ನಿರ್ಮಾಣ ಹಂತದಲ್ಲಿದ್ದ ಮನೆಯ ನೀರಿನ ಸಂಪ್‌ಗೆ ಆಟವಾಡುತ್ತಿದ್ದ ಬಾಲಕ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಗಂಗಮ್ಮನಗುಡಿಯ ಅಬ್ಬಿಗೆರೆಯ ಕಾರ್ಮಿಕರ ಶೆಡ್ ಬಳಿ ನಡೆದಿದೆ.
ಶಬ್ಬೀರ್ (7) ಮೃತ ಬಾಲಕ. ಈತನು ಯಾದಗಿರಿ ಮೂಲದವನು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕನ ತಂದೆ ಸಂಶುದ್ದೀನ್ ಮತ್ತು ಕುಟುಂಬ ಗಂಗಮ್ಮನಗುಡಿಯ ಅಬ್ಬಿಗೆರೆಯ ಕಾರ್ಮಿಕರ ಶೆಡ್‌ನಲ್ಲಿ ವಾಸವಿತ್ತು. ಯಾದಿಗಿರಿ ಮೂಲದ ಶಂಶುದ್ದೀನ್ ದಂಪತಿ ಕಟ್ಟಡ ಕಾರ್ಮಿಕರಾಗಿದ್ದು, ಅಬ್ಬಿಗೆರೆ ಶಿವಣ್ಣ ತೋಟದ ವ್ಯಾಪ್ತಿಯಲ್ಲಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದರು.
ಕಾರ್ಮಿಕರ ಬಳಕೆಗಾಗಿ ಶೆಡ್ ಸಮೀಪದಲ್ಲೇ ತೆರೆದ ನೀರಿನ ಸಂಪ್ ನಿರ್ಮಿಸಲಾಗಿತ್ತು. ಶುಕ್ರವಾರ ಸಂಜೆ ಆಟ ಆಡುವಾಗ ಆಯತಪ್ಪಿ ಸಂಪ್‌ಗೆ ಬಿದ್ದಿದ್ದ ಬಾಲಕ, ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಸಂಕ್ರಾಂತಿ | ತರಕಾರಿ, ಹೂ-ಹಣ್ಣು ಖರೀದಿಗೆ ಮುಗಿಬಿದ್ದ ಜನ; ಬೆಲೆ ಏರಿಕೆ
ತುಂಬಾ ಹೊತ್ತಾದರೂ ಮಗು ಕಾಣದೆ ಇದ್ದಾಗ ಇತ್ತ ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಬಳಿಕ, ನೀರಿನ ಸಂಪ್ ನೋಡಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.