ಕದನ ವಿರಾಮ ಹಿನ್ನೆಲೆ | ಹಮಾಸ್‌ನಿಂದ 24 ಮಂದಿ, ಇಸ್ರೇಲ್‌ನಿಂದ 39 ಮಂದಿ ಬಿಡುಗಡೆ

Date:

ಅಕ್ಟೋಬರ್‌ 7ರಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ನಡುವಿನ ಸಂಘರ್ಷಕ್ಕೆ ಸದ್ಯ ಒತ್ತೆಯಾಳುಗಳ ಬಿಡುಗಡೆಗಾಗಿ ಕದನ ವಿರಾಮ ನಿರ್ಧಾರಕ್ಕೆ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ಹಮಾಸ್‌ನಿಂದ 24 ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದರೆ, ಇಸ್ರೇಲ್‌ನ ಜೈಲಿನಲ್ಲಿ ಬಂಧಿತರಾಗಿದ್ದ 39 ಮಂದಿ ಪ್ಯಾಲೆಸ್ತೀನಿಯರನ್ನು ಬಿಡುಗಡೆಗೊಳಿಸಲಾಗಿದೆ.

ಇಸ್ರೇಲ್‌ನ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಲ್ಲಿ ಹಮಾಸ್ ವಶಪಡಿಸಿಕೊಂಡ ಒತ್ತೆಯಾಳುಗಳ ಮೊದಲ ತಂಡವನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಈ ಮೊದಲು ಕೆಲವು ಹಿರಿಯ ಜೀವಗಳನ್ನು ಮಾನವೀಯ ಕಾರಣಕ್ಕೆ ಹಮಾಸ್ ಬಿಡುಗಡೆಗೊಳಿಸಿತ್ತು.

ಪ್ಯಾಲೆಸ್ತೀನ್‌ ಗಡಿಯಾಚೆಗಿನ ದಾಳಿಯ ಸಮಯದಲ್ಲಿ ಸೆರೆಹಿಡಿಯಲಾಗಿದ್ದವರ ಪೈಕಿ 24 ಮಂದಿಯನ್ನು ಹಮಾಸ್ ಬಿಡುಗಡೆಗೊಳಿಸಿದೆ. ಈ 24ರಲ್ಲಿ ಹತ್ತು ಧಾಯ್‌ಲ್ಯಾಂಡ್ ಪ್ರಜೆಗಳು, ಒಬ್ಬ ಫಿಲಿಫೈನ್ ಹಾಗೂ 13 ಇಸ್ರೇಲಿ ಒತ್ತೆಯಾಳುಗಳು ಎಂದು ಗುರುತಿಸಲಾಗಿದೆ. ಈ ಮಾಹಿತಿಯನ್ನು ಹಮಾಸ್ ಹಾಗೂ ಇಸ್ರೇಲ್ ಸೇನೆ ಕೂಡ ಖಚಿತಪಡಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಮಾಸ್‌ನಿಂದ ಬಿಡುಗಡೆಯಾದ ಒತ್ತೆಯಾಳುಗಳು ತಮ್ಮ ಕುಟುಂಬಗಳೊಂದಿಗೆ ಮತ್ತೆ ಸೇರುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಬಿಡುಗಡೆಯಾದವರ ಪೈಕಿ ನಾಲ್ವರು ಮಕ್ಕಳು ಮತ್ತು ಆರು ವೃದ್ಧ ಮಹಿಳೆಯರು ಸೇರಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ತಿಳಿಸಿದೆ.

ಹಮಾಸ್ ಒತ್ತೆಯಾಳುಗಳನ್ನು ಮಾನವೀಯ ಸಂಘಟನೆಗೆ ಹಸ್ತಾಂತರಿಸಿದ ನಂತರ ರೆಡ್ ಕ್ರಾಸ್ ವಾಹನಗಳ ಬೆಂಗಾವಲು ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿಯನ್ನು ದಾಟುತ್ತಿರುವ ದೃಶ್ಯ ವೈರಲ್‌ ಆಗಿದೆ. ಈ ವೇಳೆ ಕೆಲವು ಪ್ರಯಾಣಿಕರು ಕೈ ಬೀಸುತ್ತಿರುವ ದೃಶ್ಯವೂ ಇದೆ.

ಹಮಾಸ್ 24 ಮಂದಿಯನ್ನು ಬಿಡುಗಡೆಗೊಳಿಸುತ್ತಿದ್ದಂತೆಯೇ ಜೈಲಿನಲ್ಲಿ ಬಂಧಿತರಾಗಿದ್ದ ಮೂವತ್ತೊಂಬತ್ತು ಪ್ಯಾಲೆಸ್ತೀನಿಯನ್ನರನ್ನು ಇಸ್ರೇಲ್‌ ಸೇನೆಯು ಬಿಡುಗಡೆಗೊಳಿಸಿದೆ.

ನಾಲ್ಕು ದಿನಗಳ ಕದನ ವಿರಾಮದ ಎರಡನೇ ದಿನವಾದ ಶನಿವಾರ ಬಿಡುಗಡೆ ಮಾಡಲು ಬಂಧಿತರ ಪಟ್ಟಿಯನ್ನು ಸ್ವೀಕರಿಸಲಾಗಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.

ಕತಾರ್, ಈಜಿಪ್ಟ್ ಮತ್ತು ಅಮೆರಿಕ ಜೊತೆಗೂಡಿ ಮಾತುಕತೆಯ ನಂತರದ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಪ್ಯಾಲೆಸ್ತೀನಿಯನ್‌ ಕೈದಿಗಳು, ಮಹಿಳೆಯರು ಮತ್ತು ಹದಿಹರೆಯದ ಹುಡುಗರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

ಹಮಾಸ್ ಶುಕ್ರವಾರ ಒಟ್ಟು 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ತನ್ನ ಜೈಲುಗಳಿಂದ 39 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಿದೆ ಎಂದು ಪ್ರಮುಖ ಮಧ್ಯವರ್ತಿ ಕತಾರ್ ದೃಢಪಡಿಸಿದೆ.

ಇಸ್ರೇಲ್‌ನ ಜೈಲಿನಿಂದ ಬಿಡುಗಡೆಗೊಂಡವರನ್ನು ಸ್ವಾಗತಿಸಲು ವೆಸ್ಟ್‌ ಬ್ಯಾಂಕ್‌ನಲ್ಲಿ ಸಾವಿರಾರು ಮಂದಿ ಸೇರಿದ್ದಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಅದರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬಿನ ಯುವಕ ಕೆನಡಾದಲ್ಲಿ ಗುಂಡಿಕ್ಕಿ ಹತ್ಯೆ

ಭಾರತ ಮೂಲದ ಪಂಜಾಬ್‌ ಲೂಧಿಯಾನದ ಯುವಕನೊಬ್ಬನನ್ನು ಕೆನಡಾ ದ ಸರ್ರೆಯಲ್ಲಿ ಗುಂಡಿಕ್ಕಿ...

ಕೆನಡಾ | ಟೇಕಾಫ್ ಆಗುತ್ತಿದ್ದಂತೆಯೇ 389 ಪ್ರಯಾಣಿಕರಿದ್ದ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ; ವಿಡಿಯೋ ವೈರಲ್

389 ಪ್ರಯಾಣಿಕರು ಮತ್ತು 13 ಸಿಬ್ಬಂದಿಗಳೊಂದಿಗೆ ಪ್ಯಾರಿಸ್‌ಗೆ ತೆರಳುತ್ತಿದ್ದ ಕೆನಡಾದ ವಿಮಾನವೊಂದು...

ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝುಗೆ ಆಹ್ವಾನ

ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು...

ಅಕ್ರಮ ಗನ್ ಖರೀದಿ ಪ್ರಕರಣದಲ್ಲಿ ಮಗನ ಆರೋಪ ಸಾಬೀತಾದರೆ ಕ್ಷಮಿಸುವುದಿಲ್ಲ: ಜೋ ಬೈಡನ್

ಅಕ್ರಮ ಗನ್ ಖರೀದಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ತಮ್ಮ ಮಗ ಹಂಟರ್...