ತೈಲ ಸಂಗ್ರಹಗಳ ದಾಳಿ ಇಲ್ಲ ಎಂದ ಟ್ರಂಪ್: ಹಾರ್ಮುಜ್ ಜಲಸಂಧಿಯಿಂದ 22 ಹಡಗುಗಳು ಭಾರತದತ್ತ

Date:

ಇರಾನ್ ದೇಶದ ಸೌತ್‌ ಪಾರ್ಸ್‌ ಅನಿಲ ಫೀಲ್ಡ್‌ ಮೇಲೆ ಇಸ್ರೇಲ್‌ ಇನ್ನು ಮೇಲೆ ದಾಳಿ ಮಾಡುವುದಿಲ್ಲ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಊಹೆಗೂ ಮೀರಿ ಇರಾನ್‌ ಪ್ರತಿದಾಳಿ ಮಾಡಿದೆ. ಯುದ್ದವನ್ನು ನಾವು ಬಯಸುವುದಿಲ್ಲ. ಆದರೆ, ನಮ್ಮ ಮೇಲೆ ದಾಳಿ ಮಾಡಿದವರನ್ನು ನಾವು ಕ್ಷಮಿಸುವುದಿಲ್ಲ. ನಾವು ಯುದ್ದ ನಿಲ್ಲಿಸುವುದಕ್ಕೆ ಅಮೇರಿಕ ಮತ್ತು ಇಸ್ರೇಲ್‌ಗೆ ಮೂರು ಷರತ್ತುಗಳನ್ನು ಕೂಡ ಇರಾನ್‌ ಹಾಕಿದೆ. ಮಾತ್ರವಲ್ಲದೆ, ನಮ್ಮ ಮೇಲೆ ದಾಳಿ ಮುಂದುವರಿಸಿದರೆ ಐದು ವರ್ಷಗಳು ಈ ಯುದ್ಧ ಮುಂದುವರಿಯುವುದಾದರೂ ನಾವು ಪ್ರತಿದಾಳಿಯನ್ನು ಮಾಡುತ್ತೇವೆ ಎಂದು ಇರಾನ್‌ ಎಚ್ಚರಿಕೆ ನೀಡಿತ್ತು.

ಈ ನಡುವೆ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಾಸಗಳಾಗಿವೆ. ತೈಲ ಬೆಲೆ ಗಗನಕ್ಕೆ ಏರಿದೆ. ಕತಾರ್‌ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಟೆಹ್ರಾನ್‌ಗೆ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆದ ಘಟನೆಗಳಿಗೆ ಕೋಪಗೊಂಡ ಇಸ್ರೇಲ್‌, ಇರಾನ್‌ನ ಸೌತ್‌ ಪಾರ್ಸ್‌ ಗ್ಯಾಸ್‌ ಫೀಲ್ಡ್‌ ಎಂದು ಕರೆಯಲ್ಪಡುವ ಪ್ರಮುಖ ಸೌಲಭ್ಯದ ಮೇಲೆ ಹಿಂಸಾತ್ಮಕ ದಾಳಿ ಮಾಡಿದೆ. ವಾಷಿಂಗ್ಟನ್‌ ಅನ್ನು ದೂರ ಇಡುವ ಪ್ರಯತ್ನವನ್ನು ಟ್ರಂಪ್‌ ಈ ಹೇಳಿಕೆಯಿಂದ ಮಾಡಿದ್ದಾರೆ. ʼಇದು ಕೇವಲ ಇಸ್ರೇಲ್‌ನ ದಾಳಿ. ಈ ಬಗ್ಗೆ ಅಮೇರಿಕಕ್ಕೆ ಏನೂ ತಿಳಿದಿರಲಿಲ್ಲʼ ಎಂದು ಅಚ್ಚರಿಯ ಹೇಳಿಕೆ ಕೊಟ್ಟರು.

ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಫೀಲ್ಡ್‌ ಎಂದೇ ಹೇಳಲಾಗುವ ಸೌತ್‌ ಪಾರ್ಸ್‌ ಮೇಲೆ ನಡೆದ ಬಾಂಬ್‌ ದಾಳಿಗೆ ಗಲ್ಫ್‌ನಾದ್ಯಂತ ಪ್ರತಿಕಾರದ ದಾಳಿ ನಡೆಸುವುದಾಗಿ ಇರಾನ್‌ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಟ್ರಂಪ್‌ ಈ ಹೇಳಿಕೆ ಕೊಟ್ಟಿದ್ದಾರೆ. ಸೌದಿ ಅರೇಬಿಯಾ, ಯುನೈಟೆಡ್‌  ಅರಬ್‌ ಎಮಿರೆಟ್ಸ್‌ ಮತ್ತು ಕತಾರ್‌ನಲ್ಲಿರುವ ಐದು ಇಂಧನ ಸೌಲಭ್ಯಗಳನ್ನು ಮುಂಬರುವ ಗಂಟೆಗಳಲ್ಲಿ ಗುರಿಯಾಗಿಸಲಾಗುವುದು ಎಂದು ಇರಾನ್‌ ಅಧಿಕಾರಿಗಳು ಹೇಳಿಕೆ ನೀಡಿದ್ದರು.

ಯುದ್ಧ ನಿಲ್ಲಿಸುವುದರ ಬಗ್ಗೆ ಮಾತುಕತೆಗೆ ನಾವು ಸಿದ್ಧರಿದ್ದರೂ ಇರಾನ್‌ ಸಿದ್ಧವಿಲ್ಲ ಎಂದು ಸ್ವತಃ ಟ್ರಂಪ್‌ ಹೇಳಿಕೆ ನೀಡಿದ್ದರು. ಇರಾನ್‌ನೊಂದಿಗಿನ ಯುದ್ಧಕ್ಕೆ ನಾವು ಅಮೇರಿಕವನ್ನು ಎಳೆದು ತಂದಿಲ್ಲ ಎಂದು ಬೆಂಜಮಿನ್‌ ನೆತನ್ಯಾಹು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೂ ಕಾರಣವಾಗಿವೆ.

ಇದನ್ನೂ ಓದಿ : ಆರೋಪಿಯಾದ ನಿಮಗೆ ಪೊಲೀಸ್ ರಕ್ಷಣೆಯೇ: ಸೌಹಾರ್ದತೆ ಮೆರೆದ ‘ಮೊಹಮ್ಮದ್ ದೀಪಕ್’ಗೆ ಕೋರ್ಟ್ ಪ್ರಶ್ನೆ!

ಅಮೇರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಜಾಗತಿಕವಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿರುವ ಅರಿವು ಬಂದಿದೆ. ಹಾಗಾಗಿ ಇರಾನ್‌ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವುದಕ್ಕೆ ಯತ್ನಿಸುತ್ತಿದ್ದಾರೆ. ಆದರೆ ಇರಾನ್‌ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದೆ.

ಇನ್ನು, ಹಾರ್ಮಜ್‌ ಜಲಸಂಧಿಯ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ಇಂಧನ ಭದ್ರತೆಗಾಗಿ ಅಗತ್ಯವಿರುವ 22 ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಎಂದು ಸರ್ಕಾರ ತಿಳಿಸಿದೆ. ಇವುಗಳಲ್ಲಿ ಕಚ್ಚಾತೈಲ, ಎಲ್.ಪಿ.ಜಿ ಮತ್ತು ಎಲ್‌.ಎನ್.ಜಿ ಹೊತ್ತ ಹಡುಗುಗಳಿವೆ. ಎಲ್ಲವೂ ಸುರಕ್ಷಿತವಾಗಿವೆ ಎಂದು ವರದಿ ಆಗಿದೆ.

ಸುಮಾರು 2.15 ಲಕ್ಷ ಮೆಟ್ರಿಕ್ ಟನ್ ದ್ರವೀಕೃತ ನೈಸರ್ಗಿಕ ಅನಿಲ (LNG), 3.21 ಲಕ್ಷ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಮತ್ತು 16.76 ಲಕ್ಷ ಟನ್ ಕಚ್ಚಾ ತೈಲವನ್ನು ಸಾಗಿಸುತ್ತಿವೆ.

- Advertisement -

20 ಹಡಗುಗಳಲ್ಲಿ 10 ಭಾರತೀಯ ಧ್ವಜವನ್ನು ಹೊಂದಿವೆ. 20 ಹಡಗುಗಳಲ್ಲಿ ಮೂರು ಎಲ್‌ಎನ್‌ಜಿ ವಾಹಕಗಳು, 10 ಎಲ್‌ಪಿಜಿ ವಾಹಕಗಳು ಮತ್ತು ಏಳು ಕಚ್ಚಾ ತೈಲ ಟ್ಯಾಂಕರ್‌ಗಳು ಸೇರಿವೆ. ಮಾರ್ಷಲ್ ದ್ವೀಪಗಳು, ಲೈಬೀರಿಯಾ, ಗ್ರೀಸ್, ಮಾಲ್ಟಾ ಮತ್ತು ಪೋರ್ಚುಗಲ್ ಈ ಹಡಗುಗಳು ಕೂಡ ಸೇರಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಪರ್ಷಿಯನ್ ಕೊಲ್ಲಿ ಪ್ರದೇಶದಿಂದ ಹಡಗುಗಳನ್ನು ಸ್ಥಳಾಂತರಿಸಲು ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ, ನೌಕಾ ಕಾರ್ಯಾಚರಣೆ ನಿರ್ದೇಶನಾಲಯ (DNO), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoPNG) ಮತ್ತು ಐಎಫ್ ಸಿಐಒಆರ್ ನೊಂದಿಗೆ ಸಮನ್ವಯ ನಡೆಯುತ್ತಿದೆ ಎಂದು ವರದಿಯಾಗಿದೆ.

ಎರಡು ಎಲ್‌ಪಿಜಿ ವಾಹಕಗಳು ಮತ್ತು ಒಂದು ತೈಲ ಟ್ಯಾಂಕರ್ – ಶಿವಾಲಿಕ್, ನಂದಾ ದೇವಿ ಮತ್ತು ಜಗ್ ಲಾಡ್ಕಿ ಹಡಗುಗಳು ಈ ಮೊದಲೇ ಭಾರತಕ್ಕೆ ಬಂದು ತಲುಪಿದ್ದವು. ಭಾರತೀಯ ನೌಕಾಪಡೆಯು ಓಮನ್ ಕೊಲ್ಲಿ ಪ್ರದೇಶದಿಂದ ಬೆಂಗಾವಲು ನೀಡಿತ್ತು. ಮೂರು ಹಡಗುಗಳು ಭಾರತವನ್ನು ತಲುಪಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರೆಜಿಲ್‌ ಚುನಾವಣೆ | ಬಲಪಂಥೀಯ ಬೊಲ್ಸೊನಾರೊ ಮುನ್ನಡೆ; ಲೂಲಾ ಜೊತೆ ಅ.25ರಂದು ರನ್‌ಆಫ್

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತದಲ್ಲಿ ಬಲಪಂಥೀಯ ನಾಯಕ ಫ್ಲಾವಿಯೊ ಬೊಲ್ಸೊನಾರೊ...

ಮಕ್ಕಾ ಒಪ್ಪಂದದಡಿ ಸೌದಿ ಅರೇಬಿಯಾಗೆ ಸೇನಾ ಪಡೆಗಳನ್ನು ಕಳುಹಿಸಲು ಪಾಕಿಸ್ತಾನ, ಟರ್ಕಿ ಒಪ್ಪಿಗೆ

ರಿಯಾದ್‌ : ಮಕ್ಕಾ ಒಪ್ಪಂದದಡಿ ಟರ್ಕಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ...

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಪಡೆದ ಸಂಶೋಧನೆಯ ಸುತ್ತ ಒಂದು ನೋಟ

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ...