ವೆನಿಜುವೆಲಾದ ಕ್ಯಾರಕಾಸ್ ಸೇರಿದಂತೆ ಅನೇಕ ನಗರಗಳಲ್ಲಿ ಸಂಭವಿಸಿದ ಪ್ರಬಲ ಸರಣಿ ಭೂಕಂಪಗಳಿಂದ ಇಡೀ ದೇಶ ಅಕ್ಷರಶಃ ಬೆಚ್ಚಿಬಿದ್ದಿದೆ. ಸಾವಿರಾರು ಜನ ಸಾವನ್ನಪ್ಪಿ, ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ. ಲಕ್ಷಾಂತರ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ನೆರವಿಗೆ ಹಲವು ರಾಷ್ಟ್ರಗಳು ಮುಂದಾಗಿವೆ. ಅಮೆರಿಕ ಕೂಡ ತಾನೂ ನೆರವಾಗುವ ಸೋಗಿನಲ್ಲಿ ಆ ದೇಶದ ಮೇಲೆ ಹಿಡಿತ ಸಾಧಿಸುವ ಕುತಂತ್ರಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಅಮೆರಿಕ ವೆನೆಜುವೆಲಾ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧಗಳು.
ಜನವರಿಯಲ್ಲಿ ಅಮೆರಿಕದ ಪಡೆಗಳು ವೆನಿಜುವೆಲಾದ ಆಗಿನ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ದಾಳಿಯೊಂದರಲ್ಲಿ ಅಪಹರಿಸಿದರು. ಮಡುರೋ ಅವರ ಆಪ್ತ ಡೆಲ್ಸಿ ರೊಡ್ರಿಗಸ್ ನೇತೃತ್ವದ ಮಧ್ಯಂತರ ಸರ್ಕಾರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದೊಂದಿಗೆ ಸ್ಥಿರವಾದ ಸಂಬಂಧ ಹೊಂದಿದ ಬಳಿಕ ಆರ್ಥಿಕ ನಿರ್ಬಂಧಗಳನ್ನು ಭಾಗಶಃ ಸಡಿಲಿಸಲಾಯಿತು. ಟ್ರಂಪ್ ಆಡಳಿತ ಅಂದಿನಿಂದ ವೆನಿಜುವೆಲಾದ ತೈಲ ವಲಯದಲ್ಲಿ ಅಮೆರಿಕದ ಹೂಡಿಕೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದೆ.
ವೆನಿಜುವೆಲಾಗೆ ನೆರವು ನೀಡುವ ಭರವಸೆ ನೀಡಿದ ಮೊದಲ ನಾಯಕರಲ್ಲಿ ಟ್ರಂಪ್ ಕೂಡ ಒಬ್ಬರು. ಈ ಬಗ್ಗೆ ತಮ್ಮ ‘ಟ್ರೂತ್ ಸೋಶಿಯಲ್’ ವೇದಿಕೆಯಲ್ಲಿ ಬರೆದುಕೊಂಡಿರುವ ಟ್ರಂಪ್, “ಅಮೆರಿಕ ಸಹಾಯ ಮಾಡಲು ಸಿದ್ಧವಾಗಿದೆ! ತ್ವರಿತವಾಗಿ ಕಾರ್ಯಪ್ರವೃತ್ತರಾಗಲು ನಮ್ಮ ಸರ್ಕಾರದ ಎಲ್ಲಾ ಏಜೆನ್ಸಿಗಳಿಗೆ ಸೂಚಿಸಿದ್ದೇನೆ. ನಮ್ಮ ಹೊಸ ಮತ್ತು ಶ್ರೇಷ್ಠ ಸ್ನೇಹಿತರಿಗಾಗಿ ನಾವು ಯಾವಾಗಲೂ ಅಲ್ಲಿರುತ್ತೇವೆ” ಎಂದಿದ್ದಾರೆ.

ಆದರೂ ಅಮೆರಿಕದ ಆರ್ಥಿಕ ನಿರ್ಬಂಧಗಳು ವೆನೆಜುವೆಲಾದ ಮೇಲೆ ನಕಾರಾತ್ನಕ ಪರಿಣಾಮ ಬೀರಲಿವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹೆಲ್ಸಿಂಕಿಯ ಹ್ಯಾಂಕೆನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮಾನವೀಯ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ನಿರ್ವಹಣೆಯನ್ನು ಸಂಶೋಧಿಸುವ ಎಚ್‌ಯುಎಂಎಲ್‌ಒಜಿ (HUMLOG) ಸಂಸ್ಥೆಯ ಉಪ ನಿರ್ದೇಶಕ ಸಾರಾ ಸ್ಕಿಫ್ಲಿಂಗ್, “ಒಂದೆಡೆ, ಆ ನೆರವು ಅಗತ್ಯವಿರುವವರಿಗೆ ತಲುಪಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ. “ಮತ್ತೊಂದೆಡೆ, ಈ ದುರಂತವನ್ನು ವೆನಿಜುವೆಲಾದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಅಮೆರಿಕ ಬಳಸಿಕೊಳ್ಳಲಿದೆ” ಎಂಬ ಆತಂಕವೂ ವ್ಯಕ್ತವಾಗಿದೆ.
2005 ರಿಂದ ನಿರ್ದಿಷ್ಟ ವ್ಯಕ್ತಿಗಳು ಮತ್ತು ಗುಂಪುಗಳನ್ನು ಗುರಿಯಾಗಿಸಿಕೊಂಡು ವಿಧಿಸಲಾದ ಅಮೆರಿಕದ ನಿರ್ಬಂಧಗಳ ಹೊರತಾಗಿ, ಮಡುರೋ ಅವರ ಅಡಿಯಲ್ಲಿ ರಾಜಕೀಯ ದಮನ ಮತ್ತು ಪ್ರಜಾಪ್ರಭುತ್ವದ ಹಿನ್ನಡೆ ಎಂದು ಆರೋಪಿಸಿ ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಕಿಂಗ್‌ಡಮ್ ಕೂಡ 2017 ರಿಂದ ವೆನಿಜುವೆಲಾದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. EU ಪ್ರಕಾರ, ಈ ಕ್ರಮಗಳು ಶಸ್ತ್ರಾಸ್ತ್ರಗಳು ಮತ್ತು ಆಂತರಿಕ ದಮನಕ್ಕೆ ಬಳಸುವ ಉಪಕರಣಗಳ ಮೇಲೆ ನಿಷೇಧ ಒಳಗೊಂಡಿವೆ, ಜೊತೆಗೆ ಪಟ್ಟಿಯಲ್ಲಿರುವ ವ್ಯಕ್ತಿಗಳ ಮೇಲೆ ಪ್ರಯಾಣ ನಿಷೇಧ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಿಕೆಯೂ ಸೇರಿವೆ.
ಅಮೆರಿಕವು ವೆನಿಜುವೆಲಾದ ಮೇಲೆ ವರ್ಷಗಳಿಂದ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಇದರಿಂದಾಗಿ ವೆನಿಜುವೆಲಾದ ಯಾವುದೇ ಬ್ಯಾಂಕುಗಳು ಅಥವಾ ವ್ಯಕ್ತಿಗಳು ಅಮೆರಿಕದ ಕಂಪನಿಗಳೊಂದಿಗೆ ವ್ಯವಹಾರ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದು ವೆನಿಜುವೆಲಾದ ಆರ್ಥಿಕತೆಯನ್ನು ಸಂಪೂರ್ಣವಾಗಿ ಕುಂಠಿತಗೊಳಿಸಿತ್ತು. ಆದರೆ ಈ ವರ್ಷ, ಅಮೆರಿಕವು ತನ್ನ ಹಠಮಾರಿ ಧೋರಣೆಯನ್ನು ಸ್ವಲ್ಪ ಸಡಿಲಗೊಳಿಸಲು ನಿರ್ಧರಿಸಿದೆ.
ಅಮೆರಿಕ ಈ ಸಡಿಲಿಕೆಗಳನ್ನು ಮಾಡಿದರೂ, ರೊಡ್ರಿಗಸ್, ಇದು ಸಾಲದು ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ವೆನಿಜುವೆಲಾ ಎದುರಿಸುತ್ತಿರುವ ಬಡತನ, ಹಣದುಬ್ಬರ ಸೇರಿದಂತೆ ಆರ್ಥಿಕ ಬಿಕ್ಕಟ್ಟು ದೊಡ್ಡದಿದೆ. ಅಮೆರಿಕ ನೀಡಿದ ಈ ಸಣ್ಣಪುಟ್ಟ ವಿನಾಯಿತಿಗಳು ಆರ್ಥಿಕತೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಕಾಗುವುದಿಲ್ಲ. ಆದ್ದರಿಂದ ಅವರು “ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ತೆಗೆದುಹಾಕಿ” ಎಂದು ಅಮೆರಿಕದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಅಮೆರಿಕದ ಆರ್ಥಿಕ ನಿರ್ಬಂಧಗಳು ಇರುವುದರಿಂದ, ವೆನಿಜುವೆಲಾಗೆ ನೆರವು ಕಳುಹಿಸುವುದು ಸುಲಭದ ಮಾತಲ್ಲ. ಸಿಇಪಿಆರ್ (CEPR) ಎಂಬ ಸಂಸ್ಥೆಯ ಪ್ರಕಾರ, ನಿರ್ಬಂಧಗಳ ಕಾರಣದಿಂದಾಗಿ ಅಂತಾರಾಷ್ಟ್ರೀಯ ದಾನಿಗಳು ಮತ್ತು ಮಾನವೀಯ ಸಂಸ್ಥೆಗಳು ವೆನಿಜುವೆಲಾಗೆ ಹಣ ಅಥವಾ ವಸ್ತುಗಳನ್ನು ಕಳುಹಿಸಲು ಹೋದಾಗ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಅಲೆಕ್ಸ್ ಮೇನ್ ಎಂಬುವವರು ಹೇಳುವಂತೆ, ಹಿಂದಿನ ಭೂಕಂಪಗಳ ಸಂದರ್ಭದಲ್ಲೂ ಇದೇ ನಿರ್ಬಂಧಗಳು ಪರಿಹಾರ ಕಾರ್ಯಗಳಿಗೆ ದೊಡ್ಡ ಅಡ್ಡಿಯಾಗಿದ್ದವು. ಸಾರಾ ಸ್ಕಿಫ್ಲಿಂಗ್ ಅವರ ಪ್ರಕಾರ, ನಿರ್ಬಂಧಗಳಿಂದಾಗಿ ಎನ್‌ಜಿಒಗಳಿಗೆ (NGO) ಕೆಲಸಗಾರರಿಗೆ ಸಂಬಳ ಕೊಡಲು ಅಥವಾ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವನ್ನು ಬ್ಯಾಂಕ್ ಮೂಲಕ ವರ್ಗಾಯಿಸುವುದು ಕಷ್ಟವಾಗುತ್ತದೆ. ಜೊತೆಗೆ, ದುರಂತದ ಸಮಯದಲ್ಲಿ ಪರಿಹಾರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯು ಆಡಳಿತಾತ್ಮಕವಾಗಿ ಬಹಳ ನಿಧಾನಗತಿಯಲ್ಲಿ ಸಾಗುತ್ತದೆ. ಈಗಾಗಲೇ ನಿರ್ಬಂಧಗಳಿಂದಾಗಿ ವೆನಿಜುವೆಲಾದ ಆರ್ಥಿಕತೆ ಹದಗೆಟ್ಟಿದ್ದು, ಹತ್ತರಲ್ಲಿ ಎಂಟು ಜನ ಬಡತನದಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಆಹಾರ ಮತ್ತು ಔಷಧಿಗೂ ಕೊರತೆ ಉಂಟಾಗಿದೆ.
ಅಮೆರಿಕದ ಆರ್ಥಿಕ ನಿರ್ಬಂಧಗಳು ಇರುವುದರಿಂದ, ವೆನಿಜುವೆಲಾಗೆ ನೆರವು ಕಳುಹಿಸುವುದು ಸುಲಭದ ಮಾತಲ್ಲ. ಸಿಇಪಿಆರ್ (CEPR) ಎಂಬ ಸಂಸ್ಥೆಯ ಪ್ರಕಾರ, ನಿರ್ಬಂಧಗಳ ಕಾರಣದಿಂದಾಗಿ ಅಂತಾರಾಷ್ಟ್ರೀಯ ದಾನಿಗಳು ಮತ್ತು ಮಾನವೀಯ ಸಂಸ್ಥೆಗಳು ವೆನಿಜುವೆಲಾಗೆ ಹಣ ಅಥವಾ ವಸ್ತುಗಳನ್ನು ಕಳುಹಿಸಲು ಹೋದಾಗ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಅಲೆಕ್ಸ್ ಮೇನ್ ಎಂಬುವವರು ಹೇಳುವಂತೆ, ಹಿಂದಿನ ಭೂಕಂಪಗಳ ಸಂದರ್ಭದಲ್ಲೂ ಇದೇ ನಿರ್ಬಂಧಗಳು ಪರಿಹಾರ ಕಾರ್ಯಗಳಿಗೆ ದೊಡ್ಡ ಅಡ್ಡಿಯಾಗಿದ್ದವು. ಸಾರಾ ಸ್ಕಿಫ್ಲಿಂಗ್ ಅವರ ಪ್ರಕಾರ, ನಿರ್ಬಂಧಗಳಿಂದಾಗಿ ಎನ್‌ಜಿಒಗಳಿಗೆ (NGO) ಕೆಲಸಗಾರರಿಗೆ ಸಂಬಳ ಕೊಡಲು ಅಥವಾ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವನ್ನು ಬ್ಯಾಂಕ್ ಮೂಲಕ ವರ್ಗಾಯಿಸುವುದು ಕಷ್ಟವಾಗುತ್ತದೆ. ಜೊತೆಗೆ, ದುರಂತದ ಸಮಯದಲ್ಲಿ ಪರಿಹಾರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯು ಆಡಳಿತಾತ್ಮಕವಾಗಿ ಬಹಳ ನಿಧಾನಗತಿಯಲ್ಲಿ ಸಾಗುತ್ತದೆ. ಈಗಾಗಲೇ ನಿರ್ಬಂಧಗಳಿಂದಾಗಿ ವೆನಿಜುವೆಲಾದ ಆರ್ಥಿಕತೆ ಹದಗೆಟ್ಟಿದ್ದು, ಹತ್ತರಲ್ಲಿ ಎಂಟು ಜನ ಬಡತನದಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಆಹಾರ ಮತ್ತು ಔಷಧಿಗೂ ಕೊರತೆ ಉಂಟಾಗಿದೆ.
ಇದನ್ನೂ ಓದಿ: ವೆನೆಜುವೆಲಾದಲ್ಲಿ ಮತ್ತೆ ಕಂಪಿಸಿದ ಭೂಮಿ: ಸರಣಿ ಭೂಕಂಪಕ್ಕೆ 920 ಬಲಿ, 50 ಸಾವಿರ ಮಂದಿ ನಾಪತ್ತೆ!
ಅಮೆರಿಕದ ವಿದೇಶಾಂಗ ಇಲಾಖೆಯು ರಕ್ಷಣಾ ತಂಡಗಳನ್ನು ಕಳುಹಿಸುತ್ತಿದ್ದೇವೆ ಎಂದು ಹೇಳಿದೆ. ಆದರೆ, ಸ್ಕಿಫ್ಲಿಂಗ್ ಅವರ ಪ್ರಕಾರ, ನೆರವು ಎಂದರೆ ಅದು ರಾಜಕೀಯವಿಲ್ಲದೆ ತಟಸ್ಥವಾಗಿರಬೇಕು. ಆದರೆ ಅಮೆರಿಕ ಈ ನೆರವಿನ ಮೂಲಕ ವೆನಿಜುವೆಲಾದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮದುರೋ ಅವರನ್ನು ಅಪಹರಿಸಿದ ನಂತರ, ವೆನಿಜುವೆಲಾದ ತೈಲ ವಲಯವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ಅಮೆರಿಕ, ಈಗ ಭೂಕಂಪದ ಪರಿಹಾರದ ಹೆಸರಿನಲ್ಲಿ ಅಲ್ಲಿನ ಮೂಲಸೌಕರ್ಯಗಳಲ್ಲೂ ಹೂಡಿಕೆ ಮಾಡುವ ಮೂಲಕ ತನ್ನ ಹಿಡಿತವನ್ನು ಶಾಶ್ವತಗೊಳಿಸಲು ನೋಡುತ್ತಿದೆ.
ವೆನಿಜುವೆಲಾದ ಭದ್ರತೆ ಸರಿಯಿಲ್ಲದಿರುವುದರಿಂದ, ನೆರವು ನೀಡುವ ಕಾರ್ಯಕರ್ತರು ಸ್ಥಳೀಯ ಶಸ್ತ್ರಸಜ್ಜಿತ ಗುಂಪುಗಳ ರಕ್ಷಣೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇದು ಆ ಸಂಸ್ಥೆಗಳ ತಟಸ್ಥತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಸರ್ಕಾರಗಳು ನೀಡುವ ಹಣ ಯಾವಾಗಲೂ ಅವರ ರಾಜಕೀಯ ಅಜೆಂಡಾವನ್ನು (Political Agenda) ಈಡೇರಿಸಲು ಬಳಸಲಾಗುತ್ತದೆ ಎಂಬ ಅನುಮಾನ ಸದಾ ಇರುತ್ತದೆ ಎಂದು ಸ್ಕಿಫ್ಲಿಂಗ್ ಎಚ್ಚರಿಸಿದ್ದಾರೆ.
ಒಂದು ಕಡೆ ವೆನಿಜುವೆಲಾದ ಜನರಿಗೆ ತುರ್ತಾಗಿ ಸಹಾಯ ಬೇಕಿದೆ, ಇನ್ನೊಂದು ಕಡೆ ಅಮೆರಿಕದ ಹಳೆಯ ನಿರ್ಬಂಧಗಳು ಆ ಸಹಾಯಕ್ಕೆ ತಡೆಯಾಗಿವೆ. ಅಮೆರಿಕ ಸಹಾಯ ಮಾಡಲು ಮುಂದೆ ಬಂದಿದ್ದರೂ, ಅದರ ಹಿಂದಿನ ಉದ್ದೇಶ ಜನರ ಜೀವ ಉಳಿಸುವುದಕ್ಕಿಂತ ಹೆಚ್ಚಾಗಿ ದೇಶದ ಸಂಪನ್ಮೂಲಗಳ ಮೇಲೆ ತನ್ನ ಹಿಡಿತ ಸಾಧಿಸುವುದಾಗಿದೇ ಆಗಿದೆ ಎನ್ನುವುದು ವಾಸ್ತವ.




