ಬೆಂಗಳೂರು | ಬಿಎಂಟಿಸಿ ಬಸ್ ನಿರ್ವಾಹಕ ಹಾಗೂ ಪ್ರಯಾಣಿಕನ ಹೊಡೆದಾಟ; ವಿಡಿಯೋ ವೈರಲ್

Date:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ವೊಂದರಲ್ಲಿ ನಿರ್ವಾಹಕ ಮತ್ತು ಪ್ರಯಾಣಿಕನೊಬ್ಬ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಎಲ್ಲಡೆ ವೈರಲ್ ಆಗಿದೆ. ಉತ್ತರ ಭಾರತೀಯ ವಲಸಿಗ ಎನ್ನಲಾಗಿರುವ ವ್ಯಕ್ತಿಯೊಬ್ಬರು ಪ್ರಯಾಣಿಸಲು ಬಿಎಂಟಿಸಿ ಬಸ್‌ ಹತ್ತಿದ್ದಾರೆ. ಈ ವೇಳೆ, ನಿರ್ವಾಹಕರು ಟಿಕೆಟ್ ಪಡೆಯಿರಿ ಎಂದಿದ್ದಕ್ಕೆ ಟಿಕೆಟ್ ಶುಲ್ಕ ನೀಡದೇ ಪ್ರಯಾಣಿಕ ನಿರ್ವಾಹಕನ ಜತೆಗೆ ಅಸಭ್ಯವಾಗಿ ಮಾತನಾಡಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ವಿಡಿಯೋ ಮೂಲಕ ತಿಳಿದುಬಂದಿದೆ.

ಇವರ ಜಗಳವನ್ನು ತಡೆಯಲು ಇಬ್ಬರು ಮಹಿಳೆಯರು ಪ್ರಯತ್ನಿಸುತ್ತಿದ್ದು, ಆದರೂ ಇಬ್ಬರು ಬಿಡದೆ ಹೊಡೆದಾಡಿಕೊಂಡಿದ್ದಾರೆ. ಬಳಿಕ, ಮಧ್ಯೆ ಪ್ರವೇಶಿಸಿದ ಬಸ್‌ ಚಾಲಕ ಪ್ರಯಾಣಿಕರನಿಗೆ ಬೈದು ಟಿಕೆಟ್‌ ದರ ನೀಡುವಂತೆ ತಿಳಿಸಿದ್ದಾನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ನೀರಿನ ಮಾಲಿನ್ಯದಿಂದ ಅಂಬಲಿಪುರ ಕೆರೆಯಲ್ಲಿ ಮೀನುಗಳ ಮಾರಣಹೋಮ

ಇದೇ ವೇಳೆ, ನಿರ್ವಾಹಕ ಪೊಲೀಸ್‌ ಠಾಣೆಗೆ ನಡೆಯುವಂತೆ ಬಸ್‌ ಚಾಲಕನಿಗೆ ತಿಳಿಸಿದ್ದಾನೆ. ಸದ್ಯ ವೈರಲ್ ಆಗಿರುವ ವಿಡಿಯೊಗೆ ಬೆಂಗಳೂರು ಪೊಲೀಸರು ಟ್ವೀಟ್‌ ಮಾಡಿ, ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದಾರೆ.

ಈ ಘಟನೆ ಯಾವಾಗ ನಡೆದಿದ್ದು, ಎಲ್ಲಿ ನಡೆದಿದ್ದು ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ತಿಳಿದುಬಂದಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮಕ್ಕಳ ಪಾಲನೆ ಪೂರ್ಣಾವಧಿ ಕೆಲಸ’ – ಪತ್ನಿಗೆ ಪತಿ ಹಣ ನೀಡಬೇಕು: ಹೈಕೋರ್ಟ್‌ ಆದೇಶ

ತನ್ನ ಮಕ್ಕಳನ್ನು ಪಾಲನೆ ಮಾಡುವುದಕ್ಕಾಗಿ ಪತ್ನಿಗೆ ಉಪನ್ಯಾಸಕಿ ಹುದ್ದೆ ತೊರೆಯುವಂತೆ ಮಾಡಿದ್ದ...

ಬಿಎಸ್‌ವೈ ಭೇಟಿಯಾದ ಸೋಮಣ್ಣ- ಚರ್ಚೆಗೆ ಗ್ರಾಸ

ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ...

ಬಿಬಿಎಂಪಿ | ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಹೆಸರು ಪ್ರಕಟ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಸುಸ್ತಿದಾರರ ಪಟ್ಟಿಯನ್ನು ಬೃಹತ್ ಬೆಂಗಳೂರು ಮಹಾನಗರ...

ಅನ್ನ, ಆರೋಗ್ಯ, ಆಶ್ರಯ, ಅಕ್ಷರವೇ ನಮ್ಮ ಸರ್ಕಾರದ ಮೂಲಮಂತ್ರ: ಸಿಎಂ ಸಿದ್ಧರಾಮಯ್ಯ

“ಅನ್ನ, ಆರೋಗ್ಯ, ಆಶ್ರಯ, ಅಕ್ಷರ ಇದೇ ನಮ್ಮ ಸರ್ಕಾರದ ಮೂಲಮಂತ್ರವಾಗಿದ್ದು, ಬಡವರ...