ಬೆಂಗಳೂರು ಬಂದ್ | ಪ್ರತಿಭಟನಾನಿರತರಿಂದ ಅಹಿತಕರ ಘಟನೆ; 13 ಪ್ರಕರಣ ದಾಖಲು

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟ ಸೆ.11 ರಂದು ಬಂದ್‌ಗೆ ಕರೆ ನೀಡಿತ್ತು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಟೋ, ಕ್ಯಾಬ್‌ ಬಸ್‌ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದರು. ಇತ್ತಕಡೆ ನಗರದೆಲ್ಲೆಡೆ ಕೆಲವು ಪ್ರತಿಭಟನಾನಿರತರು ರ್‍ಯಾಪಿಡೋ ಸವಾರರು ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಕ್ಯಾಬ್‌ ಚಾಲಕರ ಮೇಲೆ ದಬ್ಬಾಳಿಕೆ ನಡೆಸಿ, ಹಲ್ಲೆ ಮಾಡಿದ ಘಟನೆಗಳು ನಡೆದಿವೆ.

ಬೇಕೇಂದೆ ರ್‍ಯಾಪಿಡೋ ಬುಕ್ ಮಾಡಿ ಸವಾರರನ್ನು ತಾವಿರುವ ಕಡೆ ಕರೆಸಿ ಹೆಲ್ಮೆಟ್‌ ತೆಗೆದು ಹಲ್ಲೆ ಮಾಡುವುದು, ಇನ್ನೊಂದೆಡೆ ಬಾಡಿಗೆಗೆ ಹೋಗುತ್ತಿದ್ದ ಕಾರ್ ಮೇಲೆ ಕಲ್ಲು ಹಾಕಿ ಗಾಜು ಪುಡಿ ಪುಡಿ ಮಾಡುವುದು, ಆಟೋ ಚಾಲಕರ ಮೇಲೆ ಹಲ್ಲೆ, ಕಾರ್ ಕೀ ಕಿತ್ತುಕೊಂಡು ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡುವುದು ಸೇರಿದಂತೆ ಪ್ರತಿಭಟನೆಗೆ ಸಹಕಾರ ನೀಡದ ಚಾಲಕರ ಮೇಲೆ ಮೊಟ್ಟೆ ಎಸೆದು, ಹಲ್ಲೆ ನಡೆಸುವುದು, ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ಹಲವಾರು ಅಹಿತಕರ ಘಟನೆಗಳಿಗೆ ಬೆಂಗಳೂರು ಬಂದ್ ಸಾಕ್ಷಿಯಾಯಿತು.

ಬೆಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ನಗರದ 8 ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ಒಟ್ಟು 13 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ 12 ಮಂದಿಯನ್ನು ಬಂಧಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರ್‍ಯಾಪಿಡೋ ಸವಾರರ ಮೇಲೆ ಹಲ್ಲೆ

  • ಪ್ರತಿಭಟನಾನಿರತರು ಬೇಕಂತಲೇ ರ್‍ಯಾಪಿಡೋ ಬುಕ್ ಮಾಡಿ ರ್‍ಯಾಪಿಡೋ ಸವಾರರನ್ನು ತಾವಿರುವ ಸ್ಥಳಕ್ಕೆ ಕರೆಯಿಸಿ ಅವರ ಹೆಲ್ಮೆಟ್‌ ತೆಗೆದು ಹಲ್ಲೆ ಮಾಡಿದ ಹಲವು ಘಟನೆಗಳು ನಡೆದಿವೆ. ರ್‍ಯಾಪಿಡೋ ಸವಾರನ ಮೇಲೆ ಹಲ್ಲೆ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
  • ಪುನೀತ್​, ಮಣಿ, ಶರಣ್​ ಬಂಧಿತರು. ಪ್ರತಿಭಟನಾನಿರತರು ವಿಜಯ್‌ಕುಮಾರ್ ಎಂಬಾತ ರ್‍ಯಾಪಿಡೋ ಸವಾರನ ಮುಖಕ್ಕೆ ಮೊಟ್ಟೆ ಹೊಡೆದು ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಏರಪೋರ್ಟ್‌ ಕಡೆಯಿಂದ ಬರುತ್ತಿದ್ದ ಎರಡು ಕ್ಯಾಬ್‌ಗಳನ್ನು ಮೂವರು ಪ್ರತಿಭಟನಾನಿರತರು ಚಿಕ್ಕಜಾಲ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನ ಗಾಜು ಧ್ವಂಸ ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ಆಟೋ ಚಾಲಕರ ಸಂಘದ ಸದಸ್ಯರಾದ ವಿಜಯಕುಮಾರ್, ನಾಗರಾಜ್, ನಾರಾಯಣಗೌಡ ಎಂಬವರನ್ನು ಬಂಧಿಸಲಾಗಿದೆ.
  • ಪ್ರತಿಭಟನೆಗೆ ಸಹಕಾರ ನೀಡದ ಹಳದಿ ಬೋರ್ಡ್ ಕಾರುಗಳು, ಸಣ್ಣ-ಪುಟ್ಟ ಗೂಡ್ಸ್‌ ವಾಹನ, ಆಟೋ ಹಾಗೂ ಚಾಲಕರ ಮೇಲೆ ಮೊಟ್ಟೆ ಎಸೆದು ಹಲ್ಲೆ ಮಾಡಲಾಗಿದೆ. ಆಟೋ, ಕಾರುಗಳ ಗಾಜು ಧ್ವಂಸಗೊಳಿಸಲಾಗಿದೆ. ನಗರದ ಗೊರಗುಂಟೆಪಾಳ್ಯ, ರಾಜ್‌ಕುಮಾರ್ ರಸ್ತೆಯಲ್ಲಿ ಎರಡು ಆಟೋ ಅಡ್ಡಗಟ್ಟಿ ಚಕ್ರದ ಗಾಳಿ ಬಿಟ್ಟು ಬೆದರಿಕೆ ಹಾಕಿದ ಘಟನೆ ನಡೆದಿದೆ.
  • ಮೇಖ್ರಿ ವೃತ್ತದ ಬಳಿ ಕಾರು ಚಾಲಕನಿಗೆ ಬೆದರಿಕೆ ಹಾಕಿ, ಆತನ ಕಾರಿನ ಹಿಂಬದಿ ಚಕ್ರ ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಸಹಕಾರ ನಗರದಲ್ಲಿ ಕ್ಯಾಬ್‌ನ ಒಳಭಾಗ ಮತ್ತು ಚಾಲಕನಿಗೆ ಮೊಟ್ಟೆ ಒಡೆದು ದೌರ್ಜನ್ಯ ಎಸಗಿದ್ದಾರೆ.
  • ಮೌರ್ಯ ವೃತ್ತ ಮತ್ತು ಸುಜಾತಾ ಬಳಿ ಐದಾರು ಗೂಡ್ಸ್‌ ವಾಹನ ಚಾಲಕರಿಗೆ ಥಳಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ ರ್‍ಯಾಪಿಡೋ ಚಾಲಕನ ಮೇಲೆ ಹತ್ತಕ್ಕೂ ಹೆಚ್ಚು ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.
  • ಮೌರ್ಯ ಸರ್ಕಲ್ ಬಳಿ ಬಾಡಿಗೆ ಹೋಗುತ್ತಿದ್ದ ಕಾರಿನ ಕೀ ಕಿತ್ತುಕೊಂಡು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.

ಬೆಂಗಳೂರು ಬಂದ್‌ ವೇಳೆ ಹಲವಾರು ಅಹಿತಕರ ಘಟನೆಗಳು ನಡೆದಿವೆ. ಕೇಂದ್ರ ಮತ್ತು ಆಗ್ನೇಯ ವಿಭಾಗದಿಂದ ತಲಾ ಒಂದು ಪ್ರಕರಣಗಳು ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಉತ್ತರ ವಿಭಾಗದಲ್ಲಿ ಎರಡು ಪ್ರಕರಣ ದಾಖಲಾಗಿದ್ದು, 6 ಮಂದಿ ಬಂಧಿಸಲಾಗಿದೆ. ಈಶಾನ್ಯ ವಿಭಾಗದಲ್ಲಿ 2 ಪ್ರಕರಣ ದಾಖಲಾಗಿದ್ದು, 3 ಮಂದಿ ಬಂಧಿಸಲಾಗಿದೆ. ಪಶ್ಚಿಮ ವಿಭಾಗದಲ್ಲಿ 7 ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಬಂದ್ | ಫ್ರೀಡಂ ಪಾರ್ಕ್‌ನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಆಟೋ, ಕ್ಯಾಬ್ ಚಾಲಕರು

ಮೆಜೆಸ್ಟಿಕ್, ಮೇಖ್ರಿ ವೃತ್ತ, ಹೆಬ್ಬಾಳ, ಇಂದಿರಾನಗರ, ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಸೇರಿದಂತೆ ಹಲವೆಡೆ ಪ್ರತಿಭಟನಾನಿರತರು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದರು. ಈ ಪರಿಣಾಮ ನಗರದಲ್ಲಿ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂ. ಗ್ರಾ | ಸಾರ್ವಜನಿಕವಾಗಿ ಧೂಮಪಾನ ತಡೆಗೆ ಸ್ಟಾಪ್ ಟ್ಯೊಬ್ಯಾಕೋ ಮೊಬೈಲ್ ಆಪ್‌ನಲ್ಲಿ ದೂರು ನೀಡಿ:ಜಿಲ್ಲಾಧಿಕಾರಿ ಶಿವಶಂಕರ

ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಭಿತ್ತಿ ಪತ್ರಗಳು, ನಾಮಫಲಕಗಳನ್ನು ಶಾಲೆ-ಕಾಲೇಜು,...

ಮಳೆಗಾಲ ಶುರು: ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಲು ಬಿಬಿಎಂಪಿ ಮನವಿ

ಪೂರ್ವ ಮುಂಗಾರು ಮಳೆ ಶುರುವಾದ ಬೆನ್ನಲ್ಲೇ ಈಗ ಬೆಂಗಳೂರಿನ ಜನ ವಸತಿ...

ಬೆಂಗಳೂರು | ಐಸಿಯುನಲ್ಲಿದ್ದ ರೋಗಿಗೆ ರಕ್ತ ಬರುವ ಹಾಗೆ ಥಳಿಸಿದ ಕೆ.ಸಿ.ಜನರಲ್ ಆಸ್ಪತ್ರೆ ಸಿಬ್ಬಂದಿ

ರಾಜ್ಯ ರಾಜಧಾನಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ...

ಬೆಂಗಳೂರನ್ನು ಅವಹೇಳನ‌ ಮಾಡುತ್ತಿರುವುದು ನಮ್ಮವರೇ: ಬಿಜೆಪಿ ವಿರುದ್ಧ ಸಚಿವ ಪರಮೇಶ್ವರ್‌ ವಾಗ್ದಾಳಿ

ನಮ್ಮವರೇ ಬೆಂಗಳೂರನ್ನು ಅವಹೇಳನ‌ ಮಾಡುತ್ತಿದ್ದಾರೆ. ಹೊರ ದೇಶದವರಿಗೆ, ಹೊರ ಜನರಿಗೆ ಬೆಂಗಳೂರಿನ...