ಈ ದಿನ ಸಂಪಾದಕೀಯ | ಹಿತಾಸಕ್ತಿಗಳ ತಾಕಲಾಟ- ನ್ಯಾ.ಸ್ವರ್ಣಕಾಂತ ಶರ್ಮ ವಿಚಾರಣೆಯಿಂದ ಹಿಂದೆ ಸರಿಯಲಿ

Date:

ಆರೆಸ್ಸೆಸ್- ಬಿಜೆಪಿ ಸಾಮೀಪ್ಯ, ಈ ಹಿಂದೆ ಇದೇ ಅಬಕಾರಿ ಕೇಸಿನಲ್ಲಿ ಆಪ್ ಗಣ್ಯರಿಗೆ ಜಾಮೀನು ನಿರಾಕರಣೆ, ಬಿಜೆಪಿಯ ಮಾಜಿ ಕೇಂದ್ರ ಮಂತ್ರಿ ಕಲ್ಲಿದ್ದಲು ಹಗರಣದಲ್ಲಿ ಎದುರಿಸಿದ್ದ ಸಜೆಗೇ ತಡೆಯಾಜ್ಞೆ ನೀಡಿಕೆ ಹಾಗೂ ತಮ್ಮ ಇಬ್ಬರು ಮಕ್ಕಳು ಸುಪ್ರೀಮ್ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ವಕೀಲರ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಅಂಶಗಳು ನೈಸರ್ಗಿಕ ನ್ಯಾಯ ಸಿಗುವ ಕುರಿತು ಕಕ್ಷಿದಾರರಲ್ಲಿ ಶಂಕೆ ಹುಟ್ಟಿಸುವುದು ಮೇಲ್ನೋಟಕ್ಕೇ ಎದ್ದು ಕಾಣುವ ವಾಸ್ತವ. ಇವೆಲ್ಲ ಯಾವ ಪೂರ್ವಗ್ರಹವೂ ಇಲ್ಲದೆ ನಡೆದ ವಿದ್ಯಮಾನಗಳಾಗಿರಬಹುದು. ಆದರೆ ಕಕ್ಷಿದಾರರಲ್ಲಿ ಸಕಾರಣ ಶಂಕೆ ಹುಟ್ಟಿಸುವುದು ಹೌದು.

- Advertisement -


ದೆಹಲಿಯ
ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಮತ್ತು ಇತರೆ 21 ಮಂದಿ ಆಪಾದಿತರನ್ನು ದೆಹಲಿಯ ನ್ಯಾಯಾಲಯ ಇತ್ತೀಚೆಗೆ ದೋಷಮುಕ್ತರೆಂದು ಸಾರಿತ್ತು. ಅಬಕಾರಿ ನೀತಿ ಸಂಬಂಧ ಇವರ ಮೇಲೆ ಹೂಡಲಾಗಿರುವ ಭ್ರಷ್ಚಾಚಾರದ ಆಪಾದನೆಯ ಮೊಕದ್ದಮೆಗಳು ನಿರಾಧಾರ. ಆಪಾದನೆಗಳಿಗೆ ಸಾಕ್ಷ್ಯ ಪುರಾವೆಗಳೇ ಇಲ್ಲವೆಂದು ನ್ಯಾಯಾಲಯ ಇದೇ ಫೆಬ್ರವರಿ ಅಂತ್ಯದಲ್ಲಿ ಸಿಬಿಐಯನ್ನು ಝಾಡಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆಧಾರಗಳಿಲ್ಲದೆ ಅಲ್ಲಿ ಇಲ್ಲಿ ಕೇಳಿಸಿಕೊಂಡದ್ದನ್ನೇ ದಾಖಲಿಸಿಕೊಂಡು ‘ಪೂರ್ವನಿಯೋಜಿತ ಆಪಾದನೆ’ ಹೊರಿಸಿ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳ ಮೇಲೆ ಇಲಾಖಾ ತನಿಖೆ ನಡೆಯಬೇಕೆಂದು ನ್ಯಾಯಾಲಯ ವಿಧಿಸಿತ್ತು. ಫೆಬ್ರವರಿ 27ರಂದು ವಿಶೇಷ ನ್ಯಾಯಾಲಯ ನೀಡಿದ್ದ ಈ ವಿರಳ ತೀರ್ಪಿನ ವಿರುದ್ಧ ಸಿಬಿಐ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಜಾರಿ ನಿರ್ದೇಶನಾಲಯ ಕೂಡ ಈ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದೆ.

ಸಿಬಿಐ ಮೇಲ್ಮನವಿ ಹೈಕೋರ್ಟಿನಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮ ಅವರ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಅಧೀನ ನ್ಯಾಯಾಲಯ ನೀಡಿದ್ದ ತೀರ್ಪಿಗೆ ನ್ಯಾಯಮೂರ್ತಿ ಶರ್ಮ ಈಗಾಗಲೇ ತಡೆಯಾಜ್ಞೆ ನೀಡಿದ್ದಾರೆ. ಹಲವು ಹಿತಾಸಕ್ತಿಗಳನ್ನು ಹೊಂದಿರುವ ನ್ಯಾಯಮೂರ್ತಿ ಸ್ವರ್ಣಕಾಂತಾ ಅವರು ಈ ಮೇಲ್ಮವಿಯ ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಕೇಜ್ರೀವಾಲ್, ಮನೀಶ್ ಸಿಸೋಡಿಯಾ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧದಲ್ಲಿ ಕೇಜ್ರೀವಾಲ್ ಸೋಮವಾರ ಖುದ್ದು ಹೈಕೋರ್ಟಿನ ಸ್ವರ್ಣಕಾಂತಾ ಶರ್ಮ ಪೀಠದ ಮುಂದೆ ಹಾಜರಾಗಿ ವಾದ ಮಂಡಿಸಿದರು.

“ಆರೆಸ್ಸೆಸ್ ಬಿಜೆಪಿಯ ನೇರ ಸಂಬಂಧ ಹೊಂದಿದ ಅಧಿವಕ್ತ ಪರಿಷದ್ ಕಾರ್ಯಕ್ರಮಗಳಲ್ಲಿ ನಾಲ್ಕು ಬಾರಿ ಭಾಗವಹಿಸಿದ್ದೀರಿ. ಹಲವು ಹಿತಾಸಕ್ತಿಗಳನ್ನು ಹೊಂದಿರುವ ನೀವು ಈ ಕೇಸಿನ ವಿಚಾರಣೆಯಿಂದ ಹಿಂದೆ ಸರಿದು ಬೇರೆ ನ್ಯಾಯಮೂರ್ತಿಯವರಿಗೆ ವಹಿಸಬೇಕು” ಎಂದು ಕೇಜ್ರೀವಾಲ್ ವಾದವಾಗಿತ್ತು.

ಇದೇ ಅಬಕಾರಿ ನೀತಿಯ ಸಿಬಿಐ ಕೇಸಿಗೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳಲ್ಲಿ ಆಮ್ ಆದ್ಮೀ ಪಾರ್ಟಿಯ ಸಂಜಯಸಿಂಗ್, ಸಿಸೋಡಿಯಾ, ಕೇಜ್ರೀವಾಲ್ ಮುಂತಾದವರಿಗೆ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರು ಜಾಮೀನು ನಿರಾಕರಿಸಿ ಆದೇಶ ನೀಡಿದ್ದರು. ಆದರೆ ಬಿಜೆಪಿಯ ಮಾಜಿ ಮಂತ್ರಿ ದಿಲೀಪ್ ರೇ ಅವರನ್ನು ಕಲ್ಲಿದ್ದಿಲು ಹಗರಣದ ಸಂಬಂಧದ ಸಜೆಯ ಆದೇಶಕ್ಕೇ ತಡೆಯಾಜ್ಞೆ ನೀಡಿದ್ದರು. ಒಡಿಶಾದ ವಿಧಾನನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಲು ದಿಲೀಪ್ ರೇ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು ಎಂಬ ಅಂಶಗಳು ಇದೀಗ ಸಾರ್ವಜನಿಕ ಚರ್ಚೆಯಲ್ಲಿವೆ..

ಇಷ್ಟೇ ಅಲ್ಲ, ನ್ಯಾಯಮೂರ್ತಿ ಶರ್ಮ ಅವರ ಮಗ ಮತ್ತು ಮಗಳು ಇಬ್ಬರೂ ದೆಹಲಿ ಹೈಕೋರ್ಟು-ಸುಪ್ರೀಮ್ ಕೋರ್ಟ್ ಮುಂದೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ವಕೀಲರ ಪಟ್ಟಿಯಲ್ಲಿದ್ದಾರೆ. ಕಳೆದ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆದ ನೇಮಕಗಳಿವು. ಖಾಸಗಿ ವಕೀಲರನ್ನು ಈ ಪಟ್ಟಿಗೆ ಸೇರಿಸಿಕೊಂಡು ವ್ಯಾಜ್ಯಗಳು- ಮೊಕದ್ದಮೆಗಳಲ್ಲಿ ಸರ್ಕಾರದ ಪರವಾಗಿ ವಾದಿಸುವ ಕಾರ್ಯ ವಹಿಸಲಾಗುತ್ತದೆ. ಹಣದ ಸಂಪಾದನೆ ಮಾತ್ರವಲ್ಲದೆ ಹೆಸರು ಮಾಡುವ ಅವಕಾಶವೂ ಇರುವ ಈ ಪಟ್ಟಿಯನ್ನು ಸೇರಲು ಹಿರಿಯ ವಕೀಲರ ನಡುವೆ ತುರುಸಿನ ಪೈಪೋಟಿ ಇರುವುದುಂಟು. ಸರ್ಕಾರಿ ಪಟ್ಟಿಗಳನ್ನು ಸೇರುವ ವಕೀಲರನ್ನು ಪ್ರತಿಭೆಯ ಮೇರೆಗೆ ನೇಮಕ ಮಾಡಿಕೊಳ್ಳುವುದಿಲ್ಲ, ಬದಲಿಗೆ ಆಳುವ ಪಕ್ಷಕ್ಕೆ ನಿಷ್ಠಾವಂತರಾಗಿದ್ದಾರೆಯೇ ಇಲ್ಲವೇ ಎಂದು ನೋಡಲಾಗುತ್ತದೆ ಎಂದು ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಇತ್ತೀಚೆಗೆ ಮತ್ತೊಂದು ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಹೇಳಿರುವುದುಂಟು.

ಸ್ವರ್ಣಕಾಂತ ಶರ್ಮ ಅವರ ಮಕ್ಕಳನ್ನು ಒಳಗೊಂಡ ಪಟ್ಟಿಯಲ್ಲಿರುವ ಅನೇಕ ಹಿರಿಯ ವಕೀಲರು ಕೇಜ್ರೀವಾಲ್ ವಿರುದ್ಧದ ಮೇಲ್ಮನವಿ ಕೇಸಿನಲ್ಲಿ ವಾದ ಮಂಡಿಸಲಿದ್ದಾರೆ. ರಾಜಕೀಯವಾಗಿ ಆಸ್ಫೋಟಕ ಎನ್ನಲಾದ ಮೇಲ್ಮನವಿ ವಿಚಾರಣೆಯಿದು. ಈ ಮೂರು ಮುಖ್ಯ ಕಾರಣಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರು ಹಿತಾಸಕ್ತಿಗಳ ತಾಕಲಾಟ ಎದುರಿಸಬೇಕಾಗುತ್ತದೆ ಎಂಬ ತಕರಾರು ಎದ್ದಿದೆ.

ವಿಚಾರಣೆಯ ಪ್ರಕ್ರಿಯೆಯಲ್ಲಿ ಪೂರ್ವಗ್ರಹದ ಸಕಾರಣ ಶಂಕೆಯಿದ್ದು, ನ್ಯಾಯಾಂಗದಲ್ಲಿ ಸಾರ್ವಜನಿಕರ ವಿಶ್ವಾಸಕ್ಕೆ ಕುಂದು ಬರುವ ಸಂಭವ ಕಂಡು ಬಂದಲ್ಲಿ ನ್ಯಾಯಮೂರ್ತಿಯವರು ಅಂತಹ ಕೇಸುಗಳ ವಿಚಾರಣೆಯಿಂದ ಹಿಂದೆ ಸರಿಯಬೇಕಾಗುತ್ತದೆ ಎನ್ನುತ್ತದೆ ಕಾನೂನು. ಅಷ್ಟೇ ಅಲ್ಲ, ತನಗೆ ನಿರ್ದಿಷ್ಟ ನ್ಯಾಯಪೀಠ ಅಥವಾ ನ್ಯಾಯಮೂರ್ತಿಯವರಿಂದ ನ್ಯಾಯ ಸಿಗಲಾರದು ಎಂದು ಕಕ್ಷಿದಾರ ಸಕಾರಣವಾಗಿ ಭಾವಿಸಿದಲ್ಲಿ, ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿಯಬೇಕಾಗುತ್ತದೆ. ಕೇಜ್ರೀವಾಲ್- ಸಿಸೋಡಿಯಾ ಮತ್ತಿತರೆ 21 ಮಂದಿಯ ಪೈಕಿ ಹಲವರು ನಿಷ್ಪಕ್ಷಪಾತದ ವಿಚಾರಣೆ ನಡೆಯಲಾರದು ಎಂದು ಶಂಕಿಸಿದ್ದಾರೆ.

2014ರಲ್ಲಿ ಅಧಿಕಾರ ಹಿಡಿದು 10 ವರ್ಷಗಳಾದರೂ ದೆಹಲಿ ದಕ್ಕಲಿಲ್ಲವೆಂಬ ಕುದಿ, ಬಿಜೆಪಿ ನೇತೃತ್ವವನ್ನು ಕುರುಡು ಮಾಡಿತ್ತು. ಭ್ರಷ್ಟಾಚಾರದ ವಿರುದ್ಧ ಆಂದೋಲನದ ಅಲೆಯ ಮೇಲೆ ತೇಲಿ ಬಂದು ಅಧಿಕಾರ ಹಿಡಿದಿದ್ದ ಪಕ್ಷ, ಆಮ್ ಆದ್ಮಿ ಪಕ್ಷ. ಅದೇ ಭ್ರಷ್ಟಾಚಾರದ ಬಡಿಗೆಯನ್ನೇ ಬೀಸಿ ಕೆಡವಬೇಕೆಂಬುದು ಬಿಜೆಪಿ ರಣತಂತ್ರ. ಈ ಕಟ್ಟಕಡೆಯ ಹತಾರಿನ ಬೇಷರತ್ ಬಳಕೆಗೆ ನೈತಿಕ-ಅನೈತಿಕ, ನ್ಯಾಯ-ಅನ್ಯಾಯದ ಪರಿವೆಗಳು ಇರಲಿಲ್ಲ. ಎದ್ದರೆ ಕುಳಿತರೆ ಭ್ರಷ್ಟಾಚಾರದ ಆಪಾದನೆಗಳನ್ನು ಸುತ್ತಿ ಎಸೆಯಲಾಯಿತು.

ಹಿತಾಸಕ್ತಿಗಳ ಘರ್ಷಣೆ ಏರ್ಪಡುವ ಸನ್ನಿವೇಶ ಒದಗಿದರೆ ನ್ಯಾಯಾಧೀಶರು ತಾವಾಗಿಯೇ ಅಂತಹ ಕೇಸಿನ ವಿಚಾರಣೆಯಿಂದ ಹಿಂದೆ ಸರಿಯಬೇಕು. ಹಿತಾಸಕ್ತಿಗಳ ತಾಕಲಾಟ ಏರ್ಪಟ್ಟಾಗ ನ್ಯಾಯಾಧೀಶರು ಪೂರ್ವಗ್ರಹಪೀಡಿತರಾಗಬಹುದು ಎಂಬ ಶಂಕೆಯೇ ಈ ತತ್ವದ ಹಿಂದಿನ ತರ್ಕ. ನೈಸರ್ಗಿಕ ನ್ಯಾಯ ತತ್ವ. ಹಿಂತೆಗೆಯಬೇಕೆಂದು ವಿಧಿಸುವ ಯಾವುದೇ ನಿರ್ದಿಷ್ಟ ಕಾನೂನು ಇಲ್ಲ. ಈ ತೀರ್ಮಾನವನ್ನು ನ್ಯಾಯಾಧೀಶರು-ನ್ಯಾಯಮೂರ್ತಿಗಳ ವಿವೇಚನೆಗೆ ಬಿಡಲಾಗಿದೆ.

ಆರೆಸ್ಸೆಸ್- ಬಿಜೆಪಿ ಸಾಮೀಪ್ಯ, ಈ ಹಿಂದೆ ಇದೇ ಅಬಕಾರಿ ಕೇಸಿನಲ್ಲಿ ಆಪ್ ಗಣ್ಯರಿಗೆ ಜಾಮೀನು ನಿರಾಕರಣೆ, ಬಿಜೆಪಿಯ ಮಾಜಿ ಕೇಂದ್ರ ಮಂತ್ರಿ ಕಲ್ಲಿದ್ದಿಲು ಹಗರಣದಲ್ಲಿ ಎದುರಿಸಿದ್ದ ಸಜೆಗೇ ತಡೆಯಾಜ್ಞೆ ನೀಡಿಕೆ ಹಾಗೂ ತಮ್ಮ ಇಬ್ಬರು ಮಕ್ಕಳು ಸುಪ್ರೀಮ್ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ವಕೀಲರ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಅಂಶಗಳು ನೈಸರ್ಗಿಕ ನ್ಯಾಯ ಸಿಗುವ ಕುರಿತು ಕಕ್ಷಿದಾರರಲ್ಲಿ ಶಂಕೆ ಹುಟ್ಟಿಸುವುದು ಮೇಲ್ನೋಟಕ್ಕೇ ಎದ್ದು ಕಾಣುವ ವಾಸ್ತವ.

ಆಪ್ ಮತ್ತು ಬಿಜೆಪಿ ನಡುವಣ ಭಾರೀ ಸಮರದ ಮೊಕದ್ದಮೆಯಿದು ಎಂಬುದು ಗಮನಾರ್ಹ. ನ್ಯಾಯ ಸಲ್ಲಿಸಿದರೆ ಮಾತ್ರ ಸಲ್ಲದು, ನ್ಯಾಯ ಸಲ್ಲಿಸಿದಂತೆ ಸಾರ್ವಜನಿಕವಾಗಿ ತೋರಲೂ ಬೇಕು ಎನ್ನುತ್ತದೆ ನ್ಯಾಯಶಾಸ್ತ್ರ. ಹಿತಾಸಕ್ತಿಗಳ ತಾಕಲಾಟದ ವಿಷಯ ಬಂದಾಗ ನ್ಯಾಯಮೂರ್ತಿಗಳು ನಿರ್ದಿಷ್ಟ ಕೇಸಿನ ವಿಚಾರಣೆಯಿಂದ ಹಿಂದೆ ಸರಿದು ಘನತೆ ಮೆರೆದಿರುವ ಅನೇಕ ಪೂರ್ವ ನಿದರ್ಶನಗಳಿವೆ.

ಕರ್ನಾಟಕದ ನಿದರ್ಶನಗಳನ್ನೇ ನೀಡುವುದಾದರೆ ರಾಘವೇಶ್ವರ ಭಾರತಿಯವರು ಎದುರಿಸಿದ ಅತ್ಯಾಚಾರ ಮತ್ತು ಆಸ್ತಿಪಾಸ್ತಿ ವಿವಾದಗಳ ಕೇಸುಗಳ ವಿಚಾರಣೆಗೆ ಸಂಬಂಧಿಸಿದಂತೆ 2014-2019ರ ಅವಧಿಯಲ್ಲಿ ಕರ್ನಾಟಕ ಹೈಕೋರ್ಟಿನ 15 ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದದ್ದಿದೆ.

ಅಬಕಾರಿ ನೀತಿ ಭ್ರಷ್ಟಾಚಾರ ಕೇಸಿನ ಮೇಲ್ಮನವಿ ವಿಚಾರಣೆ ಸಂಬಂಧದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರು ವಿಚಾರಣೆಯಿಂದ ಹಿಂದೆ ಸರಿಯುವುದೇ ನ್ಯಾಯವಾದ ಕ್ರಮ. ಅವರು ಈ ಘನತೆವೆತ್ತ ದಾರಿಯನ್ನು ತುಳಿಯಲು ಈಗಲೂ ತಡವಾಗಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...