30ಕ್ಕೂ ಹೆಚ್ಚು ಸರಣಿ ಕಿರುಭೂಕಂಪಕ್ಕೆ ವೆನೆಜುವೆಲಾ ತತ್ತರ; ಚಪ್ಪಲಿ ತೊಡಲೂ ಸಿಗಲಿಲ್ಲ ಸಮಯ!

Date:

ಜೂನ್ 24ರ ಬುಧವಾರ ಸಂಜೆ 6:04. ವೆನೆಜುವೆಲಾದ ಯರಕುಯ್ (Yaracuy) ಪ್ರಾಂತ್ಯದ ಜನರು ತಮ್ಮ ದೈನಂದಿನ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸಮಯವದು. ಈ ವೇಳೆ ವೆನೆಜುವೆಲಾದ ಭೂಮಿ ಕಂಪಿಸಿತು. 7.2 ತೀವ್ರತೆಯ ಭೂಕಂಪ ಇಡೀ ನೆಲವನ್ನು ನಡುಗಿಸಿತು. ಜನರು ಮೊದಲ ಆಘಾತದಿಂದ ಚೇತರಿಸಿಕೊಂಡು ಪ್ರಾಣಭಯದಿಂದ ಬೀದಿಗೆ ಓಡಿಬರುವ ಮುನ್ನವೇ, ಕೇವಲ 39 ಸೆಕೆಂಡುಗಳ ಅಂತರದಲ್ಲಿ 7.5 ತೀವ್ರತೆಯ ಮತ್ತೊಂದು ಅತ್ಯಂತ ಶಕ್ತಿಶಾಲಿ ಭೂಕಂಪ ಅಪ್ಪಳಿಸಿತು.

- Advertisement -

ವೆನೆಜುವೆಲಾದ ಇತಿಹಾಸದಲ್ಲೇ ಕಳೆದ ಒಂದು ಶತಮಾನದಲ್ಲಿ ಸಂಭವಿಸಿದ ಅತ್ಯಂತ ಭೀಕರ ಹಾಗೂ ಪ್ರಬಲ ಭೂಕಂಪ ಇದಾಗಿದೆ. ಇದರ ಕಂಪನಗಳು ಎಷ್ಟು ತೀವ್ರವಾಗಿದ್ದವೆಂದರೆ, ಸುಮಾರು 1,700 ಕಿಲೋಮೀಟರ್ ದೂರದಲ್ಲಿರುವ ಬ್ರೆಜಿಲ್‌ನ ಅಮೆಜಾನ್ ಪ್ರದೇಶ ಮತ್ತು ಕೊಲಂಬಿಯಾದ ಬೊಗೋಟಾದವರೆಗೂ ಭೂಮಿ ನಡುಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

ಇದನ್ನೂ ಓದಿ: ವೆನೆಜುವೆಲಾದಲ್ಲಿ ಅವಳಿ ಮಹಾಭೂಕಂಪ: ಮಣ್ಣುಪಾಲಾದ ಕ್ಯಾರಕಾಸ್, ಹತ್ತಾರು ಸಾವಿರ ಸಾವು ಶಂಕೆ?

ಮುಖ್ಯ ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲಿ 30ಕ್ಕೂ ಹೆಚ್ಚು ತೀವ್ರ ಸ್ವರೂಪದ ಕಿರುಕಂಪನಗಳು (Aftershocks) ಸಂಭವಿಸಿತ್ತು. ಇವು ಸರಣಿ ರೂಪದಲ್ಲಿ ಬಂದಿದ್ದರಿಂದ ಭೂಮಿ ಸತತವಾಗಿ ನಡುಗುತ್ತಿರುವ ಅನುಭವ ಜನರಿಗಾಗಿತ್ತು. ಜನರು ತಮ್ಮ ಪ್ರಾಣದ ಹಂಗನ್ನೇ ಬಿಡುವಂತಾಗಿತ್ತು.

ಭೂಕಂಪಶಾಸ್ತ್ರದ ಪ್ರಕಾರ, ದೊಡ್ಡ ಭೂಕಂಪ ಸಂಭವಿಸಿದ ನಂತರ ಭೂಮಿಯ ಒಳಗಿನ ಶಿಲಾಸ್ತರಗಳು ತಮ್ಮ ಮೊದಲಿನ ಸ್ಥಿತಿಗೆ ಮರಳುವಾಗ ಇಂತಹ ಸರಣಿ ಕಿರುಕಂಪನಗಳು ಆಗುವುದು ಸಾಮಾನ್ಯ. ಆದರೆ ಈ ಕಿರುಕಂಪನಗಳು ಮಾನಸಿಕವಾಗಿ ಜನರನ್ನು ತೀವ್ರ ಭಯದ ನೆರಳಿಗೆ ದೂಡುತ್ತದೆ.

ಪ್ರತ್ಯಕ್ಷದರ್ಶಿಗಳು, ಸ್ಥಳೀಯ ಮಾಧ್ಯಮಗಳು ಹೇಳುವುದೇನು?

ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದಂತೆ, ಮೊದಲ ಕಂಪನ ಸಂಭವಿಸಿದ ತಕ್ಷಣವೇ ಜನರು ಗಾಬರಿಯಿಂದ ಮನೆಗಳಿಂದ ಬರಿಗಾಲಲ್ಲೇ ಹೊರಗೆ ಓಡಿಬಂದಿದ್ದರು. ಆದರೆ, ಅವರು ಚೇತರಿಸಿಕೊಳ್ಳುವ ಮುನ್ನವೇ ಸರಣಿ ಕಿರುಕಂಪನಗಳು ತಟ್ಟಿದವು.

“ಭೂಮಿ ಸತತವಾಗಿ ಕಂಪಿಸುತ್ತಿದ್ದರಿಂದ, ಪ್ರಾಣಭಯದಲ್ಲಿ ಜನರು ತಮ್ಮ ಬೆಲೆಬಾಳುವ ವಸ್ತುಗಳು, ಕನಿಷ್ಠ ಪಕ್ಷ ಕಾಲಿಗೆ ಚಪ್ಪಲಿ ಧರಿಸಲು ಕೂಡ ಕಾಯದೆ, ಇದ್ದಬದ್ದ ಸ್ಥಿತಿಯಲ್ಲೇ ಬೀದಿಗಳಿಗೆ ಓಡಿಬರಬೇಕಾಯಿತು. ಬಹುಮಹಡಿ ಕಟ್ಟಡಗಳಲ್ಲಿದ್ದವರು ಲಿಫ್ಟ್ ಬಳಸಲಾಗದೆ ಮೆಟ್ಟಿಲುಗಳ ಮೂಲಕ ಜೀವ ಕೈಯಲ್ಲಿ ಹಿಡಿದು ಓಡಬೇಕಾಯಿತು” ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಅಧಿಕೃತ ಮೂಲಗಳ ಪ್ರಕಾರ ಪ್ರಸ್ತುತ 235ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 4,300ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಸುಮಾರು 40,000 ಜನ ಇನ್ನೂ ನಾಪತ್ತೆಯಾಗಿದ್ದಾರೆ. ತಮ್ಮ ಪ್ರೀತಿಪಾತ್ರರು ಜೀವಂತವಾಗಿ ಸಿಗಲು ಸಾಧ್ಯವೇ ಎಂಬ ಆತಂಕದಲ್ಲಿ ಕಟ್ಟಡದ ಅವಶೇಷಗಳ ಮುಂದೆ ನಿಂತು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಶಾಲೆಗಳನ್ನು ನಿರಾಶ್ರಿತರ ಶಿಬಿರಗಳನ್ನಾಗಿ ಮಾಡಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗರಹೊಳೆ: ಜೇನುಕುರುಬ ಕುಟುಂಬಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ; ಸರ್ಕಾರದ ಕ್ರಮಕ್ಕೆ ಆದಿವಾಸಿಗಳ ಆಕ್ರೋಶ

ಕೊಡಗು ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ’ದಲ್ಲಿ...

ಹಾವೇರಿ | ನ.14ರಂದು ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ

ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

ಕರ್ನಾಟಕದ ಜೈನ ಪರಂಪರೆಗೆ ಹಾವೇರಿಯ ಕೊಡುಗೆ ಅಪಾರ: ಡಾ. ಶಿವಯೋಗಿ ಆರ್ ಕೋರಿಶೆಟ್ಟರ್‌

ಕರ್ನಾಟಕದಲ್ಲಿ ಪ್ರತಿ ಐದು ಗ್ರಾಮಗಳಿಗೆ ಒಂದು ಜೈನಧರ್ಮಕ್ಕೆ ಸಂಬಂಧಿದ ಕುರುಹುಗಳು ದೊರೆಯುತ್ತವೆ....

ಸೌದಿ ಅರೇಬಿಯಾ: ವಿವಾಹೇತರ ಗರ್ಭಧಾರಣೆಗೆ ಕೀನ್ಯಾ ಮಹಿಳೆಗೆ 100 ಛಡಿಯೇಟಿನ ಶಿಕ್ಷೆ

ಸೌದಿ ಅರೇಬಿಯಾದಲ್ಲಿ ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಕೀನ್ಯಾದ ಗೃಹ...