ಚಂದ್ರನ ಅಂಗಳ ತಲುಪಲಿದೆ ನಾಸಾದ ಅರ್ಟೆಮಿಸ್‌-2

Date:

ಚಂದ್ರ  ಎಂದಿಗೂ ಮುಗಿಯದ ಸೋಜಿಗದ ಸಂಗತಿ. ಸಾಮಾನ್ಯ ಮನುಷ್ಯನ ಅಂಬೆಗಾಲ ಮಗುವಿಂದ ಹಿಡಿದು ವಿಜ್ಞಾನಿಗಳ ಕನಸ ಕೂಸುಗಳಾದ ಬಾಹ್ಯಾಕಾಶ ನೌಕೆಗಳಿಗೂ ಚಂದ್ರ ಕೌತುಕದ ವಿಷಯ.

- Advertisement -

ಇನ್ನೇನು ಕೆಲ ದಿನಗಳಲ್ಲಿ ನಾಸ ಚಂದಿರನ ಅಂಗಳಕ್ಕೆ ಅರ್ಟೆಮಿಸ್‌ 2 ಎಂಬ ಲೂನಾರ್‌ ಮಿಶನ್‌ ಕಳುಹಿಸಲಿದೆ. ಜೊತೆಗೆ ಗಗನಯಾತ್ರಿಗಳು ಚಂದಿರನ ಸುತ್ತ ಸುತ್ತಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ನಾಸಾದ ಅರ್ಟೆಮಿಸ್‌ ಯೋಜನೆಗೆ ಹಲವು ವರ್ಷದ ಪರಿಶ್ರಮವಿದೆ. ನೂರಾರು ವಿಜ್ಞಾನಿಗಳ ಶ್ರಮವಿದ್ದು, ಯೋಜನೆ ಪೂರ್ಣವಾಗುವ ವೇಳೆಗೆ 93 ಬಿಲಿಯನ್‌ ಡಾಲರ್‌ ವೆಚ್ಚ ತಗುಲಿದೆ.

ಇದನ್ನು ಓದಿ>>2027ಕ್ಕೆ ಚಂದ್ರ ಮೇಲೆ ರಾಕೆಟ್‌ ಇಳಿಸುವ ಯೋಜನೆಗೆ ಎಲೋನ್‌ ಮಸ್ಕ್‌ನ ಸ್ಪೇಸ್‌ಎಕ್ಸ್‌ ಸಿದ್ದತೆ

50 ವರ್ಷಗಳ ಹಿಂದೆ ಅಮೆರಿಕಾ ಅಪೊಲೊ ಮಿಷನ್‌ ಮೂಲಕ ಚಂದ್ರನ ಮೇಲೆ ಮಾನವ ಕಾಲಿರಿಸಿದ್ದು ದಾಖಲೆ ಸೃಷ್ಟಿಸಿತು. ಅದರಿಂದ ಈಚೆಗೆ ಚಂದ್ರನ ಕಕ್ಷೆಯ ಮೇಲೆ ಹಲವು ಬಾರಿ ಹೋಗಿ ಬಂದ ಮನುಷ್ಯನಿಗೆ ಚಂದಿರ ಬೇರೆಲ್ಲಾ ಆಕಾಶ ಕಾಯಗಳಿಗಿಂತಲೂ ಬಹಳ ಹತ್ತಿರವೂ ಮತ್ತು ಆತನ ಸಂಶೋಧನೆಗೆ ಹೆಚ್ಚು ಪ್ರಯಾಸವಿರದೆ ನಿಲುಕುವವನು ಆಗಿದ್ದಾನೆ.

ಮೇಲಿನಿಂದ ತೇವವಿರದ  ಒಣ ಧೂಳು ಆವರಿಸಿದ ಮೇಲ್ಮೈ ಹೊಂದಿರುವಂತೆ ಕಾಣುವ ಚಂದ್ರ ತನ್ನೊಳಗೆ ಬಹಳಷ್ಟು ವಿಸ್ಮಯಗಳನ್ನು ಅಡಗಿರಿಸಿದ್ದಾನೆ. ಭೂಮಿಯ ಮೇಲ್ಮೈ ಮೇಲೆ ಕಾಣ ಸಿಗುವ ಹಲವು ಅಂಶಗಳು ಚಂದ್ರನ ಮೇಲೂ ಕಾನಸಿಗುತ್ತದೆ ಎನ್ನುತ್ತಾರೆ ಖಗೋಳ ತಜ್ಞರಾದ ಸಾರಾ ರಸೆಲ್‌.

ಚಂದ್ರನ ಮೇಲೆ ಖನಿಜಗಳಿವೆ, ಐರನ್‌ ಮತ್ತು ಟೈಟಾನಿಯಂ, ಹೀಲಿಯಂ ಮುಂತಾದ ಖನಿಜಾಂಶಗಳು ಅಧಿವಾಹಕಗಳು ಹಾಗೂ  ವೈದ್ಯಕೀಯ ಉಪಕರಣಗಳಲ್ಲಿ ಬಳಕೆಯಾಗುತ್ತದೆ.

ಇದೆಲ್ಲದಕ್ಕಿಂತಲೂ ನಮ್ಮನ್ನು ಬೆರಗುಗೊಳಿಸುವ ಅಂಶವೆಂದರೆ ಚಂದ್ರನ ಮೇಲೆ ನೀರಿನ ಅಂಶ ಇದೆಯೆಂಬ ಸಂಶೋಧನೆ. ಕೆಲವು ಖನಿಜಗಳಲ್ಲಿ ನೀರಿನ ಅಂಶವಿರುವುದು ತಿಳಿದು ಬಂದಿದೆ ಹಾಗೂ ಚಂದ್ರನ ಕೆಲ ಧ್ರುವಗಳಲ್ಲಿ ನೀರು ಇರಬಹುದು ಎಂಬ ಊಹೆಯೂ ಇದೆ.

L4LPZEDD75LHBAGHPJD5LVQREM

ಸದಾ ಕತ್ತಲಿಂದ ಕೂಡಿರುವ ಕುಳಿಗಳು ಇರುವುದರಿಂದ ಆ ಕುಳಿಗಳಲ್ಲಿ ಹಿಮಗಡ್ಡೆಗಳು ರೂಪುಗೊಳ್ಳಬಹುದಾದ ಸಾಧ್ಯತೆಗಳಲಿವೆ ಎನ್ನುತ್ತಾರೆ ಖಗೋಳ ವಿಜ್ಞಾನಿ ರಸೆಲ್‌.

ಚಂದಿರನ ಮೇಲೆ ವಾಸ್ತವ್ಯ ಸಾಧ್ಯವಾಗಿಸುವ ಮೊದಲ ಅಂಶ ನೀರು. ಕುಡಿಯಲು ಯೋಗ್ಯವಾದ ನೀರು ಅಷ್ಟೇ ಅಲ್ಲ. ಚಂದ್ರನ ವಾತಾವರಣದಲ್ಲಿರುವ ನೀರಿನ ಮೂಲ ಧಾತುಗಳಾದ ಜಲಜನಕ ಹಾಗೂ ಆಮ್ಲಜನಕಗಳು ಚಂದ್ರನ ಮೇಲೆ ಕಾಲಿರಿಸುವ ಗಗನಯಾತ್ರಿಗಳ ಸರಾಗ ಉಸಿರಾಟಕ್ಕೆ ನೆರವಾಗುತ್ತದೆ.

ಚಂದಿರನ ಅಂಗಳದಲ್ಲೂ ಸ್ಪರ್ಧೆ!

ಜಗತ್ತಿನ ಕೆಲವು ಬಲಿಷ್ಟ ರಾಷ್ಟ್ರಗಳು ಚಂದ್ರನ ಅಂಗಳಕ್ಕೆ ನಾ ಮೊದಲು ತಾ ಮೊದಲು ಎಂಬ ಸ್ಪರ್ಧೆಗೆ ಬಿದ್ದಿವೆ. ಭಾರತ, ಚೀನಾ, ರಷ್ಯಾ ಮತ್ತು ಅಮೆರಿಕ ಈಗಾಗಲೇ ತಮ್ಮ ದೇಶದ ಧ್ವಜವನ್ನು ಚಂದ್ರನ ಅಂಗಳದತ್ತ ಕೊಂಡೊಯ್ದಿವೆ.

2030ರಲ್ಲಿ ಇನ್ನೊಮ್ಮೆ ಚಂದ್ರನ ಮೇಲೆ ಕಾಲಿಡಲು ಚೀನಾ ತಯಾರಿ ನಡೆಸುತ್ತಿದೆ. ಚೀನಾ ಹಾಗೂ ಅಮೆರಿಕ ಎರಡೂ ದೇಶಗಳು ಚಂದಿರನ ಒಂದೇ ಮೇಲ್ಮೈಯನ್ನು ತಮ್ಮ ಗುರುಯಾಗಿಸಿವೆ.

1967ರಲ್ಲಿ ವಿಶ್ವಸಂಸ್ಥೆಯ ಬಾಹ್ಯಕಾಶ ಒಪ್ಪಂದವೂ ಚಂದ್ರನ ಮೇಲೆ ಯಾವ ದೇಶವೂ ಅಸ್ತಿತ್ವ ಹೊಂದಿಲ್ಲ ಎಂದು ಹೇಳಿದೆ. ಆದರೆ ಚಂದ್ರನ ಅಂಗಳದಲ್ಲಿ ಯಾರು ಯಾವ ಅಂಶ ಪತ್ತೆ ಮಾಡಿದರು, ಯಾವ ದೇಶ ಏನು ಪಡೆಯಿತು ಎನ್ನುವುದಂತೂ ಸದ್ಯಕ್ಕಂತೂ ಪೂರ್ತಿ ಬಹಿರಂಗಗೊಂಡಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...