ಇಂಗ್ಲಿಷ್‌ ಕಾಲುವೆಯಲ್ಲಿ ರಷ್ಯಾದ ತೈಲ ಹಡಗು ವಶಕ್ಕೆ: ಭಾರತೀಯ ಕ್ಯಾಪ್ಟನ್ ಬಂಧನ

Date:

ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಹೇರಲಾಗಿರುವ ಕಠಿಣ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದಡಿ, ರಷ್ಯಾದ ‘ಶ್ಯಾಡೋ ಫ್ಲೀಟ್’ (ನಿಗೂಢ ಪಡೆ) ತೈಲ ಹಡಗೊಂದನ್ನು ಬ್ರಿಟನ್ ಸೇನೆ ವಶಕ್ಕೆ ಪಡೆದಿದೆ. ಈ ಹಡಗಿನ ಕ್ಯಾಪ್ಟನ್ ಆಗಿದ್ದ 38 ವರ್ಷದ ಭಾರತೀಯ ಪ್ರಜೆ ಅಜಯ್ ಪಂತ್ ಅವರನ್ನು ಇಂಗ್ಲೆಂಡ್‌ನ ರಾಷ್ಟ್ರೀಯ ಅಪರಾಧ ದಳ (NCA) ಬಂಧಿಸಿದೆ.

- Advertisement -

ಇತ್ತೀಚೆಗೆ (ಜೂನ್ 14ರ ಭಾನುವಾರ ಬೆಳಗಿನ ಜಾವ) ಇಂಗ್ಲಿಷ್ ಕಾಲುವೆಯಲ್ಲಿ (English Channel) ಈ ಕಾರ್ಯಾಚರಣೆ ನಡೆದಿದೆ. 2019ರ ರಷ್ಯಾ ನಿರ್ಬಂಧಗಳ ನಿಯಮಾವಳಿಗಳನ್ನು ಉಲ್ಲಂಘಿಸಿ, ರಷ್ಯಾದಿಂದ ನಿಷೇಧಿತ ತೈಲವನ್ನು ಕದ್ದುಮುಚ್ಚಿ ಮೂರನೇ ದೇಶಕ್ಕೆ ಪೂರೈಸಿದ ಅಥವಾ ಸಾಗಿಸಿದ ಗಂಭೀರ ಆರೋಪವನ್ನು ಅಜಯ್ ಪಂತ್ ಅವರ ಮೇಲೆ ಹೊರಿಸಲಾಗಿದೆ. ಅವರನ್ನು ಸೌತಾಂಪ್ಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೂಲಕ ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಜುಲೈ 16ಕ್ಕೆ ಮುಂದೂಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಇದನ್ನು ಓದಿದ್ದೀರಾ? ಮೋದಿ ಸರ್ಕಾರದ ಡಿಲಿಮಿಟೇಷನ್ ದುಸ್ಸಾಹಸ: ಮ್ಯಾಜಿಕ್ ನಂಬರ್‌ಗಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲಿ!

ಸುಮಾರು 244 ಮೀಟರ್ ಉದ್ದದ ‘ಎಂ.ವಿ. ಸ್ಮಿರ್ಟೋಸ್’ (MV Smyrtos) ಎಂಬ ಈ ಬೃಹತ್ ತೈಲ ಹಡಗು, ಸುಮಾರು 98,000 ದಿಂದ 1 ಲಕ್ಷ ಟನ್‌ಗಳಷ್ಟು ರಷ್ಯಾದ ಕಚ್ಚಾ ತೈಲವನ್ನು ಸಾಗಿಸುತ್ತಿತ್ತು. ಬ್ರಿಟನ್‌ನ ರಾಯಲ್ ಮರೀನ್ ಕಮಾಂಡೋಗಳು ಮತ್ತು ಎನ್‌ಸಿಎ ಅಧಿಕಾರಿಗಳು ‘ಚಿನೂಕ್’ ಹೆಲಿಕಾಪ್ಟರ್‌ಗಳ ಮೂಲಕ ನೇರವಾಗಿ ಹಡಗಿನ ಮೇಲೆ ಇಳಿದು, ಆರು ಗಂಟೆಗಳ ಕಾಲ ಶೋಧ ನಡೆಸಿ ಹಡಗನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ನಿರ್ಬಂಧಿತ ಹಡಗೊಂದನ್ನು ವಶಪಡಿಸಿಕೊಳ್ಳಲು ಬ್ರಿಟನ್ ಸೇನೆ ನಡೆಸಿದ ಮೊದಲ ಕಾರ್ಯಾಚರಣೆ ಇದಾಗಿದೆ ಎಂದು ಬ್ರಿಟನ್ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ಸದ್ಯ ಈ ಹಡಗನ್ನು ಇಂಗ್ಲೆಂಡ್‌ನ ಡಾರ್ಸೆಟ್ ಕರಾವಳಿಯ ವೇಮೌತ್ ಬಳಿ ಲಂಗರು ಹಾಕಲಾಗಿದ್ದು, ಬ್ರಿಟನ್ ಜಲಪ್ರದೇಶದಿಂದ ಹೊರಹೋಗದಂತೆ ಅಲ್ಲಿನ ಸಾರಿಗೆ ಸಚಿವೆ ಹೈಡಿ ಅಲೆಕ್ಸಾಂಡರ್ ಆದೇಶ ಹೊರಡಿಸಿದ್ದಾರೆ. ಹಡಗಿನಲ್ಲಿದ್ದ ಭಾರತ ಹಾಗೂ ಜಾರ್ಜಿಯಾ ಮೂಲದ ಉಳಿದ 24 ಸಿಬ್ಬಂದಿ ಹಡಗಿನಲ್ಲೇ ಉಳಿದಿದ್ದು, ತನಿಖಾಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ. ರಷ್ಯಾ ತನ್ನ ‘ಶ್ಯಾಡೋ ಫ್ಲೀಟ್’ ಮೂಲಕ ಮಾಡುವ ತೈಲ ವ್ಯಾಪಾರದಿಂದ ಬರುವ ಹಣವನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಸುತ್ತಿದೆ; ಈ ಕಾರ್ಯಾಚರಣೆಯು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಾನೂನುಬಾಹಿರ ಯುದ್ಧಕ್ಕೆ ನೀಡಿದ ದೊಡ್ಡ ಪೆಟ್ಟು ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕದನ ವಿರಾಮ ಎಂಬುದು ಬರಿ ಕಣ್ಣೊರೆಸುವ ತಂತ್ರ’; ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆ ಆಕ್ರೋಶ

ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ಪಡೆಗಳು ನಡೆಸುತ್ತಿರುವ ಹಿಂಸಾಚಾರ ಮತ್ತು ಮಾನವಹಕ್ಕುಗಳ...

ಸೋಮನಾಥ ದೇಗುಲದ ಸುತ್ತ ಮಾಂಸಾಹಾರ ನಿಷೇಧ ಮುಂದುವರಿಕೆ; ಏಕಸದಸ್ಯ ಪೀಠದ ಆದೇಶಕ್ಕೆ ಗುಜರಾತ್ ಹೈಕೋರ್ಟ್ ತಡೆ

ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರ ತಯಾರಿಕೆ, ಮಾರಾಟ...

SIR ­| ಫಾರ್ಮ್-7 ದುರ್ಬಳಕೆ: ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ತಾಕೀತು!

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ‘ಫಾರ್ಮ್-7’ ನಮೂನೆಗಳನ್ನು ಅಪಾರ ಪ್ರಮಾಣದಲ್ಲಿ...

ವಿಮಲ್ ಜಾಹೀರಾತು ವಿವಾದ: ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ ನಟ ಅಜಯ್ ದೇವಗನ್! 

'ವಿಮಲ್ ಏಲಕ್ಕಿ' ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಇಲಾಖೆ...