ಚಿಕ್ಕಮಗಳೂರು ತಾಲೂಕಿನ ಬಸಗೂಡು ಗ್ರಾಮದ ಬಸಗೋಡು ಕಾಫಿ ಎಸ್ಟೇಟ್ ನಲ್ಲಿ ಶುಕ್ರವಾರ ನಡೆದ, ಎಸ್ಟೇಟ್ ಮಾಲೀಕರಿಂದ ಕಾರ್ಮಿಕರನ್ನು ಮನ ಬಂದಂತೆ ಹಲ್ಲೆ, ಜೀವ ಬೆದರಿಕೆ ಹಾಕಿರುವುದನ್ನು ಖಂಡಿಸಿ ನಾಳೆ ಬೆಳಗ್ಗೆ 11:30ಕ್ಕೆ ಅಝದ್ ಪಾರ್ಕ್ ಬಳಿ ಪ್ರತಿಭಟನೆ ನಡೆಸುತ್ತೇವೆಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರಾದ ಕೆ. ಎಲ್ ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಎಸ್ಟೇಟ್ ಮಾಲೀಕರಿಂದ ಬಂದೂಕು ತೋರಿಸಿ ಮಹಿಳೆ,ಕಾರ್ಮಿಕರಿಗೆ ಮಾರಣಾಂತಿಕ ಹಲ್ಲೆ
ಕಾರ್ಮಿಕರನ್ನು ಜೀತ ಕಾರ್ಮಿಕರಂತೆ ಕೂಡಿ ಹಾಕಿಕೊಂಡು ಮಾನಸಿಕ ದೈಹಿಕ ದೌರ್ಜನ್ಯ ಮಾಡಿದ್ದು, ಕಾರ್ಮಿಕರನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದಲ್ಲದೆ ಮಾರಣಾಂತಿಕ ಹಲ್ಲೆ ಖಂಡಿಸಿ ನಾಳೆ ಪ್ರತಿಭಟನೆ ಮಾಡುತ್ತೇವೆಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಎಲ್ ಅಶೋಕ್ ಈದಿನ. ಕಾಮ್ ಗೆ ತಿಳಿಸಿದ್ದಾರೆ.



