2027ಕ್ಕೆ ಚಂದ್ರ ಮೇಲೆ ರಾಕೆಟ್‌ ಇಳಿಸುವ ಯೋಜನೆಗೆ ಎಲೋನ್‌ ಮಸ್ಕ್‌ನ ಸ್ಪೇಸ್‌ಎಕ್ಸ್‌ ಸಿದ್ದತೆ

Date:

ಎಲೋನ್‌ ಮಸ್ಕ್‌ ಒಡೆತನದ ʼಸ್ಪೇಸ್‌ ಎಕ್ಸ್‌ʼ ಕಂಪನಿ 2026ರ ಅಂತ್ಯದ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳು ಇಲ್ಲದ ಸ್ಟಾರ್‌ಶಿಪ್‌ ರಾಕೆಟ್‌ ಅನ್ನು ಕಳುಹಿಸಲು ಹಾಕಿಕೊಂಡಿದ್ದ ಯೋಜನೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

- Advertisement -

ತಜ್ಞರು ಹೇಳುವಂತೆ ಈ ಯೋಜನೆ ಮಾರ್ಚ್‌ 2027ರಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಯೋಜನೆಯ ರಾಕೆಟ್‌ ಅಭಿವೃದ್ಧಿಯ ಹಂತದಲ್ಲಿದ್ದು ಹೆಚ್ಚಿನ ಪರೀಕ್ಷೆಗೆ ಒಳಪಡುತ್ತಿದೆ. ಸ್ಟಾರ್‌ಶಿಪ್ ಒಂದು ದೊಡ್ಡದಾದ ಸ್ಟೇನ್‌ಲೆಸ್-ಸ್ಟೀಲ್ ಬಾಹ್ಯಾಕಾಶ ನೌಕೆಯಾಗಿದ್ದು, ಮರುಬಳಕೆ ಮಾಡಬಹುದಾದ ಹಾಗೂ ಚಂದ್ರ, ಮಂಗಳಗಳಿಗೆ ಮಾನವರು ಮತ್ತು ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಟಾರ್‌ಶಿಪ್‌ ರಾಕೆಟ್‌ ಅನ್ನು ಮೊದಲು ಮಂಗಳ ಗ್ರಹದ ಮೇಲೆ ಇಳಿಸುವುದಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಈಗ, ಮೊದಲು ಚಂದ್ರನ ಮೇಲೆ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಚಂದ್ರ ಹತ್ತಿರದಲ್ಲಿದೆ. ಆದ್ದರಿಂದ ಸಂವಹನವು ತ್ವರಿತವಾಗಿ ಹಾಗೂ ಕಾರ್ಯಚರಣೆನ್ನು ಸುಲಭಗೊಳಿಸಬಹುದು ಎಂದು ತಜ್ಞರ ಹೇಳಿದ್ದಾರೆ.

ಸ್ಪೇಸ್‌ಎಕ್ಸ್‌ನ ಯೋಜನೆಯ ಸ್ಟಾರ್‌ಶಿಪ್‌ ಮೊದಲು ಚಂದ್ರನ ಮೇಲೆ ಇಳಿಸಲಾಗುತ್ತದೆ. ನಂತರ ಹಂತ ಹಂತವಾಗಿ, ಮಂಗಳ ಗ್ರಹಕ್ಕೆ ಕಳುಹಿಸಲಾಗುತ್ತದೆ ಎಂದು ವರದಿಯಾಗಿದೆ. ಮಂಗಳ ಗ್ರಹದಲ್ಲಿನ ಕಠಿಣ ಸವಾಲುಗಳನ್ನು ಎದುರಿಸುವ ಮೊದಲು ಸುರಕ್ಷಿತ ವಾತಾವರಣದಲ್ಲಿ ರಾಕೆಟ್‌ ಕಳುಹಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಚಂದ್ರನ ಮೇಲೆ ರಾಕೆಟ್‌ಗಳನ್ನು ಕಳುಹಿಸುವ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಅಮೆರಿಕ ಸೇರಿದಂತೆ ಅನೇಕ ದೇಶಗಳು ಮುಂಚೂಣಿಯಲ್ಲಿವೆ. ಅದರಲ್ಲಿ ಚೀನಾ ಕೂಡ ಮನುಷ್ಯರನ್ನು ಚಂದ್ರನ ಮೇಲೆ ಕಳುಹಿಸುವ ಕೆಲಸ ಮಾಡುತ್ತಿದೆ. 1972ರಲ್ಲಿ ನಾಸಾ ಅಪೋಲೋ-17 ಕಳುಹಿಸಿದ ನಂತರ ಯಾರೂ ಹೋಗಿಲ್ಲ. ಅದಕ್ಕಾಗಿಯೇ ಚಂದ್ರನ ಮೇಲೆ ಇಳಿಯುವ ಕಾರ್ಯಚರಣೆಯಲ್ಲಿ ಯಶಸ್ವಿಯಾಗುವ ಒತ್ತಡಕ್ಕೆ ಸ್ಪೇಸ್‌ಎಕ್ಸ್‌ ತಯಾರಾಗಿರುವಂತಿದೆ.

ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿಯಂತೆ ಎಲೋನ್‌ ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಇತರ ಕ್ಷೇತ್ರಗಳಿಗೂ ವಿಸ್ತರಿಸಿಕೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಈಗಾಗಲೇ xAI ಎಂಬ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಕಂಪನಿಯನ್ನು ಸ್ವಾಧಿನಪಡಿಸಿಕೊಂಡಿದೆ. ಸ್ಪೇಸ್‌ಎಕ್ಸ್‌ 1 ಟ್ರಿಲಿಯನ್‌ ಡಾಲರ್‌ ಮತ್ತು AI ಕಂಪನಿ 250 ಬಿಲಿಯನ್‌ ಡಾಲರ್‌ ಮೌಲ್ಯದ ಸಂಪತ್ತನ್ನು ಹೊಂದಿದೆ. ಚಂದ್ರ ಅಥವಾ ಮಂಗಳ ಗ್ರಹಗಳ ಕಾರ್ಯಚರಣೆಗೆ AI ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ಸ್ಪೇಸ್‌ಎಕ್ಸ್‌ ಇನ್ನು ಸ್ಪಷ್ಟಪಡಿಸಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...

ಯುದ್ಧದ ಕರಾಳ ನೆರಳು: ರಷ್ಯಾ ಕನಸು ನಚ್ಚುನೂರಾಗಿ ಉಕ್ರೇನ್‌ನಲ್ಲಿ ಬಂಧಿಯಾದ ಭಾರತೀಯ ಯುವಕ!

ಉತ್ತಮ ಜೀವನ ರೂಪಿಸಿಕೊಳ್ಳಬೇಕು, ದೇಶ ವಿದೇಶ ಸುತ್ತಿ ಆರ್ಥಿಕವಾಗಿ ಕುಟುಂಬವನ್ನು ಬೆಂಬಲಿಸಬೇಕು...

ಮುಳುಗುತ್ತಿರುವ ಬ್ಯಾಂಕಾಕ್: 50 ಜಿಲ್ಲೆಗಳಲ್ಲಿ ‘ವಿಪತ್ತು’ ಘೋಷಣೆ, ಸ್ತಬ್ಧಗೊಂಡ ಜನಜೀವನ

ಸತತ ಮಳೆಯಿಂದಾಗಿ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಅಕ್ಷರಶಃ ಜಲಾವೃತಗೊಂಡಿದ್ದು, ನಗರದ ಎಲ್ಲಾ...