ʼಕಲ್ಚರಲ್ ಶಾಕ್ ಈಗ ಮಾತ್ರವೇ?’; ಮೋದಿ ಹೇಳಿಕೆಗೆ ಕಾಂಗ್ರೆಸ್ ಟೀಕೆ, ಸೋನಿಯಾ ಗಾಂಧಿ ವಿರುದ್ಧದ ನಿಂದನೆ ನೆನಪಿಸಿದ ನೆಟ್ಟಿಗರು

Date:

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ತಮ್ಮ ನಿಧನರಾದ ತಾಯಿಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ “ಕಲ್ಚರಲ್ ಶಾಕ್” ಎಂದಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. “ಒಬ್ಬ ಮಾಜಿ ಪ್ರಧಾನಿಯ ಪತ್ನಿ, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರನ್ನು ವರ್ಷಗಳ ಕಾಲ ‘ಬಾರ್ ಡ್ಯಾನ್ಸರ್’, ಪ್ರಿಯಾಂಕಾ ಗಾಂಧಿಯವರನ್ನು ‘ಹೈಬ್ರೀಡ್’ ಸೇರಿದಂತೆ ಅವಹೇಳನಕಾರಿ ಪದಗಳಿಂದ ನಿಂದಿಸಲಾಗುತ್ತಿತ್ತು. ಈಗಲೂ ನಿಂತಿಲ್ಲ. ದೇಶದ ಹೆಣ್ಣು ಮಕ್ಕಳನ್ನು ತುಚ್ಛವಾಗಿ ಕಾಣುವ ಮನಸ್ಥಿತಿ ಇರುವ, ರೇಪಿಸ್ಟ್‌ಗಳನ್ನು ಸಮರ್ಥಿಸಿಕೊಳ್ಳುವ, ಹೆಣ್ಣುಮಕ್ಕಳು ಅತ್ಯಾಚಾರವನ್ನು ಆನಂದಿಸುತ್ತಾರೆ ಎಂದೆಲ್ಲಾ ಸ್ವತಃ ಬಿಜೆಪಿ ನಾಯಕರೇ ನಾಲಿಗೆ ಹರಿಬಿಡುವಾಗ ಪ್ರಧಾನಿ ಮೋದಿಯವರಿಗೆ ಅಕ್ಷಮ್ಯ ಎನಿಸಲಿಲ್ಲವೇ? ಆಗ ಅದು ‘ಕಲ್ಚರಲ್ ಶಾಕ್’ ಆಗಿರಲಿಲ್ಲವೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

- Advertisement -

ಜಂತರ್‌ ಮಂತರ್‌ನಲ್ಲಿ ಜೆನ್‌ ಝೀ ವಿದ್ಯಾರ್ಥಿಗಳ ಪ್ರತಿಭಟನೆ ಆರಂಭವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಸಂವಹನ ಶೈಲಿಯಲ್ಲಿಯೂ ಗಮನಾರ್ಹ ಬದಲಾವಣೆ ಕಂಡುಬರುತ್ತಿದೆ. ಈ ಹಿಂದೆ “ಮಿತ್ರೋಂ” ಎಂದು ಸಾರ್ವಜನಿಕ ಭಾಷಣ ಆರಂಭಿಸುತ್ತಿದ್ದ ಪ್ರಧಾನಿ, ಇತ್ತೀಚಿನ ವಿಡಿಯೊ ಸಂದೇಶಗಳಲ್ಲಿ “ಫ್ರೆಂಡ್ಸ್‌” ಎಂಬ ಪದವನ್ನು ಬಳಸುತ್ತಿದ್ದಾರೆ. ಅಷ್ಟೇ ಅಲ್ಲ, ಜೆನ್‌ ಝೀಗಳ ಹೋರಾಟ ಅಕ್ಷರಶಃ ಅವರ ನಿದ್ದೆಗೆಡಿಸಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಸಂದೇಶಗಳನ್ನು ಪ್ರಕಟಿಸುತ್ತಿರುವುದು ಕೂಡ ಗಮನ ಸೆಳೆದಿದೆ. ಯುವಜನರ ಆಕ್ರೋಶ ಆಡಳಿತದ ಮೇಲೆ ಒತ್ತಡ ಸೃಷ್ಟಿಸಿರುವುದರ ಸಂಕೇತವೇ ಇದು ಎಂದು ಪ್ರತಿಪಕ್ಷಗಳು ಹಾಗೂ ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಇತ್ತೀಚಿನ ವಿಡಿಯೊದಲ್ಲಿ ಪ್ರಧಾನಿ, ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಯ ವೇಳೆ ತಮ್ಮ ವಿರುದ್ಧ ಮಾತ್ರವಲ್ಲದೆ, ತಮ್ಮ ನಿಧನರಾದ ತಾಯಿಯ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂದು ಹೇಳಿ, ಅದನ್ನು “ಕಲ್ಚರಲ್‌ ಶಾಕ್” ಎಂದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು “ದಾರಿ ತಪ್ಪಿದ ಮಕ್ಕಳು” ಎಂದು ಉಲ್ಲೇಖಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅವರನ್ನು ಕ್ಷಮಿಸಿ, ಸರಿಯಾದ ದಾರಿ ತೋರಿಸುವುದು ಸಮಾಜದ ಜವಾಬ್ದಾರಿ ಎಂದರು.

ಇದನ್ನೂ ಓದಿ: ಭಾರತದಲ್ಲೂ GEN-Z ಕ್ರಾಂತಿ? ನೆರೆಹೊರೆಯ ತಲ್ಲಣಗಳೂ, ‌ʼಕಾಕ್ರೋಚ್ʼ ನೀಡುತ್ತಿರುವ ಎಚ್ಚರಿಕೆಯೂ!

ಪ್ರಧಾನಿಯ ಈ ಹೇಳಿಕೆಗೆ ಕಾಂಗ್ರೆಸ್‌ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, “ದೇಶ ನಿಮ್ಮಿಂದ ಕ್ಷಮೆಯಾಚನೆ ನಿರೀಕ್ಷಿಸುತ್ತಿದೆ. ಆದರೆ ನೀವು ದೇಶವನ್ನೇ ಕ್ಷಮಿಸಿದ್ದೀರಿ” ಎಂದು ಎಕ್ಸ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ರಾಜಕೀಯದಲ್ಲಿ ವೈಯಕ್ತಿಕ ನಿಂದನೆ ಯಾವ ವ್ಯಕ್ತಿಯ ವಿರುದ್ಧವಾಗಿದ್ದರೂ ಅದು ಖಂಡನೀಯ ಎಂಬುದು ಸಾಮಾನ್ಯ ನಿಲುವು. ಆದರೆ ಆ ನೈತಿಕ ಮಾನದಂಡ ಎಲ್ಲ ಸಂದರ್ಭಗಳಲ್ಲೂ ಸಮಾನವಾಗಿ ಅನ್ವಯಿಸಬೇಕೇ, ಅಥವಾ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆಯೇ ಎಂಬ ಪ್ರಶ್ನೆಯೇ ಈಗ ಚರ್ಚೆಯ ಕೇಂದ್ರವಾಗಿದೆ. ಜೆನ್‌ ಝೀ ವಿದ್ಯಾರ್ಥಿಗಳ ಹೋರಾಟ ಈಗ ಕೇವಲ ಶಿಕ್ಷಣ ನೀತಿಯ ವಿರುದ್ಧದ ಪ್ರತಿಭಟನೆಯಾಗಿ ಉಳಿದಿಲ್ಲ. ಅದು ಆಡಳಿತ, ರಾಜಕೀಯ ಪ್ರತಿಕ್ರಿಯೆ ಮತ್ತು ಸಾರ್ವಜನಿಕ ನೈತಿಕತೆಯನ್ನೂ ಪ್ರಶ್ನಿಸುವ ಹಂತಕ್ಕೆ ತಲುಪಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶೇಖ್‌ ಹಸೀನಾ ಪಕ್ಷದ 7 ನಾಯಕರಿಗೆ ಮರಣದಂಡನೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷದ...

ವಂದೇ ಮಾತರಂ ಚರಣಗಳ ಮೊಟಕು: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ

ವಂದೇ ಮಾತರಂ ಗೀತೆಯ ಕೆಲವು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ...

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...