ಬದಲಾಗುತ್ತಿರುವ ಜಾಗತಿಕ ಆರ್ಥಿಕತೆ

Date:

ಆಡಂ ಸ್ಮಿತ್ ಅವರ ವೆಲ್ತ್ ಆಫ್ ನೇಷನ್ ಪುಸ್ತಕಕ್ಕೆ 250 ವರ್ಷ. ಅದು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. 2001ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದ ಮೈಕೆಲ್ ಸ್ಪೆನ್ಸ್ ಪ್ರಾಜೆಕ್ಟ್ ಸಿಂಡಿಕೇಟಿನಲ್ಲಿ ಅಡಂ ಸ್ಮಿತ್ ಅವರ ಚಿಂತನೆಗಳ ಬಗ್ಗೆ ಇತ್ತೀಚೆಗೆ ಒಂದು ಲೇಖನವನ್ನು ಬರೆದಿದ್ದಾರೆ. ಸ್ಪೆನ್ಸ್ ಗುರುತಿಸುವಂತೆ ಆಡಂ ಸ್ಮಿತ್ ಅವರ ಚಿಂತನೆಗಳಲ್ಲಿ ಎರಡು ಪ್ರಮುಖ ವಿಚಾರಗಳು ಇಂದಿಗೂ ಎದ್ದು ಕಾಣುತ್ತವೆ;

- Advertisement -

ಒಂದು, ಮಾರುಕಟ್ಟೆಯ ‘ಅದೃಶ್ಯ ಹಸ್ತ’ ಮಾರುಕಟ್ಟೆಯಲ್ಲಿನ ವ್ಯವಹಾರಗಳು ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡುತ್ತವೆ. ಆದರೆ ಇದು ಸರಿಯಾಗಿ ಕೆಲಸ ಮಾಡಬೇಕೆಂದರೆ ಕೆಲವು ಶರತ್ತುಗಳಿರಬೇಕು: ಹಣದ ಮೌಲ್ಯ ಸ್ಥಿರವಾಗಿರಬೇಕು. ವ್ಯಾಪಾರ ಮಾಡುವವರಲ್ಲಿ ಪ್ರಾಮಾಣಿಕತೆ ಮತ್ತು ನಂಬಿಕೆ ಇರಬೇಕು. ವ್ಯವಸ್ಥೆಯಲ್ಲಿ ಆಸ್ತಿ ಹಕ್ಕುಗಳಿಗೆ ರಕ್ಷಣೆ ಇರಬೇಕು. ಆದರೆ, ಮಾಲಿನ್ಯದಂತಹ ಬಾಹ್ಯ ಪರಿಣಾಮಗಳು ಮತ್ತು ಮಾಹಿತಿಯ ಕೊರತೆ ಈ ‘ಅದೃಶ್ಯ ಹಸ್ತದ’ ಪರಿಣಾಮಕಾರಿತ್ವವನ್ನು ಮತ್ತು ಸಾಧನೆಯನ್ನು ಕುಂಠಿತಗೊಳಿಸಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...
photo faculty spence michael.jpg 1

ಎರಡನೆಯ ಮತ್ತು ಬಹುಶಃ ಅತ್ಯಂತ ಪ್ರಮುಖವಾದ ಒಳನೋಟವೆಂದರೆ, ಶ್ರಮವಿಭಜನೆಯಿಂದ ಅಥವಾ ಇಂದು ನಾವು ಕರೆಯುವ ‘ವಿಶೇಷ ಪರಿಣತಿ’ಯಿಂದ ಆರ್ಥಿಕತೆಯ ದಕ್ಷತೆ ಹಾಗೂ ಉತ್ಪಾದಕತೆಯು ಹೆಚ್ಚುತ್ತದೆ. ವಿಶೇಷ ಪರಿಣತಿಯನ್ನು ಹೊಂದಿರುವ ಆರ್ಥಿಕತೆಯು ವಿವಿಧ ಬಗೆಯ ಜ್ಞಾನ ಮತ್ತು ನೈಪುಣ್ಯತೆಯಿಂದಾಗಿ ಬಲಗೊಳ್ಳುತ್ತದೆ. ಬೃಹತ್ ಪ್ರಮಾಣದಲ್ಲಿ ನಡೆಯುವ ಉತ್ಪಾದನೆಯಿಂದ ಇದಕ್ಕೆ ಲಾಭವಾಗುತ್ತದೆ. ಹಾಗೆಯೇ ನಿರಂತರ ಕಲಿಕೆಯಿಂದಲೂ ಇದು ಅನುಕೂಲ ಪಡೆದುಕೊಳ್ಳುತ್ತದೆ ಮತ್ತು ಹೊಸ ಆವಿಷ್ಕಾರಗಳಿಗೆ ಇರುವ ಪ್ರೇರಣೆಯೂ ಇದಕ್ಕೆ ಅನುಕೂಲವೆ.

ಆದರೆ, ಈ ವಿಶೇಷ ಪರಿಣತಿಯು ಯಶಸ್ವಿಯಾಗಬೇಕಾದರೆ ಅಲ್ಲಿ ವಿನಿಮಯ ಪದ್ಧತಿ (ಸರಕುಗಳ ಕೊಳ್ಳುವಿಕೆ ಮತ್ತು ಮಾರಾಟ) ಪರಿಣಾಮಕಾರಿಯಾಗಿರಬೇಕು. ಹಾಗಾಗಿಯೇ ಇದು ಸ್ಮಿತ್ ಅವರ ‘ಅದೃಶ್ಯ ಹಸ್ತದ ತತ್ವವನ್ನೇ (ಅಂದರೆ ಜನರು ತಮ್ಮ ವೈಯಕ್ತಿಕ ಲಾಭಕ್ಕಾಗಿ ವ್ಯಾಪಾರ ಮಾಡಿದರೂ, ಮಾರುಕಟ್ಟೆಯು ತನ್ನಷ್ಟಕ್ಕೆ ತಾನೇ ಸಮಾಜಕ್ಕೆ ಬೇಕಾದ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ ಎನ್ನುವ ತತ್ತ್ವ ಅವಲಂಬಿಸಿದೆ. ಈ ವಿಶೇಷ ಪರಿಣತಿಯು ಬೆಳೆದಂತೆಲ್ಲಾ, ಆರ್ಥಿಕತೆಯ ರಚನೆಯು ಹೆಚ್ಚು ಸಂಕೀರ್ಣವಾಗುತ್ತಾ ಹೋಗುತ್ತದೆ.

ಇದನ್ನೂ ಓದಿ: ನೈಜ ಬೆಳವಣಿಗೆ ಮತ್ತು ನಕಲಿ ವಾದಗಳು: ಇವು ಎಂದಿಗೂ ಒಂದಾಗಲಾರವು

ಆಡಾಮ್ ಸ್ಮಿತ್ ಹೇಳಿದಂತೆ. ಈ ವಿಶೇಷ ಪರಿಣತಿ ಎಂಬುದು ಮಾರುಕಟ್ಟೆಯ ಹರವನ್ನು ಅವಲಂಬಿಸಿರುತ್ತದೆ. ಮಾರುಕಟ್ಟೆ ಸಣ್ಣದಾದರೆ ವಿಭಿನ್ನ ಬಗೆಯ ವಿಶೇಷ ವ್ಯವಹಾರಗಳು ನಡೆಯುವುದಕ್ಕೆ ಬೇಕಾದಷ್ಟು ಬೇಡಿಕೆ ಅಲ್ಲಿ ಇರುವುದಿಲ್ಲ. ಮಾರುಕಟ್ಟೆ ವಿಸ್ತಾರವಾಗಬೇಕಾದರೆ ವಿಸ್ತರಣೆಗೆ ತಗಲುವ ವೆಚ್ಚ ಕಮ್ಮಿಯಿರಬೇಕು. ಮಾರುಕಟ್ಟೆಯ ವಿಸ್ತರಣೆಯ ವೆಚ್ಚ ಕಡಿಮೆಯಾಗುವುದಕ್ಕೆ ಸಾರಿಗೆ ಮತ್ತು ಸಂವಹನ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಮಾರುಕಟ್ಟೆ ವಿಸ್ತಾರಗೊಂಡಷ್ಟು ವಿಶೇಷ ಪರಿಣತಿ ಹೆಚ್ಚೆಚ್ಚು ಬೆಳೆಯುವುದಕ್ಕೂ ಸಾಧ್ಯವಾಗುತ್ತದೆ.

ವಿಶೇಷ ಪರಿಣತಿಗೆ ಇರುವ ಮತ್ತೊಂದು ದೊಡ್ಡ ಅಡ್ಡಿಯೆಂದರೆ ಅದರಿಂದ ಉಂಟಾಗುವ ಅಪಾಯ. ಆರ್ಥಿಕತೆಯ ಪರಿಣತಿಯ ಸ್ವರೂಪ ನಿರ್ದಿಷ್ಟ ರಚನೆಗಳನ್ನು ಅವಲಂಬಿಸಿರುತ್ತದೆ. ರಚನೆಗಳು ಸುಲಭವಾಗಿ ಬದಲಾಗುವುದಿಲ್ಲ. ಬದಲಾಗಲು ಸಮಯ ತೆಗೆದುಕೊಳ್ಳುತ್ತವೆ. ವ್ಯಾಪಾರ ವ್ಯವಸ್ಥೆಯಲ್ಲಿ ತೊಂದರೆಯಾದರೆ ಅಥವಾ ಹೊಸ ತಂತ್ರಜ್ಞಾನದ ಬರವಿನಿಂದಾಗಿ ಹಳೆಯ ಕೌಶಲಗಳು ಅಪ್ರಸ್ತುತವಾದರೆ, ಬದಲಾವಣೆ ಅನಿವಾರ್ಯವಾಗುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಗಳು, ಉದ್ದಿಮೆಗಳು. ಮಾತ್ರವಲ್ಲ ಕೆಲವೊಮ್ಮೆ ಇಡೀ ಆರ್ಥಿಕತೆಯೇ ಬದಲಾಗಬೇಕಾಗುತ್ತದೆ. ಇದು ಬಹಳ ಕಷ್ಟಕರವಾದದ್ದು ಮತ್ತು ದೀರ್ಘ ಸಮಯ ಬೇಡುವಂತಹುದು. ಹತ್ತೊಂಬತ್ತನೇ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ, ಆರ್ಥಿಕತೆಗಳು ಹೆಚ್ಚು ಸ್ಪೆಷಲೈಸ್ ಆಗಲು ಪ್ರಾರಂಭವಾಯಿತು. ಈ ಬದಲಾವಣೆಯಿಂದ ಅಪಾಯಗಳು ಎದುರಾಗುತ್ತವೆ. ಅವನ್ನು ತಡೆಯುವುದಕ್ಕೆ ಹಲವಾರು ಹೊಸ ನೀತಿಗಳು ಮತ್ತು ವ್ಯವಸ್ಥೆಗಳು ಜಾರಿಗೆ ಬಂದವು. ಉದಾಹರಣೆಗೆ ಏಕಸ್ವಾಮ್ಯ ತಡೆಯುವ ‘ಆ್ಯಂಟಿ-ಟ್ರಸ್ಟ್’ ನಿಯಮಗಳಿಂದ ಹಿಡಿದು, ಬಡವರಿಗಾಗಿ ‘ಸಾಮಾಜಿಕ ರಕ್ಷಣಾ ಕವಚ’, ಅಲ್ಲಿಂದ ಆರ್ಥಿಕ ಹಾಗೂ ಹಣಕಾಸಿನ ಸ್ಥಿರತೆ ಕಾಪಾಡುವುದಕ್ಕೆ ಪರಿಹಾರಗಳು ಹೀಗೆ ಹಲವು ಕ್ರಮಗಳು ಜಾರಿಯಾದವು. ಆದರೆ, ಇವೆಲ್ಲವೂ ಹೆಚ್ಚಾಗಿ ಆಯಾ ದೇಶಗಳ ಮಟ್ಟಕ್ಕಷ್ಟೇ ಸೀಮಿತವಾಗಿದ್ದ ಪರಿಹಾರಗಳಾಗಿದ್ದವು. ಎರಡನೇ ಮಹಾಯುದ್ಧ ಮುಗಿದ ನಂತರ, ಈ ವಿಶೇಷ ಪರಿಣತಿ ಅನ್ನೋದು ಜಾಗತಿಕ ವಿದ್ಯಮಾನವಾಯಿತು.

1200x1200wz

ಯುದ್ಧದ ನಂತರದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ಶುರುವಾದ ಈ ಪ್ರಯತ್ನ, ನೋಡನೋಡುತ್ತಲೇ ಒಂದು ದೊಡ್ಡ ಬದಲಾವಣೆಯಾಗಿ ರೂಪಾಂತರಗೊಂಡಿತು. ಹಳೆಯ ವಸಾಹತುಶಾಹಿ ಸಾಮ್ರಾಜ್ಯಗಳು ಮತ್ತು ಅವುಗಳ ಅಸಮತೋಲನದ ಆರ್ಥಿಕ ಪದ್ಧತಿಗಳು ಮರೆಯಾದವು; ಲಾಭಕೋರತನದ ‘ಮರ್ಕೆಂಟಲಿಸಂ’ ಜಾಗವನ್ನು ‘ಮುಕ್ತ ವ್ಯಾಪಾರ’ ಆಕ್ರಮಿಸಿಕೊಂಡಿತು. ಇದಕ್ಕೆ ಪೂರಕವಾಗಿ ಸಾರಿಗೆ ಮತ್ತು ಸಂವಹನ ತಂತ್ರಜ್ಞಾನದಲ್ಲಿ ಪ್ರಗತಿಯಾಯಿತು. ಡಿಜಿಟಲ್ ಕ್ರಾಂತಿ ಈ ಪ್ರಗತಿಯನ್ನು ತ್ವರಿತಗೊಳಿಸಿತು. ಇದರಿಂದ ಮಾರುಕಟ್ಟೆಯ ವ್ಯಾಪ್ತಿ ವಿಶಾಲವಾಯಿತು. ಸ್ಪೆಷಲೈಸೇಶನ್‌ಗೆ ಇದ್ದ ಮೊದಲ ಅಡ್ಡಿ ಸಡಿಲವಾಯಿತು.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಈ ಬದಲಾವಣೆ ಒಂದು ದೊಡ್ಡ ವರದಾನವಾಯಿತು. ‘ವಿಶೇಷ ಪರಿಣತಿಯಿಂದ’ ಉತ್ಪಾದನೆ ಹೆಚ್ಚು ಪರಿಣಾಮಕಾರಿಯಾಯಿತು. ಉತ್ಪಾದಕತೆ ಸುಧಾರಿಸಿತು. ಆದರೆ ಈ ದೇಶಗಳಲ್ಲಿ ತಲಾ ಜಿಡಿಪಿ ಕಡಿಮೆಯಿತ್ತು.
ಹಾಗಾಗಿ ಈ ದೇಶಗಳಿಗೆ ಸ್ಥಳೀಯವಾಗಿ ಹೆಚ್ಚಿನ ಉತ್ಪಾದಕತೆಗೆ ಬೇಕಾದಷ್ಟು ಬೇಡಿಕೆಯನ್ನು ಸೃಷ್ಟಿಸಲು ಸಾಧ್ಯವಿರಲಿಲ್ಲ. ಆದರೆ, ಯಾವಾಗ ಅವರಿಗೆ ವಿದೇಶಿ ಮಾರುಕಟ್ಟೆಗಳು ಮತ್ತು ತಂತ್ರಜ್ಞಾನಗಳ ಲಭ್ಯವಾಯಿತೋ, ಆಗ ಅವರು ತಮ್ಮಲ್ಲಿರುವ ತುಲನಾತ್ಮಕ ಅನುಕೂಲವನ್ನು ಬಳಸಿಕೊಂಡು ವೇಗವಾಗಿ ಜೆಡಿಪಿಯಲ್ಲಿ ಬೆಳವಣಿಗೆಯನ್ನು ಸಾಧಿಸಿದರು. ಈ ರೀತಿಯಾಗಿ, ಪರಿಣತಿ ಬೆಳೆದದ್ದರಿಂದ ಜಗತ್ತಿನ ಆರ್ಥಿಕ ಚಟುವಟಿಕೆಗಳು ಕೇವಲ ಶ್ರೀಮಂತ ದೇಶಗಳಿಗೆ ಸೀಮಿತವಾಗದೆ ಬೇರೆ ಕಡೆಗಳಿಗೂ ಹರಡತೊಡಗಿದವು.

ಮೈಕೆಲ್ ಸ್ಪೆನ್ಸ್ ಮುಂದುವರಿದು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.
“ಆರ್ಥಿಕ ವ್ಯವಸ್ಥೆಯಲ್ಲಿ ತೀರಾ ವೇಗವಾಗಿ ಈ ರಚನಾತ್ಮಕ ಪಲ್ಲಟಗಳು ನಡೆದುಹೋದವು. ಹೆಚ್ಚುತ್ತಿರುವ ಅಪಾಯಗಳನ್ನು ನಿಯಂತ್ರಿಸುವುದಕ್ಕೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆಗಳು ರೂಪುಗೊಳ್ಳುವ ಮೊದಲೇ ಸಮಸ್ಯೆಗಳು ಉಲ್ಬಣಗೊಂಡವು. ಸ್ವಲ್ಪ ಸಮಯದವರೆಗೆ ಇದು ದೊಡ್ಡ ಸಮಸ್ಯೆಯಾಗಿ ಕಾಣಲೇ ಇಲ್ಲ. ಏಕೆಂದರೆ, ಅಮೆರಿಕದಂತಹ ಬಲಿಷ್ಠ ದೇಶಗಳು ಜಾಗತಿಕ ಆರ್ಥಿಕ ವ್ಯವಸ್ಥೆಯ ಜವಾಬ್ದಾರಿಯನ್ನು ಹೊತ್ತಿದ್ದವು; ಅವರೇ ನಿಯಮಗಳನ್ನು ರೂಪಿಸಿ. ಇಡೀ ವ್ಯವಸ್ಥೆಯನ್ನು ಕಾಯುವ ಸಂಸ್ಥೆಗಳಿಗೆ ಬೆನ್ನೆಲುಬಾಗಿದ್ದರು. ಆದರೆ ಕ್ರಮೇಣ, ಜಾಗತಿಕ ಆರ್ಥಿಕ ಶಕ್ತಿಯ ಕೇಂದ್ರಗಳು ಬದಲಾಗಿ ಪರಿಸ್ಥಿತಿ ಒಂದು ನಿರ್ಣಾಯಕ ತಿರುವಿಗೆ ಬಂದು ನಿಂತಿತು. ‘ಮಾರುಕಟ್ಟೆಯ ವ್ಯಾಪ್ತಿ’ ಅಥವಾ ಬೇಡಿಕೆಗೆ ಇದ್ದ ಮಿತಿಗಳು ಸಡಿಲವಾದಂತೆಲ್ಲಾ, ವ್ಯವಸ್ಥೆಯಲ್ಲಿನ ಅಪಾಯಗಳೇ ಆರ್ಥಿಕತೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದವು. ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹೆಚ್ಚಾದಂತೆ ಶ್ರೀಮಂತ ದೇಶಗಳಲ್ಲಿನ ಜನಸಾಮಾನ್ಯರಲ್ಲಿ ಈ ವ್ಯವಸ್ಥೆಯ ವಿರುದ್ಧ ಅಸಮಾಧಾನ ಮೂಡಿತು. ಇದು ಸಾಮಾಜಿಕ ಹಾಗೂ ರಾಜಕೀಯ ವಿರೋಧಕ್ಕೆ ಕಾರಣವಾಯಿತು. ಇದಕ್ಕೆ ಪೂರಕವಾಗಿ ಹವಾಮಾನ ಬದಲಾವಣೆ. ಕೋವಿಡ್ ಸಾಂಕ್ರಾಮಿಕ, ಉಕ್ರೇನ್ ಮತ್ತು ಗಾಜಾ ಯುದ್ಧಗಳು ಹಾಗೂ ದೇಶಗಳ ನಡುವಿನ ರಾಜಕೀಯ ಸಂಘರ್ಷಗಳು ಈ ಪರಿಸ್ಥಿತಿಯನ್ನು ಮತ್ತಷ್ಟು ಬಿಗಿಗೊಳಿಸಿದವು. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಮೇರಿಕೆ ಮೊದಲು ವಿದೇಶಿ ನೀತಿ ಹಾಗೂ ದ್ವಿಪಕ್ಷೀಯ ಒಪ್ಪಂದಗಳಿಗೆ ಆದ್ಯತೆ ನೀಡುವ ನೀತಿಯನ್ನು ಮುಂದಿಟ್ಟುಕೊಂಡು ಮತ್ತೆ ಅಧ್ಯಕ್ಷರಾದ ಮೇಲೆ ಇದು ಇನ್ನಷ್ಟು ಗಟ್ಟಿಯಾಯಿತು.”

ಸ್ಪೆನ್ಸ್ ಅವರು ಇನ್ನೊಂದು ಗಂಭೀರ ಬೆಳವಣಿಗೆಯನ್ನು ಗಮನಿಸುತ್ತಾರೆ. “ಇದರ ಪರಿಣಾಮವಾಗಿ, ಇಂದು ಬಹಳಷ್ಟು ದೇಶಗಳು ಆರ್ಥಿಕ ಭದ್ರತೆಯನ್ನು ದೇಶದ ರಕ್ಷಣೆಯಷ್ಟೇ ಮುಖ್ಯವೆಂದು ಭಾವಿಸುತ್ತಿವೆ. ದೇಶದ ಒಳಗಡೆ ಕೆಲಸಗಳಲ್ಲಿ ವಿಶೇಷ ಪರಿಣತಿಗೆ ಅಷ್ಟೇ ಆದ್ಯತೆಯಿದೆ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಈಗ ಕಡಿಮೆಯಾಗುತ್ತಿದೆ. ಈ ಬದಲಾವಣೆ ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಹೇಳುವುದು ಕಷ್ಟ. ಆದರೆ ಇದರಿಂದ ದೇಶದ ಉತ್ಪಾದನೆ ಮತ್ತು ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆರ್ಥಿಕ ಅಪಾಯವನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆ ಹೆಚ್ಚಿಸಿಕೊಳ್ಳಲು ನಾವು ತೆರುತ್ತಿರುವ ಬೆಲೆ ಇದು. ಕಡಿಮೆ ತಲಾ ಆದಾಯ ಅಥವಾ ಕಡಿಮೆ ಜನಸಂಖ್ಯೆ ಇರುವ ದೇಶಗಳಿಗೆ ಇದರಿಂದ ಹೆಚ್ಚು ತೊಂದರೆಯಾಗುತ್ತದೆ. ಅವರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಎಷ್ಟು ಅವಕಾಶ ಸಿಗುತ್ತದೆ ಎನ್ನುವುದರ ಮೇಲೆ ಅವರ ನಷ್ಟದ ಪ್ರಮಾಣ ನಿರ್ಧಾರವಾಗುತ್ತದೆ.”

ಇದನ್ನೂ ಓದಿ:ದತ್ತಾಂಶ ಆಧಾರಿತ ಯುಗದಲ್ಲಿ ನಿರ್ಧಾರಗಳನ್ನು ರೂಪಿಸುವುದು

ಸೈನ್ಸ್ ಅವರು ಎಐ ಯುಗದಲ್ಲಿ ಆಡಂ ಸ್ಮಿತ್ ಅವರ ವಿಶೇಷ ಪರಿಣತಿಯ ಮಾದರಿಯನ್ನು ಪರಿಶೀಲಿಸುತ್ತಾರೆ. ಅವರು ಹೇಳುವಂತೆ “ಆಡಂ ಸ್ಮಿತ್ ಅವರ ಈ ‘ಸ್ಪೆಷಲೈಸೇಶನ್’ ಮಾದರಿ ಈಗ ಇನ್ನೂ ದೊಡ್ಡ ಬದಲಾವಣೆಯನ್ನು ಎದುರಿಸಬೇಕಾಗಿದೆ. ನೆನಪಿರಲಿ, ಈ ಮಾದರಿಯು ಅಷ್ಟು ಸುಲಭವಾಗಿ ಪಡೆಯಲು ಸಾಧ್ಯವಾಗದ ವಿಶೇಷ ಜ್ಞಾನ ಹಾಗೂ ಪರಿಣತಿಯನ್ನು ಇಂದು ಎದುರಿಸಬೇಕಾಗಿದೆ. ಆದರೆ ಜನರೇಟಿವ್ ಎಐ ಮಾದರಿಗಳು ಹಲವು ಬದಲಾವಣೆಗಳನ್ನು ತಂದಿವೆ. ಮುಖ್ಯವಾಗಿ ಯಾವುದೇ ವಿಷಯದ ಆಳವಾದ ಪರಿಣತಿಯನ್ನು ಬಯಸುವ ಯಾರಿಗೆ ಬೇಕಾದರೂ ಅತಿ ಕಡಿಮೆ ವೆಚ್ಚದಲ್ಲಿ ಒದಗಿಸುವ ಹಾದಿಯಲ್ಲಿವೆ.”

ಇದರ ಪರಿಣಾಮ ತುಂಬಾ ಗಂಭೀರವಾಗಿರುತ್ತದೆ. ಪರಿಣತಿ ಅನ್ನೋದು ಎಲ್ಲರಿಗೂ ಸುಲಭವಾಗಿ ಸಿಗೋಕೆ ಶುರುವಾದ್ರೆ, ಅದರ ಬೆಲೆ ಅದರಷ್ಟಕ್ಕೆ ಕಮ್ಮಿಯಾಗುತ್ತದೆ. ಸಲೀಸಾಗಿ ವಿವರಿಸಲು ಅಥವಾ ದಾಖಲಿಸಲು ಸಾಧ್ಯವಾಗದ ಜ್ಞಾನ ಹಾಗೂ ಕೌಶಲಗಳ ಬೆಲೆಗಳು ಮಾತ್ರ ಹೆಚ್ಚುತ್ತವೆ. ಅಂದ್ರೆ, ಕಳೆದ 250 ವರ್ಷಗಳಿಂದ ಮನುಷ್ಯನ ಜ್ಞಾನಕ್ಕೆ ಏನು ಬೆಲೆ ಇತ್ತೋ, ಅದು ಇನ್ನುಂದೆ ಇರೋದಿಲ್ಲ. ಮಾನವ ಸಂಪನ್ಮೂಲದ ಒಂದು ಭಾಗದ ಬೆಲೆ ಕುಸಿದ್ರೆ, ಇನ್ನೊಂದು ಭಾಗದ ಮೌಲ್ಯ ಆಕಾಶಕ್ಕೆ ಬರಬಹುದು. ಇವೆರಡರಲ್ಲಿ ಯಾವುದರ ಪಾಲು ಎಷ್ಟು ಅನ್ನೋದೇ ಈಗ ನಾವು ಸಂಶೋಧಿಸಬೇಕಿರೋದು.

ಸೆನ್ಸ್ ಗಮನಿಸುವಂತೆ “ಕಳೆದ 250 ವರ್ಷಗಳಲ್ಲಿ ಬಹುತೇಕ ‘ಮಾನವ ಬಂಡವಾಳಕ್ಕೆ’ ಇದ್ದ ಬೆಲೆ ಭವಿಷ್ಯದಲ್ಲಿ ಇಲ್ಲದೆ ಹೋಗಬಹುದು. ಆದರೆ ಕೆಲವು ಬಗೆಯ ಮಾನವ ಬಂಡವಾಳಕ್ಕೆ ಹೆಚ್ಚಿನ ಮೌಲ್ಯವೂ ಸಿಗಬಹುದು. ಆದರೆ ಯಾವುದರ ಬೆಲೆ ಕುಸಿಯುತ್ತದೆ. ಯಾವುದರ ಮೌಲ್ಯ ಹೆಚ್ಚುತ್ತದೆ ಅಥವಾ ಯಾವುದರ ಪಾಲು ಎಷ್ಟಿರುತ್ತದೆ ಎಂಬುದು ಸಂಶೋಧಿಸಬೇಕಾದ ವಿಷಯ.”

ಮೈಕೆಲ್ ಸ್ಪೆನ್ಸ್ ಅವರು ಹೇಳುವಂತೆ “ಸ್ಮಿತ್ ಈ ಪರಿಣತಿಯ ಪರಿಕಲ್ಪನೆಯನ್ನು ಪರಿಚಯಿಸಿ 250 ವರ್ಷಗಳೇ ಕಳೆದಿದ್ದರೂ ಅದು ಇವತ್ತಿಗೂ ನಮ್ಮ ಆರ್ಥಿಕತೆಯ ಪ್ರಮುಖ ಲಕ್ಷಣವಾಗಿದೆ. ಆದ್ರೆ ಅದು ಕೂಡ ಗಣನೀಯವಾಗಿ ಬದಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಅಪಾಯಗಳು ಹೆಚ್ಚಿರೋದ್ರಿಂದ, ದೇಶಗಳು ಒಬ್ಬರನ್ನೊಬ್ಬರು ನಂಬೋದು ಸ್ವಲ್ಪ ಮಟ್ಟಿಗೆ ಕಡಿಮೆ ಆಗ್ತಿದೆ. ಕೃತಕ ಬುದ್ಧಿಮತ್ತೆಯಿಂದ ಕಬುದ್ಧಿಮತ್ತೆಯಿಂದ ಈ ವಿಶೇಷ ಪರಿಣಿತಿಯೇನು ಕಡಿಮೆಯಾಗುವುದಿಲ್ಲ. ಆದರೆ ಜ್ಞಾನ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವ ರೀತಿ ಬದಲಾಗುತ್ತೆ. ಇದರಿಂದ ಯಾವ ಕೆಲಸಕ್ಕೆ ಎಷ್ಟು ಬೆಲೆ ಕೊಡಬೇಕು ಅಥವಾ ಯಾವ ಜ್ಞಾನಕ್ಕೆ ಎಷ್ಟು ಗೌರವಧನ ಸಿಗಬೇಕು ಅನ್ನೋ ಲೆಕ್ಕಾಚಾರವೇ ಬುಡಮೇಲಾಗಬಹುದು.”

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು...

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...