್ಲಿ ಹಿಂದೂ ರಾಷ್ಟ್ರ ಮರುಸ್ಥಾಪನೆಯ ಕೂಗು ಹೆಚ್ಚಿದೆ. ‘ಹಿಮಾಲ್ ಖಬರ್’ ಪತ್ರಿಕೆಯ ಸಂಪಾದಕೀಯವನ್ನು ಉಲ್ಲೇಖಿಸಿರುವ ವರದಿಯು, ನೇಪಾಳದಲ್ಲಿ ಆರ್ಎಸ್ಎಸ್ (RSS) ಅಂಗಸಂಸ್ಥೆಯಾದ ಎಚ್ಎಸ್ಎಸ್ (HSS), ವಿಎಚ್‌ಪಿ ಮತ್ತು ಬಜರಂಗದಳದ ಚಟುವಟಿಕೆಗಳು ಹೆಚ್ಚಾಗಿವೆ ಎಂದಿದೆ. ಇದೇ ಮೊದಲ ಬಾರಿಗೆ “ಪಾಕಿಸ್ತಾನಕ್ಕೆ ವಾಪಸ್ ಹೋಗಿ”, “ಜೈ ಶ್ರೀರಾಮ್” ಘೋಷಣೆಗಳು ಕೇಳಿಬರುತ್ತಿದ್ದು, ಸಂಘಟನಾತ್ಮಕವಾಗಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತಲಾಗುತ್ತಿದೆ ಎಂಬ ಆತಂಕಕಾರಿ ವಾಸ್ತವವನ್ನು ವರದಿಯು ತೆರೆದಿಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅಂಬೇಡ್ಕರವರ ಅಧ್ಯಯನವೆಂದರೆ ಜಗತ್ತಿನ ಪ್ರಗತಿಯ ಅಧ್ಯಯನ : ಜಗನ್ನಾಥ ಹೆಬ್ಬಾಳೆ

ಡಾ.ಬಿ.ಆರ್.ಅಂಬೇಡ್ಕರ ಅವರು ಕೇವಲ ದಲಿತ ಸಮುದಾಯದ ನಾಯಕರಲ್ಲ. ಅವರು ಇಡೀ ಮನುಕುಲದ...

ಬೀದರ್‌ | ಸಂವಿಧಾನ ಮೌಲ್ಯಗಳಿಂದ ಸಾಮರಸ್ಯ ಸಮಾಜ ನಿರ್ಮಾಣ : ಸಚಿವ ಈಶ್ವರ ಖಂಡ್ರೆ

ವಿಶ್ವದಲ್ಲೇ ಅತ್ಯಂತ ಮಾದರಿಯಾದ ಹಾಗೂ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ಭಾರತದಲ್ಲಿ...

ಸೆ.17ರಂದು ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದಿಂದ ದತ್ತಿ ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ವಾರ್ಷಿಕ ದತ್ತಿ...

ʼಶಿವಸೇನೆʼ ವಿವಾದ: ಚುನಾವಣಾ ಆಯೋಗದ ನಿರ್ಧಾರ ಸಮರ್ಥಿಸಿದ ಶಿಂಧೆ ಬಣ

‘ನಿಜವಾದ ಶಿವಸೇನೆ’ಯನ್ನು ಗುರುತಿಸುವ ವಿಚಾರದಲ್ಲಿ ಚುನಾವಣಾ ಆಯೋಗ ಅನುಸರಿಸಿದ ‘ಸಂಘಟನಾ ಬಹುಮತ’...