ವಿಜಯಪುರ | ಸರ್ವ ಜನಾಂಗದ ಸಮಾನತೆಗೆ ಶ್ರಮಿಸಿದವರು ಅಂಬೇಡ್ಕರ್: ಡಾ.ಬಾಬುರಾಜೇಂದ್ರ ನಾಯಕ್

Date:

ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ರವರು ಯಾವುದೇ ಒಂದು ವರ್ಗದ ಪರವಾಗಿ ಕಾರ್ಯ ನಿರ್ವಹಿಸಿಲ್ಲ, ಸರ್ವ ಜನಾಂಗಗಳ ಸಮಾನತೆಗಾಗಿ ಮತ್ತು ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಅಂಬೇಡ್ಕರ್ ಹಬ್ಬ ಸಂಚಾಲನ ಸಮಿತಿ ಸದಸ್ಯ ಡಾ. ಬಾಬು ರಾಜೇಂದ್ರ ನಾಯಕ್ ಅಭಿಪ್ರಾಯಪಟ್ಟರು.

- Advertisement -

ದಲಿತ ವಿದ್ಯಾರ್ಥಿ ಪರಿಷತ್ ಹಾಗೂ, ವಿಜಯಪುರ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ಹಬ್ಬದ ಎರಡನೇ ಆವೃತ್ತಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಲ್ಲಾ ಮಹಾಪುರುಷರ ತತ್ವ ಸಿದ್ಧಾಂತಗಳನ್ನು ಅಧ್ಯಯಿಸಿ ಸಂವಿಧಾನದಲ್ಲಿ ಅಳವಡಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿ, ವಿಶ್ವದ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿಸಿದರು. ಸಮಾನತೆಗಾಗಿ ಹೋರಾಡಿದ ದೇಶದ ಎಲ್ಲಾ ಮಹನೀಯರನ್ನು ನೆನೆಯುವ ಕಾರ್ಯ ಅಂಬೇಡ್ಕರ್ ಹಬ್ಬದಲ್ಲಿ ನಡೆಯಲಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...
06094db0 9cf5 42f2 9838 dd63567f4c1b

ಅಂಬೇಡ್ಕರ್ ಹಬ್ಬದ ಸಂಚಾಲನ ಸಮಿತಿ ಹಿರಿಯ ಸದಸ್ಯರಾದ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, “ಬಾಬಾಸಾಹೇಬ್ ಅಂಬೇಡ್ಕರರ 135 ನೇ ಜಯಂತ್ಯೋತ್ಸವದ ಅಂಗವಾಗಿ ಅಂಬೇಡ್ಕರ್ ಹಬ್ಬ ಆಚರಣೆ ಮಾಡಲಾಗುತ್ತಿದೆ ಇದು ಸಮಾನತೆಯ ಅರಿವಿನ ಹಬ್ಬ. ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಂವಿಧಾನ ಆಶಯಗಳು ಎಲ್ಲ ವರ್ಗಗಳಿಗೂ ಅದರಲ್ಲೂ ವಿಧ್ಯಾರ್ಥಿ ಯುವಜನರಿಗೆ ಮುಖ್ಯವಾಗಿ ತಲುಪಿಸಬೇಕಿದೆ. ವಿಜಯಪುರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ನಡೆದಾಡಿದ್ದಾರೆ. ವಿಜಯಪುರ ಜಿಲ್ಲೆಯೊಡನೆ ಅಂಬೇಡ್ಕರರಿಗೆ ಇದ್ದ ಅವಿನಾಭಾವ ಸಂಬಂಧವನ್ನು ತಿಳಿಸುವ ಪ್ರಯತ್ನ ಈ ಹಬ್ಬದ ಮೂಲಕ ಆಗಲಿದೆ. ಎಲ್ಲ ವರ್ಗದವರು ಜೊತೆಗೂಡಿ ಈ ಸಮಾನತೆಯ ಅರಿವಿನ ಹಬ್ಬ ಆಚರಣೆ ಮಾಡುವ ಮೂಲಕ ರಾಷ್ಟ್ರಕ್ಕೆ, ನಾಡಿಗೆ ಏಕತೆಯ ಸಂದೇಶವನ್ನು ನೀಡುವಂತಾಗಲಿ” ಎಂದರು.

ಇದನ್ನೂ ಓದಿ>ವಿಜಯಪುರ| 20 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್ ಪರಿಕರ ವಿತರಿಸಿದ ಸಚಿವ ಎಂ.ಬಿ ಪಾಟೀಲ್‌

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮುಖಂಡ ಎಂ.ಸಿ.ಮುಲ್ಲಾ, “ಸಮಾನತೆಗಾಗಿ ಹೋರಾಡಿದ ಮಹಾಪುರುಷರನ್ನು ಒಂದೇ ಜಾತಿಗೆ ಸೀಮಿತ ಮಾಡುತ್ತಿರುವ ಕಾಲಘಟ್ಟದಲ್ಲಿ ಅಂಬೇಡ್ಕ‌ರ್ ಹಬ್ಬದ ಮೂಲಕ ನಮ್ಮ ಮಹಾಪುರುಷರ ಜಯಂತಿಯನ್ನು ಎಲ್ಲ ಜನಾಂಗದವರು ಸೇರಿ ಒಟ್ಟಾಗಿ ಮಾಡುತ್ತಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಿಸಿದರು.

ಸಂಚಾಲನ ಸಮಿತಿಯ ಸದಸ್ಯ ಡಾ. ಬಿ.ಎಮ್ ಬಿರಾದಾರ ಮಾತನಾಡಿ, “ಅಂಬೇಡ್ಕರ್ ಹಬ್ಬವು ಮಹಾತ್ಮ ಜ್ಯೋತಿಬಾ ಫುಲೆ ಅವರ 199 ನೇ ಜನ್ಮದಿನಾಚರಣೆ ಆಗಿರುವ ಏಪ್ರಿಲ್ 11 ರಂದು ಆರಂಭವಾಗಿ, ಏಪ್ರಿಲ್ 14 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಭವ್ಯವಾಗಿ ಆಚರಣೆ ಮಾಡುವ ಮೂಲಕ ಎರಡನೆ ಆವೃತ್ತಿಯ ಅಂಬೇಡ್ಕರ್ ಹಬ್ಬ ಅರ್ಥಪೂರ್ಣವಾಗಿ ಮುಕ್ತಾಯವಾಗಲಿದೆ” ಎಂದರು.

ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರ, ಸಂಚಾಲನ ಸಮಿತಿಯ ಸದಸ್ಯರಾದ ಎಚ್. ಎಮ್. ಭಗವಾನ್, ಪ್ರಭು ಮಲ್ಲಿಕಾರ್ಜುನ ಮಠ, ಫಯಾಜ ಕಲದಗಿ, ದೀಪಾ ತಟ್ಟಿಮನಿ, ಮೋಹನ್ ಕಟ್ಟಿಮನಿ ಸೇರಿದಂತೆ ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಚಾಲಕರಾದ ಬಾಲಾಜಿ ಕಾಂಬಳೆ, ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ, ನಗರ ಘಟಕದ ಸಂಚಾಲಕ ಹುಚ್ಚಪ್ಪ ಬಾವಿಮನಿ ಇನ್ನಿತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ‘ಯುವಜನರ ಮೇಲೆ ದಾಳಿ ನಡೆಸಲು BJP-RSS ಪುಂಡರಿಗೆ ದೆಹಲಿ ಪೊಲೀಸರಿಂದಲೇ ಕುಮ್ಮಕ್ಕು’

ದೆಹಲಿಯಲ್ಲಿ ಶನಿವಾರ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು, ಯುವಕ-ಯುವತಿಯರ ಮೇಲೆ...

ಖ್ಯಾತ ಯೂಟ್ಯೂಬರ್ ಧೃವ್ ರಾಠಿ ಬಿಡುಗಡೆ!

ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿಯಾಗದಂತೆ ತಡೆಯಲು ಬಂಧಿಸಲಾಗಿದ್ದ ಖ್ಯಾತ ಯೂಟ್ಯೂಬರ್ ಧೃವ್ ರಾಠಿ...

ಗ್ಯಾನು ರಾಜೀನಾಮೆ ಕೊಡುವವರೆಗೂ ಕದಲುವುದಿಲ್ಲ; ಭಾನುವಾರವೂ ಮುಂದುವರೆದ ಸಿಜೆಪಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಎಸ್‌ಐಆರ್...

ಬೀದರ್‌ | ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷರಾಗಿ ಗೋರಖನಾಥ್ ಕುಂಬಾರ್ ಆಯ್ಕೆ

ಭಾರತ ಸ್ವಾಭಿಮಾನ ಟ್ರಸ್ಟ್ (ಪತಂಜಲಿ ಯೋಗ ಸಮಿತಿ) ಬೀದರ್ ಜಿಲ್ಲಾಧ್ಯಕ್ಷರಾಗಿ ಯೋಗ...