‘ಡಾವ್ನ್‌ ಆಫ್ ಯೆಮನ್’ ಕಾರ್ಯಾಚರಣೆ: ಅಲ್-ವಝೀಯಾ ಮರಳಿ ಪಡೆಯಲು ಯೆಮನ್ ಪಡೆಗಳ ದಾಳಿ

Date:

ಸನಾ: ಯೆಮನ್‌ನ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರ್ಕಾರದ ಪಡೆಗಳು, ಹೂತಿಗಳ ವಶದಲ್ಲಿರುವ ಪರ್ವತ ಪ್ರದೇಶವಾದ ಅಲ್-ವಝೀಯಾ ಜಿಲ್ಲೆಯನ್ನು ಮರಳಿ ಪಡೆಯಲು ಸೇನಾ ಕಾರ್ಯಾಚರಣೆ ಆರಂಭಿಸಿವೆ. ಈ ಕಾರ್ಯಾಚರಣೆಯು ಕೆಂಪು ಸಮುದ್ರದ ಕರಾವಳಿ ಮತ್ತು ಬಾಬ್ ಅಲ್-ಮಂದಬ್ ಜಲಸಂಧಿಯನ್ನು ಮರಳಿ ನಿಯಂತ್ರಣಕ್ಕೆ ಪಡೆಯುವ ದೊಡ್ಡ ಪ್ರಯತ್ನದ ಭಾಗವಾಗಿದ್ದು, ಅಲ್-ವಝೀಯ ಪ್ರದೇಶವು ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದೇ ವೇಳೆ ಸೌದಿ ಅರೇಬಿಯಾ, ಹೂತಿಗಳು ತನ್ನ ನಗರದತ್ತ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.

- Advertisement -

ಯೆಮನ್‌ನ ಅಧ್ಯಕ್ಷೀಯ ನಾಯಕತ್ವ ಮಂಡಳಿಯ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಭಾನುವಾರ ಡಾವ್ನ್ ಆಫ್ ಯೆಮನ್ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಹೂತಿಗಳ ವಶದಲ್ಲಿರುವ ರಾಜಧಾನಿ ಸನಾ ಸೇರಿದಂತೆ ಉಳಿದ ಎಲ್ಲಾ ಪ್ರದೇಶಗಳನ್ನು ಮರಳಿ ಪಡೆಯುವುದು ಇದರ ಉದ್ದೇಶವಾಗಿದೆ. ಅದರ ಭಾಗವಾಗಿ ಈ ದಾಳಿಗಳು ನಡೆದಿದೆ ಎಂದು ಹೇಳಲಾಗಿದೆ. ಹೂತಿಗಳು 2014ರಿಂದ ಸನಾವನ್ನು ನಿಯಂತ್ರಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

ಯೆಮನ್ ಸೇನೆಯ ಮಾಧ್ಯಮ ಕೇಂದ್ರವು ಸಾಮಾಜಿಕ ಜಾಲತಾಣ X ನಲ್ಲಿ ಪ್ರಕಟಿಸಿದ ಮಾಹಿತಿಯ ಪ್ರಕಾರ, ಸರ್ಕಾರಪರ ಹೋಮ್‌ಲ್ಯಾಂಡ್ ಶೀಲ್ಡ್ ಪಡೆಗಳು ಅಲ್-ವಝೀಯಾವನ್ನು ಮರಳಿ ಪಡೆಯಲು ದೊಡ್ಡ ಪ್ರಮಾಣದ ಕಾರ್ಯಾಚರಣೆ ಆರಂಭಿಸಿವೆ.

 ಅಲ್-ಮಂಸೂರಾ ಪ್ರದೇಶದ ಮೇಲಿರುವ ಕೆಲವು ಪ್ರಮುಖ ಬೆಟ್ಟಗಳನ್ನು ತಮ್ಮ ಪಡೆಗಳು ವಶಪಡಿಸಿಕೊಂಡಿದ್ದು, ಹೂತಿ ಪಡೆಗಳು ದೊಡ್ಡ ಪ್ರಮಾಣದಲ್ಲಿ ಹಿಂದೆ ಸರಿಯುತ್ತಿವೆ ಎಂದು ಹೋಮ್‌ ಲ್ಯಾಂಡ್‌ ಶೀಲ್ಡ್‌ ಪಡೆಗಳು ಹೇಳಿರುವುದಾಗಿ ಸೇನಾ ಮೂಲವೊಂದನ್ನು ಉಲ್ಲೇಖಿಸಿ ಅಲ್‌ ಜಝೀರಾ ವರದಿ ಮಾಡಿದೆ.

ಆದರೆ ಹೂತಿಗಳು ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಅಲ್-ವಝೀಯಾದಲ್ಲಿ ಯೆಮನ್ ಸರ್ಕಾರದ ಪಡೆಗಳ ಮುನ್ನಡೆಯನ್ನು ಯಶಸ್ವಿಯಾಗಿ ತಡೆದಿರುವುದಾಗಿ ಅವರು ಹೇಳಿದ್ದಾರೆ.

ಈತನ್ಮಧ್ಯೆ, ಯೆಮನ್‌ನಲ್ಲಿ ಹೂತಿಗಳ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟವು, ಹೌತಿಗಳು ನೈಋತ್ಯ ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಗರದತ್ತ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆದು ನಾಶಪಡಿಸಿರುವುದಾಗಿ ತಿಳಿಸಿದೆ.

”ಹೂತಿಗಳ ಕ್ಷಿಪಣಿ ಬೆದರಿಕೆಗಳು ಸನಾ ಮತ್ತು ಹೂತಿಗಳ ನಿಯಂತ್ರಣದಲ್ಲಿರುವ ಸಾದಾ ಹಾಗೂ ಅಮ್ರಾನ್ ಪ್ರಾಂತ್ಯಗಳಿಂದ ಬಂದಿವೆ” ಎಂದು ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ಹೇಳಿದ್ದಾರೆ.

”ಬ್ಯಾಲಿಸ್ಟಿಕ್ ಮತ್ತು ಮೇಲ್ಮೈಯಿಂದ ಮೇಲ್ಮೈಗೆ ಉಡಾಯಿಸುವ ಕ್ಷಿಪಣಿಗಳಿಂದ ಉಂಟಾಗುವ ಬೆದರಿಕೆಯನ್ನು ತಟಸ್ಥಗೊಳಿಸುವುದನ್ನು ಹಾಗೂ ಅವುಗಳ ಉಡಾವಣಾ ಮೂಲಗಳನ್ನು ನಾಶಪಡಿಸುವುದನ್ನು ಮೈತ್ರಿಕೂಟ ಮುಂದುವರಿಸುತ್ತಿದೆ” ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಮಂಗಳವಾರ, ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರವು ಜಿಜಾನ್ ಮತ್ತು ನಜ್ರಾನ್ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿಸಿತ್ತು.

ಈ ದಾಳಿಗಳಿಂದ ವಿವಿಧ ಪ್ರಮಾಣದ ಗಾಯಗಳು ಮತ್ತು ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಅಲ್-ವಝೀಯಾ ಏಕೆ ಮಹತ್ವದ್ದು?

ಪರ್ವತ ಪ್ರದೇಶವಾಗಿರುವ ಅಲ್-ವಝೀಯಾ, ತೈಝ್ ನಗರದ ಪಶ್ಚಿಮ ಭಾಗದಲ್ಲಿದ್ದು, ಕೆಂಪು ಸಮುದ್ರದ ಬಂದರು ಮೊಖಾದ ಪೂರ್ವದಲ್ಲಿದೆ. ಕಳೆದ ತಿಂಗಳು ಹೂತಿಗಳು  ದಾಳಿ ನಡೆಸಿ, ಮೊಖಾ ನಗರ ಮತ್ತು ಬಾಬ್ ಅಲ್-ಮಂದಬ್ ಜಲಸಂಧಿಯ ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರು.

ಈ ಬಗ್ಗೆ ವರದಿ ಮಾಡಿದ ಅಲ್ ಜಜೀರಾದ ವರದಿಗಾರ ಯೂಸುಫ್ ಮವ್ರಿ ಪ್ರತಿಕ್ರಿಯಿಸಿ, ಮೊಖಾ ನಗರವನ್ನು ವಶಪಡಿಸಿಕೊಳ್ಳುವ ಮೊದಲು ಹೂತಿಗಳು ಈ ಪರ್ವತ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದ್ದರು ಎಂದು ಹೇಳಿದರು.

”ಯೆಮನ್ ಸರ್ಕಾರವು ಮೊಖಾ ನಗರವನ್ನು ವಶಪಡಿಸಿಕೊಳ್ಳುವ ಬಗ್ಗೆ ಗಂಭೀರವಾಗಿದ್ದರೆ, ಅಲ್-ವಝೀಯಾ ಜಿಲ್ಲೆಯ ಈ ಪ್ರದೇಶವನ್ನು ವಶಪಡಿಸಿಕೊಳ್ಳದೆ ಅದು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ

ಮಂಡ್ಯ ತಾಲೂಕು ಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ...

ಅಕ್ರಮ ಮಾದಕವಸ್ತು ಸಾಗಣೆ ಜಾಲ ಭೇದಿಸಿದ NCB; ನಾಲ್ವರ ಬಂಧನ!

ರಾಷ್ಟ್ರ ರಾಜಧಾನಿ ದೆಹಲಿಯಿಂದ ಕಾಶ್ಮೀರ ಕಣಿವೆಗೆ ಅಕ್ರಮವಾಗಿ ಔಷಧೀಯ ಮಾದಕವಸ್ತುಗಳನ್ನು ಪೂರೈಸುತ್ತಿದ್ದ...

ವಿಜಯಪುರ |ಬೆಳಕಿನ ಹಬ್ಬದ ಸಂಭ್ರಮದೊಂದಿಗೆ ಸಂವಿಧಾನದ ಮೌಲ್ಯಗಳ ಜಾಗೃತಿ

ಬೆಳಕಿನ ಹಬ್ಬದ ಸಂಭ್ರಮದ ನಡುವೆಯೇ ಸಂವಿಧಾನದ ಆಶಯ, ಸಮಾನತೆ, ಸ್ವಾತಂತ್ರ್ಯ ಹಾಗೂ...