ನೈಜ ಬೆಳವಣಿಗೆ ಮತ್ತು ನಕಲಿ ವಾದಗಳು: ಇವು ಎಂದಿಗೂ ಒಂದಾಗಲಾರವು

Date:

ಭಾರತವು ತನ್ನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಜಿಡಿಪಿ ಬೆಳವಣಿಗೆಯನ್ನು ಘೋಷಿಸಿದ ನಂತರ, ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಸೇರಿದಂತೆ ಹಲವು ಮುನ್ಸೂಚಕರು 2023ರ ಕ್ಯಾಲೆಂಡರ್ ವರ್ಷ ಅಥವಾ 2023-24ರ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಗಳನ್ನು ಹೆಚ್ಚಿಸಿದ್ದಾರೆ. ಆದಾಗ್ಯೂ, ಕೆಲವು ವಿಮರ್ಶಕರು ಸಾಕ್ಷಾಧಾರಗಳು ಮುಂದಿದ್ದರೂ ತಮ್ಮ ನಿಲುವನ್ನು ಬದಲಿಸಿಕೊಳ್ಳಲು ತಯಾರಿಲ್ಲ. ಇದಕ್ಕೆ ಒಂದು ಉದಾಹರಣೆ ಎಂದರೆ ಸೆಪ್ಟೆಂಬರ್ 6ರಂದು ಪ್ರಕಟವಾದ ‘India’s Fake Growth Story (ಭಾರತದ ನಕಲಿ ಬೆಳವಣಿಗೆಯ ಕಥೆ) ಎಂಬ ಲೇಖನ.

- Advertisement -

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ಬಿಸಿಲಿಗೂ ಕುಗ್ಗದೆ ಕಬ್ಬಿನ ಬೆಲೆಗಾಗಿ ಮುಂದುವರೆದ...

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು, ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ...

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಬಿಜೆಪಿ ಪಕ್ಷದ ಶಾಸಕರು ಮನವೊಲಿಸಿ ದೆಹಲಿಯಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದರು. ಆದರೆ ದೆಹಲಿಯಲ್ಲಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ...

‘Statistical Discrepancy’ (ಸಾಂಖ್ಯಿಕ ವ್ಯತ್ಯಾಸ) ಎಂಬ ಸಾಲಿಗೆ ಸಂಬಂಧಿಸಿದೆ. ನಾವು ಮೊದಲು ಅದನ್ನು ಚರ್ಚಿಸೋಣ. ಭಾರತದ ದತ್ತಾಂಶ ವ್ಯವಸ್ಥೆಯ ವಿನ್ಯಾಸವು ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡಲು ಒಟ್ಟು ವೆಚ್ಚಕ್ಕಿಂತ ಆದಾಯವನ್ನು ಮಾಪನವನ್ನಾಗಿ ತೆಗೆದುಕೊಳ್ಳುತ್ತದೆ. ಇಡೀ ಆರ್ಥಿಕತೆಯಲ್ಲಿನ ವೆಚ್ಚಗಳನ್ನು ಅಂತಿಮ ಮತ್ತು ಮಧ್ಯಂತರ ಸರಕು-ಸೇವೆಗಳೆಂದು ಪ್ರತ್ಯೇಕಿಸಿ ಲೆಕ್ಕ ಹಾಕುವುದು ಕಷ್ಟ, ಅದಕ್ಕಿಂತ ಒಂದು ಘಟಕದ ಆದಾಯ ಅಥವಾ ಉತ್ಪಾದನೆ ಮತ್ತು ಉತ್ಪಾದನೆಗೆ ಬಳಸಿದ ಪದಾರ್ಥಗಳ ನಡುವಿನ ವ್ಯತ್ಯಾಸವನ್ನು ತೆಗೆದುಕೊಂಡು ಹೊಸದಾಗಿ ಸೇರ್ಪಡೆಯಾದ ಮೌಲ್ಯವನ್ನು (GVA – Gross Value Added) ಅಂದಾಜು ಮಾಡುವುದು ಹೆಚ್ಚು ಸುಲಭ. ವೆಚ್ಚವನ್ನು ಆಧರಿಸಿ ಜಿಡಿಪಿಯನ್ನು ಲೆಕ್ಕ ಹಾಕುವ ಕ್ರಮವು ಆದಾಯಕ್ಕೆ ಸಂಬಂಧಿಸಿದಂತೆ ಹೆಚ್ಚು ನಿಖರವಾದ ಅಂದಾಜುಗಳು ಸಿಕ್ಕಾಗ ಸುಲಭವಾಗುತ್ತದೆ. ಅಂತಹ ಮಾಹಿತಿ ಬೇಡಿಕೆಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ವಿಶ್ಲೇಷಿಸುವುದಕ್ಕೂ ಉಪಯುಕ್ತವಾಗುತ್ತದೆ.

e5093e4d 9d16 42b0 9acc 2fc64e3f0a2

2023-24ರ ಮೊದಲ ತ್ರೈಮಾಸಿಕದಲ್ಲಿ (Q1), ಶೇ. 2.8 ರಷ್ಟು ‘ವ್ಯತ್ಯಾಸ’ವು ಧನಾತ್ಮಕ (+) ಚಿಹ್ನೆಯನ್ನು ಹೊಂದಿದೆ. ಇದರರ್ಥ, ಅಂದರೆ ನಮಗೆ ವೆಚ್ಚದ ಮಾಹಿತಿ ಸಿಕ್ಕಿರುವುದು ಶೇಕಡ 97.2 ರಷ್ಟು ಮಾತ್ರ (ಗಮನಿಸಿ: ಇಲ್ಲಿ ಮೂಲ ಲೇಖನದಲ್ಲಿರುವುದು ಶೇ. 67.2ರ ಬದಲಿಗೆ 97.2 ಇರಬೇಕು). ಉಳಿದ ಶೇಕಡ 2.8ರಷ್ಟು ಹಣ ಎಲ್ಲಿ ಖರ್ಚಾಗಿದೆ ಎಂಬುದು ಸದ್ಯಕ್ಕೆ ನಮಗೆ ತಿಳಿದಿಲ್ಲ. ಆದರೆ ಆ ಹಣ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿದೆ. ಮುಂದಿನ ದಿನಗಳಲ್ಲಿ ಅದರ ಲೆಕ್ಕ ಸಿಗಲಿದೆ. ಅದೇ ರೀತಿ, ಹಿಂದಿನ ಎಂಟು ತ್ರೈಮಾಸಿಕಗಳಲ್ಲಿ ಈ ವ್ಯತ್ಯಾಸವು ಋಣಾತ್ಮಕ (-) ಆಗಿತ್ತು. ಅಂದರೆ, ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿ ಕಂಡಿತ್ತು. ಆ ಸಮಯದಲ್ಲಿ ವೆಚ್ಚಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಹೆಚ್ಚು ವಿವರವಾಗಿ ಸಿಕ್ಕಿದ್ದವು. ಆದಾಯಕ್ಕೆ ಸಂಬಂಧಿಸಿದ ಅಂಕಿ ಅಂಶಗಳ ಸಂಗ್ರಹಣೆ ಸ್ವಲ್ಪ ನಿಧಾನವಾಗಿತ್ತು. ಹಾಗಾಗಿ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿ ಕಾಣುತ್ತಿತ್ತು. ದೀರ್ಘಾವಧಿಯಲ್ಲಿ, ಈ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಪರಸ್ಪರ ಸಮತೋಲನಗೊಳ್ಳುತ್ತವೆ. 2011-12 ರಿಂದ 2023-24ರ ಅವಧಿಯಲ್ಲಿ, ಆದಾಯ ಮತ್ತು ವೆಚ್ಚ ಈ ಎರಡೂ ವಿಧಾನಗಳ ಮೂಲಕ ಲೆಕ್ಕಹಾಕಿದ ನೈಜ ಜಿಡಿಪಿಯ ವಾರ್ಷಿಕ ಸಂಯೋಜಿತ ಬೆಳವಣಿಗೆ ದರವು (CAGR) ಶೇ.5.3 ರಷ್ಟಿದೆ.

GeminiGeneratedImageh272j2h272j2h272

ಆದ್ದರಿಂದ, ಜಿಡಿಪಿಯನ್ನು ಉತ್ತೇಕ್ಷಿಸಲಾಗಿದೆ ಎನ್ನುವ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಆದಾಯವನ್ನು ಮಾಪನವನ್ನಾಗಿ ಬಳಸಿ ಲೆಕ್ಕ ಹಾಕಿದ ಜಿಡಿಪಿಯು ವೆಚ್ಚವನ್ನು ಬಳಸಿ ಲೆಕ್ಕ ಹಾಕಿದ ಜಿಡಿಪಿಗಿಂತ ಯಾವಾಗಲೂ ಹೆಚ್ಚಾಗಿರುವುದಿಲ್ಲ. 2011-12ರಿಂದ ಈ ವ್ಯತ್ಯಾಸಗಳು ಶೇ. 6.4 ರಿಂದ ಮೈನಸ್ ಶೇ. 4.8 ರ ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಇತ್ತೀಚಿನ ತ್ರೈಮಾಸಿಕದ ವ್ಯತ್ಯಾಸವು ಈ ಮಿತಿಯೊಳಗೇ ಇದೆ. ಇದನ್ನು ಸುಲಭವಾಗಿ ಪರಿಶೀಲಿಸಬಹುದು.

ಸಾಂಖ್ಯಿಕ ಅಧಿಕಾರಿಗಳು 2020-21ರ ಮೊದಲ ತ್ರೈಮಾಸಿಕದಲ್ಲಿ ಸುಮಾರು ಶೇ. 25 ರಷ್ಟು ಜಿಡಿಪಿ ಕುಸಿತವನ್ನು ವರದಿ ಮಾಡಿದಾಗ, ಭಾರತೀಯ ಅಂಕಿಅಂಶಗಳ ವಿಶ್ವಾಸಾರ್ಹತೆಯ ಬಗ್ಗೆ ಯಾರೂ ಸೊಲ್ಲೆತ್ತಲಿಲ್ಲ. ಏಕೆಂದರೆ ಅದು ಭಾರತದ ಜಿಡಿಪಿ ಇತಿಹಾಸದಲ್ಲೇ ಅತ್ಯಂತ ತೀವ್ರವಾದ ಕುಸಿತವನ್ನು ವರದಿ ಮಾಡಿತ್ತು. ಆ ದತ್ತಾಂಶವು ಟೀಕಾಕಾರರಿಗೆ ಸೂಕ್ತವಾಗಿತ್ತು, ಆದ್ದರಿಂದ ಅದು ‘ವಿಶ್ವಾಸಾರ್ಹ’ವಾಗಿತ್ತು. ಒಂದು ವೇಳೆ ಜಿಡಿಪಿ ಬೆಳವಣಿಗೆಯ ದರವನ್ನು ಈ ಎರಡು ಕ್ರಮದಲ್ಲಿ ಹೆಚ್ಚಿರುವ ಸಂಖ್ಯೆಯನ್ನು ಆಧರಿಸಿ ಲೆಕ್ಕಹಾಕಿದ್ದರೆ ಉತ್ತೇಕ್ಷೆಯ ಆರೋಪಕ್ಕೆ ಅರ್ಥವಿರುತ್ತಿತ್ತು. ಆದರೆ ಸರ್ಕಾರಿ ಸಂಖ್ಯಾಶಾಸ್ತ್ರಜ್ಞರು ಹಾಗೆ ಎಂದೂ ಮಾಡಿಲ್ಲ. ವೆಚ್ಚ ಆಧಾರಿತ ಅಂದಾಜಿಗಿಂತ ಹೆಚ್ಚಿರಲಿ ಅಥವಾ ಕಡಿಮೆಯಿರಲಿ, ಅವರು ಯಾವಾಗಲೂ ಆದಾಯದ ವಿಧಾನದ ಆಧಾರದ ಮೇಲೆ ಜಿಡಿಪಿ ದರವನ್ನು ವರದಿ ಮಾಡಿದ್ದಾರೆ.

ಅನೇಕ ಏಜೆನ್ಸಿಗಳು ಹಾಗೂ ಅರ್ಥಶಾಸ್ತ್ರಜ್ಞರ ಒಮ್ಮತದ ಅಂದಾಜು ಕೂಡ ಶೇ. 7.7ರಿಂದ ಶೇ. 8.3ರಷ್ಟು ಬೆಳವಣಿಗೆಯ ದರವನ್ನು ನಿರೀಕ್ಷಿಸಿದ್ದವು. ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ತ್ರೈಮಾಸಿಕದಲ್ಲಿ ಶೇ. 8ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಿತ್ತು. ಜಿಎಸ್‌ಟಿ ಸಂಗ್ರಹ, ಇ-ವೇ ಬಿಲ್‌ಗಳು, ಉತ್ಪಾದನೆ ಮತ್ತು ಸೇವಾ ವಲಯದ PMI ಗಳಂತಹ ಹೆಚ್ಚು ನಿಯತವಾದ ಸೂಚಕಗಳು ಕೂಡ ಆರ್ಥಿಕತೆಯು ಹೆಚ್ಚು ಪ್ರಬಲ ಹಾದಿಯಲ್ಲಿ ಸಾಗುತ್ತಿರುವುದನ್ನು ಸಮರ್ಥಿಸುತ್ತವೆ. ಆರ್ಥಿಕ ವ್ಯವಹಾರಗಳ ಇಲಾಖೆಯ ಮಾಸಿಕ ಆರ್ಥಿಕ ಪರಾಮರ್ಶೆಯು 2022-23ರ ಅಂತಿಮ ತ್ರೈಮಾಸಿಕದಿಂದ ಬೆಳವಣಿಗೆ ವೇಗವಾಗಿಯೇ ಆಗುತ್ತಿರುವುದನ್ನು ದಾಖಲಿಸಿದೆ. ಜುಲೈ 2023ರ ದತ್ತಾಂಶಗಳು ಕೂಡ ಬೆಳವಣಿಗೆ ವೇಗವಾಗಿ ಆಗುತ್ತಿರುವುದನ್ನು ತೋರಿಸಿವೆ. ಖಾಸಗಿ ವಲಯದ ಬಂಡವಾಳ ಹೂಡಿಕೆ ಪ್ರಾರಂಭವಾಗಿದೆ: 2020-21ರಲ್ಲಿ ಕುಸಿತ ಕಂಡ ನಂತರ, ಇದು 2021-22ರಲ್ಲಿ ಶೇ. 22.4ರಷ್ಟು ಮತ್ತು 2022-23ರಲ್ಲಿ ಶೇ. 18.5ರಷ್ಟು ಏರಿದೆ. ಆರ್‌ಬಿಐ ಕೂಡ ತನ್ನ ಮಾಸಿಕ ಬುಲೆಟಿನ್‌ನಲ್ಲಿ ಕಂಪನಿಗಳು ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶಗಳನ್ನು ಇಟ್ಟುಕೊಂಡಿರುವುದನ್ನು ಗಮನಿಸಿದೆ. ಮತ್ತು ಆರ್‌ಬಿಐ 2023-24ರಲ್ಲಿ ಶೇ. 6.5ರಷ್ಟು ಜಿಡಿಪಿ ಬೆಳವಣಿಗೆಯ ನಿರೀಕ್ಷೆಯನ್ನು ಪುನರುಚ್ಚರಿಸಿದೆ. ಹಣಕಾಸು ಸಚಿವಾಲಯವೂ ಈ ಅಂದಾಜನ್ನು ಎತ್ತಿ ಹಿಡಿದಿದೆ. ಅಷ್ಟೇ ಅಲ್ಲದೆ, 2022-23ರ ಶೇ. 7.2ರಷ್ಟು ಬೆಳವಣಿಗೆಯು 2026ರ ಆರಂಭದಲ್ಲಿ ಅಂತಿಮ ಅಂದಾಜು ಬಿಡುಗಡೆಯಾದಾಗ ಅದು ಇನ್ನೂ ಹೆಚ್ಚಿರುತ್ತದೆ ಎಂದು ನಾವು ನಂಬುತ್ತೇವೆ.

ಕಳೆದ ದಶಕದಲ್ಲಿ ಭಾರತೀಯ ಕಾರ್ಪೊರೇಟ್ ಮತ್ತು ಹಣಕಾಸು ವಲಯಗಳ ಬ್ಯಾಲೆನ್ಸ್ ಶೀಟ್ ಸಮಸ್ಯೆಗಳು ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದ್ದವು. ಅದು ಈಗ ಇತಿಹಾಸ, ಬ್ಯಾಂಕುಗಳು ಸಾಲ ನೀಡುತ್ತಿವೆ. ಸಾಲದ ಬೆಳವಣಿಗೆಯು ಎರಡಂಕಿಯಲ್ಲಿದೆ. ಕಂಪನಿಗಳು ಹೂಡಿಕೆ ಮಾಡಲು ಪ್ರಾರಂಭಿಸಿವೆ. ಅತಿಯಾದ ಆರ್ಥಿಕ ಸಡಿಲಿಕೆ ಮಾಡದೆ, ಉದ್ದೇಶಿತ ಪರಿಹಾರ ಮತ್ತು ಸಾರ್ವಜನಿಕ ಬಂಡವಾಳ ವೆಚ್ಚಕ್ಕೆ ಒತ್ತು ನೀಡುವ ಮೂಲಕ ಭಾರತವು ಕೋವಿಡ್ ಸಾಂಕ್ರಾಮಿಕವನ್ನು ನಿರ್ವಹಿಸಿರುವುದು ಆರ್ಥಿಕತೆಗೆ ಸ್ಥಿರವಾದ ಅಡಿಪಾಯವನ್ನು ಒದಗಿಸಿದೆ. ಇದರ ಭದ್ರ ಬುನಾದಿಯ ಮೇಲೆ ಮುಂಬರುವ ವರ್ಷಗಳಲ್ಲಿ ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ಉನ್ನತ ಜೀವನಮಟ್ಟದ ಸೌಧವು ನಿರ್ಮಾಣವಾಗಲಿದೆ.

ಸೆಪ್ಟೆಂಬರ್‌ ( 8, 2023)

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು...

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...